ಸಾರ್ವಜನಿಕ ವಲಯದ ಉದ್ಯಮವಾದ ಭಾರತೀಯ ಜೀವವಿಮಾ ನಿಗಮ(ಎಲ್‌ಐಸಿ)ವು ಪ್ರಧಾನಿ ಮೋದಿ ಅವರ ಆಪ್ತ ಉದ್ಯಮಿ ಅದಾನಿ ಅವರ ಸಂಸ್ಥೆಯಲ್ಲಿ 5,000 ಕೋಟಿ ರೂ.ಗಳಷ್ಟು ಹೂಡಿಕೆ ಮಾಡಿರುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಟೀಕಿಸಿದ್ದಾರೆ. ಸಾರ್ವಜನಿಕ ಹಣವನ್ನು ಖಾಸಗಿ ಸಂಸ್ಥೆಗಳಿಗೆ ಲಾಭ ಮಾಡಿಕೊಡಲು ಬಳಸಲಾಗುತ್ತಿದೆ ಎಂದು ಅವರು ಎತ್ತಿ ತೋರಿಸಿದ್ದಾರೆ. ‘ಹಣ ನಿಮ್ಮದು
“ಹಣ, ಪಾಲಿಸಿ, ಪ್ರೀಮಿಯಂ ನಿಮ್ಮದು; ಭದ್ರತೆ, ಅನುಕೂಲತೆ, ಲಾಭ ಅದಾನಿಗೆ!” ಎಂದು ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಹೇಳಿದ್ದಾರೆ. ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್ (APSEZ) ಸಂಸ್ಥೆಯು ಕಳೆದ ವಾರ ತನ್ನ ಅತಿದೊಡ್ಡ ದೇಶೀಯ ಬಾಂಡ್ ವಿತರಣೆಯಲ್ಲಿ 5,000 ಕೋಟಿ ರೂ.ಗಳನ್ನು ಸಂಗ್ರಹಿಸಿದೆ ಎಂದು ಹೇಳಿತ್ತು. ಇದನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಅವರು ಈ ಹೇಳಿಕೆ ನೀಡಿದ್ದಾರೆ.
APSEZ ಭಾರತೀಯ ಜೀವ ವಿಮಾ ನಿಗಮದಿಂದ (LIC) 15 ವರ್ಷಗಳ ನಾನ್-ಕನ್ವರ್ಟಿಬಲ್ ಡಿಬೆಂಚರ್ (NCD) ಮೂಲಕ ನಿಧಿಯನ್ನು ಸಂಗ್ರಹಿಸಿದೆ ಎಂದು ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿತ್ತು. ನಾನ್-ಕನ್ವರ್ಟಿಬಲ್ ಡಿಬೆಂಚರ್ (NCD) ಗಳನ್ನು ವಾರ್ಷಿಕ 7.75 ಪ್ರತಿಶತದಷ್ಟು ಸ್ಪರ್ಧಾತ್ಮಕ ಕೂಪನ್ ದರದಲ್ಲಿ ಸಂಗ್ರಹಿಸಲಾಯಿತು.
“APSEZ ನ ಹಣಕಾಸು ಮತ್ತು ‘AAA/ಸ್ಥಿರ’ ದೇಶೀಯ ಕ್ರೆಡಿಟ್ ರೇಟಿಂಗ್‌ನಿಂದ ಬೆಂಬಲಿತವಾದ ಈ ಇಶ್ಯೂ, ವಾರ್ಷಿಕವಾಗಿ ಶೇಕಡಾ 7.75 ರ ಸ್ಪರ್ಧಾತ್ಮಕ ಕೂಪನ್ ದರದಲ್ಲಿ ಲಾಕ್ ಆಗಿದೆ ಮತ್ತು LIC ಯಿಂದ ಸಂಪೂರ್ಣವಾಗಿ ಚಂದಾದಾರಿಕೆ ಪಡೆಯಲಾಗಿದೆ. ಡಿಬೆಂಚರ್‌ಗಳನ್ನು BSE ನಲ್ಲಿ ಪಟ್ಟಿ ಮಾಡಲಾಗುತ್ತದೆ” ಎಂದು ಅದು ಹೇಳಿದೆ.
ಸಾರ್ವಜನಿಕರ ವಿಮಾ ಕಂತುಗಳ ಮೂಲಕ ಸಂಗ್ರಹಿಸಲಾದ ಎಲ್‌ಐಸಿಯ ಸಾರ್ವಜನಿಕ ಹಣವನ್ನು ಅದಾನಿ ಗುಂಪಿನಲ್ಲಿ ಹೂಡಿಕೆ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸುತ್ತಿದ್ದಾರೆ. ಎಲ್‌ಐಸಿ ಸರ್ಕಾರಿ ಸ್ವಾಮ್ಯದ ದೇಶೀಯ ಹಣಕಾಸು ಸಂಸ್ಥೆಯಾಗಿದ್ದು, ಇದು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತದೆ. ‘ಹಣ ನಿಮ್ಮದು
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ‘ನೀವು ಭಾಷಾತಜ್ಞರೋ?’..ಕನ್ನಡ ತಮಿಳಿನಿಂದ ಹುಟ್ಟಿದೆ ಎಂದ ಕಮಲ್ ಹಾಸನ್‌ಗೆ ಹೈಕೋರ್ಟ್ ತರಾಟೆ
‘ನೀವು ಭಾಷಾತಜ್ಞರೋ?’..ಕನ್ನಡ ತಮಿಳಿನಿಂದ ಹುಟ್ಟಿದೆ ಎಂದ ಕಮಲ್ ಹಾಸನ್‌ಗೆ ಹೈಕೋರ್ಟ್ ತರಾಟೆ

