ಕಾಂಗ್ರೆಸ್ ಮತ್ತು ಆರ್‌ಜೆಡಿಯಿಂದ ಬಿಜೆಪಿಯ ‘ಬಿ-ಟೀಮ್’ ಎಂದು ಹೆಚ್ಚಾಗಿ ಟೀಕಿಸಲ್ಪಡುವ ಅಸಾದುದ್ದೀನ್ ಓವೈಸಿಯವರ ಎಐಎಂಐಎಂ, ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಇಂಡಿಯಾ ಮೈತ್ರಿಯೊಂದಿಗೆ ಕೈಜೋಡಿಸಲು ಸಕ್ರಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು TNIE ವರದಿ ಮಾಡಿದೆ.ಬಿಹಾರ | ಇಂಡಿಯಾ ಮೈತ್ರಿಗೆ
ಎಐಎಂಐಎಂನ ಬಿಹಾರ ಮುಖ್ಯಸ್ಥ ಮತ್ತು ಶಾಸಕ ಅಖ್ತರುಲ್ ಈಮಾನ್ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತಮ್ಮ ಪಕ್ಷವು ಕೆಲವು ಶಾಸಕರ ಮೂಲಕ ಆರ್‌ಜೆಡಿ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಅವರನ್ನು ಸಂಪರ್ಕಿಸಿದೆ. ವಿಶೇಷವಾಗಿ ಮುಸ್ಲಿಂ ಪ್ರಾಬಲ್ಯದ ಸೀಮಾಂಚಲ್ ಪ್ರದೇಶದಲ್ಲಿ ಒಟ್ಟಾಗಿ ಚುನಾವಣೆಗಳಲ್ಲಿ ಸ್ಪರ್ಧಿಸುವ ಪ್ರಸ್ತಾಪವನ್ನು ಪಕ್ಷವು ಹೊಂದಿದೆ ಎಂದು ಹೇಳಿದ್ದಾರೆ.
ಎಐಎಂಐಎಂ ಬಿಜೆಪಿಯನ್ನು ತೀವ್ರವಾಗಿ ವಿರೋಧಿಸುತ್ತದೆ ಮತ್ತು ಈಗ ಮೈತ್ರಿ ಪ್ರಸ್ತಾವನೆಗೆ ಪ್ರತಿಕ್ರಿಯಿಸುವುದು ತೇಜಸ್ವಿ ಅವರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ. “ಈ ಪ್ರಸ್ತಾಪವನ್ನು ಇಲ್ಲಿಯವರೆಗೆ ತಿರಸ್ಕರಿಸಲಾಗಿಲ್ಲ ಎಂದು ನಮ್ಮ ಶಾಸಕರು ನನಗೆ ಹೇಳಿದರು” ಎಂದು ಈಮಾನ್ ಹೇಳಿದ್ದಾರೆ.
ಬಿಹಾರದ ತಮ್ಮ ಕೊನೆಯ ಭೇಟಿಯ ಸಮಯದಲ್ಲಿ ಹೇಳಿಕೆ ನೀಡಿದ್ದ ಓವೈಸಿ, ತಮ್ಮ ಪಕ್ಷದ ಕಾರ್ಯಕರ್ತರನ್ನು ಆರ್‌ಜೆಡಿ ಪಕ್ಷಾಂತರಗಳನ್ನು ಮಾಡುತ್ತಿದೆ ಎಂದು ಆರೋಪಿಸಿದ್ದರು. ಮುಂಬರುವ ಚುನಾವಣೆಯಲ್ಲಿ ಎಐಎಂಐಎಂ ಕನಿಷ್ಠ 24 ಸ್ಥಾನಗಳನ್ನು ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದ ಅವರು, ಪಕ್ಷವು ರಾಜ್ಯಾದ್ಯಂತ 50 ಸ್ಥಾನಗಳಲ್ಲಿ ಸ್ಪರ್ಧಿಸಲು ಯೋಜಿಸಿದೆ ಎಂದು ಹೇಳಿದ್ದರು.
ಎಐಎಂಐಎಂ ಪಕ್ಷವು ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕವಾಗಿದೆ ಎಂದು ಅಖ್ತರುಲ್ ಈಮಾನ್ ಹೇಳಿದ್ದಾರೆ. ಅದಾಗ್ಯೂ, ಮಾತುಕತೆ ವಿಫಲವಾದರೆ, ಯಾವುದೇ ಮತ ವಿಭಜನೆಗೆ ತಮ್ಮ ಪಕ್ಷವನ್ನು ಹೊಣೆಯಾಗಿಸಬಾರದು ಎಂದು ಅವರು ಎಚ್ಚರಿಸಿದ್ದಾರೆ. “ಏಕಾಂಗಿಯಾಗಿ ನಿಂತು ಯಾವುದೇ ಒಂದು ಪಕ್ಷವು ಕೋಮುವಾದಿ ಶಕ್ತಿಗಳನ್ನು ಸೋಲಿಸಲು ಸಾಧ್ಯವಿಲ್ಲ. ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟದ ಅಗತ್ಯವಿದೆ” ಎಂದು ಅವರು ಹೇಳಿದ್ದಾರೆ.
2020 ರ ವಿಧಾನಸಭಾ ಚುನಾವಣೆಯಲ್ಲಿ, ಎಐಎಂಐಎಂ ಸೀಮಾಂಚಲ್‌ನಲ್ಲಿ ಐದು ಸ್ಥಾನಗಳನ್ನು ಗೆಲ್ಲುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿತ್ತು. ಆದಾಗ್ಯೂ, ಅದರ ನಾಲ್ವರು ಶಾಸಕರು ನಂತರ ಆರ್‌ಜೆಡಿಗೆ ಪಕ್ಷಾಂತರಗೊಂಡರು. ಈ ಚುನಾವಣೆಯಲ್ಲಿ ಎಐಎಂಐಎಂ ಉಪೇಂದ್ರ ಕುಶ್ವಾಹ ಅವರ RLSP ಮತ್ತು ಮಾಯಾವತಿಯವರ ಬಿಎಸ್‌ಪಿ ಜೊತೆಗೆ ಗ್ರ್ಯಾಂಡ್ ಡೆಮಾಕ್ರಟಿಕ್ ಸೆಕ್ಯುಲರ್ ಫ್ರಂಟ್‌ನ ಭಾಗವಾಗಿ ಸ್ಪರ್ಧಿಸಿತ್ತು.
ಈ ಚುನಾವಣೆಗಳಲ್ಲಿ ಎಐಎಂಐಎಂ ಐದು ಸ್ಥಾನಗಳನ್ನು ಗೆದ್ದರೆ, ಬಿಎಸ್‌ಪಿ ಒಂದನ್ನು ಕ್ಷೇತ್ರದಲ್ಲಿ ಗೆಲುವು ಕಂಡಿತ್ತು. ಆದರೆ ಶಾಸಕ ಜಮಾ ಖಾನ್ ನಂತರ ಜೆಡಿಯು ಸೇರಿ ಸಚಿವರಾದರು.
ಎಐಎಂಐಎಂ ಇಂಡಿಯಾ ಸೇರ್ಪಡೆಗೆ ಎಡಪಕ್ಷಗಳಿಂದ ತೀವ್ರ ವಿರೋಧ
ಎಐಎಂಐಎಂ ಪಕ್ಷವು ಇಂಡಿಯಾ ಮೈತ್ರಿಗೆ ಸೇರಲು ಮಾಡಿದ ವಿನಂತಿಗೆ ಎಡಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ ಎಂದು ಆರ್‌ಜೆಡಿ ಮೂಲಗಳು ತಿಳಿಸಿವೆ. ಆದಾಗ್ಯೂ, ಸೀಮಾಂಚಲ್‌ನಲ್ಲಿ ಅದರ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು ಆರ್‌ಜೆಡಿ ಮತ್ತು ಕಾಂಗ್ರೆಸ್ ಎರಡೂ ಎಐಎಂಐಎಂ ಅನ್ನು ಸೇರಿಸಿಕೊಳ್ಳುವ ಪರವಾಗಿವೆ ಎಂದು ವರದಿಗಳು ಉಲ್ಲೇಖಿಸಿವೆ.
ಆರ್‌ಜೆಡಿ-ಕಾಂಗ್ರೆಸ್ ಎಐಎಂಐಎಂಗೆ 8–10 ಸ್ಥಾನಗಳನ್ನು ನೀಡುವುದಾಗಿ ಹೇಳಿದ್ದರೆ, ಪಕ್ಷವು ಕಿಶನ್‌ಗಂಜ್, ಅರಾರಿಯಾ, ಕಟಿಹಾರ್ ಮತ್ತು ಪೂರ್ಣಿಯಾ ಸೇರಿದಂತೆ ಈ ಪ್ರದೇಶದಲ್ಲಿ 24 ಸ್ಥಾನಗಳಿಗೆ ಒತ್ತಾಯಿಸುತ್ತಿದೆ ಎನ್ನಲಾಗಿದೆ. ಬಿಹಾರ | ಇಂಡಿಯಾ ಮೈತ್ರಿಗೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಕ್ಷಮೆ ಕೇಳಲು ಕಮಲ್ ಹಾಸನ್ ನಕಾರ: ಕರ್ನಾಟಕದಲ್ಲಿ ‘ಥಗ್ ಲೈಫ್’ ಚಿತ್ರ ಬಿಡುಗಡೆ ಮುಂದೂಡಿಕೆ
ಕ್ಷಮೆ ಕೇಳಲು ಕಮಲ್ ಹಾಸನ್ ನಕಾರ: ಕರ್ನಾಟಕದಲ್ಲಿ ‘ಥಗ್ ಲೈಫ್’ ಚಿತ್ರ ಬಿಡುಗಡೆ ಮುಂದೂಡಿಕೆ

