ಆಂಧ್ರಪಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಚುನಾವಣೆಯ ಸಮಯದಲ್ಲಿ ನೀಡಿದ್ದ ಭರವಸೆಗಳಲ್ಲಿ ಒಂದಾದ ಎಸ್ಸಿ ಮತ್ತು ಎಸ್ಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ವ್ಯವಸ್ಥೆಯನ್ನು ಜಾರಿಗೊಳಿಸಿದ್ದಾರೆ. ಜಗಜೀವನ್ ಜ್ಯೋತಿ ಯೋಜನೆಯ ಮೂಲ ತಳಸಮುದಾಯಗಳ ಮನೆಗಳಿಗೆ 200 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆ ಅಸ್ತು ಎಂದಿದ್ದಾರೆ.
ಹಿಂದಿನ ತೆಲುಗು ದೇಶಂ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಕುಟುಂಬಗಳಿಗೆ 100 ಯೂನಿಟ್ಗಳವರೆಗೆ ವಿದ್ಯುತ್ ಅನ್ನು ಉಚಿತವಾಗಿ ನೀಡಿತ್ತು. ವೈಎಸ್ಆರ್ಪಿ ಅಧಿಕಾರಕ್ಕೆ ಬಂದರೆ ಇದನ್ನು 200 ಯೂನಿಟ್ಗಳಿಗೆ ಹೆಚ್ಚಿಸಲಾಗುವುದು ಎಂದು ಜಗನ್ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಬರೆದುಕೊಂಡಿದ್ದರು.
ಆ ಭರವಸೆಯನ್ನು ಅನುಷ್ಠಾನಗೊಳಿಸುವ ಮೂಲಕ ಚುನಾವಣಾ ಭರವಸೆಯನ್ನು ಈಡೇರಿಸಿದಂತಾಗಿದೆ. ಬಡವರ ಪ್ರಗತಿಯನ್ನು ಗುರಿಯಾಗಿಸಿಕೊಂಡಿರುವ ಸರ್ಕಾರ ಅನೇಕ ಉಪಯುಕ್ತ ಯೋಜನೆಗಳೊಂದಿಗೆ ಮುಂದುವರಿಸುವತ್ತಾ ದಾಪುಗಾಲಿಡುತ್ತಿದೆ ಎಂದು ಜಗನ್ ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿಯ 14 ಲಕ್ಷ ಮನೆಗಳಿಗೆ ಉಚಿತ ವಿದ್ಯುತ್ ಕೊಟ್ಟ ಕೇಜ್ರಿವಾಲ್ ಸರ್ಕಾರ!!
ಇದಲ್ಲದೆ, ಜಗನ್ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಖಾಸಗೀ ಕ್ಷೇತ್ರದಲ್ಲಿಯೂ 75% ಮೀಸಲಾತಿ ತಂದು ಜನಮನ್ನಣೆ ಮಡೆದುಕೊಂಡಿದ್ದರು. ಆದರೆ ಆಶಾ ಕಾರ್ಯಕರ್ತರಿಗೆ ನೀಡಿದ್ದ 10 ಸಾವಿರ ಧನಸಹಾಯದ ಬೇಡಿಕೆಯನ್ನು ಕೇವಲ ಘೋಷಣೆಯಲ್ಲಿಟ್ಟಿದ್ದಕ್ಕೆ ಭಾರೀ ಪ್ರತಿರೋಧ ಎದುರಿಸಿದ್ದರು.
ಈ ಮೊದಲೇ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿಯ ರಾಜ್ಯ ಸರ್ಕಾರ ಎಲ್ಲಾ ನಿವಾಸಿಗಳಿಗೆ ತಿಂಗಳಿಗೆ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುತ್ತಿರುವುದು ಗಮನಾರ್ಹವಾಗಿದ್ದು, ಅಂತದ್ದೇ ಹಾದಿಯಲ್ಲಿ ಆಂದ್ರದ ಸರ್ಕಾರ ಸಹ ಮುಂದುವರೆದಿದೆ.


