ವಿದ್ಯಾರ್ಥಿಗಳು ಮತ್ತು ಅಧ್ಯಾಪಕರುಗಳ ಪ್ರತಿಭಟನೆಯ ಹಿನ್ನಲೆ, ತನ್ನ ಯಾವುದೇ ಕೋರ್ಸ್‌ಗಳಲ್ಲಿ ವಿವಾದಿತ ಕೃತಿ ಮನುಸ್ಮೃತಿಯನ್ನು ಕಲಿಸುವುದಿಲ್ಲ ಎಂದು ಗುರುವಾರ ದೆಹಲಿ ವಿಶ್ವವಿದ್ಯಾಲಯ (DU) ಹೇಳಿದೆ. ವಿಶ್ವವಿದ್ಯಾಲಯವು ಸಂಸ್ಕೃತ ವಿಭಾಗದ ಶಿಫಾರಸ್ಸು ಓದುವ ಪತ್ರಿಕೆಯಲ್ಲಿ ಪಠ್ಯವನ್ನು ಸೇರಿಸುವುದಾಗಿ ಹೇಳಿದ ನಂತರ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಧ್ಯಾಪಕರ ತೀವ್ರ ಪ್ರತಿಭಟನೆ
“ನಮ್ಮ ನಿಲುವು ಸ್ಪಷ್ಟವಾಗಿದೆ – ಯಾವುದೇ ಕೋರ್ಸ್‌ನಲ್ಲಿ ಮನುಸ್ಮೃತಿಯನ್ನು ಕಲಿಸಲಾಗುವುದಿಲ್ಲ. ಕಳೆದ ವರ್ಷ, ಮನುಸ್ಮೃತಿಯನ್ನು ಕಾನೂನು ಪಠ್ಯಕ್ರಮದಲ್ಲಿ ಸೇರಿಸಬೇಕೆಂದು ಸೂಚಿಸಲಾಗಿತ್ತು. ಆಗಲೂ ನಾವು ಅದನ್ನು ತೆಗೆದುಹಾಕಿದ್ದೆವು. ಈ ಬಾರಿ, ಇದನ್ನು ಸಂಸ್ಕೃತ ಪಠ್ಯಕ್ರಮದಲ್ಲಿ ಪರಿಚಯಿಸಲಾಗಿತ್ತು. ಅದು ನಮ್ಮ ಗಮನಕ್ಕೆ ಬಂದ ತಕ್ಷಣ, ನಾವು ಅದನ್ನು ತೆಗೆದುಹಾಕಲು ನಿರ್ಧರಿಸಿದ್ದೇವೆ.” ಎಂದು ವಿಶ್ವವಿದ್ಯಾಲಯದ ಉಪಕುಲಪತಿ ಯೋಗೇಶ್ ಸಿಂಗ್ ತಿಳಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
“ಸಂಸ್ಕೃತ ವಿಭಾಗದ DSC (ಶಿಸ್ತಿನ ನಿರ್ದಿಷ್ಟ ಕೋರ್ಸ್)ನ ‘ಧರ್ಮಶಾಸ್ತ್ರ ಅಧ್ಯಯನಗಳು’ ಎಂಬಲ್ಲಿ ಮನುಸ್ಮೃತಿಯನ್ನು ‘ಶಿಫಾರಸು ಮಾಡಲಾದ ಓದುವಿಕೆ’ ಎಂದು ಉಲ್ಲೇಖಿಸಲಾಗಿದೆ. ಇದನ್ನು ಕೂಡಾ ಅಳಿಸಲಾಗಿದೆ.” ಎಂದು ವಿಶ್ವವಿದ್ಯಾಲಯವು ಎಕ್ಸ್‌ನಲ್ಲಿ ಹೇಳಿದೆ. ಅಧ್ಯಾಪಕರ ತೀವ್ರ ಪ್ರತಿಭಟನೆ
‘ನಾಚಿಕೆಗೇಡಿನ ನಡೆ’: ವಿದ್ಯಾರ್ಥಿ ಸಂಘಟನೆ
“ಮನುಸ್ಮೃತಿಯನ್ನು ದೆಹಲಿ ವಿಶ್ವವಿದ್ಯಾಲಯವು ಪಠ್ಯಕ್ರಮದಲ್ಲಿ ಸೇರಿಸುವುದು ನಾಚಿಕೆಗೇಡಿನ ಸಂಗತಿ. ಇದೇ ಪುಸ್ತಕ ದಲಿತರು, ಮಹಿಳೆಯರು ಮತ್ತು ಹಿಂದುಳಿದವರ ವಿರುದ್ಧ ಜಾತಿ ತಾರತಮ್ಯ ಮತ್ತು ಅನ್ಯಾಯದ ಅಡಿಪಾಯವನ್ನು ಹಾಕಿತ್ತು” ಎಂದು ವಿದ್ಯಾರ್ಥಿ ಸಂಘಟನೆಯಾದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ವರುಣ್ ಚೌಧರಿ ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಏರ್ ಇಂಡಿಯಾ ಪತನ: ವಿಮಾನದಲ್ಲಿದ್ದ 242 ಪ್ರಯಾಣಿಕರಲ್ಲಿ ಬಹುತೇಕರ ಸಾವಿನ ಶಂಕೆ
ಏರ್ ಇಂಡಿಯಾ ಪತನ: ವಿಮಾನದಲ್ಲಿದ್ದ 242 ಪ್ರಯಾಣಿಕರಲ್ಲಿ ಬಹುತೇಕರ ಸಾವಿನ ಶಂಕೆ

