ಬೈಕ್ ಟ್ಯಾಕ್ಸಿಗಳನ್ನು ನಿಯಂತ್ರಿಸಲು ಸಮಗ್ರ ನೀತಿಯನ್ನು ಹೊರಡಿಸುವವರೆಗೆ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದ್ದ ಏಕಸದಸ್ಯ ತೀರ್ಪನ್ನು ತಡೆಹಿಡಿಯಲು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಶುಕ್ರವಾರ ನಿರಾಕರಿಸಿದೆ. ಬೈಕ್ ಟ್ಯಾಕ್ಸಿ ಸ್ಥಗಿತಗೊಳಿಸುವ
ಜೂನ್ 24 ರಂದು ಅರ್ಹತೆಯ ಆಧಾರದ ಮೇಲೆ ಪ್ರಕರಣವನ್ನು ವಿಚಾರಣೆ ನಡೆಸುವುದಾಗಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರ ಪೀಠ ಹೇಳಿದೆ.
ಸರ್ಕಾರವು ನಿಯಮಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿದೆ ಎಂದು ಹೇಳಿದ್ದರೆ ಮತ್ತು ಅವರ ಕಡೆಯಿಂದ ಸ್ವಲ್ಪ ವಿಳಂಬವಾಗಿದ್ದರೆ, ಏಕಸದಸ್ಯ ನ್ಯಾಯಾಧೀಶರ ಆದೇಶವನ್ನು ತಡೆಹಿಡಿಯುವ ಬಗ್ಗೆ ಪರಿಗಣಿಸಬಹುದಿತ್ತು ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿದೆ.
ಆದಾಗ್ಯೂ, ಬೈಕ್ ಟ್ಯಾಕ್ಸಿಗೆ ಅನುಮತಿ ನೀಡದಿರಲು ರಾಜ್ಯ ಸರ್ಕಾರವು ನೀತಿ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದ್ದರಿಂದ, ಏಕಸದಸ್ಯ ನ್ಯಾಯಾಧೀಶರ ನಿರ್ದೇಶನಗಳನ್ನು ತಡೆಹಿಡಿಯಲು ಪೀಠ ನಿರಾಕರಿಸಿತು. ಈ ವಿಷಯವು ಬೈಕ್ ಟ್ಯಾಕ್ಸಿ ಚಾಲಕರ ಜೀವನೋಪಾಯ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದೆ ಎಂದು ಇದೇ ವೇಳೆ ಕೋರ್ಟ್ ಹೇಳಿದೆ.
ಏಪ್ರಿಲ್ 2 ರ ಆದೇಶದ ಮೂಲಕ, ನ್ಯಾಯಮೂರ್ತಿ ಬಿ. ಶ್ಯಾಮ್ ಪ್ರಸಾದ್ ಕರ್ನಾಟಕದಲ್ಲಿ ಎಲ್ಲಾ ಬೈಕ್ ಟ್ಯಾಕ್ಸಿ ಸೇವೆಗಳನ್ನು ಆರು ವಾರಗಳ ಒಳಗೆ ಸ್ಥಗಿತಗೊಳಿಸಲು ಆದೇಶಿಸಿದ್ದರು. ಈ ವೇಳೆ ಸರ್ಕಾರವು ನೀತಿ ಬದಲಾವಣೆ ಮಾಡಲು ನಿರ್ಧರಿಸದ ಹೊರತು ಮತ್ತು ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಲು ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸದ ಹೊರತು, ಅಂತಹ ವಾಹನಗಳನ್ನು ಓಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ವಿವರಿಸಿತ್ತು.
ಕರ್ನಾಟಕದಲ್ಲಿ ಬೈಕ್ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಬೇಕಾದ ಆರು ವಾರಗಳ ಗಡುವು ಮೇ ತಿಂಗಳಲ್ಲಿ ಮುಕ್ತಾಯಗೊಳ್ಳಬೇಕಿತ್ತು. ಆದಾಗ್ಯೂ, ರಾಪಿಡೊ, ಓಲಾ ಮತ್ತು ಉಬರ್ ಸೇರಿದಂತೆ ಬಾಧಿತ ಬೈಕ್ ಟ್ಯಾಕ್ಸಿ ನಿರ್ವಾಹಕರು ಈ ಗಡುವನ್ನು ವಿಸ್ತರಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದ್ದರು.
ಈ ವೇಳೆ ವಿನಂತಿಯನ್ನು ಪರಿಗಣಸಿದ್ದ ನ್ಯಾಯಾಧೀಶರು, ಅಂತಿಮವಾಗಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗಳನ್ನು ಮುಕ್ತಾಯಗೊಳಿಸುವ ಗಡುವನ್ನು ಜೂನ್ 15 ರವರೆಗೆ ವಿಸ್ತರಿಸಿದ್ದರು.
ನಂತರ, ಏಪ್ರಿಲ್ 2 ರ ತೀರ್ಪನ್ನು ಪ್ರಶ್ನಿಸಿ ಜೂನ್ 11 ರಂದು ಎಎನ್‌ಐ ಟೆಕ್ನಾಲಜೀಸ್ (ಓಲಾ ಮಾಲೀಕತ್ವ) ತನ್ನ ಮೇಲ್ಮನವಿಯನ್ನು ಸಲ್ಲಿಸಿದರೆ, ಜೂನ್ 2 ರಂದು ಉಬರ್ ತನ್ನ ಮೇಲ್ಮನವಿಯನ್ನು ಸಲ್ಲಿಸಿದೆ.
ಮೇಲ್ಮನವಿದಾರರ ಪರವಾಗಿ ವಾದಿಸಿದ ವಕೀಲರಾದ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಏಕ ನ್ಯಾಯಾಧೀಶರ ಆದೇಶವನ್ನು ತಡೆಹಿಡಿಯುವಂತೆ ಅವರು ವಿಭಾಗೀಯ ಪೀಠವನ್ನು ಒತ್ತಾಯಿಸಿದರು. 1988 ರ ಮೋಟಾರು ವಾಹನ ಕಾಯ್ದೆಯ ಈಗಾಗಲೇ ಅಸ್ತಿತ್ವದಲ್ಲಿರುವ ಚೌಕಟ್ಟಿನ ಅಡಿಯಲ್ಲಿ ಬೈಕ್ ಟ್ಯಾಕ್ಸಿಗಳು ಕಾರ್ಯನಿರ್ವಹಿಸಬಹುದು ಎಂದು ಅವರು ವಾದಿಸಿದ್ದರು. ಬೈಕ್ ಟ್ಯಾಕ್ಸಿ ಸ್ಥಗಿತಗೊಳಿಸುವ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ನಕ್ಸಲ್ ವಿರೋಧಿ ಪಡೆಯನ್ನು ವಿಸರ್ಜಿಸುವುದಿಲ್ಲ: ಗೃಹ ಸಚಿವ ಜಿ. ಪರಮೇಶ್ವರ
ನಕ್ಸಲ್ ವಿರೋಧಿ ಪಡೆಯನ್ನು ವಿಸರ್ಜಿಸುವುದಿಲ್ಲ: ಗೃಹ ಸಚಿವ ಜಿ. ಪರಮೇಶ್ವರ

