ಜಮ್ಮು ಕಾಶ್ಮೀರದಲ್ಲಿ ಮುಂಬರುವ ನಯಾಬ್ ತಹಶೀಲ್ದಾರ್ ಪರೀಕ್ಷೆಯಲ್ಲಿ ಉರ್ದು ಭಾಷೆಯನ್ನು ಕೈ ಬಿಡಬೇಕು ಎಂಬ ಬಿಜೆಪಿ ಬೇಡಿಕೆಯನ್ನು ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಮತ್ತು ವಿರೋಧ ಪಕ್ಷ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ (ಪಿಡಿಪಿ) ಟೀಕೆಗೆ ಗುರಿಯಾಗಿದೆ. ಬಿಜೆಪಿಯ ಈ ಬೇಡಿಕೆಯು ಸಾಂಸ್ಕೃತಿಕ ಅಸ್ಮಿತೆಯನ್ನು ಅಳಿಸುವಂತಿದೆ ಎಂದು ಈ ಪಕ್ಷಗಳು ಆರೋಪಿಸಿವೆ ಎಂದು ದಿ ಹಿಂದೂ ಶನಿವಾರ ವರದಿ ಮಾಡಿದೆ. ಜಮ್ಮು ಕಾಶ್ಮೀರ ಕಂದಾಯ
75 ಕಂದಾಯ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸೋಮವಾರ ಹೊರಡಿಸಲಾದ ಅಧಿಸೂಚನೆಯ ಮೂಲಕ, ಜಮ್ಮು ಕಾಶ್ಮೀರ ಸೇವೆಗಳ ಆಯ್ಕೆ ಮಂಡಳಿಯು ಅಭ್ಯರ್ಥಿಗಳ “ಉರ್ದುವಿನಲ್ಲಿ ಕೆಲಸ ಮಾಡುವ ಅರಿವು” ಅನ್ನು ಒಂದು ಪರೀಕ್ಷೆಯಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ ಎಂದು ತಿಳಿಸಿತ್ತು.
ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲಿ ಉರ್ದು ಭಾಷೆಯನ್ನು ಸಾಮಾನ್ಯವಾಗಿ ಕಂದಾಯ ದಾಖಲೆಗಳು, ಭೂ ವ್ಯವಹಾರಗಳು, ನ್ಯಾಯಾಲಯದ ತೀರ್ಪುಗಳು ಮತ್ತು ಕಾನೂನು ಪತ್ರವ್ಯವಹಾರಗಳಲ್ಲಿ ಬಳಸುವುದರಿಂದ, ಆದಾಯಕ್ಕೆ ಸಂಬಂಧಿಸಿದ ಹುದ್ದೆಗಳಿಗೆ ಭಾಷೆಯ ಮೂಲಭೂತ ತಿಳುವಳಿಕೆ ಅತ್ಯಗತ್ಯ ಎಂದು ಪರಿಗಣಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿರುವ ಬಿಜೆಪಿ ಶಾಸಕ ಸುನಿಲ್ ಶರ್ಮಾ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸತ್ ಶರ್ಮಾ ಅವರು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಗುರುವಾರ ಭೇಟಿಯಾಗಿ ನಯಾಬ್ ತಹಶೀಲ್ದಾರ್ ಪರೀಕ್ಷೆಯಲ್ಲಿ ಉರ್ದು ಭಾಷೆಯನ್ನು ತೆಗೆದುಹಾಕುವ ವಿಷಯದಲ್ಲಿ ಮಧ್ಯಪ್ರವೇಶ ಮಾಡುವಂತೆ ಕೋರಿದ್ದಾರೆ.
ಜಮ್ಮು ಕಾಶ್ಮೀರವು ಐದು ಅಧಿಕೃತ ಭಾಷೆಗಳನ್ನು ಹೊಂದಿರುವುದರಿಂದ, ಅವುಗಳಲ್ಲಿ ಒಂದನ್ನು ಮಾತ್ರ ಪರೀಕ್ಷೆಗೆ ಕಡ್ಡಾಯಗೊಳಿಸುವುದು “ಸಮಾನ ಅವಕಾಶ ಮತ್ತು ಆಡಳಿತಾತ್ಮಕ ನಿಷ್ಪಕ್ಷಪಾತದ ಸಾಂವಿಧಾನಿಕ ತತ್ವಗಳನ್ನು ಉಲ್ಲಂಘಿಸುತ್ತದೆ” ಎಂದು ಸುನಿಲ್ ಶರ್ಮಾ ಸಿನ್ಹಾಗೆ ಹೇಳಿರುವುದಾಗಿ ವರದಿಯಾಗಿದೆ.
“ಇದು ಅನ್ಯಾಯದ ತಡೆಗೋಡೆಯನ್ನು ಸೃಷ್ಟಿಸುತ್ತದೆ. ವಿಶೇಷವಾಗಿ ಜಮ್ಮು ವಿಭಾಗದ ಆಕಾಂಕ್ಷಿಗಳಿಗೆ ಇದು ಅನನುಕೂಲಕರ ಆಗಿದೆ” ಎಂದು ಅವರು ಹೇಳಿದ್ದಾಗಿ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಅದಾಗ್ಯೂ, ಬಿಜೆಪಿಯ ಈ ಬೇಡಿಕೆಗೆ ಆಡಳಿತರೂಢ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಮತ್ತು ವಿಪಕ್ಷ ಪೀಪಲ್ಸ್ ಡೆಮಾಕ್ರಟಿಕ್ ವಿರೋಧಿಸಿವೆ.
ಜಮ್ಮು ಕಾಶ್ಮೀರದ ಆದಾಯ, ನ್ಯಾಯಾಂಗ ಮತ್ತು ಆಡಳಿತ ವ್ಯವಸ್ಥೆಗಳಲ್ಲಿ ಉರ್ದುವಿನ ಪಾತ್ರವು “ಐತಿಹಾಸಿಕವಾಗಿ ಸ್ಥಾಪಿತವಾಗಿದೆ” ಮತ್ತು “ಯಾವುದೇ ರಾಜಕೀಯ ಅಥವಾ ಪಂಥೀಯ ಕಾರ್ಯಸೂಚಿಯಲ್ಲಿಲ್ಲ” ಎಂದು ನ್ಯಾಷನಲ್ ಕಾನ್ಫರೆನ್ಸ್ ಶಾಸಕ ತನ್ವೀರ್ ಸಾದಿಕ್ ಹೇಳಿರುವುದಾಗಿ ಶನಿವಾರ ದಿ ಹಿಂದೂ ಉಲ್ಲೇಖಿಸಿದೆ. ಭಾಷೆಯ ಪಾತ್ರವನ್ನು ದುರ್ಬಲಗೊಳಿಸುವುದು “ಐತಿಹಾಸಿಕವಾಗಿ ಅಪ್ರಾಮಾಣಿಕ” ಎಂದು ಅವರು ಹೇಳಿದ್ದು, ಇದು ಭಾರಿ ಆಡಳಿತಾತ್ಮಕ ಮತ್ತು ಕಾನೂನು ಅಡಚಣೆಗಳಿಗೆ ಕಾರಣವಾಗಬಹುದು ಎಂದು ಅವರು ತಿಳಿಸಿದ್ದಾರೆ.
“ಜಮ್ಮು ಕಾಶ್ಮೀರದ ಐತಿಹಾಸಿಕ ಸಂಸ್ಥೆಗಳು, ಸಾಂಸ್ಕೃತಿಕ ಗುರುತು ಮತ್ತು ಆಡಳಿತಾತ್ಮಕ ನಿರಂತರತೆಯನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ. ಅಲ್ಪಾವಧಿಯ ಲಾಭಕ್ಕಾಗಿ ಉರ್ದುವಿನ ಸ್ಥಾನಮಾನವನ್ನು ರಾಜಕೀಯಗೊಳಿಸುವ ಅಥವಾ ಕೋಮುವಾದೀಕರಿಸುವ ಯಾವುದೇ ಪ್ರಯತ್ನವನ್ನು ನಾವು ತಿರಸ್ಕರಿಸುತ್ತೇವೆ.” ಎಂದು ಅವರು ಹೇಳಿದ್ದಾರೆ.
ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕ ಮತ್ತು ಪುಲ್ವಾಮಾ ಶಾಸಕ ವಹೀದ್-ಉರ್-ರೆಹಮಾನ್ ಪರ್ರಾ ಪ್ರತಿಕ್ರಿಯಿಸಿ, ಬಿಜೆಪಿಯ ಬೇಡಿಕೆಯನ್ನು ಜಮ್ಮು ಕಾಶ್ಮೀರದ ಶ್ರೀಮಂತ ದಾಖಲೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅಳಿಸಿಹಾಕುವ ಅಪಾಯಕಾರಿ ನಡೆ ಎಂದು ಬಣ್ಣಿಸಿದ್ದಾರೆ.
“ಉರ್ದು ಒಂದು ಭಾಷೆ ಮಾತ್ರವಲ್ಲ, ಅದು ಈ ಪ್ರದೇಶದ ಪರಂಪರೆಯ ಪ್ರಮುಖ ಭಾಗವಾಗಿದೆ. ಅದನ್ನು ದುರ್ಬಲಗೊಳಿಸುವುದು ಸಮುದಾಯಗಳನ್ನು ವಿಭಜಿಸುತ್ತದೆ ಮತ್ತು ಸ್ಮರಣೆಯನ್ನು ಪುನಃ ಬರೆಯುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ. ಪಿಡಿಪಿ ಮತ್ತೊಬ್ಬ ಶಾಸಕ ನಯೀಮ್ ಅಖ್ತರ್, ಉರ್ದು ಶತಮಾನಗಳಿಂದ ಜಮ್ಮು ಕಾಶ್ಮೀರದ ಅಧಿಕೃತ ಭಾಷೆಯಾಗಿದೆ. ಜಮ್ಮು ಕಾಶ್ಮೀರ ಕಂದಾಯ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಛತ್ತೀಸ್‌ಗಢ | ಪೊಲೀಸ್ ದಾಖಲೆಗಳಲ್ಲಿ ಬಳಸುವ ಉರ್ದು, ಪರ್ಷಿಯನ್ ಪದಗಳನ್ನು ತೆಗೆದುಹಾಕಿದ ಬಿಜೆಪಿ ಸರ್ಕಾರ
ಛತ್ತೀಸ್‌ಗಢ | ಪೊಲೀಸ್ ದಾಖಲೆಗಳಲ್ಲಿ ಬಳಸುವ ಉರ್ದು, ಪರ್ಷಿಯನ್ ಪದಗಳನ್ನು ತೆಗೆದುಹಾಕಿದ ಬಿಜೆಪಿ ಸರ್ಕಾರ

