ಅಮೆರಿಕ ತನ್ನ ವಿದ್ಯಾರ್ಥಿ ವೀಸಾ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪುನರಾರಂಭಿಸುವುದಾಗಿ ಬುಧವಾರ ಹೇಳಿದೆ. ಆದರೆ ಎಲ್ಲಾ ಅರ್ಜಿದಾರರು ತಮ್ಮ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ಪರಿಶೀಲಿಸಲು ಅನುವು ಮಾಡಿಕೊಡಲು ಅನ್‌ಲಾಕ್ ಮಾಡಬೇಕಾಗುತ್ತದೆ ಎಂದು ಅದು ಹೇಳಿದೆ. ವಿದ್ಯಾರ್ಥಿ ವೀಸಾ ಪುನರಾರಂಭಿಸಿದ
ಡೊನಾಲ್ಡ್ ಟ್ರಂಪ್ ಆಡಳಿತವು ಮೇ 27 ರಂದು ವಿಶ್ವಾದ್ಯಂತದ ತನ್ನ ರಾಯಭಾರ ಕಚೇರಿಗಳಿಗೆ “ಹೆಚ್ಚಿನ ಮಾರ್ಗದರ್ಶನ” ನೀಡುವವರೆಗೆ ವಿದ್ಯಾರ್ಥಿ ವೀಸಾ ಸಂದರ್ಶನಗಳನ್ನು ನಿಗದಿಪಡಿಸುವುದನ್ನು ಸ್ಥಗಿತಗೊಳಿಸುವಂತೆ ತಿಳಿಸಿತ್ತು.
ವಿದೇಶಾಂಗ ಇಲಾಖೆ ಹೊಸ ನಿಯಮಗಳನ್ನು ರೂಪಿಸಲಾಗಿದೆ ಎಂದು ಬುಧವಾರ ಅಮೆರಿಕ ಹೇಳಿದೆ. ಈ ನಿಯಮಗಳ ಅಡಿಯಲ್ಲಿ ಸರ್ಕಾರವು ಎಲ್ಲಾ ವಿದ್ಯಾರ್ಥಿ ಮತ್ತು ವಿನಿಮಯ ಸಂದರ್ಶಕ ಅರ್ಜಿದಾರರ “ಆನ್‌ಲೈನ್ ಉಪಸ್ಥಿತಿ ಸೇರಿದಂತೆ ಸಮಗ್ರ ಮತ್ತು ಸಂಪೂರ್ಣ ಪರಿಶೀಲನೆ” ನಡೆಸುತ್ತದೆ ಎಂದು ಹೇಳಿದೆ.
ಈ ಪರಿಶೀಲನೆಯನ್ನು ಸುಗಮಗೊಳಿಸಲು, ವಿದ್ಯಾರ್ಥಿ ಮತ್ತು ವಿನಿಮಯ ಸಂದರ್ಶಕ ವೀಸಾಗಳಿಗೆ ಎಲ್ಲಾ ಅರ್ಜಿದಾರರು ತಮ್ಮ ಎಲ್ಲಾ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳಲ್ಲಿ ತಮ್ಮ ಗೌಪ್ಯತಾ ಸೆಟ್ಟಿಂಗ್‌ಗಳನ್ನು “ಸಾರ್ವಜನಿಕ” ಕ್ಕೆ ಹೊಂದಿಸಲು ಹೇಳಲಾಗುತ್ತದೆ ಎಂದು ಅದು ಹೇಳಿದೆ.
ಪ್ರತಿಯೊಂದು ವೀಸಾ ನಿರ್ಧಾರವು ರಾಷ್ಟ್ರೀಯ ಭದ್ರತಾ ನಿರ್ಧಾರವಾಗಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ ಮತ್ತು ವೀಸಾಗಳಿಗೆ ಅರ್ಜಿ ಸಲ್ಲಿಸುವವರು “ಅಮೆರಿಕನ್ನರು ಮತ್ತು ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಹಾನಿ ಮಾಡುವ ಉದ್ದೇಶವನ್ನು ಹೊಂದಿಲ್ಲ” ಎಂದು ಖಚಿತಪಡಿಸಿಕೊಳ್ಳುವಲ್ಲಿ ಅಧಿಕಾರಿಗಳು ಜಾಗರೂಕರಾಗಿರಬೇಕು ಎಂದು ಹೇಳಿದೆ.
ಎಲ್ಲಾ ಅರ್ಜಿದಾರರು, ತಮ್ಮ ಅಮೆರಿಕ ಪ್ರವೇಶದ ನಿಯಮಗಳಿಗೆ ಅನುಗುಣವಾಗಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಉದ್ದೇಶಿಸಿದ್ದಾರೆ ಎಂದು ತಾವು ಕೋರಿದ ವೀಸಾಕ್ಕೆ ತಮ್ಮ ಅರ್ಹತೆಯನ್ನು ವಿಶ್ವಾಸಾರ್ಹವಾಗಿ ಸ್ಥಾಪಿಸಬೇಕು ಎಂದು ಅದು ಹೇಳಿದೆ.
“ನಮ್ಮ ನಾಗರಿಕರು, ಸಂಸ್ಕೃತಿ, ಸರ್ಕಾರ, ಸಂಸ್ಥೆಗಳು ಅಥವಾ ಸ್ಥಾಪನಾ ತತ್ವಗಳ ಬಗ್ಗೆ ಪ್ರತಿಕೂಲ ಮನೋಭಾವ ಹೊಂದಿರುವವರನ್ನು” ಗುರುತಿಸಲು ಅರ್ಜಿಗಳನ್ನು ಪರಿಶೀಲಿಸಲು ಅಮೆರಿಕ ಕಾನ್ಸುಲರ್ ಅಧಿಕಾರಿಗಳಿಗೆ ಹೇಳಲಾಗಿದೆ ಎಂದು ಬುಧವಾರದ ಆಂತರಿಕ ವಿದೇಶಾಂಗ ಇಲಾಖೆಯ ದಾಖಲೆಯನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಕಳುಹಿಸಿರುವ ದಾಖಲೆಯು, “ರಾಜಕೀಯ ಚಟುವಟಿಕೆ ಇರುವ ಅರ್ಜಿದಾರರನ್ನು, ಅದರಲ್ಲೂ ವಿಶೇಷವಾಗಿ ಅದು ಹಿಂಸಾಚಾರಕ್ಕೆ ಸಂಬಂಧಿಸಿದ” ವಿಚಾರಗಳನ್ನು ಹುಡುಕಲು ಅಧಿಕಾರಿಗಳಿಗೆ ಸೂಚಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಅಂತಹ ಅರ್ಜಿದಾರರು ಅಮೆರಿಕದಲ್ಲೂ ಕೂಡಾ ಅಂತಹ ಚಟುವಟಿಕೆಗಳನ್ನು ಮುಂದುವರಿಸುವ ಸಾಧ್ಯತೆಯಿದೆ ಪರಿಗಣಿಸಬೇಕು ಎಂದು ಇಲಾಖೆಯ ದಾಖಲೆಯು ಹೇಳಿದೆ. ಅರ್ಜಿದಾರರು ತಮ್ಮ ಸಾಮಾಜಿಕ ಮಾಧ್ಯಮಗಳನ್ನು ಲಾಕ್ ಮಾಡುವುದು ತಮ್ಮ ಕೆಲವು ಚಟುವಟಿಕೆಗಳನ್ನು ಮರೆಮಾಡುವ ಪ್ರಯತ್ನವೆಂದು ಕಾನ್ಸುಲರ್ ಅಧಿಕಾರಿಗಳು ಪರಿಗಣಿಸಬಹುದು ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಹಾರ್ವರ್ಡ್ ಸೇರಿದಂತೆ ದೇಶದ ಉನ್ನತ ವಿಶ್ವವಿದ್ಯಾಲಯಗಳು ಮತ್ತು ಅಧ್ಯಕ್ಷ ಟ್ರಂಪ್ ಅವರ ನಡುವೆ ನಡೆಯುತ್ತಿರುವ ಘರ್ಷಣೆಯ ಮಧ್ಯೆ ಅಮೆರಿಕವು ವಿದ್ಯಾರ್ಥಿ ವೀಸಾ ಸಂದರ್ಶನಗಳ ವೇಳಾಪಟ್ಟಿಗೆ ವಿರಾಮ ನೀಡಿತ್ತು. “ಹಾರ್ವರ್ಡ್ ವಿಶ್ವವಿದ್ಯಾಲಯವು ಎಡಪಂಥೀಯ ದೃಷ್ಟಿಕೋನಗಳನ್ನು ಉತ್ತೇಜಿಸುತ್ತಿದೆ, ಕ್ಯಾಂಪಸ್‌ನಲ್ಲಿ ಯೆಹೂದ್ಯ ವಿರೋಧಿತ್ವವನ್ನು ಸಕ್ರಿಯಗೊಳಿಸುತ್ತಿದೆ ಮತ್ತು ತಾರತಮ್ಯದ ಪ್ರವೇಶ ನೀತಿಗಳನ್ನು ಬೆಂಬಲಿಸುತ್ತಿದೆ” ಎಂದು ಟ್ರಂಪ್ ಆರೋಪಿಸಿದ್ದಾರೆ.
ಟ್ರಂಪ್ ಆಡಳಿತವು ವಿಶ್ವವಿದ್ಯಾಲಯವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಆಕ್ರಮಣಕಾರಿ ಕ್ರಮಗಳನ್ನು ತೆಗೆದುಕೊಂಡಿದೆ. ವಿಶ್ವವಿದ್ಯಾಲಯದ ನಿಧಿಯಲ್ಲಿ ನೂರಾರು ಮಿಲಿಯನ್ ಡಾಲರ್‌ಗಳನ್ನು ಸ್ಥಗಿತಗೊಳಿಸುವುದು, ವೀಸಾಗಳನ್ನು ರದ್ದುಗೊಳಿಸುವುದು ಮತ್ತು ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಗಡೀಪಾರು ಮಾಡಲು ಪ್ರಯತ್ನಿಸುವುದು ಈ ಕ್ರಮಗಳಲ್ಲಿ ಸೇರಿವೆ. ಆದಾಗ್ಯೂ, ಈ ಕ್ರಮಗಳಲ್ಲಿ ಹಲವು ನ್ಯಾಯಾಲಯಗಳಿಂದ ನಿರ್ಬಂಧಿಸಲ್ಪಟ್ಟಿವೆ.
2023-24ರ ಶೈಕ್ಷಣಿಕ ವರ್ಷದಲ್ಲಿ 11 ಲಕ್ಷಕ್ಕಿಂತಲೂ ಹೆಚ್ಚು ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ದಾಖಲಾಗಿದ್ದರು. ದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿರುವವರಲ್ಲಿ 6% ದಷ್ಟು ವಿದ್ಯಾರ್ಥಿಗಳು ವಿದೇಶಿಯರಿದ್ದಾರೆ ಎಂದು ಅಮೆರಿಕ ಮೂಲದ ಸರ್ಕಾರೇತರ ಸಂಸ್ಥೆ ಇನ್‌ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಷನಲ್ ಎಜುಕೇಶನ್ ತಿಳಿಸಿದೆ. ಅತಿ ಹೆಚ್ಚು ವಿದ್ಯಾರ್ಥಿಗಳು ಭಾರತಿಯರಾಗಿದ್ದು, ನಂತರದ ಸ್ಥಾನಗಳಲ್ಲಿ ಚೀನಾ ಇದೆ ಎಂದು ಅದು ಹೇಳಿದೆ. ವಿದ್ಯಾರ್ಥಿ ವೀಸಾ ಪುನರಾರಂಭಿಸಿದ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅನ್ನು ‘ಭಯೋತ್ಪಾದಕರು’ ಎಂದು ಘೋಷಿಸಿ: ಕೆನಡಾ ಪ್ರಾಂತ್ಯದ ಮುಖ್ಯಸ್ಥ ಒತ್ತಾಯ
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅನ್ನು ‘ಭಯೋತ್ಪಾದಕರು’ ಎಂದು ಘೋಷಿಸಿ: ಕೆನಡಾ ಪ್ರಾಂತ್ಯದ ಮುಖ್ಯಸ್ಥ ಒತ್ತಾಯ

