ರಾಮನಗರ ಜಿಲ್ಲೆಯ ಕೇತಗಾನಹಳ್ಳಿ ಗ್ರಾಮದಲ್ಲಿ ನಡೆದ ಭೂ ಅತಿಕ್ರಮಣ ಪ್ರಕರಣದ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಗೆ ಕರ್ನಾಟಕ ಹೈಕೋರ್ಟ್ ಗುರುವಾರ ತಾತ್ಕಾಲಿಕ ತಡೆ ನೀಡುವ ಮೂಲಕ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಗೆ ಮಧ್ಯಂತರ ಪರಿಹಾರ ನೀಡಿದೆ. ಭೂ ಒತ್ತುವರಿ ಪ್ರಕರಣ
ಅಕ್ರಮ ಭೂ ಒತ್ತುವರಿಯಲ್ಲಿ ಕುಮಾರಸ್ವಾಮಿ ಭಾಗಿಯಾಗಿದ್ದಾರೆ ಎಂಬ ಆರೋಪಗಳನ್ನು ಪರಿಶೀಲಿಸಲು ರಾಜ್ಯ ಸರ್ಕಾರವು 2025 ರ ಜನವರಿಯಲ್ಲಿ ಎಸ್‌ಐಟಿಯನ್ನು ರಚಿಸಿತು. ತನಿಖೆಯ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಮತ್ತು ತನಿಖಾ ತಂಡದ ಕಾರ್ಯವಿಧಾನದ ಅಡಿಪಾಯವನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಗುರುವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ, ಎಸ್‌ಐಟಿ ಸ್ಥಾಪಿಸಿದ ಸರ್ಕಾರಿ ಆದೇಶದೊಂದಿಗೆ ಯಾವುದೇ ಅಧಿಕೃತ ಅಧಿಸೂಚನೆ ಇಲ್ಲ ಎಂದು ನ್ಯಾಯಮೂರ್ತಿ ಇ ಎಸ್ ಇಂದಿರೇಶ್ ಹೇಳಿದ್ದಾರೆ. ಈ ಲೋಪವನ್ನು ಗಮನಿಸಿದ ನ್ಯಾಯಾಲಯವು, ಎಸ್‌ಐಟಿ ರಚನೆ ಮತ್ತು ಕುಮಾರಸ್ವಾಮಿಗೆ ನೀಡಲಾದ ಸಮನ್ಸ್ ಎರಡನ್ನೂ ಮುಂದಿನ ವಿಚಾರಣೆ ನಡೆಯುವವರೆಗೆ ತಡೆಹಿಡಿಯಿತು.
ಅರ್ಜಿಗೆ ಪ್ರತಿಕ್ರಿಯಿಸುವಂತೆ ಸರ್ಕಾರಿ ವಕೀಲರಿಗೆ ಹೈಕೋರ್ಟ್ ಇದೇ ವೇಳೆ ನಿರ್ದೇಶನ ನೀಡಿದೆ. ಹಿರಿಯ ವಕೀಲ ಉದಯ ಹೊಳ್ಳ ಮತ್ತು ವಕೀಲ ನಿಶಾಂತ್ ಎವಿ ನ್ಯಾಯಾಲಯದಲ್ಲಿ ಕುಮಾರಸ್ವಾಮಿಯನ್ನು ಪ್ರತಿನಿಧಿಸಿದರು.
ಎಸ್‌ಐಟಿ ಕ್ರಮದ ಹಿಂದೆ ರಾಜಕೀಯ ದ್ವೇಷವಿದೆ ಎಂದು ಕುಮಾರಸ್ವಾಮಿ ಅವರು ಆರೋಪಿಸಿದ್ದರು. 1984 ರಲ್ಲಿ ಈ ವಿವಾದಿತ ಭೂಮಿಯನ್ನು ತಾನು ಕಾನೂನುಬದ್ಧವಾಗಿ ಸ್ವಾಧೀನಪಡಿಸಿಕೊಂದ್ದೇನೆ ಎಂದು ಕುಮಾರಸ್ವಾಮಿ ಅವರು ಸಮರ್ಥಿಸಿಕೊಂಡಿದ್ದಾರೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ತಮ್ಮ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ರಾಮನಗರದಲ್ಲಿ ನಡೆಯುತ್ತಿರುವ ಭೂ ಸಮೀಕ್ಷೆಯನ್ನು ಟೀಕಿಸಿರುವ ಕುಮಾರಸ್ವಾಮಿ, ಇದನ್ನು ರಾಜಕೀಯ ಪ್ರೇರಿತ ನಡೆ ಎಂದು ಕರೆದಿದ್ದರು. “ಈ ಹಿಂದೆ, ಎಸ್‌ಐಟಿಗಳನ್ನು ಐಪಿಎಸ್ ಅಧಿಕಾರಿಗಳು ನೇತೃತ್ವ ವಹಿಸಿದ್ದರು. ಈಗ ಐಎಎಸ್ ಅಧಿಕಾರಿಗಳು ಸಹ ಅವುಗಳನ್ನು ಮುನ್ನಡೆಸುತ್ತಿದ್ದಾರೆ” ಎಂದು ಅವರು ವ್ಯಂಗ್ಯವಾಡಿದರು. ಭೂ ಒತ್ತುವರಿ ಪ್ರಕರಣ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಕಳೆದ 10 ವರ್ಷಗಳಲ್ಲಿ ರಾಜ್ಯದ ಶಿಶು ಮರಣ ಪ್ರಮಾಣ 50% ಕ್ಕಿಂತ ಹೆಚ್ಚು ಇಳಿಕೆ: ವರದಿ
ಕಳೆದ 10 ವರ್ಷಗಳಲ್ಲಿ ರಾಜ್ಯದ ಶಿಶು ಮರಣ ಪ್ರಮಾಣ 50% ಕ್ಕಿಂತ ಹೆಚ್ಚು ಇಳಿಕೆ: ವರದಿ

