ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಲ್ಲಿ ಅಮೆರಿಕ ಭಾಗಿಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಮುಂದಿನ ಎರಡು ವಾರಗಳಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಲಿದ್ದಾರೆ ಎಂದು ಶ್ವೇತಭವನ ಗುರುವಾರ ತಿಳಿಸಿದೆ. ಇರಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಕಾರ್ಯಾಚರಣೆಗಳಿಗೆ ಅಮೆರಿಕ ಸೇರಲಿದೆ ಎಂಬ ಊಹಾಪೋಹಗಳ ನಡುವೆ ಈ ಹೇಳಿಕೆ ಹೊರಬಿದ್ದಿದೆ. ಇಸ್ರೇಲ್-ಇರಾನ್ ಯುದ್ಧಕ್ಕೆ
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು, ಟ್ರಂಪ್ ಅವರ ಸಂದೇಶವನ್ನು ಉಲ್ಲೇಖಿಸುತ್ತಾ,“ಮುಂದಿನ ದಿನಗಳಲ್ಲಿ ಇರಾನ್‌ನೊಂದಿಗೆ ಮಾತುಕತೆಗಳು ನಡೆಯಬಹುದೇ ಅಥವಾ ಇಲ್ಲವೇ ಎಂಬುದರ ಗಣನೀಯ ಅವಕಾಶವಿದೆ ಎಂಬ ಅಂಶದ ಆಧಾರದ ಮೇಲೆ, ಮುಂದಿನ ಎರಡು ವಾರಗಳಲ್ಲಿ ಈ ಸಂಘರ್ಷದಲ್ಲಿ ತೊಡಗಿಕೊಳ್ಳಬೇಕೆ ಅಥವಾ ಬೇಡವೇ ಎಂಬುದನ್ನು ನಾನು ನಿರ್ಧರಿಸುತ್ತೇನೆ.” ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.
ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಅಭಿವೃದ್ಧಿಪಡಿಸದಂತೆ ನೋಡಿಕೊಳ್ಳುವುದು ಅಧ್ಯಕ್ಷ ಟ್ರಂಪ್ ಅವರ ಆದ್ಯತೆಯಾಗಿತ್ತು ಎಂದು ಲೀವಿಟ್ ಹೇಳಿದ್ದಾರೆ. ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ನಿರ್ಮಿಸುವ ಹಂತಕ್ಕೆ “ಎಂದಿಗೂ ಬಂದಿಲ್ಲ” ಎಂದು ಅಮೆರಿಕದ ಆಡಳಿತ ಹೇಳಿದೆ ಎಂದು ಬಿಬಿಸಿ ವರದಿ ಮಾಡಿದೆ.
ಬುಧವಾರವಷ್ಟೆ ಇಸ್ರೇಲ್ – ಇರಾನ್ ಸಂಘರ್ಷದಲ್ಲಿ ಪಾಲ್ಗೊಳ್ಳುವಿಕೆಯ ಯೋಜನೆಗಳನ್ನು ದೃಢೀಕರಿಸಲು ಟ್ರಂಪ್ ನಿರಾಕರಿಸಿದ್ದರು. “ನಾನು ಅದನ್ನು ಮಾಡಬಹುದು, ಅದನ್ನು ಮಾಡದೆಯು ಇರಬಹುದು” ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದರು.
“ನಾನು ಏನು ಮಾಡಲಿದ್ದೇನೆಂದು ಯಾರಿಗೂ ತಿಳಿದಿಲ್ಲ. ನಾನು ನಿಮಗೆ ಒಂದು ಮಾತ್ರ ಹೇಳಬಲ್ಲೆ, ಇರಾನ್ ಬಹಳಷ್ಟು ತೊಂದರೆಗಳನ್ನು ಎದುರಿಸುತ್ತಿದ್ದು, ಅವರು ಮಾತುಕತೆ ನಡೆಸಲು ಬಯಸುತ್ತಾರೆ.” ಎಂದು ಟ್ರಂಪ್ ಹೇಳಿದ್ದರು. ಅಮೆರಿಕವು ಇಸ್ರೇಲ್‌ನ ಮಿತ್ರ ರಾಷ್ಟ್ರವಾಗಿದ್ದು, ಇಸ್ರೇಲ್‌ನ ಭದ್ರತೆಗಾಗಿ ಅಮೆರಿಕ ಕಾರ್ಯನಿರ್ವಹಿಸುತ್ತದೆ.
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು ಹೇಳಿಕೆ ನೀಡಿದ ಗಂಟೆಗಳ ನಂತರ, ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಇರಾನ್‌ನ ಉಪ ವಿದೇಶಾಂಗ ಸಚಿವ ಸಯೀದ್ ಖತೀಬ್ಜಾದೆಹ್, ಅಮೆರಿಕ ಈ ಯುದ್ಧದಲ್ಲಿ ಭಾಗಿಯಾಗಿದರೆ ಪಶ್ಚಿಮ ಏಷ್ಯಾದಲ್ಲಿ “ನರಕ” ಉಂಟಾಗುತ್ತದೆ ಎಂದು ಬಿಬಿಸಿಗೆ ತಿಳಿಸಿದ್ದಾರೆ. “ಇದು ಅಮೆರಿಕದ ಯುದ್ಧವಲ್ಲ” ಎಂದು ಖತೀಬ್ಜಾದೆಹ್ ಹೇಳಿದ್ದಾರೆ. ಇಸ್ರೇಲ್ ಮತ್ತು ಇರಾನ್ ನಡುವೆ ವಾಯು ದಾಳಿ ಮುಂದುವರಿದಂತೆ ಈ ಬೆಳವಣಿಗೆಗಳು ಸಂಭವಿಸಿವೆ.
ಗುರುವಾರ, ಇಸ್ರೇಲ್ ಸೇನೆಯು ಇರಾನ್‌ನಲ್ಲಿರುವ ಅರಾಕ್ ಪರಮಾಣು ರಿಯಾಕ್ಟರ್ ಅನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದು, ನಟಂಜ್ ಪ್ರದೇಶದಲ್ಲಿ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿ ತಾಣ ಎಂದು ಹೇಳಿಕೊಂಡಿದ್ದನ್ನು ಹೊಡೆದುರುಳಿಸಿದ್ದಾಗಿ ಎಂದು ಘೋಷಿಸಿದೆ. ಅದಾಗ್ಯೂ, ಅರಾಕ್ ಕೇಂದ್ರವು ಭಾಗಶಃ ನಿರ್ಮಿಸಲಾದ ಭಾರ-ನೀರಿನ ಸಂಶೋಧನಾ ರಿಯಾಕ್ಟರ್ ಆಗಿದೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಇತ್ತೀಚಿನ ಸುತ್ತಿನ ಸಂಘರ್ಷ ಜೂನ್ 13 ರಂದು ಪ್ರಾರಂಭವಾಯಿತು. ಇಸ್ರೇಲ್ ಸೇನೆಯು ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಸ್ಥಗಿತಗೊಳಿಸುವ ಉದ್ದೇಶದಿಂದ ಅಲ್ಲಿನ ಪರಮಾಣು ಗುರಿಗಳೆಂದು ಹೇಳಿಕೊಂಡ ಸ್ಥಳಗಳು ಮತ್ತು ಇತರ ಸ್ಥಳಗಳ ಮೇಲೆ ದಾಳಿ ಮಾಡಿತು. ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿಯ ಮೂಲಕ ಪ್ರತೀಕಾರ ತೀರಿಸಿಕೊಂಡಿತು. ಈ ದಾಳಿಗಳು ಈ ಪ್ರದೇಶದಲ್ಲಿ ವ್ಯಾಪಕ ಸಂಘರ್ಷದ ಆತಂಕಕ್ಕೆ ಕಾರಣವಾಗಿವೆ.
ಜೂನ್ 15 ರಂದು, ಸಂಘರ್ಷದಲ್ಲಿ 224 ಜನರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಹೇಳಿತ್ತು. ಆದಾಗ್ಯೂ, ಅಮೆರಿಕ ಮೂಲದ ಮಾನವ ಹಕ್ಕುಗಳ ಹೋರಾಟಗಾರರು ಇಸ್ರೇಲಿ ದಾಳಿಗಳು ಇರಾನ್‌ನಲ್ಲಿ ಕನಿಷ್ಠ 657 ಜನರನ್ನು ಕೊಂದಿವೆ ಮತ್ತು ಇಲ್ಲಿಯವರೆಗೆ 2,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿ ಮಾಡಿದೆ. ಇರಾನ್‌ನ ದಾಳಿಯಿಂದಾಗಿ ಇಸ್ರೇಲ್‌ನಲ್ಲಿ ಇಲ್ಲಿಯವರೆಗೆ ಕನಿಷ್ಠ 24 ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್-ಇರಾನ್ ಯುದ್ಧಕ್ಕೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ರಾಷ್ಟ್ರೀಯ ಸರಾಸರಿಗಿಂತ ಜಾಸ್ತಿಯಾಗಿ ರಾಜ್ಯದ ಮಕ್ಕಳು ಶಾಲೆ ತೊರೆಯುತ್ತಿದ್ದಾರೆ: ವರದಿ
ರಾಷ್ಟ್ರೀಯ ಸರಾಸರಿಗಿಂತ ಜಾಸ್ತಿಯಾಗಿ ರಾಜ್ಯದ ಮಕ್ಕಳು ಶಾಲೆ ತೊರೆಯುತ್ತಿದ್ದಾರೆ: ವರದಿ

