ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ನಡೆಸಿದ ದಾಳಿಯ ನಂತರ ಇರಾನ್‌ನೊಂದಿಗಿನ ಇಸ್ರೇಲ್‌ನ ಸಂಘರ್ಷ ಉಲ್ಬಣಗೊಳ್ಳುತ್ತಿದ್ದರೂ, ಗಾಝಾದಲ್ಲಿ ಪ್ರತಿದಿನ ಇಸ್ರೇಲಿ ದಾಳಿಗಳಿಂದ ನೂರಾರು ಜನರು ಹತ್ಯೆಯಾಗುತ್ತಿದ್ದು ಮತ್ತು ಗಾಯಗೊಳ್ಳುತ್ತಿದ್ದಾರೆ. ಈ ನಡುವೆ ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪರಮೋಚ್ಚ ನಾಯಕ ಪೋಪ್ ಲಿಯೋ, “ಗಾಜಾದಲ್ಲಿನ ನೋವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು” ಎಂದು ಜನತೆಗೆ ಕರೆ ನೀಡಿದ್ದಾರೆ. ಇರಾನ್-ಅಮೆರಿಕ ಸಂಘರ್ಷದ
“ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಅನ್ನು ಒಳಗೊಂಡಿರುವ ಈ ನಾಟಕೀಯ ಸನ್ನಿವೇಶದಲ್ಲಿ, ವಿಶೇಷವಾಗಿ ಗಾಝಾ ಮತ್ತು ಇತರ ಪ್ರದೇಶಗಳಲ್ಲಿ ಜನರ ದೈನಂದಿನ ನೋವನ್ನು ಮರೆತುಬಿಡುವ ಅಪಾಯವಿದೆ. ಅಲ್ಲಿ ಸಾಕಷ್ಟು ಮಾನವೀಯ ಬೆಂಬಲದ ಅಗತ್ಯದ ತುರ್ತಿದೆ” ಎಂದು ಪೋಪ್ ಲಿಯೋ ಪವಿತ್ರ ಯಾತ್ರೆಗೆ ಬಂದವರೊಂದಿಗೆ ವಾರದ ಪ್ರಾರ್ಥನೆಯಲ್ಲಿ ಹೇಳಿದ್ದಾರೆ.
ರಾಜತಾಂತ್ರಿಕತೆಯು ಶಸ್ತ್ರಾಸ್ತ್ರಗಳನ್ನು ಮೌನಗೊಳಿಸಲಿ, ರಾಷ್ಟ್ರಗಳು ತಮ್ಮ ಭವಿಷ್ಯವನ್ನು ಹಿಂಸೆ ಮತ್ತು ರಕ್ತಸಿಕ್ತ ಸಂಘರ್ಷಗಳೊಂದಿಗೆ ರೂಪಿಸುವುದರ ಬದಲಾಗಿ, ಶಾಂತಿ ಪ್ರಯತ್ನಗಳೊಂದಿಗೆ ರೂಪಿಸಲಿ ಎಂದು ಲಿಯೋ ಹೇಳಿದ್ದಾರೆ. “ಯುದ್ಧದ ದುರಂತವು ಸರಿಪಡಿಸಲಾಗದ ಪ್ರಪಾತವಾಗುವ ಮೊದಲು ಅದನ್ನು ನಿಲ್ಲಿಸುವುದು ಅಂತರರಾಷ್ಟ್ರೀಯ ಸಮುದಾಯದ ಪ್ರತಿಯೊಬ್ಬ ಸದಸ್ಯರಿಗೂ ನೈತಿಕ ಜವಾಬ್ದಾರಿ ಇದೆ” ಎಂದು ಅವರು ಹೇಳಿದ್ದಾರೆ.
ಇರಾನ್ ಜೊತೆ ಇಸ್ರೇಲ್ ಸಂಘರ್ಷ ತೀವ್ರಗೊಳ್ಳುತ್ತಿದ್ದರೂ, ಇಸ್ರೇಲ್ ಸೇನೆಯು ಗಾಝಾ ಮೇಲೆ ಮಾರಕ ದಾಳಿಗಳನ್ನು ಮುಂದುವರೆಸಿದೆ. ಕಳೆದ 24 ಗಂಟೆಗಳ ವರದಿ ಅವಧಿಯಲ್ಲಿ ಗಾಝಾದಲ್ಲಿ ಕನಿಷ್ಠ 51 ಜನರು ಸಾವನ್ನಪ್ಪಿದ್ದಾರೆ ಮತ್ತು ಇನ್ನೂ 104 ಜನರು ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಗಾಝಾದ ದಕ್ಷಿಣ ಖಾನ್ ಯೂನಿಸ್, ಮಧ್ಯ ಗಾಝಾ ಮತ್ತು ಉತ್ತರ ಗಾಝಾ ನಗರದಲ್ಲಿ ಕೇಂದ್ರೀಕರಿಸಿ ಇಸ್ರೇಲ್ ದಾಳಿ ನಡೆಸುತ್ತಿದೆ ಎಂದು ಅಲ್ ಜಝೀರಾ ಹೇಳಿದೆ. “ಇರಾನ್ ಜೊತೆಗಿನ ಹೆಚ್ಚುತ್ತಿರುವ ಘರ್ಷಣೆಯಿಂದ ಸೃಷ್ಟಿಯಾದ ಗೊಂದಲದ ಲಾಭವನ್ನು ಪಡೆದುಕೊಂಡು ಇಸ್ರೇಲ್ ಸೇನೆಯು [ಗಾಜಾದಲ್ಲಿ] ಹೆಚ್ಚು ಮಾರಕ ದಾಳಿಗಳನ್ನು ಮುಂದುವರಿಸುತ್ತಿದೆ” ಎಂದು ವರದಿ ಹೇಳಿದೆ.
ಗಾಝಾದಲ್ಲಿ ಇಸ್ರೇಲಿ ದಾಳಿಗಳು ತೀವ್ರಗೊಂಡಿದ್ದು, ದಕ್ಷಿಣ ಗಾಝಾದ ರಫಾ ಬಳಿ ಇಸ್ರೇಲಿ ಸೇನೆಯು ವೈಮಾನಿಕ ದಾಳಿಗಳನ್ನು ನಡೆಸಿದ್ದು, ಕನಿಷ್ಠ 11 ಫೆಲಸ್ತೀನಿಯರು ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ. ಉತ್ತರ ಗಾಝಾದ ಜಬಲಿಯಾ ನಿರಾಶ್ರಿತರ ಶಿಬಿರದಲ್ಲಿ ಸಹ ದಾಳಿಗಳು ನಡೆದಿದ್ದು, ಆದರೆ ನಿರ್ದಿಷ್ಟ ಸಾವು-ನೋವಿನ ವಿವರಗಳು ಸ್ಪಷ್ಟವಾಗಿ ದಾಖಲಾಗಿಲ್ಲ.
ಇಸ್ರೇಲಿ ಸೇನೆಯು ಗಾಝಾದ ವಿವಿಧ ಭಾಗಗಳಲ್ಲಿ “ಹಮಾಸ್‌ನ ಗುರಿಗಳನ್ನು” ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿದೆ ಎಂದು ಹೇಳಿದೆ, ಆದರೆ ಈ ದಾಳಿಗಳಿಂದ ಸಾಮಾನ್ಯ ನಾಗರಿಕರಿಗೆ ತೀವ್ರ ಹಾನಿಯಾಗುತ್ತಿದೆ ಎಂದು ಫೆಲಸ್ತೀನಿಯ ಮೂಲಗಳು ಆರೋಪಿಸಿವೆ. ಇಂಟರ್ನೆಟ್ ಮತ್ತು ಸಂವಹನ ಸಂಪರ್ಕ ಕಡಿತಗೊಂಡಿರುವುದರಿಂದ ಗಾಝಾದಿಂದ ನಿಖರ ಮಾಹಿತಿ ಬರುವುದು ಕಷ್ಟವಾಗಿದೆ ಎಂದು ವರದಿ ಉಲ್ಲೇಖಿಸಿವೆ.
ಅಕ್ಟೋಬರ್ 2023 ರಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಇಸ್ರೇಲ್ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆಯನ್ನು ಕನಿಷ್ಠ 55,959 ಕ್ಕೆ ಏರಿಕೆಯಾಗಿದ್ದು, 131,242 ಜನರು ಗಾಯಗೊಂಡಿದ್ದಾರೆ. ಇರಾನ್-ಅಮೆರಿಕ ಸಂಘರ್ಷದ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಅಮೆರಿಕದಿಂದ ಬಾಂಬ್ ದಾಳಿ | ರಷ್ಯಾ ಅಧ್ಯಕ್ಷ ಪುಟಿನ್ ಭೇಟಿಗೆ ಹೊರಟ ಇರಾನ್ ಸಚಿವ
ಅಮೆರಿಕದಿಂದ ಬಾಂಬ್ ದಾಳಿ | ರಷ್ಯಾ ಅಧ್ಯಕ್ಷ ಪುಟಿನ್ ಭೇಟಿಗೆ ಹೊರಟ ಇರಾನ್ ಸಚಿವ

