ಸಂವಿಧಾನದ ಪೀಠಿಕೆಯಲ್ಲಿ ಸೇರ್ಪಡೆ ಮಾಡಲಾದ “ಜಾತ್ಯತೀತ” ಮತ್ತು “ಸಮಾಜವಾದಿ” ಪದಗಳನ್ನು ಪರಿಶೀಲಿಸಬೇಕು ಎಂದು ಆರೆಸ್ಸೆಸ್ ಗುರುವಾರ ಹೇಳಿದೆ ಎಂದು ಪಿಟಿಐ ವರದಿ ಮಾಡಿದೆ. “ತುರ್ತು ಪರಿಸ್ಥಿತಿಯಲ್ಲಿ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಿದಾಗ, ಸಂಸತ್ತು ಕಾರ್ಯನಿರ್ವಹಿಸದಿದ್ದಾಗ ಮತ್ತು ನ್ಯಾಯಾಂಗವು ಕುಂಟುತ್ತಾ ಹೋದಾಗ ಈ ಪದಗಳನ್ನು ಸೇರಿಸಲಾಯಿತು” ಎಂದು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ಸಂವಿಧಾನ ಪೀಠಿಕೆಯ
“ಹಾಗಾದರೆ, ಅವು ಪೀಠಿಕೆಯಲ್ಲಿ ಉಳಿಯಬೇಕೆ ಎಂಬುವುದನ್ನು ಪರಿಗಣಿಸಬೇಕಿದೆ. ಪೀಠಿಕೆ ಶಾಶ್ವತವಾಗಿದೆ. ಆದರೆ ಭಾರತಕ್ಕೆ ಸಿದ್ಧಾಂತವಾಗಿ ಸಮಾಜವಾದದ ಚಿಂತನೆಗಳು ಶಾಶ್ವತವೇ?” ಎಂದು ಅವರು ಕೇಳಿದ್ದಾರೆ. ಆರ್‌ಎಸ್‌ಎಸ್ ಸಂಘಟನೆಯು ಬಿಜೆಪಿಯ ಮಾತೃ ಸಂಘಟನೆಯಾಗಿದೆ.
1975 ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸರ್ಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿ 50 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸಬಾಳೆ ಈ ಹೇಳಿಕೆಗಳನ್ನು ನೀಡಿದ್ದಾರೆ.
VIDEO | Addressing an event on ’50 years of Emergency’ in New Delhi earlier today, RSS general secretary Dattatreya Hosabole said, “Babasaheb Ambedkar never used these words (socialist and secular) in the preamble of the Constitution. The words were added during Emergency, when… pic.twitter.com/wXfQg9WhyQ
— Press Trust of India (@PTI_News) June 26, 2025
ತುರ್ತು ಪರಿಸ್ಥಿತಿಯ ಸಮಯದಲ್ಲಿ ಉಂಟಾದ “ಹಲವಾರು ಅನ್ಯಾಯಗಳ” ಬಗ್ಗೆ ಮಾತನಾಡಿದ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ, “ಕ್ರೂರ” ಕ್ರಮಗಳಿಗಾಗಿ ಕಾಂಗ್ರೆಸ್ ಕ್ಷಮೆಯಾಚಿಸಬೇಕೆಂದು ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಈ ಅವಧಿಯಲ್ಲಿ 250 ಪತ್ರಕರ್ತರು ಸೇರಿದಂತೆ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಜೈಲಿಗೆ ಹಾಕಲಾಯಿತು ಎಂದು ಹೊಸಬಾಳೆ ಹೇಳಿದ್ದಾರೆ. ಆಗಿನ ಸರ್ಕಾರವು 60 ಲಕ್ಷಕ್ಕೂ ಹೆಚ್ಚು ಜನರನ್ನು ಬಲವಂತವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸುವ ಮೂಲಕ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಅವರು ಹೇಳಿದ್ದಾರೆ.
ಹೊಸಬಾಳೆ ಅವರ ಹೇಳಿಕೆಗಳನ್ನು ಕಾಂಗ್ರೆಸ್ ಟೀಕಿಸಿದ್ದು, “ಆರ್‌ಎಸ್‌ಎಸ್-ಬಿಜೆಪಿಯ ಸಿದ್ಧಾಂತವೇ ಭಾರತೀಯ ಸಂವಿಧಾನಕ್ಕೆ ನೇರ ವಿರುದ್ಧವಾಗಿದೆ. ಈ ಹೇಳಿಕೆಗಳು ಕೇವಲ ಸಲಹೆಯಲ್ಲ, ಬದಲಾಗಿ ನಮ್ಮ ಸಂವಿಧಾನದ ಆತ್ಮದ ಮೇಲೆ ಉದ್ದೇಶಪೂರ್ವಕ ದಾಳಿ” ಎಂದು ಆರೋಪಿಸಿದೆ.
“ಇದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ನ್ಯಾಯಯುತ, ಎಲ್ಲರನ್ನೂ ಒಳಗೊಂಡ ಮತ್ತು ಪ್ರಜಾಪ್ರಭುತ್ವ ಭಾರತಕ್ಕಾಗಿನ ದೃಷ್ಟಿಕೋನವನ್ನು ಕೆಡವಲು ದೀರ್ಘಕಾಲದಿಂದ ನಡೆಸಲಾಗುತ್ತಿರುವ ಪಿತೂರಿಯ ಭಾಗವಾಗಿದೆ. ಈ ಸಂಚನ್ನು ಆರ್‌ಎಸ್‌ಎಸ್-ಬಿಜೆಪಿ ಯಾವಾಗಿನಿಂದಲೂ ರೂಪಿಸುತ್ತಿದೆ” ಎಂದು ಪಕ್ಷ ಹೇಳಿದೆ.
The RSS-BJP’s very ideology stands in direct opposition to the Indian Constitution.
RSS General Secretary Dattatreya Hosabale has openly called for the removal of the words ‘socialist’ and ‘secular’ from the Preamble. This is not just a suggestion—it is a deliberate assault on… pic.twitter.com/Xxmwm7Le96
— Congress (@INCIndia) June 26, 2025
“ಸಮಾಜವಾದಿ” ಮತ್ತು “ಜಾತ್ಯತೀತ” ಪದಗಳು 1950 ರಲ್ಲಿ ಅಂಗೀಕರಿಸಲ್ಪಟ್ಟ ಸಂವಿಧಾನದ ಭಾಗವಾಗಿರಲಿಲ್ಲ ಮತ್ತು 1976 ರಲ್ಲಿ 42 ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಸೇರಿಸಲ್ಪಟ್ಟವು.
ನವೆಂಬರ್‌ನಲ್ಲಿ, ಸಂವಿಧಾನದ ಪೀಠಿಕೆಯಿಂದ ಎರಡು ಪದಗಳನ್ನು ಅಳಿಸಲು ಕೋರಿ ಸಲ್ಲಿಸಲಾದ ಅರ್ಜಿಗಳ ಗುಂಪನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಸುಮಾರು 44 ವರ್ಷಗಳ ನಂತರ ಸಾಂವಿಧಾನಿಕ ತಿದ್ದುಪಡಿಯನ್ನು ಪ್ರಶ್ನಿಸಲು ಯಾವುದೇ ಕಾನೂನುಬದ್ಧ ಸಮರ್ಥನೆ ಇಲ್ಲ ಎಂದು ನ್ಯಾಯಾಲಯ ಹೇಳಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 2015 ರ ಗಣರಾಜ್ಯೋತ್ಸವದಂದು ನೀಡಿದ್ದ ಪತ್ರಿಕೆ ಜಾಹೀರಾತುಗಳಲ್ಲಿ ಎರಡು ಪದಗಳನ್ನು ಬಿಟ್ಟು ಸಂವಿಧಾನದ ಪೀಠಿಕೆ ಕಾಣಿಸಿಕೊಂಡಿತ್ತು. ಇದರ ನಂತರ ವಿವಾದ ಭುಗಿಲೆದ್ದಿತು. ಸೆಪ್ಟೆಂಬರ್ 2023 ರಲ್ಲಿ, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಹೊಸ ಸಂಸತ್ತಿನ ಕಟ್ಟಡದಲ್ಲಿ ಸಂಸದರಿಗೆ ವಿತರಿಸಲಾದ ಸಂವಿಧಾನದ ಪ್ರತಿಗಳಲ್ಲಿ ಪೀಠಿಕೆಯಿಂದ ಎರಡು ಪದಗಳು ಕಾಣೆಯಾಗಿವೆ ಎಂದು ಹೇಳಿಕೊಂಡಿದ್ದರು. ಸಂವಿಧಾನ ಪೀಠಿಕೆಯ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಗಾಜಾ: ಹೆಚ್ಚಿನ ಕುಟುಂಬಗಳಿಗೆ ದಿನಕ್ಕೆ ಒಂದು ಹೊತ್ತು ಮಾತ್ರ ಊಟ – ವಿಶ್ವ ಆಹಾರ ಕಾರ್ಯಕ್ರಮದ ಆತಂಕಕಾರಿ ವರದಿ
ಗಾಜಾ: ಹೆಚ್ಚಿನ ಕುಟುಂಬಗಳಿಗೆ ದಿನಕ್ಕೆ ಒಂದು ಹೊತ್ತು ಮಾತ್ರ ಊಟ – ವಿಶ್ವ ಆಹಾರ ಕಾರ್ಯಕ್ರಮದ ಆತಂಕಕಾರಿ ವರದಿ

