ಮಹಾರಾಷ್ಟ್ರದ ಪ್ರಾಥಮಿಕ ಶಾಲೆಗಳಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಪರಿಚಯಿಸುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ನಿರ್ಧಾರವು, ಬೇರ್ಪಟ್ಟ ಸೋದರಸಂಬಂಧಿಗಳಾದ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಅವರನ್ನು ಮರಾಠಿ ರಕ್ಷಣೆ ಮತ್ತು ‘ಮರಾಠಿ ಮನೂಸ್’ ಹಿತಾಸಕ್ತಿಗಳಿಗಾಗಿ ಒಗ್ಗೂಡಿಸಲಿದೆ ಎಂದು ವರದಿಗಳು ಉಲ್ಲೇಖಿಸಿವೆ. ಮಹಾರಾಷ್ಟ್ರ | ಹಿಂದಿ ಹೇರಿಕೆಯ
ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥರಾಗಿರುವ ರಾಜ್ ಠಾಕ್ರೆ ಅವರು ಮಹಾರಾಷ್ಟ್ರ ಶಿಕ್ಷಣ ಸಚಿವ ದಾದಾ ಭೂಸೆ ಅವರನ್ನು ಭೇಟಿಯಾದ ನಂತರ ಬಿಜೆಪಿ ಸರ್ಕಾರದ ಕ್ರಮದ ಹಿಂದಿನ ತಾರ್ಕಿಕತೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ ಎಂದು ವರದಿಗಳು ಉಲ್ಲೇಖಸಿವೆ. ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಗುರಿಗಳನ್ನು ತಲುಪಲು ರಾಜ್ಯ ಸರ್ಕಾರ ನಿಜವಾಗಿಯೂ ಬದ್ಧವಾಗಿದ್ದರೆ, ಪ್ರಾಥಮಿಕ ಶಾಲಾ ಮಟ್ಟದಲ್ಲಿ ಕ್ರೀಡೆ ಮತ್ತು ಕಲೆಗಳಂತಹ ವಿಷಯಗಳನ್ನು ಪರಿಚಯಿಸುವ ಬಗ್ಗೆ ಪರಿಗಣಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ಜುಲೈ 6 ರಂದು ಗಿರ್ಗಾಮ್ ಚೌಪಟ್ಟಿಯಿಂದ ಪ್ರಾರಂಭವಾಗಿ ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಮುಕ್ತಾಯಗೊಳ್ಳಲಿರುವ ಮುಂಬರುವ ಮೆರವಣಿಗೆಯಲ್ಲಿ, ತಮ್ಮ ಸೋದರಸಂಬಂಧಿ ಮತ್ತು ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಮತ್ತು ಇತರ ರಾಜಕೀಯ ಪಕ್ಷಗಳ ನಾಯಕರನ್ನು ಸಂಪರ್ಕಿಸಲು ಉದ್ದೇಶಿಸಿರುವುದಾಗಿ ರಾಜ್ ಠಾಕ್ರೆ ಸುಳಿವು ನೀಡಿದ್ದಾರೆ.
“ವೈಯಕ್ತಿಕ ವಿವಾದಗಳು ಮತ್ತು ಭಿನ್ನಾಭಿಪ್ರಾಯಗಳಿಗಿಂತ ಹೆಚ್ಚಾಗಿ, ಮಹಾರಾಷ್ಟ್ರದ ವಿಚಾರ ಅತಿಮುಖ್ಯವಾಗಿದೆ. ಮರಾಠಿ ಮನೂಸ್ ನಮಗೆ ಮುಖ್ಯವಾಗಿದೆ” ಎಂದು ರಾಜ್ ಠಾಕ್ರೆ ಈ ಹಿಂದೆ ಹೇಳಿದ್ದರು.
Big development.
Shiv Sena (UBT) leader @rautsanjay61 officially confirms on July 6 both Thackeray’s— Uddhav & Raj will join the hand and lead the historic & mega march from Mumbai’s Girgaum chowpatty to Azad Maidan against imposition of Hindi in Maharashtra. @NewIndianXpress pic.twitter.com/CLHSe41UNc— Sudhir Suryawanshi (@ss_suryawanshi) June 27, 2025
ಉದ್ಧವ್ ಠಾಕ್ರೆ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ನಾಯಕರನ್ನು ಪ್ರತಿಭಟನೆಯಲ್ಲಿ ಭಾಗವಹಿಸಲು ವೈಯಕ್ತಿಕವಾಗಿ ಆಹ್ವಾನಿಸುವುದಾಗಿ ರಾಜ್ ಠಾಕ್ರೆ ಹೇಳಿದ್ದಾರೆ.
“ಇದು ನಮ್ಮ ಮೇಲೆ ಹಿಂದಿ ಹೇರಲು ಪ್ರಯತ್ನಿಸುತ್ತಿರುವ ಆಡಳಿತಾರೂಢ ಮಹಾಯುತಿ ಸರ್ಕಾರಕ್ಕೆ ಮಹಾರಾಷ್ಟ್ರ ಮತ್ತು ಮರಾಠಿ ಮನೂಸ್‌ನ ಶಕ್ತಿಯನ್ನು ತೋರಿಸುವ ವಿಚಾರವಾಗಿದೆ. ಮರಾಠಿ ಕಲಾವಿದರು ಮತ್ತು ಬರಹಗಾರರು ಪ್ರತಿಭಟನೆಯಲ್ಲಿ ಸೇರಲು ನಾವು ಮನವಿ ಮಾಡುತ್ತೇವೆ. ಜೊತೆಗೆ ಯಾರು ಭಾಗವಹಿಸುತ್ತಾರೆ ಮತ್ತು ಯಾರು ಭಾಗವಹಿಸುವುದಿಲ್ಲ ಎಂಬುದನ್ನು ನಾವು ಗಮನಿಸುತ್ತೇವೆ. ಅದು ನಮಗೆ ಸ್ಪಷ್ಟತೆಯನ್ನು ನೀಡುತ್ತದೆ” ಎಂದು ಅವರು ಹೇಳಿದ್ದಾರೆ.
ಜುಲೈ 6ರ ಪ್ರತಿಭಟನೆಗೆ ಭಾನುವಾರವನ್ನು ಆಯ್ಕೆ ಮಾಡುವುದರ ಹಿಂದಿನ ತಾರ್ಕಿಕತೆಯನ್ನು ವಿವರಿಸಿದ ರಾಜ್ ಠಾಕ್ರೆ, ಪೋಷಕರು ಮತ್ತು ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಸುಗಮಗೊಳಿಸಲು ಆ ದಿನವನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
“ಭಾನುವಾರ ರಜಾದಿನವಾಗಿರುವುದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಮೆರವಣಿಗೆಯಲ್ಲಿ ಸೇರಲು ಸುಲಭವಾಗುತ್ತದೆ. ನಾವು ಯಾವುದೇ ಭಾಷೆಯನ್ನು ವಿರೋಧಿಸುವುದಿಲ್ಲ, ಆದರೆ ಮಹಾರಾಷ್ಟ್ರದಲ್ಲಿ, 1 ನೇ ತರಗತಿಯಿಂದ ಮರಾಠಿಯನ್ನು ಮಾತ್ರ ಕಲಿಸಬೇಕು. ನಾವು ಈ ನಿಲುವಿನ ಬಗ್ಗೆ ಸ್ಪಷ್ಟವಾಗಿದ್ದೇವೆ. ನಾನು ಶಿಕ್ಷಣ ಸಚಿವರಿಗೆ ಅದನ್ನೇ ತಿಳಿಸಿದ್ದೇನೆ” ಎಂದು ರಾಜ್ ಠಾಕ್ರೆ ಹೇಳಿದ್ದಾರೆ. ಮಹಾರಾಷ್ಟ್ರ | ಹಿಂದಿ ಹೇರಿಕೆಯ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಭಯೋತ್ಪಾದನೆಗಿಂತ ಜಾತಿವಾದವೇ ಹೆಚ್ಚು ಅಪಾಯಕಾರಿ: ಎರಡು ಘಟನೆ ಉಲ್ಲೇಖಿಸಿದ ಗಾಯಕಿ ನೇಹಾ ಸಿಂಗ್ ರಾಥೋರ್
ಭಯೋತ್ಪಾದನೆಗಿಂತ ಜಾತಿವಾದವೇ ಹೆಚ್ಚು ಅಪಾಯಕಾರಿ: ಎರಡು ಘಟನೆ ಉಲ್ಲೇಖಿಸಿದ ಗಾಯಕಿ ನೇಹಾ ಸಿಂಗ್ ರಾಥೋರ್

