ಕಲ್ಲಿದ್ದಲು ಗಣಿಗಾರಿಕೆ ನಡೆಸಲು ಅದಾನಿ ಕಂಪನಿಯ ಎಂಡಿಒಗೆ ನೆರವಾಗಲು ಛತ್ತೀಸ್‌ಗಢದ ಬಿಜೆಪಿ ಸರ್ಕಾರ 5,000 ಮರಗಳ ಮಾರಣಹೋಮ ನಡೆಸಿದೆ ಎಂದು ವರದಿಯಾಗಿದೆ. ಮರಗಳ ಮಾರಣಹೋಮ ವಿರೋಧಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಶಾಸಕಿ ಮತ್ತು ಗ್ರಾಮಸ್ಥರನ್ನು ಬಂಧಿಸಿದೆ ಪೊಲೀಸರು ಬಂಧಿಸಿದ್ದಾರೆ. ಛತ್ತೀಸ್‌ಗಢದ ರಾಯಗಢ ಜಿಲ್ಲೆಯ ಲೈಲುಂಗಾ ಮತ್ತು ತಮ್ನಾರ್ ಪ್ರದೇಶದ ಗರೆ ಪಾಲ್ಮಾ II ಕಲ್ಲಿದ್ದಲು ಗಣಿಯಲ್ಲಿ ಗಣಿಗಾರಿಕೆಗಾಗಿ ಸಾವಿರಾರು ಬೃಹತ್ ಮರಗಳನ್ನು ಕಡಿಯಲಾಗುತ್ತಿದೆ ಎಂದು ವರದಿ ಹೇಳಿದೆ. ಛತ್ತೀಸ್‌ಗಢ | ಅದಾನಿ
ಪ್ರಸ್ತುತ ರಾಜ್ಯದ ಲೈಲುಂಗಾ ಪ್ರದೇಶದಲ್ಲಿ ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದ್ದು, ಗ್ರಾಮಸ್ಥರನ್ನು ಸ್ಥಳದಿಂದ ಬಲವಂತವಾಗಿ ಓಡಿಸಲಾಗಿದೆ. ಆದರೆ, ತೀವ್ರವಾಗಿ ಪ್ರತಿಭಟಿಸಿದವರನ್ನು ವಶಕ್ಕೆ ಪಡೆದು ಸ್ಥಳೀಯ ಪೊಲೀಸ್ ಠಾಣೆ ಮತ್ತು ಸರ್ಕ್ಯೂಟ್ ಹೌಸ್‌ಗೆ ಕರೆದೊಯ್ಯಲಾಗಿದೆ ಎಂದು ವರದಿ ಹೇಳಿದೆ.
ಗುರುವಾರ, ಈ ಪ್ರದೇಶದಲ್ಲಿ ಮರ ಕಡಿಯಲು ಎಂಡಿಒ ಕಂಪನಿಯ ಕಾರ್ಮಿಕರು ಹಾಗೂ ಜೆಸಿಬಿಗಳು ಗ್ರಾಮಗಳಿಗೆ ನುಗ್ಗಿವೆ. ಮರ ಕಡಿಯುವಿಕೆಯನ್ನು ಆರಂಭಿಸುತ್ತಿದ್ದಂತೆಯೇ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಶಾಸಕಿ ವಿದ್ಯಾವತಿ ಸಿದರ್ ಕೂಡ ಸ್ಥಳಕ್ಕೆ ಧಾವಿಸಿ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅವರೆಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ.
ಮಾಹಿತಿಯ ಪ್ರಕಾರ, ಉದ್ದೇಶಿತ ಗಣಿಗಾರಿಕೆ ಪ್ರದೇಶದಲ್ಲಿ 9 ಗ್ರಾಮ ಪಂಚಾಯತಿಗಳು, 14 ಹಳ್ಳಿಗಳು ಹಾಗೂ ಒಟ್ಟು 9,500 ಜನರು ವಾಸಿಸುತ್ತಿದ್ದಾರೆ. ಗೇರ್ ಪಾಲ್ಮಾ ಸೆಕ್ಟರ್ II ಕಲ್ಲಿದ್ದಲು ಗಣಿಯಲ್ಲಿ ಗಣಿಗಾರಿಕೆ ನಡೆಸಲು 2019ರಲ್ಲಿ ಗ್ರಾಮ ಸಭೆಗಳನ್ನು ನಡೆಸಲಾಗಿತ್ತು. ಆಗಲೂ ಗಣಿಗಾರಿಕೆಗೆ ವಿರೋಧ ವ್ಯಕ್ತವಾಗಿದ್ದವು.
छत्तीसगढ़ सुशासन सरकार में लोकतंत्र खत्म हो चुका है,
छ.ग.रायगढ़ में मुड़ागांव की जंगलों को कंपनी को आबंटित कोल माइंस जिसका एमडीओ अडानी है।
एक पेड़ माँ के नाम का दिखावा करने वाली Vishnu Deo Sai सांय सरकार के द्वारा लगभग 5000 से ज्यादा पुलिस बल लगाकर जंगलों की कटाई शुरू कर दी गई। pic.twitter.com/8GAq9iXhv8— Mithlesh Sahu (@mithleshsahu9) June 26, 2025
ಆದಾಗ್ಯೂ, 2022ರಲ್ಲಿ ಗಣಿಗಾರಿಕೆಗೆ ಅರಣ್ಯ ಇಲಾಖೆಯೂ ಅನುಮತಿ ಮಂಜೂರು ಮಾಡಿತು. ಬಳಿಕ, ಗ್ರಾಮದ ಪ್ರತಿನಿಧಿಗಳು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (NGT) ದೂರು ದಾಖಲಿಸಿದ್ದರು. ಅರಣ್ಯ ಇಲಾಖೆ ನೀಡಿದ್ದ ಅಮತಿಯನ್ನು ಎನ್‌ಜಿಟಿ ರದ್ದುಗೊಳಿಸಿತ್ತು. ಆದರೆ, 2024ರಲ್ಲಿ ಪರಿಸರ ಸಚಿವಾಲಯ ಮತ್ತೊಮ್ಮೆ ಗಣಿಗಾರಿಕೆಗೆ ಅನುಮತಿ ನೀಡಿತು.
“ಛತ್ತೀಸ್‌ಗಢದ ಹಣಕಾಸು ಮತ್ತು ಪರಿಸರ ಸಚಿವ, ರಾಯ್‌ಗಢ ಶಾಸಕ ಒ.ಪಿ ಚೌಧರಿ ಅವರು ತಮ್ನಾರ್ ಪ್ರದೇಶಕ್ಕೆ ಭೇಟಿ ನೀಡಿದ್ದರು. ಅವರ ಭೇಟಿಯ ಸಂದರ್ಭದಲ್ಲೇ ಮುದಗಾಂವ್‌ನಲ್ಲಿ ದೊಡ್ಡ ಪ್ರಮಾಣದ ಅರಣ್ಯನಾಶ ಪ್ರಾರಂಭವಾಯಿತು ಎಂದು ರಾಯ್‌ಗಢದ ಪರಿಸರವಾದಿ ರಾಜೇಶ್ ತ್ರಿಪಾಠಿ ಹೇಳಿದ್ದಾರೆ.
छत्तीसगढ़ के रायगढ़ में 1500 हरे-भरे पेड़ों को अडानी के मुनाफे के लिए बेरहमी से काट दिया गया। NGT के आदेश को भी BJP सरकार ने ताक पर रख दिया। प्रकृति को रौंदने का ये सिलसिला कब रुकेगा?pic.twitter.com/735YqFhDQT
— Hansraj Meena (@HansrajMeena) June 27, 2025
ಜೂನ್ 25 ರಂದು, ಸಚಿವ ಚೌಧರಿ ಅವರು ‘ತಾಯಿಯ ಹೆಸರಿನಲ್ಲಿ ಒಂದು ಮರ ನೆಡಿ’ ಅಭಿಯಾನವನ್ನು ಪ್ರಾರಂಭಿಸಿದರು. “ನಾಗರಿಕರು ತಮ್ಮ ತಾಯಂದಿರಿಗೆ ಗೌರವವಾಗಿ ಮತ್ತು ಪರಿಸರವನ್ನು ರಕ್ಷಿಸುವ ಹೆಜ್ಜೆಯಾಗಿ ಮರಗಳನ್ನು ನೆಡಬೇಕು” ಎಂದು ಚೌಧರಿ ಒತ್ತಾಯಿಸಿದ್ದರು.
ಆದರೆ, “ಚೌಧರಿ ತಮ್ನಾರ್‌ಗೆ ಭೇಟಿ ನೀಡಿ ಹೋದ 24 ಗಂಟೆಗಳ ಒಳಗೆಯೇ ಮರಗಳನ್ನು ಉರುಳಿಸುವ ಭಾರೀ ಯಂತ್ರೋಪಕರಣಗಳು ಮುದಗಾಂವ್‌ಗೆ ನುಗ್ಗಿದವು. ದೊಡ್ಡ ಅರಣ್ಯ ಪ್ರದೇಶಗಳನ್ನು ನಾಶಗೊಳಿಸಲು ಆರಂಭಿಸಿದವು” ಎಂದು ತ್ರಿಪಾಠಿ ಆರೋಪಿಸಿದ್ದಾರೆ. ಛತ್ತೀಸ್‌ಗಢ | ಅದಾನಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ‘NRC’ಗಿಂತ ಅಪಾಯಕಾರಿ: ಮಮತಾ ಬ್ಯಾನರ್ಜಿ
ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ‘NRC’ಗಿಂತ ಅಪಾಯಕಾರಿ: ಮಮತಾ ಬ್ಯಾನರ್ಜಿ

