ಭಾರತೀಯ ಸಂವಿಧಾನದ ಪೀಠಿಕೆಯಲ್ಲಿ “ಜಾತ್ಯತೀತ” ಮತ್ತು “ಸಮಾಜವಾದಿ” ಪದಗಳು ಇನ್ನೂ ಇರಬೇಕೆ? ಎಂಬ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆಯ ಹೇಳಿಕೆಗೆ ವಿವಿಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಸಂಘದ ಸ್ಥಾಪಕರು ಸಂವಿಧಾನವನ್ನು ಎಂದಿಗೂ ಒಪ್ಪಿಕೊಂಡಿಲ್ಲ. ಅವರ ಹೊಸ ಹೇಳಿಕೆಯು ಡಾ. ಬಿ.ಆರ್ ಅಂಬೇಡ್ಕರ್ ಅವರ ದೃಷ್ಟಿಕೋನವನ್ನು ಕೆಡವಿ ಹಾಕಿ ಮನುಸ್ಮೃತಿಯ ಪುರಾತನ ಆಶಯಗಳನ್ನು ಹೇರುವ ದೀರ್ಘಕಾಲದ ಪಿತೂರಿಯ ಭಾಗವಾಗಿದೆ ಎಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಹೇಳಿವೆ.
ಭಾರತದ ಅಥವಾ ಸಂವಿಧಾನದ ಮೂಲಭೂತ ಮೌಲ್ಯಗಳ ಮೇಲಿನ ನಿರಂತರ ದಾಳಿಯ ಪ್ರತಿರೋಧಕ್ಕೆ ಕಟಿಬದ್ದರಾಗುವಂತೆ ಪ್ರತಿಪಕ್ಷಗಳು ಕರೆ ನೀಡಿವೆ. ‘ಜಾತ್ಯತೀತ’,’ ಸಮಾಜವಾದಿ’ ಪದಗಳು ಸಂವಿಧಾನದ ಚೌಕಟ್ಟನ್ನು ಮೀರಿದ ಸೇರ್ಪಡೆಯಲ್ಲ. ಅವುಗಳು ದೇಶದ ಸ್ವಾತಂತ್ರ್ಯ ಹೋರಾಟಗಾರರು ಅನುಸರಿಸಿದ್ದ ಮೂಲ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದಿವೆ.
ದತ್ತಾತ್ರೇಯ ಹೊಸಬಾಳೆಯ ಹೇಳಿಕೆಯನ್ನು ವಿರೋಧಿಸಿರುವ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, “ಆರ್‌ಎಸ್‌ಎಸ್‌ನ ‘ಮುಖವಾಡ ಮತ್ತೆ ಕಳಚಿದೆ. ಆದರೆ, ಪ್ರತಿಯೊಬ್ಬ ದೇಶಭಕ್ತ ಭಾರತೀಯ ತಮ್ಮ ಕೊನೆಯ ಉಸಿರು ಇರುವವರೆಗೂ ಸಂವಿಧಾನವನ್ನು ರಕ್ಷಿಸುತ್ತಾರೆ” ಎಂದಿದ್ದಾರೆ.
“ಸಂವಿಧಾನವು ಸಮಾನತೆ, ಜಾತ್ಯತೀತತೆ ಮತ್ತು ನ್ಯಾಯದ ಬಗ್ಗೆ ಮಾತನಾಡುವುದು ಅವರನ್ನು ಕೆರಳಿಸುತ್ತದೆ. ಆರ್‌ಎಸ್‌ಎಸ್-ಬಿಜೆಪಿಗೆ ಸಂವಿಧಾನ ಬೇಕಾಗಿಲ್ಲ; ಅವರಿಗೆ ಮನುಸ್ಮೃತಿ ಬೇಕು. ಅವರು ತಳಮಟ್ಟದ ಮತ್ತು ಬಡ ಜನರ ಹಕ್ಕುಗಳನ್ನು ಕಸಿದುಕೊಂಡು ಮತ್ತೆ ಅವರನ್ನು ಗುಲಾಮರನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದಾರೆ. ಸಂವಿಧಾನದಂತಹ ಪ್ರಬಲ ಅಸ್ತ್ರವನ್ನು ಈ ಜನರಿಂದ ಕಸಿದುಕೊಳ್ಳುವುದು ಅವರ ನಿಜವಾದ ಕಾರ್ಯಸೂಚಿಯಾಗಿದೆ. ಆರ್‌ಎಸ್‌ಎಸ್ ಕನಸು ಕಾಣುವುದನ್ನು ನಿಲ್ಲಿಸಬೇಕು. ನಾವು ಅವರನ್ನು ಎಂದಿಗೂ ಯಶಸ್ವಿಯಾಗಲು ಬಿಡುವುದಿಲ್ಲ” ಎಂದು ಹೇಳಿದ್ದಾರೆ.
RSS का नक़ाब फिर से उतर गया।
संविधान इन्हें चुभता है क्योंकि वो समानता, धर्मनिरपेक्षता और न्याय की बात करता है।
RSS-BJP को संविधान नहीं, मनुस्मृति चाहिए। ये बहुजनों और ग़रीबों से उनके अधिकार छीनकर उन्हें दोबारा ग़ुलाम बनाना चाहते हैं। संविधान जैसा ताक़तवर हथियार उनसे छीनना इनका…
— Rahul Gandhi (@RahulGandhi) June 27, 2025
ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ಮುಕ್ತ ಕರೆ ‘ಕೇವಲ ಸಲಹೆಯಲ್ಲ’ ಬದಲಾಗಿ ‘ಸಂವಿಧಾನದ ಆತ್ಮದ ಮೇಲಿನ ಉದ್ದೇಶಪೂರ್ವಕ ದಾಳಿಯಾಗಿದೆ’ ಎಂದು ಕಾಂಗ್ರೆಸ್ ಹೇಳಿದೆ.
ಬಿಜೆಪಿ ನಾಯಕರು ತಮ್ಮ ಉದ್ದೇಶವನ್ನು ಮರೆಮಾಚಿಲ್ಲ. ಲೋಕಸಭಾ ಚುನಾವಣೆಯ ಸಮಯದಲ್ಲಿ ಸಂವಿಧಾನವನ್ನು ಪುನಃ ಬರೆಯಲು 400ಕ್ಕೂ ಹೆಚ್ಚು ಸ್ಥಾನಗಳು ಬೇಕಾಗುತ್ತವೆ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ ಎಂದು ಎಂದಿದೆ.
The RSS-BJP’s very ideology stands in direct opposition to the Indian Constitution.
RSS General Secretary Dattatreya Hosabale has openly called for the removal of the words 'socialist' and 'secular' from the Preamble. This is not just a suggestion—it is a deliberate assault on… pic.twitter.com/Xxmwm7Le96
— Congress (@INCIndia) June 26, 2025
ಆದರೆ, ಭಾರತದ ಜನರು ಅವರ (ಆರ್‌ಎಸ್‌ಎಸ್) ಕಾರ್ಯಸೂಚಿಯನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ಅವರಿಗೆ ಒಂದು ಅದ್ಭುತ ಉತ್ತರವನ್ನು ನೀಡಿದ್ದಾರೆ. ಈಗ, ಅವರು ತಮ್ಮ ಹಳೆಯ ನಾಟಕಕ್ಕೆ ಮರಳಿದ್ದಾರೆ. ಆದರೆ, ತಿಳಿದಿರಲಿ: ಸಂವಿಧಾನವನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನದ ವಿರುದ್ಧ ಕಾಂಗ್ರೆಸ್ ಮುರಿಯಲಾಗದ ಗೋಡೆಯಂತೆ ನಿಲ್ಲುತ್ತದೆ. ಜೈ ಸಂವಿಧಾನ” ಎಂದು ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ತಿಳಿಸಿದೆ.
ಇದು ಅಂಬೇಡ್ಕರ್ ಅವರ ನ್ಯಾಯಯುತ, ಎಲ್ಲರನ್ನೂ ಒಳಗೊಂಡ ಮತ್ತು ಪ್ರಜಾಪ್ರಭುತ್ವ ಭಾರತಕ್ಕಾಗಿನ ದೃಷ್ಟಿಕೋನವನ್ನು ಕೆಡವುವ ದೀರ್ಘಕಾಲದ ಪಿತೂರಿಯ ಭಾಗವಾಗಿದೆ. ಆರೆಸ್ಸೆಸ್-ಬಿಜೆಪಿ ಯಾವಾಗಲೂ ಇದನ್ನೇ ಹೇಳುತ್ತಿವೆ. ಸಂವಿಧಾನವನ್ನು ಅಂಗೀಕರಿಸಿದಾಗ, ಆರೆಸ್ಸೆಸ್ ಅದನ್ನು ತಿರಸ್ಕರಿಸಿತ್ತು ಎಂಬುದನ್ನು ನಾವು ಮರೆಯಬಾರದು. ಅವರು ಸಂವಿಧಾನವನ್ನು ಕೇವಲ ವಿರೋಧಿಸಿಲ್ಲ ಸುಟ್ಟುಹಾಕಿದರು” ಕಾಂಗ್ರೆಸ್ ಹೇಳಿದೆ.
“ದತ್ತಾತ್ರೇಯ ಅವರ ಹೇಳಿದೆ ತನ್ನ ಹಿಂದುತ್ವ ಯೋಜನೆಯನ್ನು ಅನುಸರಿಸುವ ಸಲುವಾಗಿ, ಸಂವಿಧಾನವನ್ನು ಬುಡಮೇಲು ಮಾಡುವ ಮತ್ತು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸುವ ಆರೆಸ್ಸೆಸ್‌ನ ದೀರ್ಘಕಾಲದ ಉದ್ದೇಶವನ್ನು ಬಹಿರಂಗಪಡಿಸುತ್ತದೆ” ಎಂದು ಸಿಪಿಐ(ಎಂ) ಪಾಲಿಟ್ ಬ್ಯುರೊ ಹೇಳಿಕೆಯಲ್ಲಿ ತಿಳಿಸಿದೆ.
“ಸ್ವಾತಂತ್ರ್ಯ ಚಳವಳಿಯಲ್ಲಿ ಯಾವುದೇ ಪಾತ್ರ ವಹಿಸದ ಆರ್‌ಎಸ್‌ಎಸ್, ಈಗ ಈ ಮೂಲಭೂತ ತತ್ವಗಳನ್ನು ತೆಗೆದುಹಾಕಲು ಪ್ರತಿಪಾದಿಸುವುದು ಬೂಟಾಟಿಕೆಯಾಗಿದೆ” ಎಂದು ಕಿಡಿಕಾರಿದೆ.
#CPIM Polit Bureau statement denouncing #RSS's proposal to remove 'socialist' and 'secular' from the #preamble of the constitutionhttps://t.co/K2iEYxCTfk pic.twitter.com/HtDFO2TzY2
— CPI (M) (@cpimspeak) June 27, 2025
“ಸಂವಿಧಾನದ ಬಗೆಗಿನ ಬಿಜೆಪಿಯ ಹೇಳಿಕೆಗಳ ಹೊರತಾಗಿಯೂ, ಅವರ ಗುಪ್ತ ಕಾರ್ಯಸೂಚಿ ಯಾವಾಗಲೂ ನಮ್ಮ ಸಂವಿಧಾನವನ್ನು ವಿರೂಪಗೊಳಿಸುವುದು ಮತ್ತು ನಾಶಮಾಡುವುದಾಗಿದೆ. ಏಕೆಂದರೆ, ಅದು ಆರೆಸ್ಸೆಸ್-ಬಿಜೆಪಿಯ ಮೂಲ ಫ್ಯಾಸಿಸ್ಟ್ ನಂಬಿಕೆಗಳಿಗೆ ವಿರುದ್ಧವಾಗಿದೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
The RSS’ single-minded focus to destroy the Constitution is never hidden for too long.
Beyond the BJP’s lip service to the Constitution, their hidden agenda has always been to distort and destroy our Constitution – because it stands against the core fascist beliefs of the… https://t.co/nPXBdl9L3F
— K C Venugopal (@kcvenugopalmp) June 27, 2025
“ಆರ್‌ಎಸ್‌ಎಸ್ ಸಂವಿಧಾನವನ್ನು ‘ಎಂದಿಗೂ ಒಪ್ಪಿಕೊಂಡಿಲ್ಲ’ ಮತ್ತು ಅದು 1949 ರ ನವೆಂಬರ್‌ನಿಂದ ಅಂಬೇಡ್ಕರ್, ಜವಾಹರಲಾಲ್ ನೆಹರು ಮತ್ತು ಸಂವಿಧಾನದ ರಚನೆಯಲ್ಲಿ ಭಾಗಿಯಾಗಿರುವ ಇತರರ ಮೇಲೆ ದಾಳಿ ಮಾಡುತ್ತಿವೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಆರ್‌ಎಸ್‌ಎಸ್‌ನ ಮಾತಿನಲ್ಲಿ ಹೇಳುವುದಾದರೆ, ಸಂವಿಧಾನವು ಮನುಸ್ಮೃತಿಯಿಂದ ಪ್ರೇರಿತವಾಗಿಲ್ಲ. ಆರ್‌ಎಸ್‌ಎಸ್ ಮತ್ತು ಬಿಜೆಪಿ ಪದೇ ಪದೇ ಹೊಸ ಸಂವಿಧಾನಕ್ಕಾಗಿ ಕರೆ ನೀಡುತ್ತಿವೆ. ಹೊಸ ಸಂವಿಧಾನ 2024 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮೋದಿಯವರ ಪ್ರಚಾರದ ಕೂಗಾಗಿತ್ತು. ಭಾರತದ ಜನರು ಈ ಕೂಗನ್ನು ನಿರ್ಣಾಯಕವಾಗಿ ತಿರಸ್ಕರಿಸಿದರು. ಆದರೂ, ಆರ್‌ಎಸ್‌ಎಸ್ ಪರಿಸರ ವ್ಯವಸ್ಥೆಯು ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವ ಬೇಡಿಕೆಗಳನ್ನು ಮುಂದಿಡುತ್ತಲೇ ಇದೆ,” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ನವೆಂಬರ್ 25, 2024 ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದ ಜೈರಾಮ್ ರಮೇಶ್, “ಅದನ್ನು(ತೀರ್ಪು) ಓದಲು ತೊಂದರೆ ತೆಗೆದುಕೊಳ್ಳುವಂತೆ ಅವರನ್ನು (ಹೊಸಬಾಲೆ) ವಿನಂತಿಸುವುದು ತುಂಬಾ ಕಷ್ಟವಾಗುತ್ತದೆಯೇ?” ಎಂದು ಕೇಳಿದ್ದಾರೆ.
The RSS has NEVER accepted the Constitution of India. It attacked Dr. Ambedkar, Nehru, and others involved in its framing from Nov 30, 1949 onwards. In the RSS's own words, the Constitution was not inspired by Manusmriti.
The RSS and the BJP have repeatedly given the call for a… pic.twitter.com/WP07XV7MuA
— Jairam Ramesh (@Jairam_Ramesh) June 27, 2025
“ನಾಗ್ಪುರ (ಆರ್‌ಎಸ್‌ಎಸ್ ಪ್ರಧಾನ ಕಚೇರಿ) ಮುದ್ರಿಸಿದ್ದು ಕೆಲಸ ಮಾಡುವುದಿಲ್ಲ. ನೀವು ಅರ್ಥಮಾಡಿಕೊಳ್ಳಲು ಬಯಸಿದರೆ, ನೀವು ಸಂವಿಧಾನ ಸಭೆಯಲ್ಲಿನ ಚರ್ಚೆಗಳನ್ನು ಓದಬೇಕು. ಬಹುಶಃ ಅವರು ಅದನ್ನು ಓದಿಲ್ಲ… ಸಮಾಜವಾದ ಮತ್ತು ಜಾತ್ಯತೀತತೆಯು ನಮ್ಮ ಸಂವಿಧಾನದ ಅವಿಭಾಜ್ಯ ಅಂಗಗಳಾಗಿದ್ದವು” ಎಂದು ಹಿರಿಯ ಆರ್‌ಜೆಡಿ ಸಂಸದ ಮನೋಜ್ ಕುಮಾರ್ ಝಾ ಹೇಳಿದ್ದಾರೆ.
ಸಂವಿಧಾನದಿಂದ ‘ಸಮಾಜವಾದ ಮತ್ತು ಜಾತ್ಯತೀತ’ತೆಯನ್ನು ತೆಗೆದುಹಾಕಲು ಆರ್‌ಎಸ್‌ಎಸ್‌ನ ಹೊಸ ಒತ್ತಡವು, ಅದರ ಬಗ್ಗೆ ಅವರ ದೀರ್ಘಕಾಲದ ತಿರಸ್ಕಾರವನ್ನು ಬಹಿರಂಗಪಡಿಸುತ್ತದೆ ಎಂದು ಸಿಪಿಐ(ಎಂ) ರಾಜ್ಯಸಭಾ ನಾಯಕ ಜಾನ್ ಬ್ರಿಟ್ಟಾಸ್ ಹೇಳಿದ್ದಾರೆ.
The RSS’s renewed push to strip socialism and secularism from India’s Constitution lays bare their long-standing disdain for it. They never accepted the Constitution, attacking Dr. Ambedkar, Nehru, and its framers since November 30, 1949, for its rejection of Manusmriti’s…
— John Brittas (@JohnBrittas) June 27, 2025
“ಇತ್ತೀಚೆಗೆ, ಕೇರಳದ ಪ್ರಮುಖ ಆರ್‌ಎಸ್‌ಎಸ್ ನಾಯಕರೊಬ್ಬರು ಭಾರತದ ತ್ರಿವರ್ಣ ಧ್ವಜವನ್ನು ಕೇಸರಿ ಧ್ವಜದೊಂದಿಗೆ ಬದಲಾಯಿಸಬೇಕೆಂದು ನಿರ್ಲಜ್ಜವಾಗಿ ಒತ್ತಾಯಿಸಿದ್ದರು. ಇದು ರಾಷ್ಟ್ರೀಯ ಚಿಹ್ನೆಗಳ ಮೇಲಿನ ಅವರ ತಿರಸ್ಕಾರವನ್ನು ಬಹಿರಂಗಪಡಿಸಿತ್ತು. ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಬೇಕು ಎಂಬ ಬಿಜೆಪಿ ಹೇಳಿಕೆಯು ಸಂವಿಧಾನವನ್ನು ಪುನಃ ಬರೆಯುವ ಮತ್ತು ಮನುಸ್ಮೃತಿಯ ಪುರಾತನ ನೀತಿಗಳನ್ನು ಹೇರುವ ಒಂದು ತಂತ್ರವಾಗಿತ್ತು. ಭಾರತದ ಮೂಲಭೂತ ಮೌಲ್ಯಗಳ ಮೇಲಿನ ಈ ನಿರಂತರ ದಾಳಿಗೆ ಗಟ್ಟಿಯಾದ ಪ್ರತಿರೋಧ ಬೇಕಿದೆ ಎಂದು ಜಾನ್ ಬ್ರಿಟ್ಟಾಸ್ ತಿಳಿಸಿದ್ದಾರೆ.
ಸಂವಿಧಾನ ಪೀಠಿಕೆಯ ‘ಜಾತ್ಯತೀತ’, ‘ಸಮಾಜವಾದಿ’ ಪದಗಳು ಇನ್ನೂ ಇರಬೇಕೆ ಎಂದ ಆರೆಸ್ಸೆಸ್!


