ಬೆಂಗಳೂರಿನ ಹೊರವಲಯದ ಸೋಲದೇವನಹಳ್ಳಿ ಬಳಿಯಲ್ಲಿ ಕುಶಾಲ್ ಎಂಬ ಯುವಕನನ್ನು 8-10 ಜನರ ಗುಂಪು ಅಪಹರಿಸಿ ಅಮಾನವೀಯವಾಗಿ ಹಲ್ಲೆ ನಡೆಸಿರುವ ವಿಡಯೊ ವೈರಲ್ ಆಗಿದೆ. ಮಾಜಿ ಗೆಳತಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಕ್ಕೆ ಅವರ ಬೆತ್ತಲೆಗೊಳಿಸಿ ಥಳಿಸಿದ್ದಾರೆ ಎಂದು ವರದಿಯಾಗಿದೆ.
ಯುವಕರ ಗುಂಪು ಕುಶಾಲ್‌ನನ್ನು ವಿವಸ್ತ್ರಗೊಳಿಸಿ, ರಾಡ್ ಮತ್ತು ದೊಣ್ಣೆ ಬಳಸಿ ಆತನ ಖಾಸಗಿ ಭಾಗಗಳಿಗೆ ಹೊಡೆದು, ಸಂಪೂರ್ಣ ಹಲ್ಲೆಯನ್ನು ವೀಡಿಯೊದಲ್ಲಿ ದಾಖಲಿಸಿದ್ದಾರೆ.
ಮಾಜಿ ಪ್ರೇಯಸಿಗೆ ಸಂದೇಶ ಕಳುಹಿಸಿದ ವಿವಾದದಿಂದಾಗಿ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ. ಎರಡು ವರ್ಷಗಳಿಗೂ ಹೆಚ್ಚು ಕಾಲ ಸಂಬಂಧದಲ್ಲಿದ್ದ ಕುಶಾಲ್‌ನ ಗೆಳತಿ ಇತ್ತೀಚೆಗೆ ಆತನಿಂದ ಬೇರ್ಪಟ್ಟಿ, ಇನ್ನೊಬ್ಬ ಹುಡುಗನೊಂದಿಗೆ ಹತ್ತಿರವಾಗಿದ್ದಳು ಎಂದು ತಿಳಿದುಬಂದಿದೆ. ಇದರಿಂದ ಆಕ್ರೋಶಗೊಂಡಿದ್ದ ಕುಶಾಲ್ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ.
ಪೊಲೀಸರ ಪ್ರಕಾರ, ಈ ಹಲ್ಲೆಯನ್ನು ಮಹಿಳೆಯ ಹಾಲಿ ಗೆಳೆಯ ಮತ್ತು ಅವನ ಸಹಚರರು ಸಂಚು ರೂಪಿಸಿ ನಡೆಸಿದ್ದಾರೆ. ಕುಶಾಲ್‌ನ ಸಂದೇಶ ಕಳುಹಿಸಿದ ನಂತರ ದಾಳಿಗೆ ಸಂಚು ರೂಪಿಸಿದ್ದಾರೆ ಎಂದು ವರದಿಯಾಗಿದೆ. ಆರೋಪಿಗಳು ವಿವಾದವನ್ನು ಪರಿಹರಿಸುವ ನೆಪದಲ್ಲಿ ಆತನನ್ನು ಕರೆಸಿ, ಕಾರಿನಲ್ಲಿ ಅಪಹರಿಸಿ, ಕೆರೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಆತನ ಖಾಸಗಿ ಭಾಗಗಳನ್ನು ಗುರಿಯಾಗಿಸಿಕೊಂಡು ಆತನನ್ನು ವಿವಸ್ತ್ರಗೊಳಿಸಿ ಥಳಿಸಿದ್ದಾರೆ; ಘಟನೆಯನ್ನು ಚಿತ್ರೀಕರಿಸಿದ್ದಾರೆ.
ಹಲ್ಲೆಯ ವೀಡಿಯೊದಲ್ಲಿ, ಆರೋಪಿಗಯೋರ್ವ ರೇಣುಕಸ್ವಾಮಿ ಕೊಲೆ ಪ್ರಕರಣವನ್ನು ಉಲ್ಲೇಖಿಸಿದ್ದಾನೆ. “ಇದು ಆ ಪ್ರಕರಣದಂತೆಯೇ ಆಗುತ್ತದೆ” ಎಂದು ಹೇಳುತ್ತಿರುವುದು ಕಂಡುಬರುತ್ತದೆ. ಆರೋಪಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ದೃಶ್ಯಾವಳಿಗಳನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.

ಸೋಲದೇವನಹಳ್ಳಿ ಪೊಲೀಸರು ಹೇಮಂತ್, ಯಶವಂತ್, ಶಿವಶಂಕರ್ ಮತ್ತು ಶಶಾಂಕ್ ಗೌಡ ಎಂದು ಗುರುತಿಸಲಾದ ನಾಲ್ವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಇತರ ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ.
ಈ ಘಟನೆಯು ಕನ್ನಡ ನಟ ದರ್ಶನ್ ಒಳಗೊಂಡ 2024 ರ ಹೈ ಪ್ರೊಫೈಲ್ ಕೊಲೆ ಪ್ರಕರಣಕ್ಕೆ ಹೋಲಿಕೆಯಾಗಿದೆ. ಚಿತ್ರದುರ್ಗದ 33 ವರ್ಷದ ರೇಣುಕಸ್ವಾಮಿ ಬೆಂಗಳೂರಿನ ಸುಮನಹಳ್ಳಿಯ ಚರಂಡಿ ಬಳಿ ಬಹು ಗಾಯಗಳೊಂದಿಗೆ ಮೃತಪಟ್ಟಿರುವುದು ಪತ್ತೆಯಾಗಿತ್ತು. ದರ್ಶನ್ ಜೊತೆ ಸಂಪರ್ಕ ಹೊಂದಿರುವ ನಟಿ ಪವಿತ್ರಾ ಗೌಡಗೆ ಆತ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ. ಇದು ಆತನ ಅಪಹರಣ, ಚಿತ್ರಹಿಂಸೆ ಮತ್ತು ಕೊಲೆಗೆ ಕಾರಣವಾಯಿತು ಎಂದು ಆರೋಪಿಸಲಾಗಿದೆ.
ಹಣಕಾಸಿನ ವಿವಾದವನ್ನು ಉಲ್ಲೇಖಿಸಿ ನಾಲ್ವರು ಆರಂಭದಲ್ಲಿ ಪೊಲೀಸರಿಗೆ ಶರಣಾದರು. ಆದರೆ, ಅವರ ಹೇಳಿಕೆಗಳಲ್ಲಿನ ಭೀನ್ನತಯು ನಟ ದರ್ಶನ್, ಪವಿತ್ರಾ ಗೌಡ ಮತ್ತು ಇತರ 15 ಜನರನ್ನು ಒಳಗೊಂಡ ದೊಡ್ಡ ಪಿತೂರಿಯನ್ನು ಬಹಿರಂಗಪಡಿಸಿತು. ಕೊಲೆಯಲ್ಲಿ ಪಾತ್ರ ವಹಿಸಿದ್ದಕ್ಕಾಗಿ ದರ್ಶನ್ ಅವರನ್ನು ಜೂನ್ 11, 2024 ರಂದು ಬಂಧಿಸಲಾಯಿತು. ಇದೀಗ ಜಾಮೀನಿನ ಮೇಲೆ ಆರೋಪಿಗಳೆಲ್ಲರೂ ಹೊರಗಿದ್ದಾರೆ.
ಒಬಿಸಿ ಸಲಹಾ ಮಂಡಳಿ ಸದಸ್ಯರಲ್ಲಿ ಸಿದ್ದರಾಮಯ್ಯ ಕೂಡಾ ಒಬ್ಬರು: ಸಿಎಂ ಕಚೇರಿ ಸ್ಪಷ್ಟನೆ


