ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಕೇಂದ್ರ ಕಾರ್ಮಿಕ ಸಂಘಗಳು ಜುಲೈ 9 ರಂದು ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಬ್ಯಾಂಕಿಂಗ್ ವಲಯವು ಸೇರಲಿದೆ ಎಂದು ಬ್ಯಾಂಕ್ ನೌಕರರ ಸಂಘ ಸೋಮವಾರ ತಿಳಿಸಿದೆ.
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಕ್ಕೆ ಸಂಯೋಜಿತವಾಗಿರುವ ಬಂಗಾಳ ಪ್ರಾಂತೀಯ ಬ್ಯಾಂಕ್ ನೌಕರರ ಸಂಘವು ಎಐಬಿಇಎ, ಎಐಬಿಒಎ ಮತ್ತು ಬಿಇಎಫ್‌ಐ ಸೇರಿದಂತೆ ಬ್ಯಾಂಕಿಂಗ್ ವಲಯದ ಕಾರ್ಮಿಕ ಸಂಘಗಳು ಬುಧವಾರದ ಸಾರ್ವತ್ರಿಕ ಮುಷ್ಕರದಲ್ಲಿ ಭಾಗವಹಿಸಲು ನಿರ್ಧರಿಸಿವೆ ಎಂದು ತಿಳಿಸಿದೆ.
ವಿಮಾ ವಲಯವು ಸಹ ಮುಷ್ಕರದಲ್ಲಿ ಭಾಗವಹಿಸಲು ನಿರ್ಧರಿಸಿದೆ ಎಂದು ಸಂಘವು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಬ್ಯಾಂಕಿಂಗ್ ಮತ್ತು ಇತರ ಹಣಕಾಸು ವಲಯದಲ್ಲಿ ಮುಷ್ಕರವು ಸಂಪೂರ್ಣವಾಗಿರುತ್ತದೆ ಎಂದು ಅದು ಹೇಳಿದೆ.
“ಕೇಂದ್ರ ಸರ್ಕಾರದ ಕಾರ್ಪೊರೇಟ್ ಪರ ಆರ್ಥಿಕ ಸುಧಾರಣೆಗಳು ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು” ಪ್ರತಿಭಟಿಸಲು ಎಲ್ಲ ಕೈಗಾರಿಕೆಗಳ 15 ಕೋಟಿಗೂ ಹೆಚ್ಚು ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಬ್ಯಾಂಕ್ ನೌಕರರ ಸಂಘ ತಿಳಿಸಿದೆ.
ದಲಿತ ಕಾನೂನು ವಿದ್ಯಾರ್ಥಿಯ ಕಸ್ಟಡಿ ಸಾವು: ಎಫ್‌ಐಆರ್ ದಾಖಲಿಸಲು ಬಾಂಬೆ ಹೈಕೋರ್ಟ್ ಆದೇಶ


