- Advertisement -
- Advertisement -
ಆಗ್ರಾದ ಎತ್ಮದುದ್ದೌಲಾ ಪ್ರದೇಶದಲ್ಲಿ ಮೊಹರಂ ಮೆರವಣಿಗೆಯ ಸಮಯದಲ್ಲಿ ಪ್ಯಾಲೆಸ್ತೀನಿಯನ್ ಧ್ವಜ ಹಾರಿಸಿದ್ದಕ್ಕಾಗಿ ಉತ್ತರ ಪ್ರದೇಶದಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ.
ನಾಗ್ಲಾ ಫತೂರಿಯ ಘಾಟ್ ತಿರಹಾ ನಿವಾಸಿ ಅಮನ್, ಮೊಹರಂ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅವರು ಪ್ಯಾಲೆಸ್ತೀನಿಯನ್ ಧ್ವಜವನ್ನು ಹಾರಿಸುತ್ತಿರುವುದು ಕಂಡುಬಂದಿದೆ.
ಎತ್ಮದುದ್ದೌಲಾ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. “ಸಾರ್ವಜನಿಕ ಶಾಂತಿಗೆ ಭಂಗ ತಂದ ಆರೋಪದ ಮೇಲೆ ಅಮನ್ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಾವು ಅವರನ್ನು ಪೊಲೀಸ್ ಠಾಣೆಗೆ ಕರೆತಂದಾಗ ತಮ್ಮ ತಪ್ಪನ್ನು ಒಪ್ಪಿಕೊಂಡರು, ಕೈಮುಗಿದು ಕ್ಷಮೆಯಾಚಿಸಿದರು” ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದ್ದ ವೀಡಿಯೊವನ್ನು ಈಗ ತೆಗೆದುಹಾಕಲಾಗಿದೆ.
ಉತ್ತರಪ್ರದೇಶ| ಮೊಹರಂ ಮೆರವಣಿಗೆಯ ವೇಳೆ ಕಲ್ಲು ತೂರಾಟ; 8 ವರ್ಷದ ಬಾಲಕನಿಗೆ ಗಾಯ


