Homeಮುಖಪುಟಉಜ್ವಲ್ ನಿಕಮ್, ಮೀನಾಕ್ಷಿ ಜೈನ್ ಸೇರಿ ನಾಲ್ವರು ರಾಜ್ಯಸಭೆಗೆ ನಾಮನಿರ್ದೇಶನ

ಉಜ್ವಲ್ ನಿಕಮ್, ಮೀನಾಕ್ಷಿ ಜೈನ್ ಸೇರಿ ನಾಲ್ವರು ರಾಜ್ಯಸಭೆಗೆ ನಾಮನಿರ್ದೇಶನ

- Advertisement -
- Advertisement -

ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ಹಿರಿಯ ವಕೀಲ ಉಜ್ವಲ್ ನಿಕಮ್, ಇತಿಹಾಸಗಾರ್ತಿ ಡಾ. ಮೀನಾಕ್ಷಿ ಜೈನ್ ಮತ್ತು ರಾಜಕೀಯ ದಾಳಿಯಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಕೇರಳ ಬಿಜೆಪಿ ನಾಯಕ ಸಿ. ಸದಾನಂದನ್ ಮಾಸ್ಟರ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.

ಇದರೊಂದಿಗೆ, ರಾಜ್ಯಸಭೆಯ ನಾಮನಿರ್ದೇಶಿತ ವರ್ಗದ ಎಲ್ಲಾ 12 ಸ್ಥಾನಗಳು ಭರ್ತಿಯಾಗಿದ್ದು, ಜಮ್ಮು ಮತ್ತು ಕಾಶ್ಮೀರದ ನಾಲ್ಕು ಸ್ಥಾನಗಳು ಮತ್ತು ಹರಿಯಾಣದ ಒಂದು ಸ್ಥಾನ ಖಾಲಿಯಿದೆ. 240 ಸದಸ್ಯರ ಸದನದಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ 135 ಸಂಸದರ ಬೆಂಬಲವನ್ನು ಹೊಂದಿದೆ, ಇದರಲ್ಲಿ ಸಾಮಾನ್ಯವಾಗಿ ಸರ್ಕಾರವನ್ನು ಬೆಂಬಲಿಸುವ ಎಲ್ಲಾ 12 ನಾಮನಿರ್ದೇಶಿತ ಸಂಸದರು ಮತ್ತು ಒಬ್ಬ ಸ್ವತಂತ್ರ ಸದಸ್ಯ ಸೇರಿದ್ದಾರೆ.

ರಾಜ್ಯಸಭೆಗೆ ಹೊಸದಾಗಿ ನಾಲ್ವರು ಸದಸ್ಯರನ್ನು ನಾಮನಿರ್ದೇಶನ ಮಾಡುವ ಬಗ್ಗೆ ಗೃಹ ಸಚಿವಾಲಯ (ಎಂಎಚ್‌ಎ) ಶನಿವಾರ ರಾತ್ರಿ ಅಧಿಸೂಚನೆ ಹೊರಡಿಸಿದೆ.

ವಿದೇಶಾಂಗ ವ್ಯವಹಾರಗಳಲ್ಲಿ ಪರಿಣತಿ ಹೊಂದಿದ್ದಕ್ಕಾಗಿ ಶ್ರಿಂಗ್ಲಾ ಅವರನ್ನು ರಾಜ್ಯಸಭೆಗೆ ಕರೆತರಲಾಗಿದೆ. ವಿದೇಶಾಂಗ ಕಾರ್ಯದರ್ಶಿಯಾಗುವ ಮೊದಲು ಅಮೆರಿಕದ ಮಾಜಿ ರಾಯಭಾರಿಯಾಗಿದ್ದ ಶ್ರಿಂಗ್ಲಾ, 2023ರಲ್ಲಿ ಭಾರತದ ಜಿ 20 ಅಧ್ಯಕ್ಷತೆಯ ಮುಖ್ಯ ಸಂಯೋಜಕರಾಗಿದ್ದರು ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದ ಇತ್ತೀಚಿನ ಜಾಗತಿಕ ಸಂಪರ್ಕದ ಭಾಗವಾಗಿದ್ದರು.

ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಗೂ ಮುನ್ನ, ಶ್ರಿಂಗ್ಲಾ ಅವರು ರಾಜಕೀಯಕ್ಕೆ ಧುಮುಕುತ್ತಾರೆ ಮತ್ತು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಿಂದ ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಎಂಬ ಊಹಾಪೋಹಗಳಿದ್ದವು. 2023ರ ಕೊನೆಯಲ್ಲಿ ಮತ್ತು 2024ರ ಆರಂಭದಲ್ಲಿ, ಅವರು ತಮ್ಮ ‘ಡಾರ್ಜಿಲಿಂಗ್ ವೆಲ್ಫೇರ್ ಸೊಸೈಟಿ’ ಮೂಲಕ ಆ ಕ್ಷೇತ್ರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.

2008ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾಗಿ ಹೆಸರುವಾಸಿಯಾಗಿದ್ದ ಹಿರಿಯ ವಕೀಲ ಉಜ್ವಲ್ ನಿಕಮ್, 2016ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ಅವರು ಲೋಕಸಭಾ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಕಾಂಗ್ರೆಸ್‌ನ ವರ್ಷಾ ಗಾಯಕ್ವಾಡ್ ವಿರುದ್ಧ ಸೋಲನುಭವಿಸಿದ್ದರು.

ಗುಲ್ಶನ್ ಕುಮಾರ್ ಮತ್ತು ಪ್ರಮೋದ್ ಮಹಾಜನ್ ಅವರ ಕೊಲೆ ಪ್ರಕರಣಗಳಲ್ಲಿ, 1993ರ ಮುಂಬೈ ಸರಣಿ ಸ್ಫೋಟಗಳು ಮತ್ತು 2003 ರ ಗೇಟ್‌ವೇ ಆಫ್ ಇಂಡಿಯಾ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಅವರು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದರು.

ಇತಿಹಾಸಗಾರ್ತಿ ಡಾ. ಮೀನಾಕ್ಷಿ ಜೈನ್ ದೆಹಲಿಯ ಗಾರ್ಗಿ ಕಾಲೇಜಿನ ಮಾಜಿ ಅಸೋಸಿಯೇಟ್ ಪ್ರೊಫೆಸರ್. ಇವರು 2020ರಲ್ಲಿ ಪದ್ಮಶ್ರೀ ಪ್ರಶಸ್ತಿ ಭಾಜನರಾಗಿದ್ದಾರೆ. ಡಾ. ಜೈನ್ ಒಬ್ಬರು ಪ್ರಸಿದ್ಧ ರಾಜಕೀಯ ತಜ್ಞೆಯೂ ಹೌದು. ಟೈಮ್ಸ್ ಆಫ್ ಇಂಡಿಯಾದ ಮಾಜಿ ಸಂಪಾದಕ ಗಿರಿಲಾಲ್ ಜೈನ್ ಅವರ ಪುತ್ರಿಯಾಗಿರುವ ಜೈನ್ ಅವರನ್ನು, 2014ರಲ್ಲಿ ನರೇಂದ್ರ ಮೋದಿ ಸರ್ಕಾರವು ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಗೆ ನಾಮನಿರ್ದೇಶನ ಮಾಡಿತ್ತು.

ಶಿಕ್ಷಕರಾಗಿರುವ ಸದಾನಂದನ್ ಮಾಸ್ಟರ್, ಕೇರಳದಲ್ಲಿ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದರು. 1994ರಲ್ಲಿ ಸಿಪಿಐ(ಎಂ) ಕಾರ್ಯಕರ್ತರ ದಾಳಿಯಲ್ಲಿ ಇವರು ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸಂಘ ಪರಿವಾರದ ಹಿರಿಯ ನಾಯಕರು ನಡೆಸುತ್ತಿರುವ ಬಲಪಂಥೀಯ ಚಿಂತಕರ ಚಾವಡಿಯಾದ ‘ಭಾರತೀಯ ವಿಚಾರ ಕೇಂದ್ರ’ದೊಂದಿಗೆ ಸದಾನಂದನ್ ಮಾಸ್ಟರ್ ನಿಕಟ ಸಂಬಂಧ ಹೊಂದಿದ್ದಾರೆ.

ಸಂಸತ್ತಿನ ಮಳೆಗಾಲದ ಅಧಿವೇಶನ ಪ್ರಾರಂಭವಾಗುವ ಒಂದು ವಾರ ಮೊದಲು ಆರು ವರ್ಷಗಳ ಅವಧಿಗೆ ಹೊಸ ಸದಸ್ಯರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಈ ಸಂಸದರು ನಾಮನಿರ್ದೇಶನಗೊಂಡ ಆರು ತಿಂಗಳೊಳಗೆ ಒಂದು ಪಕ್ಷವನ್ನು ಸೇರಬಹುದು.

ಪ್ರಸ್ತುತ ಎಂಟು ನಾಮನಿರ್ದೇಶಿತ ಸಂಸದರಲ್ಲಿ, ಗುಲಾಮ್ ಅಲಿ (ಸೆಪ್ಟೆಂಬರ್ 2028 ರವರೆಗೆ ಅಧಿಕಾರಾವಧಿ) ಮತ್ತು ಸತ್ನಮ್ ಸಿಂಗ್ ಸಂಧು (ಜನವರಿ 2030) ಬಿಜೆಪಿಗೆ ಸೇರಿದ್ದಾರೆ. ಮುಂದಿನ ವರ್ಷ ಮಾರ್ಚ್‌ನಲ್ಲಿ ನ್ಯಾಯಮೂರ್ತಿ (ನಿವೃತ್ತ) ರಂಜನ್ ಗೊಗೊಯ್ ಅವರ ಅಧಿಕಾರಾವಧಿ ಮುಗಿದಾಗ ಒಂದು ನಾಮನಿರ್ದೇಶಿತ ಸ್ಥಾನ ಖಾಲಿಯಾಗಲಿದೆ.

ಡಾ. ವೀರೇಂದ್ರ ಹೆಗ್ಗಡೆ, ಇಳಯರಾಜ, ವಿಜಯೇಂದ್ರ ಪ್ರಸಾದ್, ಪಿಟಿ ಉಷಾ (ಜುಲೈ 2028 ರವರೆಗೆ), ಮತ್ತು ಸುಧಾ ಮೂರ್ತಿ (ಮಾರ್ಚ್ 2030 ರವರೆಗೆ ಅವಧಿ) ಇತರ ನಾಮನಿರ್ದೇಶಿತ ಸದಸ್ಯರು.

ಕೇರಳ | ಗುರು ಪೂರ್ಣಿಮಾ ಹೆಸರಿನಲ್ಲಿ ಶಿಕ್ಷಕರ ಪಾದ ತೊಳೆದ ವಿದ್ಯಾರ್ಥಿಗಳು: ಶಾಲೆಗಳ ವಿರುದ್ಧ ಶಿಕ್ಷಣ ಸಚಿವ ಗರಂ, ವರದಿ ನೀಡಲು ಸೂಚನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಕೊಲ್ಲುವಂತೆ ಪೊಲೀಸರೇ ನನ್ನ ಸಹೋದರನಿಗೆ ಪ್ರಚೋದಿಸಿದರು..’; ಪ್ರೇಮಿಯ ಶವವನ್ನು ‘ಮದುವೆ’ಯಾದ ಯುವತಿಯ ಗಂಭೀರ ಆರೋಪ

ಮರ್ಯಾದೆಗೇಡು ಹತ್ಯೆ ಬಳಿಕ ತನ್ನ ಪ್ರೇಮಿಯ ಶವವನ್ನು 'ಮದುವೆ'ಯಾದ ಮಹಾರಾಷ್ಟ್ರದ ಯುವತಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನನ್ನ ಗೆಳೆಯನನ್ನು ಇಬ್ಬರು ಪೊಲೀಸರು ನಿಂದಿಸಿದ ಬಳಿಕ ನನ್ನ ಸಹೋದರ ಕೊಂದಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ...

ಮದುವೆ ಮನೆಯಲ್ಲಿ ಮಹಿಳೆಯರೊಂದಿಗೆ ಅನುಚಿತ ವರ್ತನೆ ಪ್ರಶ್ನಿಸಿದ್ದಕ್ಕೆ, ರಾಷ್ಟ್ರ ಮಟ್ಟದ ಬಾಡಿ ಬಿಲ್ಡರ್ ಹತ್ಯೆ

ಮದುವೆ ಸಮಾರಂಭದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಪುರುಷರ ಗುಂಪನ್ನು ಪ್ರಶ್ನಿಸಿದ್ದಕ್ಕಾಗಿ 20 ಜನ ದುಷ್ಕರ್ಮಿಗಳ ಗುಂಪು ಹೊಂಚುಹಾಕಿ, 26 ವರ್ಷದ ರಾಷ್ಟ್ರ ಮಟ್ಟದ ಬಾಡಿ ಬಿಲ್ಡರ್ ಅನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಂದಿರುವ ಘಟನೆ...

ಉತ್ತರ ಪ್ರದೇಶ| ಎಸ್‌ಐಆರ್‌ ಕೆಲಸದ ಒತ್ತಡಕ್ಕೆ ಮತ್ತೋರ್ವ ಅಧಿಕಾರಿ ಬಲಿ; ಸಾವಿಗೂ ಮೊದಲು ವಿಡಿಯೊ ಮಾಡಿ ಕಣ್ಣೀರಿಟ್ಟ ಬಿಎಲ್‌ಒ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಶೀಲನೆ (ಎಸ್‌ಐಆರ್) ಕೆಲಸದ ಒತ್ತಡಕ್ಕೆ ಸಂಬಂಧಿಸಿದಂತೆ ಮತ್ತೊಂದು ಆತ್ಮಹತ್ಯೆ ಪ್ರಕರಣ ವರದಿಯಾಗಿದೆ. ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಆಗಿ ಕೆಲಸ ಮಾಡುತ್ತಿದ್ದ 46 ವರ್ಷದ ಶಿಕ್ಷಕ ಸರ್ವೇಶ್...

ಎಸ್‌ಐಆರ್ ಚರ್ಚೆಗೆ ಪಟ್ಟು ಹಿಡಿದ ಪ್ರತಿಪಕ್ಷಗಳು : ಸಂಸತ್ತಿನ ಉಭಯ ಸದನಗಳ ಕಲಾಪ ನಾಳೆಗೆ ಮುಂದೂಡಿಕೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಕುರಿತು ಚರ್ಚೆ ನಡೆಸುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದು ಪ್ರತಿಭಟಿಸಿದ ಹಿನ್ನೆಲೆ, ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು ನಾಳೆಗೆ (ಡಿಸೆಂಬರ್ 2) ಮುಂದೂಡಿಕೆಯಾಗಿದೆ. ಲೋಕಸಭೆಯಲ್ಲಿ ಪ್ರತಿಪಕ್ಷ ಸದಸ್ಯರ...

‘ನಿಜವಾದ ನಾಯಿಗಳು ಸಂಸತ್ತಿನಲ್ಲಿ ಕುಳಿತಿವೆ, ಅವು ಪ್ರತಿದಿನ ಜನರನ್ನು ಕಚ್ಚುತ್ತಿವೆ’: ಸಂಸದೆ ರೇಣುಕಾ ಚೌಧರಿ

ನವದೆಹಲಿ: ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಅವರು ಸೋಮವಾರ ಸಂಸತ್ತಿನ ಆವರಣಕ್ಕೆ ನಾಯಿಯೊಂದನ್ನು ಕರೆತಂದಿದ್ದು, ಕೆಲವು ಸಂಸದರು ಬೀದಿನಾಯಿಯನ್ನು ಕರೆತಂದಿದ್ದಾರೆ ಎಂದು ಆಕ್ಷೇಪಿಸಿದ್ದಾರೆ, ಮಾಧ್ಯಮಗಳ ಎದಿರು ಈ ಆಕ್ಷೇಪಣೆಗಳನ್ನು ತಳ್ಳಿಹಾಕಿರುವ ರೇಣುಕಾ ಚೌಧರಿ...

ಕರೆಯದ ಮದುವೆಗೆ ಊಟಕ್ಕೆ ಹೋದ ಬಾಲಕನಿಗೆ ಗುಂಡಿಕ್ಕಿ ಹತ್ಯೆ ; ಸಿಐಎಸ್‌ಎಫ್‌ ಹೆಡ್‌ ಕಾನ್‌ಸ್ಟೆಬಲ್‌ ಅರೆಸ್ಟ್

ಕರೆಯದ ಮದುವೆಗೆ ಊಟಕ್ಕೆ ಹೋದ ಕೊಳಗೇರಿಯ ಬಾಲಕನಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಹೆಡ್‌ ಕಾನ್‌ಸ್ಟೆಬಲ್ ಗುಂಡಿಕ್ಕಿ ಹತ್ಯೆಗೈದ ಆಘಾತಕಾರಿ ಘಟನೆ ದೆಹಲಿಯ ಶಾಹದರಾದಲ್ಲಿ ಶನಿವಾರ (ನವೆಂಬರ್ 29) ಸಂಜೆ ನಡೆದಿದೆ. ಶಾಹದರಾದ...

ಸಿದ್ದರಾಮಯ್ಯ-ಶಿವಕುಮಾರ್ ಜಗಳದಲ್ಲಿ ಮೂರನೆ ವ್ಯಕ್ತಿ ಮೇಲೆ ಹೈಕಮಾಂಡ್‌ ಕಣ್ಣು; ಕರ್ನಾಟಕದ ಮುಂದಿನ ಸಿಎಂ ಯಾರು..?

ನವೆಂಬರ್‌ ಮಾಸ ಮುಗಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಎರಡೂವರೆ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. 'ಈ ಹಿಂದೆ' ಮಾಡಿಕೊಂಡ ಒಪ್ಪಂದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನಿಡಿ, ಡಿ.ಕೆ. ಶಿವಕುಮಾರ್ ಪ್ರಮಾಣವಚನ...

ಪಶ್ಚಿಮ ಬಂಗಾಳ| ಸಿಎಎ ಅಡಿಯಲ್ಲಿ ಪೌರತ್ವ ಪಡೆದ ಬಾಂಗ್ಲಾದೇಶದಿಂದ ಬಂದ 12 ಹಿಂದೂ ನಿರಾಶ್ರಿತ ಕುಟುಂಬಗಳು

ಧಾರ್ಮಿಕ ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ಹಲವು ವರ್ಷಗಳ ಹಿಂದೆ ಭಾರತಕ್ಕೆ ಪಲಾಯನ ಮಾಡಿದ ಬಾಂಗ್ಲಾದೇಶದ 12 ಹಿಂದೂ ನಿರಾಶ್ರಿತರಿಗೆ ಕೇಂದ್ರ ಸರ್ಕಾರ ಭಾರತೀಯ ಪೌರತ್ವ ನೀಡಿದೆ ಎಂದು 'ದಿ ಅಬ್ಸರ್ವರ್‌ ಪೋಸ್ಟ್‌' ವರದಿ ಮಾಡಿದೆ. ...

“ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದು ನಾಟಕವಲ್ಲ” : ಪ್ರಧಾನಿ ಮೋದಿಗೆ ಪ್ರಿಯಾಂಕಾ ಗಾಂಧಿ ತಿರುಗೇಟು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್), ದೆಹಲಿಯ ವಾಯು ಮಾಲಿನ್ಯದಂತಹ ನಿರ್ಣಾಯಕ ವಿಷಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದು ನಾಟಕವಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಧಾನಿ ನರೇಂದ್ರ...

ಶಬರಿಮಲೆ ದೇವಸ್ಥಾನ ಚಿನ್ನ ಕಳ್ಳತನ: ಸಿಬಿಐ ತನಿಖೆಗೆ ಆಗ್ರಹಿಸಿ, ಕೇರಳ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ರಾಜೀವ್ ಚಂದ್ರಶೇಖರ್

ಕೊಚ್ಚಿ: ಶಬರಿಮಲೆ ದೇವಸ್ಥಾನದಿಂದ ಚಿನ್ನ ನಾಪತ್ತೆಯಾಗಿರುವ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಘಟನೆಯ ಬಗ್ಗೆ ಸಮಗ್ರ ತನಿಖೆ ಅಗತ್ಯ ಎಂದು ಚಂದ್ರಶೇಖರ್ ತಮ್ಮ ಅರ್ಜಿಯಲ್ಲಿ...