ಅಮೆರಿಕದ ಅಲಾಸ್ಕಾ ರಾಜ್ಯದ ಕರಾವಳಿಯಲ್ಲಿ ಬುಧವಾರ 7.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿತ್ತು. ನಂತರ ಅದನ್ನು ಹಿಂಪಡೆಯಲಾಗಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ತಿಳಿಸಿದೆ.
ಸ್ಥಳೀಯ ಸಮಯ ಮಧ್ಯಾಹ್ನ ಸುಮಾರು 12:37 ಕ್ಕೆ ಭೂಮಿ ಕಂಪಿಸಿದ್ದು, ಇದರ ಕೇಂದ್ರ ಬಿಂದುವು ದ್ವೀಪ ಪಟ್ಟಣವಾದ ಸ್ಯಾಂಡ್ ಪಾಯಿಂಟ್‌ನಿಂದ ಸುಮಾರು 54 ಮೈಲುಗಳು (87 ಕಿಲೋಮೀಟರ್) ದಕ್ಷಿಣದಲ್ಲಿ, 12.5 ಮೈಲುಗಳಷ್ಟು ಭೂಮಿಯ ಆಳದಲ್ಲಿ ಪತ್ತೆಯಾಗಿದೆ ಯುಎಸ್‌ಜಿಎಸ್ ಹೇಳಿದೆ.
ಭೂಕಂಪದ ನಂತರ ಅಧಿಕಾರಿಗಳು ಆರಂಭದಲ್ಲಿ ದಕ್ಷಿಣ ಅಲಾಸ್ಕಾ ಮತ್ತು ಅಲಾಸ್ಕಾ ಪರ್ಯಾಯ ದ್ವೀಪಕ್ಕೆ ಸುನಾಮಿ ಎಚ್ಚರಿಕೆಯನ್ನು ನೀಡಿದ್ದರು. ಆದರೆ ನಂತರ ಅದನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡರು ಎಂದು ವರದಿಯಾಗಿದೆ.
“ದಕ್ಷಿಣ ಅಲಾಸ್ಕಾ ಮತ್ತು ಅಲಾಸ್ಕಾ ಪರ್ಯಾಯ ದ್ವೀಪದ ಕರಾವಳಿ ಪ್ರದೇಶಗಳಿಗೆ ನೀಡಲಾಗಿದ್ದ ಸುನಾಮಿ ಎಚ್ಚರಿಕೆಯನ್ನು ಹಿಂಪಡೆಯಲಾಗಿದೆ” ಎಂದು ಭೂಕಂಪದ ಸುಮಾರು ಎರಡು ಗಂಟೆಗಳ ನಂತರ ಬಿಡುಗಡೆ ಮಾಡಿದ ಸಂದೇಶದಲ್ಲಿ ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರ (ಎನ್‌ಟಿಡಬ್ಲ್ಯುಸಿ) ತಿಳಿಸಿದೆ.
ಆರಂಭದ 7.3 ತೀವ್ರತೆಯ ಭೂಕಂಪದ ನಂತರ, 10ಕ್ಕೂ ಅಧಿಕ ಬಾರಿ ಭೂಮಿ ಕಂಪಿಸಿದೆ. ಅವುಗಳಲ್ಲಿ 5.2 ತೀವ್ರತೆ ಅತೀ ಹೆಚ್ಚು ಎಂದು ಯುಎಸ್‌ಜಿಎಸ್ ಮಾಹಿತಿ ನೀಡಿದೆ.
ಸುನಾಮಿ ಎಚ್ಚರಿಕೆ ಅಥವಾ ಸಲಹೆಯನ್ನು ಅಲಾಸ್ಕನ್ ಕರಾವಳಿಯ ಪ್ರದೇಶಗಳಿಗೆ ಮಾತ್ರ ನೀಡಲಾಗಿತ್ತು. ಭೂಕಂಪನ ದೂರದ ಪ್ರದೇಶಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಎನ್‌ಟಿಡಬ್ಲ್ಯುಸಿ ತಿಳಿಸಿದೆ.
ಸ್ಯಾಂಡ್ ಪಾಯಿಂಟ್‌ನಲ್ಲಿ ಗರಿಷ್ಠ 0.2 ಅಡಿ (6.1 ಸೆಂಟಿಮೀಟರ್) ಎತ್ತರದ ಸುನಾಮಿ ಅಲೆಗಳು ಕಂಡುಬಂದಿವೆ. ಸುನಾಮಿಯ ಅಪಾಯಕ್ಕೆ ಸದ್ಯಕ್ಕೆ ಇಲ್ಲದಿದ್ದರೂ, ಭೂಕಂಪ ಸಂಭವಿಸಿದ ಪ್ರದೇಶದ ನಿವಾಸಿಗಳು ಅಪಾಯದ ಬಗ್ಗೆ ಎಚ್ಚರದಿಂದಿರಬೇಕು ಎಂದು ಎನ್‌ಟಿಡಬ್ಲ್ಯುಸಿ ಸಲಹೆ ನೀಡಿದೆ.
“ಸ್ಥಳೀಯ ತುರ್ತು ಅಧಿಕಾರಿಗಳು ಸುರಕ್ಷಿತ ಎಂದು ಸೂಚಿಸುವವರೆಗೆ ಅಪಾಯದ ವಲಯಗಳಿಗೆ ಹಿಂದಿರುಗಬೇಡಿ” ಎಂದು ಸೂಚಿಸಿದೆ.
ಅಲಾಸ್ಕಾ ಭೂಕಂಪ ವಲಯ ಎಂದು ಗುರುತಿಸಿರುವ ಪೆಸಿಫಿಕ್ ರಿಂಗ್ ಆಫ್ ಫೈರ್‌ನಲ್ಲಿ ಬರುತ್ತದೆ. ಅಮೆರಿಕದ ಈ ದೂರದ ರಾಜ್ಯವು ಮಾರ್ಚ್ 1964ರಲ್ಲಿ 9.2 ತೀವ್ರತೆಯ ಭೂಕಂಪಕ್ಕೆ ತುತ್ತಾಗಿತ್ತು. ಇದು ಉತ್ತರ ಅಮೆರಿಕಾದಲ್ಲಿ ದಾಖಲಾದ ಅತ್ಯಂತ ಪ್ರಬಲ ಭೂಕಂಪವಾಗಿತ್ತು.
ಈ ಭೂಕಂಪದಿಂದ ಸುನಾಮಿ ಉಂಟಾಗಿತ್ತು. ಪರಿಣಾಮ ಆಂಕಾರೇಜ್ ನಗರದ ಮೇಲೆ ಸಂಪೂರ್ಣ ನಾಮವಶೇಷ ಆಗಿತ್ತು. ಸುನಾಮಿ ಅಲೆಗಳು ಅಲಾಸ್ಕಾ ಕೊಲ್ಲಿ, ಅಮೆರಿಕದ ಪಶ್ಚಿಮ ಕರಾವಳಿ ಮತ್ತು ಹವಾಯಿ ತೀರಕ್ಕೆ ಅಪ್ಪಳಿಸಿತ್ತು. ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದರು ಮತ್ತು 400 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಆಸ್ತಿ ನಷ್ಟ ಆಗಿತ್ತು.
ಜುಲೈ 2023ರಲ್ಲಿ ಅಲಾಸ್ಕಾ ಪರ್ಯಾಯ ದ್ವೀಪದಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ಕಂಪನದಿಂದ ಯಾವುದೇ ದೊಡ್ಡ ಹಾನಿ ಸಂಭವಿಸಿರಲಿಲ್ಲ.
ಗಾಜಾ ನರಮೇಧಕ್ಕೆ ಸಹಭಾಗಿತ್ವ: ದೆಹಲಿಯ ಮೆಕ್‌ಡೊನಾಲ್ಡ್ಸ್ ಹೊರಗೆ IPSP ಸಂಘಟನೆಯಿಂದ ಪ್ರತಿಭಟನೆ


