ತಮಿಳುನಾಡಿನ ತಿರುಚಿಯ ತುರೈಯೂರ್ ಬಳಿಯ ಕೊಟ್ಟಪಾಳಯಂ ಗ್ರಾಮದ ದಲಿತ ಕ್ರೈಸ್ತರ ಗುಂಪೊಂದು ಜಿಲ್ಲಾಧೀಕಾರಿಗಳ ಕಷೇರಿ ಎದುರು ಸೋಮವಾರ ಉಪವಾಸ ಸತ್ಯಾಗ್ರಹ ನಡೆಸಿದರು. “ಚರ್ಚ್‌ನಲ್ಲಿ ತಾವು ತಾರತಮ್ಯವನ್ನು ಎದುರಿಸುತ್ತಿದ್ದೇವೆ, ಶತಮಾನಗಳಷ್ಟು ಹಳೆಯದಾದ ಸೇಂಟ್ ಮೇರಿ ಮ್ಯಾಗ್ಡಲೀನ್ ಚರ್ಚ್‌ನ ಉತ್ಸವ ಮತ್ತು ಇತರ ಚಟುವಟಿಕೆಗಳಲ್ಲಿ ಭಾಗವಹಿಸಲು ನಮಗೆ ಅವಕಾಶ ನೀಡುತ್ತಿಲ್ಲ” ಎಂದು ಆರೋಪಿಸಿದರು.
ಜುಲೈ 14 ರಂದು ಉತ್ಸವ ಪ್ರಾರಂಭವಾಯಿತು. ಕುಂಭಕೋಣಂನ ರೋಮನ್ ಕ್ಯಾಥೋಲಿಕ್ ಡಯಾಸಿಸ್ ಅಡಿಯಲ್ಲಿ ಚರ್ಚ್ ಕಾರ್ಯನಿರ್ವಹಿಸುತ್ತದೆ. “ಪ್ಯಾರಿಷ್‌ನಲ್ಲಿ ನಡೆಯುತ್ತಿರುವ ಜಾತಿ ತಾರತಮ್ಯ”ದ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಮಂಗಳವಾರ ನಿಗದಿಯಾಗಿರುವ ರಥ ಮೆರವಣಿಗೆಯಲ್ಲಿ ಭಾಗವಹಿಸುವುದಿಲ್ಲ ಎಂದು ಬಿಷಪ್ ಜೀವನಂದಂ ಅಮಲನಾಥನ್ ಹೇಳಿದರು.
ದಶಕಗಳಿಂದ, ತಮಗೆ ಚರ್ಚ್‌ಗೆ ಚಂದಾದಾರಿಕೆ ಪಾವತಿಸಲು ಅವಕಾಶವಿಲ್ಲ, ಯೋಜನಾ ಸಮಿತಿಗಳಿಂದ ಹೊರಗಿಡಲಾಗಿದೆ ಎಂದು ದಲಿತ ಕ್ರೈಸ್ತರು ಹೇಳಿದರು. ಇದಲ್ಲದೆ, ಚರ್ಚ್ ರಥವನ್ನು ನಾವು ವಾಸಿಸುವ ಪ್ರದೇಶಕ್ಕೆ ತರುವುದಕ್ಕೆ ಬಿಡುವುದಿಲ್ಲ ಎಂದು ಅವರು ಆರೋಪಿಸಿದರು. “ಇದು ನಮ್ಮ ಹಬ್ಬವಲ್ಲ ಎಂದು ಪಾದ್ರಿ ಮತ್ತು ಹಲವಾರು ಪ್ರಬಲ ಜಾತಿಯ ಕ್ರಿಶ್ಚಿಯನ್ನರು ನಮಗೆ ಹೇಳಿದರು” ಎಂದು ನೋವು ತೋಡಿಕೊಂಡಿದ್ದಾರೆ.
ಇತರರಿಂದ ಸ್ವೀಕರಿಸುವಂತೆ ಚರ್ಚ್ ಆಡಳಿತ ನಮ್ಮಿಂದ ಚಂದಾ ಸಂಗ್ರಹಿಸಲು ನಿರಾಕರಿಸುತ್ತದೆ. ಬದಲಾಗಿ, ದೇಣಿಗೆ ನೀಡುವಂತೆ ನಮ್ಮನ್ನು ಕೇಳಲಾಗುತ್ತದೆ ಎಂದು ದೀರ್ಘಕಾಲದ ಪ್ಯಾರಿಷನರ್ ಜೆ. ದಾಸ್ ಪ್ರಕಾಶ್ ಹೇಳಿದರು. ಜುಲೈ 6 ರಂದು ನಡೆದ ಉತ್ಸವ ಯೋಜನಾ ಸಭೆಯ ಸಂದರ್ಭದಲ್ಲಿ ದಲಿತರಿಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾದ ಪ್ಯಾರಿಷ್ ಪಾದ್ರಿ ಮತ್ತು ಇತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ವಾರದ ಕುಂದುಕೊರತೆಗಳ ಸಭೆಯಲ್ಲಿ ಪ್ರತಿಭಟನಾಕಾರರು ಡಿಆರ್‌ಒಗೆ ಅರ್ಜಿ ಸಲ್ಲಿಸಿದರು.
“ನಮ್ಮನ್ನು ಜಾತಿವಾದಿ ಪದಗಳಿಂದ ನಿಂದಿಸಲಾಯಿತು, ಮಧ್ಯಪ್ರವೇಶಿಸದಂತೆ ಎಚ್ಚರಿಸಲಾಯಿತು” ಎಂದು ಮತ್ತೊಬ್ಬ ಸದಸ್ಯರು ಹೇಳಿದರು. ಪ್ಯಾರಿಷನರ್ ಆರ್. ರಾಜ್ ನೊಬಿಲಿ, “ನಾವು ಒಮ್ಮೆ ಚಂದಾದಾರಿಕೆಯನ್ನು ಪಾವತಿಸಿದರೆ, ನಮಗೆ ಪ್ರಶ್ನಿಸುವ ಹಕ್ಕಿದೆ. ಅದಕ್ಕಾಗಿಯೇ ಅವರು ನಮ್ಮಿಂದ ಅದನ್ನು ಸಂಗ್ರಹಿಸುತ್ತಿಲ್ಲ. ಹಬ್ಬದ ಸಮಯದಲ್ಲಿ ಏಳು ರಥಗಳನ್ನು ಓಡಿಸುತ್ತಿದ್ದರೂ, ಚಿಕ್ಕದು ಕೂಡ ನಮ್ಮ ಬೀದಿಗಳಿಗೆ ಪ್ರವೇಶಿಸುವುದಿಲ್ಲ” ಎಂದರು.
“ಜಿಲ್ಲಾ ಆಡಳಿತವು ಕನಿಷ್ಠ ರಥವು ನಮ್ಮ ಪ್ರದೇಶಕ್ಕೆ ಬರುವಂತೆ ನೋಡಿಕೊಳ್ಳಬೇಕು” ಎಂದು ಅವರು ಹೇಳಿದರು. “ಇದು ಸಂವಿಧಾನವು ಖಾತರಿಪಡಿಸಿದ ಸಮಾನತೆಯ ಉಲ್ಲಂಘನೆಯಾಗಿದೆ. ಇದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ, ಯಾರೂ ಮಧ್ಯಪ್ರವೇಶಿಸಿಲ್ಲ” ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾನವ ಹಕ್ಕುಗಳ ವಕೀಲ ಜೋ ಕೆನಡಿ ಹೇಳಿದರು.
“ಚರ್ಚ್ ಈ ಜಾತಿ ಗೋಡೆಯನ್ನು ಒಳಗಿನಿಂದ ಕೆಡವಬೇಕು” ಎಂದು ಅವರು ಹೇಳಿದರು. ಅವರ ಇತರ ಬೇಡಿಕೆಗಳಲ್ಲಿ ಆಂತರಿಕ ಪ್ಯಾರಿಷ್ ಕೌನ್ಸಿಲ್ ರಚನೆ, ಧಾರ್ಮಿಕ ಮತ್ತು ಉತ್ಸವ ಕಾರ್ಯಕ್ರಮಗಳಲ್ಲಿ ಸಮಾನ ಹಕ್ಕುಗಳು ಮತ್ತು ಜಾತಿ ಆಧಾರಿತ ತಾರತಮ್ಯಕ್ಕಾಗಿ ಕಾನೂನು ಕ್ರಮ ಸೇರಿವೆ. ಪ್ಯಾರಿಷ್‌ನಲ್ಲಿ ನಡೆಯುತ್ತಿರುವ ಜಾತಿ ತಾರತಮ್ಯದಿಂದಾಗಿ ಮಂಗಳವಾರ ರಥೋತ್ಸವವನ್ನು ಬಹಿಷ್ಕರಿಸುವುದಾಗಿ ಬಿಷಪ್ ಜೀವನಂದಂ ಅಮಲನಾಥನ್ ತಿಳಿಸಿದರು ಎಂದು ‘ಟಿಎನ್‌ಐಇ’ ವರದಿ ಮಾಡಿದೆ.
ದಲಿತ ಕ್ರೈಸ್ತರಿಗೆ ಸಮಾನ ಹಕ್ಕುಗಳನ್ನು ನೀಡದಿರಲು ಪ್ರಬಲ ಜಾತಿಯ ಕ್ರೈಸ್ತರು ತಮ್ಮ ನಿಲುವಿನಲ್ಲಿ ಹಠಮಾರಿ ಎಂದು ಅವರು ಹೇಳಿದರು. ಆದರೂ, ಚರ್ಚ್ ಯಾರ ವಿರುದ್ಧವೂ ತಾರತಮ್ಯ ಮಾಡಿಲ್ಲ ಎಂದು ಅವರು ಸಮರ್ಥಿಸಿಕೊಂಡರು.
ಆಂಧ್ರಪ್ರದೇಶ: ದಲಿತ ಯುವಕನ ಮೇಲೆ ಅಮಾನವೀಯ ಹಲ್ಲೆ; ಮೂವರ ವಿರುದ್ಧ ದೂರು ದಾಖಲು


