‘ಸಮಾಜ ಪಾವಂಗಲ್ (ಸಮಾಜದ ಪಾಪಗಳು)’ ಎಂಬ ಶೀರ್ಷಿಕೆಯ ವೀಡಿಯೊವನ್ನು ಬಿಡುಗಡೆ ಮಾಡಿದ ನಂತರ ಜನಪ್ರಿಯ ತಮಿಳು ಯೂಟ್ಯೂಬರ್‌ಗಳಾದ ಗೋಪಿ ಮತ್ತು ಸುಧಾಕರ್ ಅವರು ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇದು ಪ್ರಬಲ ಜಾತಿ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಕೊಲ್ಲಲ್ಪಟ್ಟ ದಲಿತ ಯುವಕ ಕವಿನ್ ಹತ್ಯೆಯನ್ನು ಪರೋಕ್ಷವಾಗಿ ಉಲ್ಲೇಖಿಸುತ್ತದೆ.
ಪ್ರಾಚೀನ ಇತಿಹಾಸವನ್ನು ವೈಭವೀಕರಿಸುವ ಕೆಲವು ಗುಂಪುಗಳು ಯುವ ಪೀಳಿಗೆಯ ಜೀವನ ಮತ್ತು ಭವಿಷ್ಯವನ್ನು ಹೇಗೆ ಅಪಾಯಕ್ಕೆ ಸಿಲುಕಿಸುತ್ತಿವೆ ಎಂಬುದನ್ನು ಸ್ಕಿಟ್ ಮೂಲಕ ಪ್ರಶ್ನಿಸಲಾಗಿದೆ. ಜಾತಿ ಹಿಂಸಾಚಾರದ ಬಗ್ಗೆ ಸಮಾಜದ ಮೌನದಲ್ಲಿರುವ ಬೂಟಾಟಿಕೆಯನ್ನು ಎತ್ತಿ ತೋರಿಸಲು ಈ ಜೋಡಿ ವಿಡಂಬನೆಯನ್ನು ಬಳಸಿತು.
ಇದು ಪ್ರಬಲ ಜಾತಿ ಗುಂಪುಗಳಲ್ಲಿ ಆಕ್ರೋಶವನ್ನು ಹುಟ್ಟುಹಾಕಿತು, ಸಮುದಾಯದ 30 ವಕೀಲರು ಚಾನೆಲ್ ಅನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ದೂರು ದಾಖಲಿಸಿದರು.
ಚಲನಚಿತ್ರ ನಿರ್ಮಾಪಕ ಎ.ಎಂ. ಚೌಧರಿ ಕೂಡ ಯೂಟ್ಯೂಬರ್ಸ್‌ಗಳ ವಿರುದ್ಧ ವಾಗ್ದಾಳಿ ನಡೆಸಿ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಮಾತನಾಡಲು ಅವರು ಯಾರು ಎಂದು ಕೇಳಿದರು. ಈಗ ವೈರಲ್ ಆಗಿರುವ ಕಾಮೆಂಟ್‌ನಲ್ಲಿ ಅವರು, ಯೂಟ್ಯೂಬರ್‌ಗಳನ್ನು “ನಾಯಿಗಳು” ಎಂದು ಕರೆದಿದ್ದಾರೆ. ಅಂತಹ ವಿಷಯಗಳ ಬಗ್ಗೆ ಮತ್ತೆ ಮಾತನಾಡದಂತೆ ಅವರಿಗೆ ಎಚ್ಚರಿಕೆ ನೀಡಿದರು.
ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಕವಿನ್ ಅವರನ್ನು ಜುಲೈ 27 ರಂದು ತಿರುನಲ್ವೇಲಿಯ ಖಾಸಗಿ ಆಸ್ಪತ್ರೆಯ ಬಳಿ ಹತ್ಯೆ ಮಾಡಲಾಯಿತು, ಇದನ್ನು ಪೊಲೀಸ್ ಮೂಲಗಳು ಹೇಳುವಂತೆ ಮರ್ಯಾದೆಗೇಡು ಹತ್ಯೆ ಎಂದು ಪರಿಗಣಿಸಲಾಗಿದೆ.
ಕೆಟಿಸಿ ನಗರದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಮಾಜಿ ಶಾಲಾ ಸಹಪಾಠಿ, ಪ್ರಬಲ ಜಾತಿ ಯುವತಿಯೊಂದಿಗೆ ಆತನ ಸಂಬಂಧ ಹೊಂದಿದ್ದನು.
ಆಕೆಯ ಕುಟುಂಬದ ವಿರೋಧದ ಹೊರತಾಗಿಯೂ, ಕವಿನ್ ಅವಳನ್ನು ಮದುವೆಯಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದನು. ಭಾನುವಾರ, ಆಕೆಯನ್ನು ಭೇಟಿಯಾಗಲು ಆಸ್ಪತ್ರೆಯ ಬಳಿ ಕಾಯುತ್ತಿದ್ದಾಗ, ಆಕೆಯ ಸಹೋದರ ಸುರ್ಜೀತ್ ಅವನ ಬಳಿಗೆ ಬಂದು ಜಗಳ ತೆಗೆದಿದ್ದಾನೆ. ಸುರ್ಜೀತ್ ಕುಡುಗೋಲು ಹೊರತೆಗೆದು ಆಸ್ಪತ್ರೆಯಿಂದ ಕೇವಲ 200 ಮೀಟರ್ ದೂರದಲ್ಲಿ ಕವಿನ್ ಅವರನ್ನು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ.
ಕಳ್ಳತನ ಶಂಕೆ; ಸಂಭಾಲ್‌ನಲ್ಲಿ ದಲಿತ ಯುವಕರರನ್ನು ಕಂಬಕ್ಕೆ ಕಟ್ಟಿ ಹಲ್ಲೆ


