ಆಗಸ್ಟ್ 14ರಂದು ‘ವಿಭಜನೆಯ ಭಯಾನಕತೆಗಳ ಸ್ಮರಣಾರ್ಥ ದಿನ’ ಆಚರಿಸಲು ಎಲ್ಲಾ ವಿಶ್ವ ವಿದ್ಯಾಲಯಗಳ ಉಪ ಕುಲಪತಿಗಳಿಗೆ ನಿರ್ದೇಶಿಸುವ ಮೂಲಕ ಕೇರಳದ ರಾಜ್ಯಪಾಲ ಹಾಗೂ ವಿಶ್ವ ವಿದ್ಯಾಲಯಗಳ ಕುಲಪತಿ ರಾಜೇಂದ್ರ ಅರ್ಲೇಕರ್ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ಅವರು, ಇಂತಹ ಸೂಚನೆ ನೀಡುವ ರಾಜ್ಯಪಾಲರ ಅಧಿಕಾರವನ್ನು ಪ್ರಶ್ನಿಸಿದ್ದಾರೆ.
ರಾಜಭವನದಿಂದ ವಿಶ್ವವಿದ್ಯಾಲಯಗಳಿಗೆ ನೀಡಲಾಗಿರುವ ಸುತ್ತೋಲೆಯಲ್ಲಿ, ಕ್ಯಾಂಪಸ್‌ಗಳಲ್ಲಿ ವಿಭಜನೆಯ ಭಯಾನಕತೆಯನ್ನು ಸ್ಮರಿಸುವ ಸೆಮಿನಾರ್, ನಾಟಕಗಳನ್ನು ಆಯೋಜಿಸುವಂತೆ ಮತ್ತು ಉಪಕುಲಪತಿಗಳು ಆ ದಿನವನ್ನು ಸೂಕ್ತ ರೀತಿಯಲ್ಲಿ ಆಚರಿಸಲು ಕ್ರಿಯಾ ಯೋಜನೆಗಳನ್ನು ರೂಪಿಸುವಂತೆ ಸೂಚಿಸಲಾಗಿದೆ
ರಾಜಭವನದ ಸುತ್ತೋಲೆಯು ಉಪಕುಲಪತಿಗಳು ಆ ದಿನವನ್ನು ಸೂಕ್ತ ರೀತಿಯಲ್ಲಿ ಆಚರಿಸಲು ಕ್ರಿಯಾ ಯೋಜನೆಗಳನ್ನು ರೂಪಿಸುವಂತೆ ನಿರ್ದೇಶಿಸಿದೆ.
ಇಂತಹ ಆಚರಣೆಯ ಚರ್ಚೆಯನ್ನು 2021ರಲ್ಲಿ ಮೊದಲು ಹುಟ್ಟು ಹಾಕಿದ್ದು ಪ್ರಧಾನಿ ನರೇಂದ್ರ ಮೋದಿ, ಆ ಬಳಿಕ ಕೇಂದ್ರ ಸರ್ಕಾರ ಈ ದಿನವನ್ನು ಆಚರಿಸಿಕೊಂಡು ಬರುತ್ತಿದೆ.
ರಾಜ್ಯಪಾಲರ ನಿರ್ದೇಶನದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಸಂಘ ಪರಿವಾರದ ವಿಭಜನಕಾರಿ ರಾಜಕೀಯ ಕಾರ್ಯಸೂಚಿಗಳಿಗೆ ಹೊಂದಿಕೆಯಾಗುವಂತೆ ರಾಜಭವನದಿಂದ ಬರುತ್ತಿರುವ ಆದೇಶಗಳು ಸಂವಿಧಾನಬಾಹಿರ” ಎಂದು ಹೇಳಿದ್ದಾರೆ.
ರಾಜ್ಯಪಾಲರು ಉಪಕುಲಪತಿಗಳಿಗೆ ಹೊರಡಿಸಿರುವ ಸುತ್ತೋಲೆ ಆಕ್ಷೇಪಾರ್ಹ. ನಮ್ಮ ವಿಶ್ವವಿದ್ಯಾಲಯಗಳು ಅಂತಹ ಕಾರ್ಯಸೂಚಿಯನ್ನು ಜಾರಿಗೆ ತರುವ ವೇದಿಕೆಗಳಾಗಲು ನಾವು ಅನುಮತಿಸುವುದಿಲ್ಲ” ಎಂದಿದ್ದಾರೆ.
“ರಾಜ್ಯ ಸರ್ಕಾರವನ್ನು ಬದಿಗಿಟ್ಟು ‘ವಿಭಜನಾ ಭಯಾನಕ ದಿನ’ವನ್ನು ಆಚರಿಸಲು ಉಪಕುಲಪತಿಗಳಿಗೆ ಸೂಚಿಸಲು ರಾಜ್ಯಪಾಲರಿಗೆ ಯಾವ ಅಧಿಕಾರವಿದೆ? ರಾಜ್ಯ ಸರ್ಕಾರಕ್ಕೆ ಸಮಾನಾಂತರವಾಗಿ ರಾಜ್ಯಪಾಲರು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಕಾರ್ಯನಿರ್ವಹಿಸುವುದು ಅಸಂವಿಧಾನಿಕವಾಗಿದೆ” ಎಂದು ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ರೀತಿಯ ಆದೇಶಗಳನ್ನು ನೀಡುವ ಮೂಲಕ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಮೂಲಭೂತವಾಗಿ ತಮ್ಮನ್ನು ಆರೆಸ್ಸೆಸ್‌ನ ವಿಭಜಕ ರಾಜಕೀಯದ ವಕ್ತಾರರೆಂದು ಘೋಷಿಸಿಕೊಂಡಿದ್ದಾರೆ ಎಂದು ಸತೀಶನ್ ಹೇಳಿದ್ದಾರೆ.
ಜನರಿಂದ ಆಯ್ಕೆಯಾದ ಸಚಿವ ಸಂಪುಟದ ಅನುಮೋದನೆಯಿಲ್ಲದೆ ರಾಜ್ಯಪಾಲರು ಸಮಾನಾಂತರ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುತ್ತಿರುವಂತೆ ವರ್ತಿಸುತ್ತಿದ್ದಾರೆ ಎಂದು ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಹೇಳಿದ್ದಾರೆ.
“ಅವರು ಯಾವ ಅಧಿಕಾರದ ಅಡಿಯಲ್ಲಿ ಅಂತಹ ಸೂಚನೆ ನೀಡಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ. ಅವರಿಗೆ ಅಂತಹ ಅಧಿಕಾರವಿಲ್ಲ. ರಾಜ್ಯಪಾಲರ ಅಧಿಕಾರಗಳು ಸೀಮಿತವಾಗಿವೆ. ನ್ಯಾಯಾಲಯಗಳು ಈಗಾಗಲೇ ಸ್ಪಷ್ಟಪಡಿಸಿದಂತೆ ಇದು ದೈನಂದಿನ ಆಡಳಿತಕ್ಕೆ ಸಂಬಂಧಿಸಿದ ವಿಷಯವಲ್ಲ” ಎಂದು ಶಿವನ್‌ಕುಟ್ಟಿ ಕಿಡಿಕಾರಿದ್ದಾರೆ.
ಭಾರತದ ಸ್ವಾತಂತ್ರ್ಯ ದಿನವು ಸಾಮ್ರಾಜ್ಯಶಾಹಿ ವಿರೋಧಿ ಹೋರಾಟ ಮತ್ತು ಬ್ರಿಟಿಷರು ನಡೆಸಿದ ಕ್ರೌರ್ಯಗಳನ್ನು ನೆನಪಿಸುತ್ತದೆ ಎಂದು ಎಂದಿರುವ ಸಿಎಂ, ಪಿಣರಾಯಿ ವಿಜಯನ್, “ನಾವು ಸ್ವಾತಂತ್ರ್ಯದ 78ನೇ ವರ್ಷವನ್ನು ಆಚರಿಸುತ್ತಿರುವಾಗ, ಆಗಸ್ಟ್ 15ರ ಹೊರತಾಗಿ ಮತ್ತೊಂದು ದಿನವನ್ನು ಆಚರಿಸುವ ಕಲ್ಪನೆಯು ಸಂಘ ಪರಿವಾರದ ಮನಸ್ಸಿನಿಂದ ಹುಟ್ಟಿಕೊಂಡಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರ ವಹಿಸದೆ ಬ್ರಿಟಿಷ್ ರಾಜ್‌ಗೆ ಸೇವೆ ಸಲ್ಲಿಸಿದವರು ಸ್ವಾತಂತ್ರ್ಯ ದಿನವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ, ವಿದೇಶಿ ಶಕ್ತಿಗಳಿಗಿಂತ ಆಂತರಿಕ ಶತ್ರುಗಳ ವಿರುದ್ಧ ಹೋರಾಡಲು ಶಕ್ತಿಯನ್ನು ವ್ಯಯಿಸಿದವರು, ಈಗ ವಿಭಜನೆಯ ಭಯಾನಕತೆಯನ್ನು ಸ್ಮರಿಸುವ ದಿನವನ್ನು ಆಚರಿಸಲು ಮುಂದಾಗಿದ್ದಾರೆ. ಇದರಿಂದಾಗಿ ಸ್ವಾತಂತ್ರ್ಯ ದಿನದ ಮಹತ್ವ ಕಡಿಮೆಯಾಗುತ್ತದೆ” ಎಂದು ಹೇಳಿದ್ದಾರೆ.
ಬ್ರಿಟಿಷ್ ವೈಸ್ರಾಯ್ ಅವರನ್ನು ಭೇಟಿಯಾಗಿ ತಾವು ಬ್ರಿಟಿಷ್ ರಾಜ್ ವಿರುದ್ಧ ಇಲ್ಲ ಎಂದು ಬೆಂಬಲ ವ್ಯಕ್ತಪಡಿಸಿದವರಂತೆಯೇ ಸಂಘ ಪರಿವಾರವೂ ಕಾರ್ಯನಿರ್ವಹಿಸುತ್ತಿದೆ. ಭಾರತದ ವೈವಿಧ್ಯಮಯ ಸಮುದಾಯಗಳ ಸಂಯುಕ್ತ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದಿಂದ ದೂರ ಸರಿದವರೇ ಈಗ ವಿಭಜನೆಯ ಭಯದ ಬಗ್ಗೆ ಚರ್ಚಿಸುತ್ತಿದ್ದಾರೆ. ಭಾರತದ ವಿಭಜನೆ ಮತ್ತು ನಂತರದ ಹಿಂಸಾಚಾರವು ಬ್ರಿಟಿಷರ ಒಡೆದು ಆಳುವ ನೀತಿಯ ಪರಿಣಾಮಗಳಾಗಿದ್ದು, ಹಿಂದಿನ ಬ್ರಿಟಿಷ್ ನಿಷ್ಠಾವಂತರು ಇದನ್ನು ಮರೆತಿದ್ದಾರೆ ಎಂದು ತೋರುತ್ತದೆ. ವಿಭಜನೆಯ ಸಮಯದಲ್ಲಿ ಹಿಂಸಾಚಾರವನ್ನು ಹತ್ತಿಕ್ಕಲು ಪ್ರಯತ್ನಿಸಿದ ಮಹಾತ್ಮ ಗಾಂಧಿಯವರಂತಹ ನಾಯಕರನ್ನು ಸಂಘ ಪರಿವಾರವು ಅಪಹಾಸ್ಯ ಮಾಡಿತು ಎಂದು ವಿಜಯನ್ ಕಿಡಿಕಾರಿದ್ದಾರೆ.
ಹಣ ಪತ್ತೆ ಪ್ರಕರಣ: ನ್ಯಾ.ವರ್ಮಾ ವಿರುದ್ಧದ ಆರೋಪಗಳ ತನಿಖೆಗೆ ಸಮಿತಿ ರಚಿಸಿದ ಲೋಕಸಭೆ ಸ್ಪೀಕರ್


