Homeಮುಖಪುಟಬಿಹಾರ ಮತದಾರರ ಪಟ್ಟಿಯಿಂದ ಕೈಬಿಟ್ಟ 65 ಲಕ್ಷ ಹೆಸರುಗಳು ಮತ್ತು ಅದಕ್ಕೆ ಕಾರಣ ಬಹಿರಂಗಪಡಿಸಿ: ಚು....

ಬಿಹಾರ ಮತದಾರರ ಪಟ್ಟಿಯಿಂದ ಕೈಬಿಟ್ಟ 65 ಲಕ್ಷ ಹೆಸರುಗಳು ಮತ್ತು ಅದಕ್ಕೆ ಕಾರಣ ಬಹಿರಂಗಪಡಿಸಿ: ಚು. ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ

- Advertisement -
- Advertisement -

ಬಿಹಾರದ ಮತದಾರರ ಪಟ್ಟಿಯಿಂದ ಕೈ ಬಿಡಲಾದ 65 ಲಕ್ಷ ಹೆಸರುಗಳನ್ನು, ಏಕೆ ಕೈ ಬಿಡಲಾಗಿದೆ ಎಂಬ ಕಾರಣದೊಂದಿಗೆ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಆ.14) ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ನಿರ್ದೇಶನ ನೀಡಿದೆ.

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಮೇಲಿನ ನಿರ್ದೇಶನ ನೀಡಿದೆ.

ಈ ಹಿಂದಿನ ಮತದಾರರ ಪಟ್ಟಿಯಲ್ಲಿ ಇದ್ದ, ಪರಿಷ್ಕರಣೆಯ ನಂತರ ಆಗಸ್ಟ್ 1ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ ಕೈ ಬಿಡಲಾದ 65 ಲಕ್ಷ ಹೆಸರುಗಳ ವಿವರ ನೀಡುವಂತೆ ನ್ಯಾಯಾಲಯ ಸೂಚಿಸಿದೆ.

ಚುನಾವಣಾ ಆಯೋಗ ಹೇಳಿದಂತೆ ಸಾವಿಗೀಡಾದವರು ಹೆಸರುಗಳು, ಒಂದಕ್ಕಿಂತ ಹೆಚ್ಚಿರುವ ಹೆಸರುಗಳು ಮತ್ತು ವಲಸಿಗರ ಹೆಸರುಗಳನ್ನು ಒಳಗೊಂಡಿರುವ ಪಟ್ಟಿಯನ್ನು ಪಂಚಾಯತ್ ಮಟ್ಟದ ಕಚೇರಿ ಮತ್ತು ಜಿಲ್ಲಾ ಮಟ್ಟದ ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ ಕಾರಣಗಳೊಂದಿಗೆ ಪ್ರದರ್ಶಿಸಲು ನ್ಯಾಯಾಲಯ ನಿರ್ದೇಶಿಸಿದೆ.

ಪಟ್ಟಿ ಲಭ್ಯವಿರುವ ಸ್ಥಳಗಳ ಬಗ್ಗೆ ಜನರಿಗೆ ತಿಳಿಸಲು ದೂರದರ್ಶನ ಸುದ್ದಿ ವಾಹಿನಿಗಳು ಮತ್ತು ರೇಡಿಯೋಗಳ ಜೊತೆಗೆ ಸ್ಥಳೀಯ ಮತ್ತು ಇಂಗ್ಲಿಷ್ ಸೇರಿದಂತೆ ಪತ್ರಿಕೆಗಳ ಮೂಲಕ ವ್ಯಾಪಕ ಪ್ರಚಾರವನ್ನು ಮಾಡುವಂತೆ ನ್ಯಾಯಪೀಠ ಒತ್ತಿ ಹೇಳಿದೆ.

ಹೆಸರು ಅಳಿಸುವಿಕೆಯಿಂದ ನೊಂದ ಜನರು ತಮ್ಮ ಆಧಾರ್ ಕಾರ್ಡ್‌ನೊಂದಿಗೆ ಚುನಾವಣಾ ಅಧಿಕಾರಿಗಳನ್ನು ಸಂಪರ್ಕಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ.

ಆಗಸ್ಟ್ 22ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದ ಪೀಠ, ಚುನಾವಣಾ ಆಯೋಗವು ತನ್ನ ನಿರ್ದೇಶನದ ಅನುಸರಣಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.

ಆಗಸ್ಟ್ 1ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಿದ ಚುನಾವಣಾ ಆಯೋಗ, ಪಟ್ಟಿಯಿಂದ ಕೈಬಿಡಲಾದ 65 ಲಕ್ಷ ಮತದಾರರ ಪೈಕಿ 22.34 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ, 36.28 ಲಕ್ಷ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಅಥವಾ ಪರಿಶೀಲನೆಯ ವೇಳೆ ಗೈರುಹಾಜರಾದವರು ಮತ್ತು 7.01 ಲಕ್ಷ ಜನರ ಹೆಸರು ಒಂದಕ್ಕಿಂತ ಹೆಚ್ಚು ಬಾರಿ ದಾಖಲಾಗಿತ್ತು ಎಂದಿದೆ.

ಚುನಾವಣಾ ಆಯೋಗದ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ, ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಅಧಿಕಾರವನ್ನು ಚುನಾವಣಾ ಆಯೋಗ ಹೊಂದಿದೆ. ಆದರೆ, ಅದರ ಹೆಚ್ಚಿನ ನಿರ್ಧಾರಗಳು ವಿವಾದಕ್ಕೊಳಗಾಗಿ ‘ತೀವ್ರ ರಾಜಕೀಯ ದ್ವೇಷದ ವಾತಾವರಣ’ದಲ್ಲಿ ಅದು ಕಾರ್ಯನಿರ್ವಹಿಸುತ್ತಿದೆ ಎಂದು ವಿಷಾದ ವ್ಯಕ್ತಿಪಡಿಸಿದ್ದಾರೆ.

ಚುನಾವಣಾ ಆಯೋಗವು ಪ್ರಸ್ತುತ ರಾಜಕೀಯ ಪಕ್ಷಗಳ ಹೋರಾಟದ ನಡುವೆ ಸಿಲುಕಿಕೊಂಡಿದೆ’ ಎಂದ ದ್ವಿವೇದಿ, “ಪಕ್ಷಗಳು ಸೋತಾಗ ಇವಿಎಂಗಳು ಸರಿ ಇಲ್ಲ ಎಂದಿತ್ತು, ಗೆದ್ದಾಗ ಇವಿಎಂಗಳು ಸರಿ ಇವೆ ಎಂದಿವೆ” ಎಂದು ಹೇಳಿದ್ದಾರೆ.

ಬಿಹಾರದಲ್ಲಿ ಸುಮಾರು 6.5 ಕೋಟಿ ಜನರು ಎಸ್‌ಐಆರ್‌ಗಾಗಿ ಯಾವುದೇ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ. ಏಕೆಂದರೆ, ಅವರು ಅಥವಾ ಅವರ ಪೋಷಕರು 2003ರ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟಿದ್ದಾರೆ ಎಂದು ದ್ವಿವೇದಿ ತಿಳಿಸಿದ್ದಾರೆ.

ಬಾಂಗ್ಲಾದೇಶೀಯರೆಂದು ಬಂಗಾಳಿ ಮುಸ್ಲಿಂ ಕಾರ್ಮಿಕರ ಬಂಧನ ಆರೋಪ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಖಮೇನಿ ಮೇಲಿನ ದಾಳಿಯು ‘ಸಂಪೂರ್ಣ ಯುದ್ಧ’ಕ್ಕೆ ಕಾರಣವಾಗುತ್ತದೆ: ಇರಾನ್ ಅಧ್ಯಕ್ಷರ ಎಚ್ಚರಿಕೆ

ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಮೇಲಿನ ಯಾವುದೇ ದಾಳಿಯನ್ನು ಇರಾನ್ ರಾಷ್ಟ್ರದ ವಿರುದ್ಧ "ಸಂಪೂರ್ಣ ಯುದ್ಧ" ಘೋಷಣೆ ಎಂದು ಪರಿಗಣಿಸಲಾಗುತ್ತದೆ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಎಚ್ಚರಿಸಿದ್ದಾರೆ. "ಇರಾನ್‌ನಲ್ಲಿ ಹೊಸ ನಾಯಕತ್ವವನ್ನು...

ಬೆಂಗಳೂರು: ವಿವೇಕನಗರದಲ್ಲಿ ಕಾಲೇಜು ಬಸ್‌ಗೆ ಸಿಲುಕಿ ತಾಯಿ ಮತ್ತು 8 ವರ್ಷದ ಮಗ ಸಾವು: ವಾಹನ ಬಿಟ್ಟು ಪರಾರಿಯಾದ ಚಾಲಕ 

ಬೆಂಗಳೂರಿನ ಮಧ್ಯಭಾಗ ವಿವೇಕನಗರ ಮುಖ್ಯರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದ ಹೃದಯ ವಿದ್ರಾವಕ ಘಟನೆಯೊಂದರಲ್ಲಿ, ಖಾಸಗಿ ಕಾಲೇಜು ಬಸ್ ಡಿಕ್ಕಿ ಹೊಡೆದ ಪರಿಣಾಮ 37 ವರ್ಷದ ಮಹಿಳೆ ಮತ್ತು ಅವರ ಎಂಟು ವರ್ಷದ ಮಗ...

ವಿವಾದಾತ್ಮಕ ‘ಶಾಂತಿ ಮಂಡಳಿ’ಗೆ ಭಾರತವನ್ನು ಆಹ್ವಾನಿಸಿದ ಟ್ರಂಪ್ : ವಿಶ್ವಸಂಸ್ಥೆ ವಿರುದ್ದ ಅಮೆರಿಕ ಅಧ್ಯಕ್ಷರ ಹೊಸ ತಂತ್ರ?

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗಾಝಾ ಪ್ರದೇಶಕ್ಕೆ ಸಂಬಂಧಿಸಿದಂತೆ ರಚಿಸಿರುವ ವಿವಾದಾತ್ಮಕ "ಬೋರ್ಡ್ ಆಫ್ ಪೀಸ್" (ಶಾಂತಿ ಮಂಡಳಿ) ಎಂಬ ಉಪಕ್ರಮಕ್ಕೆ ಭಾರತ ಸೇರಿದಂತೆ ಹಲವು ದೇಶಗಳನ್ನು ಆಹ್ವಾನಿಸಿದ್ದಾರೆ. ಈ ಉಪಕ್ರಮವು ವಿಶ್ವಸಂಸ್ಥೆಯನ್ನು...

ಹಿಂದಿಯೇತರ 7 ಭಾಷೆಗಳಿಗೆ ಸಾಹಿತ್ಯ ಪ್ರಶಸ್ತಿ ಘೋಷಿಸಿದ ತಮಿಳುನಾಡು ಸಿಎಂ ಸ್ಟಾಲಿನ್

ತಮಿಳು, ಬಂಗಾಳಿ ಮತ್ತು ಮರಾಠಿ ಸೇರಿದಂತೆ 7 ಭಾಷೆಗಳಿಗೆ ವಾರ್ಷಿಕ ಸಾಹಿತ್ಯ ಪ್ರಶಸ್ತಿಯನ್ನು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಭಾನುವಾರ ಘೋಷಿಸಿದ್ದಾರೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಲ್ಲಿ ರಾಜಕೀಯ ಹಸ್ತಕ್ಷೇಪವಿದೆ ಎಂದು ಕೇಂದ್ರ ಸರ್ಕಾರವನ್ನು...

ರೈಲುಗಳು ಮುಖಾಮುಖಿ ಢಿಕ್ಕಿಯಾಗಿ 21 ಮಂದಿ ಸಾವು

ಅತಿ ವೇಗದ ರೈಲು ಹಳಿತಪ್ಪಿ ಎದುರುಗಡೆಯಿಂದ ಮತ್ತೊಂದು ಹಳಿಯಲ್ಲಿ ಬರುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 21 ಜನರು ಸಾವನ್ನಪ್ಪಿರುವ ಘಟನೆ ದಕ್ಷಿಣ ಸ್ಪೇನ್‌ನಲ್ಲಿ ಭಾನುವಾರ (ಜ.18) ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ...

ಸಂತ್ರಸ್ತೆ ಹೆಸರು ಬಹಿರಂಗ : ಶ್ರೀರಾಮುಲು ವಿರುದ್ಧ ಪೋಕ್ಸೊ ಕಾಯ್ದೆಯಡಿ ಎಫ್‌ಐಆರ್

ಲೈಂಗಿಕ ದೌರ್ಜನ್ಯ ಸಂತ್ರಸ್ತೆಯ ಹೆಸರು ಬಹಿರಂಗಪಡಿಸಿದ ಮಾಜಿ ಸಚಿವ ಬಿ. ಶ್ರೀರಾಮುಲು ವಿರುದ್ಧ ಬಳ್ಳಾರಿ ನಗರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಮತ್ತು ಬಾಲ ನ್ಯಾಯ ಕಾಯ್ದೆ ಅಡಿಯಲ್ಲಿ ಭಾನುವಾರ (ಜ.18) ಎಫ್‌ಐಆರ್‌...

ವಾಂಗ್‌ಚುಕ್ ಬಂಧನ ಕಾನೂನುಬಾಹಿರ; ಹಾಗಾಗಿ ಸರ್ಕಾರ ವಿಚಾರಣೆ ಮುಂದೂಡುವಂತೆ ಮಾಡುತ್ತಿದೆ: ಪತ್ನಿ ಗೀತಾಂಜಲಿ ಆಂಗ್ಮೋ ಆರೋಪ

"ಪರಿಸರವಾದಿ, ಲಡಾಖ್ ಹೋರಾಟಗಾರ ಸೋನಮ್ ವಾಂಗ್‌ಚುಕ್ ಬಂಧನವು ಕಾನೂನುಬಾಹಿರವಾಗಿ ನಡೆದಿದೆ. ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂಬುವುದು ಈಗಾಗಲೇ ಸರ್ಕಾರದ (ಸಾಲಿಸಿಟರ್ ಜನರಲ್) ಗಮನಕ್ಕೆ ಬಂದಿದೆ. ಆದ್ದರಿಂದ ಪ್ರತಿ ಸಲ ಹೊಸ ದಿನಾಂಕ...

ಬಹುಮತವಿಲ್ಲದ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಹೇಗೆ? ಕೇಸರಿ ಪಕ್ಷದ ತಂತ್ರ ತಿಳಿಸಿದ ಕಪಿಲ್ ಸಿಬಲ್

ಬಿಜೆಪಿ ಜೊತೆ ಕೈಜೋಡಿಸುವ ಪ್ರಾದೇಶಿಗಳ ಪಕ್ಷಗಳು ಅಥವಾ ಸಣ್ಣ ಪಕ್ಷಗಳಿಗೆ ರಾಜ್ಯಸಭಾ ಸಂಸದ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್ ಭಾನುವಾರ (ಜ.18) ಎಚ್ಚರಿಕೆ ನೀಡಿದ್ದು, ಕೇಸರಿ ಪಕ್ಷ ಆರಂಭದಲ್ಲಿ ಮೈತ್ರಿ ಮಾಡಿಕೊಂಡು...

ಮಣಿಪುರ | ಜನಾಂಗೀಯ ಹಿಂಸಾಚಾರದ ವೇಳೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಕುಕಿ ಯುವತಿ ಸಾವು

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದ ವೇಳೆ, ಅಂದರೆ ಮೇ 2023ರಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ 20 ವರ್ಷದ ಕುಕಿ ಸಮುದಾಯದ ಯುವತಿ, ದೀರ್ಘಕಾಲದ ಅನಾರೋಗ್ಯದ ನಂತರ ಜನವರಿ 10ರಂದು ನಿಧನರಾದರು ಎಂದು ನ್ಯೂಸ್‌ಲಾಂಡ್ರಿ ಶನಿವಾರ (ಜ.17)...

ಖಾಲಿ ಮನೆಯಲ್ಲಿ ನಮಾಝ್ : 12 ಜನರನ್ನು ಬಂಧಿಸಿದ ಪೊಲೀಸರು

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಹಳ್ಳಿಯೊಂದರ ಖಾಲಿ ಮನೆಯಲ್ಲಿ ನಮಾಝ್ ಮಾಡಿದ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ ವರದಿಯಾಗಿದೆ. ಅನುಮತಿ ಪಡೆಯದೆ ನಮಾಝ್ ಮಾಡಿದ್ದಾರೆ ಎಂಬ ಕಾರಣಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು theprint.in ವರದಿ ಮಾಡಿದೆ....