Homeಮುಖಪುಟಎರಡು ಹಂತದ ತೆರಿಗೆ ರಚನೆಗೆ ಜಿಎಸ್‌ಟಿ ಮಂಡಳಿ ಅನುಮೋದನೆ: ಸೆ. 22ರಿಂದ ಜಾರಿ; ಪ್ರತಿಪಕ್ಷಗಳಿಂದ ಮಿಶ್ರ...

ಎರಡು ಹಂತದ ತೆರಿಗೆ ರಚನೆಗೆ ಜಿಎಸ್‌ಟಿ ಮಂಡಳಿ ಅನುಮೋದನೆ: ಸೆ. 22ರಿಂದ ಜಾರಿ; ಪ್ರತಿಪಕ್ಷಗಳಿಂದ ಮಿಶ್ರ ಪ್ರತಿಕ್ರಿಯೆ

- Advertisement -
- Advertisement -

ಮಹತ್ವದ ಬದಲಾವಣೆ ಎಂಬಂತೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಬುಧವಾರ (ಸೆ.3) ಶೇಕಡ 5 ಮತ್ತು ಶೇಕಡ 18 ದರಗಳೊಂದಿಗೆ ಸರಳೀಕೃತ ಎರಡು ಹಂತದ ತೆರಿಗೆ ರಚನೆಯನ್ನು ಅನುಮೋದಿಸಿದೆ. ಬದಲಾದ ತೆರಿಗೆ ವ್ಯವಸ್ಥೆ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ.

10 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಜಿಎಸ್‌ಟಿ ಮಂಡಳಿಯ 56ನೇ ಮ್ಯಾರಥಾನ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. “ನಾವು ಸ್ಲ್ಯಾಬ್‌ಗಳನ್ನು ಕಡಿಮೆ ಮಾಡಿದ್ದೇವೆ. ಕೇವಲ ಎರಡು ಸ್ಲ್ಯಾಬ್‌ಗಳು ಮಾತ್ರ ಇರುತ್ತವೆ ಮತ್ತು ಪರಿಹಾರ ಸೆಸ್‌ನ ಸಮಸ್ಯೆಗಳನ್ನು ಕೂಡ ನಾವು ಬಗೆಹರಿಸುತ್ತಿದ್ದೇವೆ” ಎಂದು 56ನೇ ಜಿಎಸ್‌ಟಿ ಮಂಡಳಿ ಸಭೆಯ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

“ಈ ಸುಧಾರಣೆಗಳನ್ನು ಸಾಮಾನ್ಯ ಜನರ ಮೇಲೆ ಕೇಂದ್ರೀಕರಿಸಿ ಕೈಗೊಳ್ಳಲಾಗಿದೆ. ಸಾಮಾನ್ಯ ಜನರ ದಿನನಿತ್ಯದ ಬಳಕೆಯ ವಸ್ತುಗಳ ಮೇಲಿನ ಪ್ರತಿಯೊಂದು ತೆರಿಗೆಯನ್ನು ತೀವ್ರ ಪರಿಶೀಲನೆಗೆ ಒಳಪಡಿಸಲಾಗಿದೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ದರಗಳು ತೀವ್ರವಾಗಿ ಇಳಿದಿವೆ. ಕಾರ್ಮಿಕ-ತೀವ್ರ ಕೈಗಾರಿಕೆಗಳಿಗೆ ಉತ್ತಮ ಬೆಂಬಲ ನೀಡಲಾಗಿದೆ. ರೈತರು, ಕೃಷಿ ವಲಯ ಹಾಗೂ ಆರೋಗ್ಯ ವಲಯವು ಪ್ರಯೋಜನ ಪಡೆಯಲಿದೆ. ಆರ್ಥಿಕತೆಯ ಪ್ರಮುಖ ಚಾಲಕರಿಗೆ ಪ್ರಾಮುಖ್ಯತೆ ನೀಡಲಾಗಿದೆ” ಎಂದು ಸೀತಾರಾಮನ್ ಹೇಳಿದ್ದಾರೆ.

ಬದಲಾದ ಜಿಎಸ್‌ಟಿ ದರಗಳು

ಹಾಲು ಮತ್ತು ಡೈರಿ ಉತ್ಪನ್ನಗಳು: ಯುಹೆಚ್‌ಟಿ ಹಾಲು- ಶೂನ್ಯ ತೆರಿಗೆ ಅಥವಾ ತೆರಿಗೆ ಮುಕ್ತ ಹಿಂದಿದ ದರ ಶೇ. 5. ಮಂದಗೊಳಿಸಿದ ಹಾಲು, ಬೆಣ್ಣೆ, ತುಪ್ಪ, ಪನೀರ್, ಚೀಸ್ – ಶೇ. 5 ಅಥವಾ ಶೂನ್ಯ ಹಿಂದಿನ ದರ ಶೇ. 12

ಪ್ರಧಾನ ಆಹಾರಗಳು: ಮಾಲ್ಟ್, ಪಿಷ್ಟಗಳು, ಪಾಸ್ತಾ, ಕಾರ್ನ್‌ಫ್ಲೇಕ್‌, ಬಿಸ್ಕತ್ತು, ಚಾಕೊಲೇಟ್‌, ಕೋಕೋ ಉತ್ಪನ್ನಗಳು- ಶೇ. 5 ಹಿಂದಿನ ದರ ಶೇ. 12 ರಿಂದ 18

ಡ್ರೈ ಫ್ರೂಟ್ಸ್ ಅಂಡ್ ನಟ್ಸ್ : ಬಾದಾಮಿ, ಪಿಸ್ತಾ, ಹ್ಯಾಝೆಲ್‌ನಟ್ಸ್, ಗೋಡಂಬಿ, ಖರ್ಜೂರ- ಶೇ.5 ಹಿಂದಿನ ದರ ಶೇ. 12

ಸಕ್ಕರೆ ಮತ್ತು ಮಿಠಾಯಿ: ಸಂಸ್ಕರಿಸಿದ ಸಕ್ಕರೆ, ಸಕ್ಕರೆ ಪಾಕಗಳು, ಟಾಫಿಗಳು, ಕ್ಯಾಂಡಿ-ಶೇ. 5 ಹಿಂದಿನ ದರ ಹೆಚ್ಚು ಇತ್ತು.

ಇತರ ಪ್ಯಾಕ್ ಮಾಡಿದ ಆಹಾರಗಳು: ಸಸ್ಯಜನ್ಯ ಎಣ್ಣೆಗಳು, ಪ್ರಾಣಿಗಳ ಕೊಬ್ಬು, ಖಾದ್ಯ ಸ್ಪ್ರೆಡ್‌ಗಳು, ಸಾಸೇಜ್‌ಗಳು, ಸಿದ್ದ ಮಾಂಸ, ಮೀನು ಉತ್ಪನ್ನಗಳು, ಮಾಲ್ಟ್ ಸಾರ ಆಧಾರಿತ ಆಹಾರಗಳು- ಶೇ. 5

ನಮ್ಕೀನ್‌ಗಳು ಮತ್ತು ಇತರ ಸಮಾನ ಸಿದ್ದ ಆಹಾರಗಳು : ನಮ್ಕೀನ್ ಭುಜಿಯಾ, ಮಿಕ್ಚರ್, ಚಬೆನಾ (ಶೇಂಗಾ ಅಥವಾ ಹುರಿದ ಕಡಲೆ ಹೊರತುಪಡಿಸಿ ಮುನ್ಸೂಚನೆಯಂತೆ ಪ್ಯಾಕ್ ಮಾಡಲ್ಪಟ್ಟ ಹಾಗೂ ಲೇಬಲ್ ಹಾಕಲ್ಪಟ್ಟ ಆಹಾರ ಪದಾರ್ಥಗಳು)- ಶೇ. 5 ಹಿಂದಿನ ತೆರಿಗೆ ಶೇ. 18

ನೀರು: ನೈಸರ್ಗಿಕ/ಕೃತಕ ಖನಿಜಯುಕ್ತ ನೀರು, ಎರೆಟೆಡ್ ವಾಟರ್ (ಸಕ್ಕರೆ ಅಥವಾ ಸುವಾಸನೆ ಸೇರಿಸದೆ)- ಶೇ. 5 ಹಿಂದಿನ ದರ ಶೇ. 18

ರಸಗೊಬ್ಬರಗಳು: ಶೇ. 5 ಹಿಂದಿನ ದರ ಶೇ. 12 ಅಥವಾ ಶೇ. 18

ಬೀಜಗಳು ಮತ್ತು ಬೆಳೆ ಪೋಷಕಾಂಶಗಳು: ಶೇ. 5 ಹಿಂದಿನ ದರ ಶೇ.12)

ಜೀವರಕ್ಷಕ ಔಷಧಗಳು, ಆರೋಗ್ಯ ಉತ್ಪನ್ನಗಳು, ವೈದ್ಯಕೀಯ ಸಾಧನಗಳು: ಶೇ. 12/18 ರಿಂದ ಶೇ. 5 ಅಥವಾ ಶೂನ್ಯ

ವಿದ್ಯುತ್ ಉಪಕರಣಗಳು (ಪ್ರವೇಶ ಮಟ್ಟದ, ಸಾಮೂಹಿಕ ಬಳಕೆ): ಶೇ. 28 ರಿಂದ ಶೇ. 18ವರೆಗೆ

ಪಾದರಕ್ಷೆಗಳು ಮತ್ತು ಜವಳಿ (ಸಾಮೂಹಿಕ ಮಾರುಕಟ್ಟೆ): ಶೇ. 12 ರಿಂದ ಶೇ. 5ವರೆಗೆ

ಅಧಿಕ ತೆರಿಗೆ ದರದಲ್ಲೇ ಉಳಿದಿರುವ ವಸ್ತುಗಳು : ಪಾನ್ ಮಸಾಲಾ, ಗುಟ್ಕಾ, ಸಿಗರೇಟ್, ಚೂಯಿಂಗ್ ಟೊಬ್ಯಾಕೋ, ಜರ್ದಾ, ಅನ್‌ ಮ್ಯಾನ್ಯುಫ್ಯಾಕ್ಚರ್ಡ್ ಟೊಬ್ಯಾಕೋ, ಬೀಡಿ

ಸಕ್ಕರೆ ಅಥವಾ ಸಿಹಿಕಾರಕಗಳು/ಸುವಾಸನೆಯೊಂದಿಗೆ ಸೇರಿಸಿದ ಸರಕುಗಳು (ಎರೆಟೆಡ್ ವಾಟರ್): ಶೇ. 28ರಿಂದ  ಶೇ. 40ವರೆಗೆ.

ಸಿನ್ ಅಂಡ್ ಲಕ್ಸುರಿ ಗೂಡ್ಸ್ (ಸಿಗರೇಟ್‌ಗಳು, ಪ್ರೀಮಿಯಂ ಮದ್ಯ, ಉನ್ನತ ದರ್ಜೆಯ ಕಾರುಗಳು) ಶೇ. 40

ಆಮದು ಮಾಡಿಕೊಂಡ ಶಸ್ತ್ರಸಜ್ಜಿತ ಐಷಾರಾಮಿ ಸೆಡಾನ್‌ಗಳು

ಗಮನಾರ್ಹ ಬದಲಾವಣೆಗಳು

ಜಿಎಸ್‌ಟಿ ವಿನಾಯಿತಿ: ಅಲ್ಟ್ರಾ-ಹೈ ಟೆಂಪರೇಚರ್ (ಯುಹೆಚ್‌ಟಿ) ಹಾಲು, ಪೂರ್ವ-ಪ್ಯಾಕೇಜ್ ಮಾಡಿದ ಮತ್ತು ಲೇಬಲ್ ಮಾಡಿದ ಚೆನ್ನಾ/ಪನೀರ್, ಎಲ್ಲಾ ಭಾರತೀಯ ಬ್ರೆಡ್‌ಗಳು (ಚಪಾತಿ, ರೊಟ್ಟಿ, ಪರಾಠ, ಪರೋಟ್ಟಾ, ಇತ್ಯಾದಿ), ಎಲ್ಲಾ ವೈಯಕ್ತಿಕ ಜೀವ ವಿಮಾ ಪಾಲಿಸಿಗಳಿಗೆ (ಟರ್ಮ್ ಲೈಫ್, ಯುಲಿಪ್, ದತ್ತಿ) ಮತ್ತು ಮರುವಿಮೆ.

ಪಾನ್ ಮಸಾಲಾ, ತಂಬಾಕು ಉತ್ಪನ್ನಗಳ ಮೌಲ್ಯಮಾಪನ ವಿಧಾನವನ್ನು ವಹಿವಾಟು ಮೌಲ್ಯದಿಂದ ಚಿಲ್ಲರೆ ಮಾರಾಟ ಬೆಲೆಗೆ (ಆರ್‌ಎಸ್‌ಪಿ) ಬದಲಾಯಿಸಲಾಗಿದೆ.

ಪ್ರತಿಪಕ್ಷಗಳಿಂದ ಮಿಶ್ರ ಪ್ರತಿಕ್ರಿಯೆ

ಜಿಎಸ್‌ಟಿ ದರಗಳ ಬದಲಾವಣೆಯ ಮಹತ್ವದ ನಿರ್ಧಾರದ ಕುರಿತು ಪ್ರತಿಪಕ್ಷಗಳು ಮಿಶ್ರ ಪ್ರತಿಕ್ರಿಯೆ ನೀಡಿವೆ.

ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ನ ವಕ್ತಾರ ಜೈರಾಮ್ ರಮೇಶ್ ಪ್ರತಿಕ್ರಿಯಿಸಿ, “ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬಹಳ ಹಿಂದಿನಿಂದಲೂ ಜಿಎಸ್‌ಟಿ 2.0ಗಾಗಿ ಬೇಡಿಕೆ ಮುಂದಿಡುತ್ತಲೇ ಬಂದಿತ್ತು. ಏಕೆಂದರೆ, ಇದು ಜಿಎಸ್‌ಟಿ ದರವನ್ನು ಕಡಿಮೆ ಮಾಡುತ್ತದೆ, ಸಾಮೂಹಿಕ ಬಳಕೆಯ ವಸ್ತುಗಳ ಮೇಲಿನ ದರಗಳನ್ನು ಕಡಿತಗೊಳಿಸುತ್ತದೆ, ತಪ್ಪು ವರ್ಗೀಕರಣ ಮತ್ತು ವಿವಾದಗಳನ್ನು ಕಡಿಮೆ ಮಾಡುತ್ತದೆ, ತಲೆಕೆಳಗಾದ ಸುಂಕ ರಚನೆಯನ್ನು ತೆಗೆದುಹಾಕುತ್ತದೆ (ಇನ್‌ಪುಟ್‌ಗಳಿಗೆ ಹೋಲಿಸಿದರೆ ಉತ್ಪಾದನೆಯ ಮೇಲೆ ಕಡಿಮೆ ತೆರಿಗೆ), ಎಂಎಸ್‌ಎಂಇಳ ಮೇಲಿನ ಅನುಸರಣೆ ಹೊರೆಯನ್ನು ಸರಾಗಗೊಳಿಸುತ್ತದೆ ಮತ್ತು ಜಿಎಸ್‌ಟಿ ವ್ಯಾಪ್ತಿಯನ್ನು ವಿಸ್ತರಿಸುತ್ತದೆ” ಎಂದಿದ್ದಾರೆ.

ಮುಂದುವರಿದು, “ಸಾಂವಿಧಾನಿಕ ಸಂಸ್ಥೆಯಾದ ಜಿಎಸ್‌ಟಿ ಮಂಡಳಿಯ ಸಭೆಯ ನಂತರ ಕೇಂದ್ರ ಹಣಕಾಸು ಸಚಿವರು ನಿನ್ನೆ ಸಂಜೆ ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಆದಾಗ್ಯೂ, ಜಿಎಸ್‌ಟಿ ಮಂಡಳಿಯ ಸಭೆಗೂ ಮೊದಲೇ, ಪ್ರಧಾನ ಮಂತ್ರಿಗಳು ಆಗಸ್ಟ್ 15, 2025ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಅದರ ನಿರ್ಧಾರಗಳ ಸಾರವನ್ನು ಘೋಷಿಸಿದ್ದರು. ಹಾಗಾದರೆ, ಜಿಎಸ್‌ಟಿ ಮಂಡಳಿಗೆ ಬೆಲೆ ಇಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

ಖಾಸಗಿ ಉಪಭೋಗದಲ್ಲಿ ಚುರುಕು ಕಾಣಿಸದಿರುವುದು, ಖಾಸಗಿ ಹೂಡಿಕೆಯಲ್ಲಿ ನಿಧಾನಗತಿಯಿರುವುದು ಮತ್ತು ವ್ಯಾಪಕವಾಗಿ ನಡೆಯುತ್ತಿರುವ ವರ್ಗೀಕರಣದ ತರ್ಕಾತ್ಮಕ ವಾದಗಳಿಂದ ನಲುಗಿರುವ ಸ್ಥಿತಿಯಲ್ಲಿ, ಕೇಂದ್ರ ಹಣಕಾಸು ಸಚಿವರು ಕೊನೆಗೂ ಜಿಎಸ್‌ಟಿ 1.0 (ಮೊದಲ ಹಂತದ ಜಿಎಸ್‌ಟಿ)ಮಾರ್ಗದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ವಾಸ್ತವವಾಗಿ, ಜಿಎಸ್‌ಟಿ 1.0 ರ ವಿನ್ಯಾಸವೇ ದೋಷಪೂರಿತವಾಗಿತ್ತು ಮತ್ತು ಜುಲೈ 2017 ರಲ್ಲಿಯೇ ಕಾಂಗ್ರೆಸ್ ಅದನ್ನು ಎತ್ತಿ ತೋರಿಸಿತ್ತು. ಪ್ರಧಾನಿ ತಮ್ಮ ವಿಶಿಷ್ಟವಾದ ಬದಲಾವಣೆಯಾಗಿ ಜಿಎಸ್‌ಟಿ ಪರಿಚಯಿಸಲು ನಿರ್ಧರಿಸಿದಾಗ, ಅದು ಉತ್ತಮ ಮತ್ತು ಸರಳ ತೆರಿಗೆಯಾಗಬೇಕಿತ್ತು. ಆದರೆ, ಅದು ಬೆಳವಣಿಗೆಯನ್ನು ನಿಗ್ರಹಿಸುವ ತೆರಿಗೆಯಾಗಿ ಪರಿಣಮಿಸಿತು” ಎಂದಿದ್ದಾರೆ.

ನಿನ್ನೆ ಸಂಜೆ ಹಣಕಾಸು ಸಚಿವರು ಮಾಡಿದ ಘೋಷಣೆಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿವೆ. ಏಕೆಂದರೆ ಪ್ರಧಾನಮಂತ್ರಿ ಈಗಾಗಲೇ ದೀಪಾವಳಿಗೆ ಮೊದಲ ಗಡುವನ್ನು ನಿಗದಿಪಡಿಸಿದ್ದರು. ಇನ್ನು ನಿಜವಾದ ‘ಜಿಎಸ್‌ಟಿ 2.0’ ವ್ಯವಸ್ಥೆಯ ನಿರೀಕ್ಷೆ ಇನ್ನೂ ಮುಂದುವರೆದಿದೆ. ಈ ಹೊಸ ಮಾರ್ಪಡಿಸಿದ ವ್ಯವಸ್ಥೆಯನ್ನು ‘ಜಿಎಸ್‌ಟಿ 1.5 ಎಂದು ಕರೆಯಬಹುದು. ಇದೂ ಕೂಡ ಖಾಸಗಿ ಹೂಡಿಕೆಯನ್ನು—ವಿಶೇಷವಾಗಿ ತಯಾರಿಕಾ ಕ್ಷೇತ್ರದಲ್ಲಿ ಬದಲಾವಣೆ ತರಬಲ್ಲದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅದೇ ರೀತಿ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲಿನ ಭಾರವನ್ನು ಕಡಿಮೆ ಮಾಡುತ್ತದೆಯೇ? ಎಂಬುದಕ್ಕೆ ಕಾಲವೇ ಉತ್ತರಿಬೇಕಿದೆ. ಇದಲ್ಲದೆ, ತಮ್ಮ ಆದಾಯವನ್ನು ಸಂಪೂರ್ಣವಾಗಿ ರಕ್ಷಿಸಲು ಇನ್ನೂ ಐದು ವರ್ಷಗಳವರೆಗೆ ಪರಿಹಾರವನ್ನು ವಿಸ್ತರಿಸುವಂತೆ ರಾಜ್ಯಗಳು ಬೇಡಿಕೆ ಇಟ್ಟಿವೆ. ಆ ಬೇಡಿಕೆಯನ್ನು ಈಡೇರಿಸುವುದು ನಿಜವಾದ ಒಕ್ಕೂಟ ವ್ಯವಸ್ಥೆಯಾಗಿದೆ. ಇದೀಗ ಜಿಎಸ್‌ಟಿ ದರ ಬದಲಾವಣೆಯೊಂದಿಗೆ ರಾಜ್ಯಗಳ ಬೇಡಿಕೆ ಇನ್ನೂ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಹಣಕಾಸು ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರು, ಜಿಎಸ್‌ಟಿ ದರ ಬದಲಾವಣೆಯಿಂದ ಒಟ್ಟು 47,700 ಕೋಟಿ ರೂಪಾಯಿ ಆದಾಯ ನಷ್ಟ ಉಂಟಾಗುವ ನಿರೀಕ್ಷೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಈ ನಿರ್ಧಾರದ ಬಗ್ಗೆ ಮಾತನಾಡಿ, “ಜಿಎಸ್‌ಟಿ ದರ ಬದಲಾವಣೆಯ ಕುರಿತು ಎಲ್ಲಾ ರಾಜ್ಯಗಳು ಒಮ್ಮತದ ಆಧಾರದ ಮೇಲೆ ಒಪ್ಪಿಗೆ ನೀಡಿವೆ. ಇದು ಸಂಪೂರ್ಣ ಒಮ್ಮತದ ನಿರ್ಧಾರ” ಎಂದಿದ್ದಾರೆ.

ಮಣಿಪುರಕ್ಕೆ ಪ್ರಧಾನಿ ಭೇಟಿ: 29 ತಿಂಗಳ ನಂತರದ ಮೊದಲ ಹೆಜ್ಜೆ, ‘ವಿಳಂಬದ ನಡೆ’ ಎಂದ ಕಾಂಗ್ರೆಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...