ನ್ಯೂಯಾರ್ಕ್‌ನಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್‌ಜಿಎ) ವಾರ್ಷಿಕ ಸಭೆಗೂ ಮುನ್ನ ನಡೆದ ಉನ್ನತ ಮಟ್ಟದ ಶೃಂಗಸಭೆಯಲ್ಲಿ ಫ್ರಾನ್ಸ್ ಸೇರಿದಂತೆ ಆರು ದೇಶಗಳ ನಾಯಕರು ಪ್ಯಾಲೆಸ್ತೀನ್ ಅನ್ನು ‘ಪ್ರತ್ಯೇಕ ರಾಷ್ಟ್ರವಾಗಿ’ ಗುರುತಿಸಲು ನಿರ್ಧರಿಸಿದ್ದಾರೆ.
ಸೋಮವಾರ (ಸೆ.22) ನ್ಯೂಯಾರ್ಕ್‌ನಲ್ಲಿ ಸೌದಿ ಅರೇಬಿಯಾ ಮತ್ತು ಫ್ರಾನ್ಸ್ ಸಹಯೋಗದಲ್ಲಿ ನಡೆದ ‘ದ್ವಿರಾಷ್ಟ್ರ ಪರಿಹಾರಕ್ಕಾಗಿ ಉನ್ನತ ಮಟ್ಟದ ಅಂತಾರಾಷ್ಟ್ರೀಯ ಸಮ್ಮೇಳನ’ ಎಂಬ ಶೀರ್ಷಿಕೆಯ ಶೃಂಗ ಸಭೆಯಲ್ಲಿ, ಫ್ರಾನ್ಸ್ ಜೊತೆಗೆ, ಅಂಡೋರಾ, ಬೆಲ್ಜಿಯಂ, ಲಕ್ಸೆಂಬರ್ಗ್, ಮಾಲ್ಟಾ ಮತ್ತು ಮೊನಾಕೊ ದೇಶಗಳು ಪ್ಯಾಲೆಸ್ತೀನ್ ಅನ್ನು ಪ್ರತ್ಯೇಕ ರಾಷ್ಟ್ರ ಎಂದು ಗುರುತಿಸುವುದಾಗಿ ಘೋಷಿಸಿವೆ.
ಈಗಾಗಲೇ ಪ್ಯಾಲೆಸ್ತೀನ್ ಪ್ರತ್ಯೇಕ ರಾಷ್ಟ್ರ ಎಂದು ಔಪಚಾರಿಕವಾಗಿ ಗುರುತಿಸಿರುವ ಆಸ್ಟ್ರೇಲಿಯಾ, ಕೆನಡಾ, ಪೋರ್ಚುಗಲ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ನಾಯಕರು ಕೂಡ ಶೃಂಗ ಸಭೆಯಲ್ಲಿ ಭಾಗವಹಿಸಿದ್ದರು.
“ಈಗ ಸಮಯ ಕೂಡಿ ಬಂದಿದೆ. ಹಾಗಾಗಿ, ನಾವು ಇಲ್ಲಿ ಸೇರಿದ್ದೇವೆ. ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ ಕೊನೆಗೊಳಿಸಲು ದೀರ್ಘಕಾಲ ವಿಳಂಬವಾದ ದ್ವಿರಾಷ್ಟ್ರ ಪರಿಹಾರವನ್ನು ಪುನರುಜ್ಜೀವನಗೊಳಿಸಲು ಈ ಸಮ್ಮೇಳನ ಆಯೋಜಿಸಲಾಗಿದೆ” ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಸಭೆಯಲ್ಲಿ ಹೇಳಿದ್ದಾರೆ.
“ದ್ವಿರಾಷ್ಟ್ರ ಪರಿಹಾರಕ್ಕಾಗಿ ಎನೆಲ್ಲ ಮಾಡಲು ಸಾಧ್ಯವೋ, ಅವುಗಳನ್ನು ಮಾಡುವ ಜವಾಬ್ದಾರಿ ನಮ್ಮ ಮೇಲೆ ಇದೆ. ಫ್ರಾನ್ಸ್ ಪ್ಯಾಲೆಸ್ತೀನ್ ಅನ್ನು ಪ್ರತ್ಯೇಕ ರಾಷ್ಟ್ರವಾಗಿ ಗುರುತಿಸುತ್ತದೆ ಎಂದು ನಾನು ಈ ಸಂದರ್ಭದಲ್ಲಿ ಘೋಷಿಸುತ್ತಿದ್ದೇನೆ” ಎಂದು ಮ್ಯಾಕ್ರನ್ ತಿಳಿಸಿದ್ದಾರೆ.
ಏಪ್ರಿಲ್ 2025ರ ವೇಳೆಗೆ, ವಿಶ್ವ ಸಂಸ್ಥೆಯ ಒಟ್ಟು 193 ಸದಸ್ಯ ರಾಷ್ಟ್ರಗಳಲ್ಲಿ ಸುಮಾರು 147 ರಾಷ್ಟ್ರಗಳು ಪ್ಯಾಲೆಸ್ತೀನ್ ಪ್ರತ್ಯೇಕ ರಾಷ್ಟ್ರ ಎಂದು ಔಪಚಾರಿಕವಾಗಿ ಗುರುತಿಸಿದ್ದವು. ಸೋಮವವಾರ (ಸೆ.22) ನ್ಯೂಯಾರ್ಕ್‌ನಲ್ಲಿ ನಡೆದ ಸಮ್ಮೇಳನದಲ್ಲಿ, ಫ್ರಾನ್ಸ್, ಅಂಡೋರಾ, ಬೆಲ್ಜಿಯಂ, ಲಕ್ಸೆಂಬರ್ಗ್, ಮಾಲ್ಟಾ, ಮತ್ತು ಮೊನಾಕೊ ಪ್ಯಾಲೆಸ್ತೀಜ್ ಪ್ರತ್ಯೇಕ ರಾಷ್ಟ್ರವಾಗಿ ಗುರುತಿಸಲು ನಿರ್ಧರಿಸಿವೆ. ಈ ಮೂಲಕ ಪ್ಯಾಲೆಸ್ತೀನ್‌ಗೆ ಪ್ರತ್ಯೇಕ ರಾಷ್ಟ್ರದ ಸ್ಥಾನಮಾನ ನೀಡಿದ ದೇಶಗಳ ಸಂಖ್ಯೆ 155ಕ್ಕೆ ಏರಿದೆ. ಇದು ಯುಎನ್ ಸದಸ್ಯ ರಾಷ್ಟ್ರಗಳಲ್ಲಿ ಶೇ. 80ಕ್ಕಿಂತಲೂ ಹೆಚ್ಚು.
ಅಂತಾರಾಷ್ಟ್ರೀಯ ಸಮುದಾಯದ ಶೇಕಡ 80ಕ್ಕಿಂತ ಹೆಚ್ಚು ಜನರು ಈಗ ಪ್ಯಾಲೆಸ್ತೀನ್ ಪ್ರತ್ಯೇಕ ರಾಷ್ಟ್ರ ಎಂದು ಗುರುತಿಸಿರುವುದರಿಂದ, 65,300ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರನ್ನು ಹತ್ಯೆಗೈದ, ಗಾಝಾ ಪಟ್ಟಿಯನ್ನು ನರಕವಾಗಿ ಮಾರ್ಪಡಿಸಿರುವ, ಅಮಾಯಕ ನಾಗರಿಕರ ಮೇಲೆ ಜನಾಂಗೀಯ ವಿನಾಶಕಾರಿ ಆಕ್ರಮಣ ಮುಂದುವರೆಸುತ್ತಿರುವ ಇಸ್ರೇಲ್ ಮೇಲೆ ರಾಜತಾಂತ್ರಿಕ ಒತ್ತಡ ಹೆಚ್ಚಾಗಿದೆ.
ಕಳೆದ ವರ್ಷ ಸ್ಪೇನ್, ನಾರ್ವೆ ಮತ್ತು ಐರ್ಲೆಂಡ್ ಪ್ಯಾಲೆಸ್ತೀನ್‌ಗೆ ಪ್ರತ್ಯೇಕ ರಾಷ್ಟ್ರದ ಸ್ಥಾನಮಾನ ನೀಡಿದ್ದವು. ಗಾಝಾ ಮೇಲೆ ಅಕ್ರಮಣ ನಡೆಸುತ್ತಿರುವ ಇಸ್ರೇಲ್‌ಗೆ ಸ್ಪೇನ್ ನಿರ್ಬಂಧ ವಿಧಿಸಿತ್ತು.
“ಎರಡು ರಾಷ್ಟ್ರಗಳ ಪೈಕಿ ಒಂದರಲ್ಲಿ ನರಮೇಧಕ್ಕೆ ನಡೆಯುತ್ತಿರುವಾಗ ದ್ವಿರಾಷ್ಟ್ರ ಪರಿಹಾರ ಸಾಧ್ಯವಿಲ್ಲ” ಎಂದು ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಸೋಮವಾರದ ಶೃಂಗಸಭೆಯಲ್ಲಿ ಹೇಳಿದ್ದಾರೆ.
“ಪ್ಯಾಲೆಸ್ತೀನ್ ಜನರನ್ನು ನಿರ್ನಾಮ ಮಾಡಲಾಗುತ್ತಿದೆ. ಆದ್ದರಿಂದ, ವಿವೇಚನೆಯ ಹೆಸರಿನಲ್ಲಿ, ಅಂತಾರಾಷ್ಟ್ರೀಯ ಕಾನೂನಿನ ಹೆಸರಿನಲ್ಲಿ ಮತ್ತು ಮಾನವ ಘನತೆಯ ಹೆಸರಿನಲ್ಲಿ, ನಾವು ಈ ಹತ್ಯಾಕಾಂಡವನ್ನು ನಿಲ್ಲಿಸಬೇಕು” ಎಂದು ಸ್ಯಾಂಚೆಜ್ ಆಗ್ರಹಿಸಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮಾತನಾಡುವಾಗ, “ನವೀಕೃತ ಪ್ಯಾಲೆಸ್ಟೈನ್ ಅಥಾರಿಟಿ” (ಪ್ಯಾಲೆಸ್ಟೈನ್ ಪ್ರಾಧಿಕಾರ) ಸ್ಥಾಪನೆಗೆ ಒಂದು ಚೌಕಟ್ಟನ್ನು ಹೇಳಿದ್ದಾರೆ. ಯುದ್ದದ ನಂತರ ಈ ಚೌಕಟ್ಟು, ಅಂತಾರಾಷ್ಟ್ರೀಯ ಸ್ಥಿರೀಕರಣ ಪಡೆ (International Stabilisation Force – ISF) ರಚನೆಯನ್ನು ಒಳಗೊಂಡಿದೆ. ಇದು ಪ್ಯಾಲೆಸ್ಟೈನ್ ಪ್ರಾಧಿಕಾರ (ಪಿಎ) ಗಾಝಾದಲ್ಲಿ ಆಡಳಿತ ವಹಿಸಿಕೊಳ್ಳಲು ಸಹಾಯ ಮಾಡುತ್ತದೆ” ಎಂದಿದ್ದಾರೆ.
ಪ್ಯಾಲೆಸ್ತೀನ್ ಪ್ರತ್ಯೇಕ ರಾಷ್ಟ್ರ ಎಂದು ಗುರುತಿಸಿದ ದೇಶಗಳನ್ನು ಪೆನ್ಸಿಲ್ವೇನಿಯಾ ಅಧ್ಯಕ್ಷ ಮಹಮೂದ್ ಅಬ್ಬಾಸ್ ಶ್ಲಾಘಿಸಿದ್ದಾರೆ. ಈ ವಾರ ನಡೆಯಲಿರುವ ಯುಎನ್‌ಜಿಎಯಲ್ಲಿ ಭಾಗವಹಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಅಬ್ಬಾಸ್ ಅವರಿಗೆ ವೀಸಾ ನಿರಾಕರಿಸಿದೆ. ಹಾಗಾಗಿ, ಸಹಜವಾಗಿ ಅಮೆರಿಕದ ಮೇಲೆ ಕೋಪಗೊಂಡಿರುವ ಅಬ್ಬಾಸ್ ಅವರು, ಸೋಮವಾರದ ಸಭೆಯಲ್ಲಿ ವಿಡಿಯೋ ಮೂಲಕ ಮಾತನಾಡಿದ್ದಾರೆ.
“ಇನ್ನುಳಿದ ರಾಷ್ಟ್ರಗಳು ಕೂಡ ಪ್ಯಾಲೆಸ್ತೀನ್‌ಗೆ ಪ್ರತ್ಯೇಕ ರಾಷ್ಟ್ರದ ಸ್ಥಾನಮಾನ ನೀಡುವಂತೆ ನಾನು ಕೋರುತ್ತೇನೆ. ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ತೀನ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವಂತೆ ಮನವಿ ಮಾಡುತ್ತೇನೆ” ಎಂದು ಅಬ್ಬಾಸ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸಮುದಾಯ ದಿನದಿಂದ ದಿನಕ್ಕೆ ಪ್ಯಾಲೆಸ್ತೀನ್‌ಗೆ ಬೆಂಬಲ ಹೆಚ್ಚಿಸುತ್ತಿವೆ. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಪೈಕಿ ಶೇ.80 ರಾಷ್ಟ್ರಗಳು ಈಗಾಗಲೇ ಪ್ಯಾಲೆಸ್ತೀನ್ ಪ್ರತ್ಯೇಕ ರಾಷ್ಟ್ರವೆಂದು ಗುರುತಿಸಿವೆ. ಇದರಿಂದ ಅಮೆರಿಕ ಮತ್ತು ಇಸ್ರೇಲ್ ದಿನಕಳೆದಂತೆ ಅಂತಾರಾಷ್ಟ್ರೀಯವಾಗಿ ಕ್ರಮೇಣ ಪ್ರತ್ಯೇಕಗೊಳ್ಳುತ್ತಿವೆ. ಈ ಅಸಮಾಧಾನದಲ್ಲಿ ಸೋಮವಾರ ನಡೆದ ಶೃಂಗಸಭೆಯನ್ನು ಈ ಎರಡೂ ರಾಷ್ಟ್ರಗಳು ಬಹಿಷ್ಕರಿಸಿತ್ತು. ಇಸ್ರೇಲ್‌ನ ವಿಶ್ವಸಂಸ್ಥೆಯ ರಾಯಭಾರಿ ಡ್ಯಾನಿ ಡ್ಯಾನನ್ ಈ ಸಭೆಯನ್ನು ಒಂದು ‘ಸರ್ಕಸ್’ ಎಂದು ಬಣ್ಣಿಸಿದ್ದಾರೆ.
ವಿಶ್ವಸಂಸ್ಥೆ ಬಹುಪಾಲು ಸದಸ್ಯ ರಾಷ್ಟ್ರಗಳು ಪ್ಯಾಲೆಸ್ತೀನ್ ಪ್ರತ್ಯೇಕ ರಾಷ್ಟ್ರ ಎಂದು ಗುರುತಿಸಿವೆಯಾದರೂ, ಹೊಸ ಸದಸ್ಯ ರಾಷ್ಟ್ರಗಳು ಯುಎನ್ ಭದ್ರತಾ ಮಂಡಳಿಯ ಬೆಂಬಲವನ್ನು ಹೊಂದಿರಬೇಕು. ಅಲ್ಲಿ ಯುಎಸ್ ಪ್ಯಾಲೆಸ್ತೀನ್ ಪೂರ್ಣ ಯುಎನ್ ಸದಸ್ಯ ರಾಷ್ಟ್ರವಾಗುವುದನ್ನು ತಡೆಯಲು ತನ್ನ ವೀಟೋವನ್ನು ಬಳಸಿದೆ.
ಪ್ಯಾಲೆಸ್ತೀನ್ ‘ಪ್ರತ್ಯೇಕ ರಾಷ್ಟ್ರ’ವೆಂದು ಗುರುತಿಸಿದ ಯುಕೆ, ಕೆನಡಾ, ಆಸ್ಟ್ರೇಲಿಯಾ


