ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಉಪ್ಪಳಿಗೆಯಲ್ಲಿ ನಡೆದ ‘ದೀಪೋತ್ಸವ’ ಕಾರ್ಯಕ್ರಮದಲ್ಲಿ ಧಾರ್ಮಿಕ ದ್ವೇಷ ಭಾಷಣ ಮಾಡಿದ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ.30ರಂದು ವಿಚಾರಣೆಗೆ ಹಾಜರಾಗಲು ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ವಸಂತ್ ಗಿಳಿಯಾರ್ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದಾರೆ.
“ಕಲ್ಲಡ್ಕ ಪ್ರಭಾಕರ್ ಭಟ್ ಎನ್ನುವ ಶಕ್ತಿಯನ್ನು ಕೆಣಕಿ ಉಳಿದ ಸರ್ಕಾರವಿಲ್ಲ! ಭಟ್ಟರ ಬಂಧನಕ್ಕೆ ಒತ್ತಡವಿದೆ ಎನ್ನುವ ಮಾತು ಕೇಳಿಸಿಕೊಂಡೆ. ಕರಾವಳಿ ಕಿಡಿ ಕಿಡಿಯಾದೀತು. ಪ್ರಭಾಕರ ಭಟ್ಟರ ಪ್ರಭಾವ ಏನೂ ಎನ್ನುವುದನ್ನು ಪ್ರದರ್ಶನ ಮಾಡುವ ರಿಸ್ಕಿಗೆ ಯಾರೂ ಕೈ ಹಾಕದೇ ಇರೋದು ಸೇಫ್! ಕರಾವಳಿ ಕರ್ನಾಟಕ ಶಾಂತಿಯಲ್ಲಿರಲಿ ಎನ್ನುವುದು ಸಲಹೆ” ಎಂದು ಗಿಳಿಯಾರ್ ಪೋಸ್ಟ್ ಹಾಕಿದ್ದು, ಬಹಿರಂಗವಾಗಿ ಹಿಂಸಾಚಾರಕ್ಕೆ ಪ್ರಚೋದನೆ ಕೊಟ್ಟಿರುವ ಆತನ ವಿರುದ್ದ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಸಂತ್ ಗಿಳಿಯಾರ್ ವಿರುದ್ದ ಕಾನೂನು ಕ್ರಮಕ್ಕೆ ಆಗ್ರಹಿಸಿ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಕೆಲ ಪೋಸ್ಟ್‌ಗಳು ಮತ್ತು ಸ್ಕ್ರೀನ್ ಶಾಟ್‌ಗಳು ಕೆಳಗೆ ನೋಡಬಹುದು.




ಇನ್ನು, Divyath K Poojary ಎಂಬ ಫೇಸ್‌ಬುಕ್ ಬಳಕೆದಾರರೊಬ್ಬರು “ಹೆಣ್ಣು ಮಕ್ಕಳಿಗೆ ರೆಸ್ಪೆಕ್ಟ್ ಕೊಡದ ಅಯೋಗ್ಯರು ಇಂತವರು. ಇವನ ಭಾಷಣ ಕೇಳಿ ಅರ್ಧದಿಂದ ಹೋದವ ನಾನು. ಧರ್ಮವನ್ನು ದ್ವೇಷ ಮಾಡಲು ಕಲಿಸೋ ಇವನಿಂದ ನಾವೇನು ಕಲಿಯಬೇಕಿಲ್ಲ” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
Musthafa Mf ಎಂಬ ಫೇಸ್‌ಬುಕ್ ಬಳಕೆದಾರ “ನೀನು ಯಾವ ಸೀಮೆಯ ಪತ್ರಕರ್ತ ಮೊದಲು ಹೇಳು. ಮೊದಲು ಕಾನೂನಿಗೆ ಗೌರವ ಕೊಡೋದು ಕಲಿ. ಸುಪ್ರೀಂ ಕೋರ್ಟ್ ಏನು ಹೇಳಿದೆ ಗೊತ್ತಾ, ಅದು ಮೊದಲು ತಿಳ್ಕೋ. ಒಂದು ಧರ್ಮವನ್ನು ಗುರಿಯಾಗಿಸಿ ದ್ವೇಷ ಭಾಷಣ ಮಾಡುವನನ್ನು ಬಂಧನ ಮಾಡಬೇಕು. ಅದರ ಆಯೋಜಕರನ್ನು ಬಂಧಿಸಬೇಕು. ಈತ ಕಾನೂನಿಗಿಂತ ದೊಡ್ಡವನಲ್ಲ. ನೀ ಮೊದಲು ಪತ್ರಕರ್ತನ ಕೆಲಸ ಮಾಡು. ಹೆದರಿಸುವುದು ಬಿಡು” ಎಂದು ವಸಂತ್ ಗಿಳಿಯಾರ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
Yadava Kuntalapady ಎಂಬ ಬಳಕೆದಾರ “ಬಂಧನ ಮಾಡಿದರೆ ಏನೂ ಆಗೊದಿಲ್ಲ. ಅದು ನಿನ್ನ ಭ್ರಮೆ. ಈಗ ರೋಡಿಗೆ ಬಂದು ಗಲಾಟೆ ಮಾಡಿದರೆ, ಮಾಡಿಸಿದವನು ನೇರ ಹೊಣೆ. ಅವನನ್ನೇ ಒದ್ದು ಒಳಗೆ ಹಾಕುವಂತ ಪ್ರಾಮಾಣಿಕ 2 ಪೋಲಿಸ್ ಅಧಿಕಾರಿಗಳು ಇದ್ದಾರೆ” ಎಂದು ಕಾಮೆಂಟ್ ಮಾಡಿದ್ದಾರೆ.
ಆನಂದ ಕುಮಾರ ಹಾಲಗೆರೆ ಎಂಬ ಬಳಕೆದಾರ, “ಜಾಸ್ತಿ ತಲೆಕೆಡಿಸಿ ಇರೋದು ಬೇಡ ಹರಿಪ್ರಸಾದ್ ಗೃಹಮಂತ್ರಿ ಆಗಲಿ ನೋಡು” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Sanatan Dharam ಎಂಬ ಫೇಸ್‌ಬುಕ್ ಖಾತೆಯಲ್ಲಿ, “ಈ ಪೋಸ್ಟ್‌ನಲ್ಲಿ ಪ್ರಚೋದನಕಾರಿ ವಿಷಯವಿರುವುದರಿಂದ ನಿಮಗೆ ಅಪಾಯವಾಗಬಹುದು! ಪೋಸ್ಟ್ ಅನ್ನು ಮಾರ್ಪಡಿಸಲು ಪ್ರಯತ್ನಿಸಿ ಎಂದು ಗಿಳಿಯಾರ್ ಗೆ ಸಲಹೆ ನೀಡಲಾಗಿದೆ.
ಆರ್‌ಎಸ್‌ಎಸ್ ಪಥಸಂಚಲನ ವಿವಾದ: ಅ.28ರಂದು ಶಾಂತಿ ಸಭೆ ನಡೆಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ


