ಯುಕೆಯ ವೆಸ್ಟ್ ಮಿಡ್‌ಲ್ಯಾಂಡ್ಸ್‌ನಲ್ಲಿ 20 ವರ್ಷದ ಭಾರತೀಯ ಮೂಲದ ಯುವತಿ ಮೇಲೆ ಜನಾಂಗೀಯ ಪ್ರೇರಿತ ಅತ್ಯಾಚಾರ ನಡೆದಿದೆ ಎಂದು ವರದಿಯಾಗಿದೆ.
ಯುವತಿಯ ಜನಾಂಗೀಯ ಗುರುತಿನ ಕಾರಣದಿಂದಾಗಿ ಅತ್ಯಾಚಾರ ನಡೆದಿದೆ ಎಂದು ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರು ದೃಢಪಡಿಸಿದ್ದಾಗಿ ವರದಿಗಳು ಹೇಳಿವೆ.
“ಇದು ಯುವತಿಯ ಮೇಲೆ ನಡೆದ ಅತ್ಯಂತ ಭಯಾನಕ ದಾಳಿಯಾಗಿದ್ದು, ಇದಕ್ಕೆ ಕಾರಣರಾದ ವ್ಯಕ್ತಿಯನ್ನು ಬಂಧಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ” ಎಂದು ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿ ರೋನನ್ ಟೈರರ್ ಹೇಳಿದ್ದಾಗಿ” ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಕಳೆದ ಶನಿವಾರ (ಅ.25) ವಾಲ್ಸಾಲ್‌ನ ಪಾರ್ಕ್ ಹಾಲ್ ಪ್ರದೇಶದಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಾಹಿತಿ ಬಂದ ಬಳಿಕ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ವೇಳೆ ಜನಾಂಗೀಯ ಪ್ರೇರಿತ ದೌರ್ಜನ್ಯ ಬೆಳಕಿಗೆ ಬಂದಿದೆ.
ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರು ಅಪರಾಧಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದು, ಆತನನ್ನು ಪತ್ತೆಹಚ್ಚುವಲ್ಲಿ ಸಹಕರಿಸುವಂತೆ ಸ್ಥಳೀಯ ನಿವಾಸಿಗಳಿಗೆ ಮನವಿ ಮಾಡಿದ್ದಾರೆ.
“ಅಧಿಕಾರಿಗಳ ತಂಡ ಸಾಕ್ಷ್ಯಗಳನ್ನು ಕಲೆ ಹಾಕುತ್ತಿವೆ. ಆರೋಪಿಯ ಮಾಹಿತಿ ಸಂಗ್ರಹಿಸುತ್ತಿವೆ. ಇದರಿಂದಾಗಿ ಆತನನ್ನು ಸಾಧ್ಯವಾದಷ್ಟು ಬೇಗ ವಶಕ್ಕೆ ಪಡೆಯಬಹುದು” ಎಂದು ಟೈರರ್ ಹೇಳಿದ್ದಾರೆ.
“ನಾವು ಹಲವಾರು ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದೇವೆ. ಘಟನೆ ನಡೆದ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಓಡಾಡಿರುವುದನ್ನು ಯಾರಾದರು ನೋಡಿದ್ದರೆ ಮಾಹಿತಿ ನೀಡಬಹುದು. ಅಲ್ಲದೆ, ಆ ಪ್ರದೇಶದಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದಾಗ ನಿಮ್ಮ ಡ್ಯಾಶ್ ಕ್ಯಾಮ್‌ನಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ದೃಶ್ಯಗಳು ರೆಕಾರ್ಡ್ ಆಗಿದ್ದರೆ ನೀಡಬಹುದು” ಎಂದು ಎಂದು ಟೈರರ್ ಮನವಿ ಮಾಡಿದ್ದಾರೆ.
ಪೊಲೀಸರು ಹೆಚ್ಚಿನ ವಿವರಗಳನ್ನು ದೃಢೀಕರಿಸದಿದ್ದರೂ, ಸ್ಥಳೀಯ ಸಮುದಾಯ ಗುಂಪುಗಳು ಬಲಿಪಶು ಪಂಜಾಬಿ ಮಹಿಳೆ ಎಂದು ಹೇಳಿಕೊಂಡಿವೆ. ಹತ್ತಿರದ ಓಲ್ಡ್‌ಬರಿ ಪ್ರದೇಶದಲ್ಲಿ ಬ್ರಿಟಿಷ್ ಸಿಖ್ ಮಹಿಳೆಯ ಮೇಲೆ ಜನಾಂಗೀಯ ಪ್ರೇರಿತ ಅತ್ಯಾಚಾರ ನಡೆದ ಬಳಿಕ, ಅಂತಹ ಎರಡನೇ ಘಟನೆ ಇದೀಗ ವರದಿಯಾಗಿದೆ.
ಪಶ್ಚಿಮ ದಂಡೆ ಸ್ವಾಧೀನಪಡಿಸಿಕೊಂಡರೆ ಇಸ್ರೇಲ್ ಅಮೆರಿಕದ ಬೆಂಬಲ ಕಳೆದುಕೊಳ್ಳಲಿದೆ : ಟ್ರಂಪ್ ಎಚ್ಚರಿಕೆ


