“ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತಾದ ಸರ್ವಪಕ್ಷ ಸಭೆಯು ಪ್ರಜಾಪ್ರಭುತ್ವವನ್ನು ರಕ್ಷಿಸುವ ಪ್ರಯತ್ನವಾಗಿದೆ, ಎಲ್ಲಾ ಪಕ್ಷಗಳು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಭೆಯಲ್ಲು ಭಾಗವಹಿಸಬೇಕು” ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಬುಧವಾರ ಕರೆಕೊಟ್ಟಿದ್ದಾರೆ.
ಆಡಳಿತಾರೂಢ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು ಎಸ್‌ಐಆರ್ ಅನ್ನು ವಿರೋಧಿಸುತ್ತಿವೆ, ಮುಂದಿನ ತಿಂಗಳು ಚುನಾವಣೆ ನಡೆಯಲಿರುವ ತಮಿಳುನಾಡು ಮತ್ತು ಇತರ ರಾಜ್ಯಗಳಲ್ಲಿ ಪರಿಷ್ಕರಣೆಯನ್ನು ಚುನಾವಣಾ ಆಯೋಗ ಇತ್ತೀಚೆಗೆ ಘೋಷಿಸಿದ ನಂತರ ಮುಂದಿನ ಕ್ರಮವನ್ನು ನಿರ್ಧರಿಸಲು ಸರ್ಕಾರ ಸರ್ವಪಕ್ಷ ಸಭೆಯನ್ನು ಕರೆದಿದೆ.
ಆಡಳಿತಾರೂಢ ಬಿಜೆಪಿಯು ತಮಿಳುನಾಡಿನ ಜನರ ಮತದಾನದ ಹಕ್ಕನ್ನು ‘ಕಿತ್ತುಕೊಳ್ಳಲು” ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
“ಈ ಹಂತದಿಂದ ನಾನು ಪುನರುಚ್ಚರಿಸುತ್ತೇನೆ, ಮತದಾನವು ಪ್ರಜಾಪ್ರಭುತ್ವದ ಆಧಾರವಾಗಿದೆ. ನಾವು ಅದನ್ನು ಯಾವ ಕಾರಣಕ್ಕೂ ತ್ಯಾಗ ಮಾಡುವುದಿಲ್ಲ. ಮತದಾನದ ಹಕ್ಕುಗಳನ್ನು ಕಸಿದುಕೊಳ್ಳುವ ಮತ್ತು ಮತ ಕಳ್ಳತನದಂತಹ ಬಿಜೆಪಿಯ ಪ್ರಯತ್ನಗಳ ವಿರುದ್ಧ ನಾವು ಜಯಿಸುತ್ತೇವೆ. ತಮಿಳುನಾಡಿನ ಜನರ ಮತದಾನದ ಹಕ್ಕುಗಳನ್ನು ರಕ್ಷಿಸುತ್ತೇವೆ” ಎಂದು ಹೇಳಿದ್ದಾರೆ.
“ಎಲ್ಲ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪ್ರಜಾಪ್ರಭುತ್ವವನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಈ ಪ್ರಯತ್ನದಲ್ಲಿ ಭಾಗವಹಿಸಬೇಕು” ಎಂದು ಸ್ಟಾಲಿನ್ ಪ್ರಸ್ತಾವಿತ ಸರ್ವಪಕ್ಷ ಸಭೆಯ ಬಗ್ಗೆ ಹೇಳಿದರು.
ಬಿಜೆಪಿಯ ಮೇಲಿನ ತಮ್ಮ ದಾಳಿಯನ್ನು ಮುಂದುವರಿಸಿದ ಸ್ಟಾಲಿನ್, “ಬಿಹಾರದಲ್ಲಿ ಏನಾಯಿತು ಎಂದು ನಮಗೆಲ್ಲರಿಗೂ ತಿಳಿದಿದೆ. ಸೋಲು ಸ್ಪಷ್ಟವಾದರೆ, ಆ ರಾಜ್ಯದಲ್ಲಿ ಮತದಾರರನ್ನು ತೆಗೆದುಹಾಕಲು ಬಿಜೆಪಿ ನಿರ್ಧರಿಸುತ್ತದೆ. ಅವರು ಇಲ್ಲಿ (ಎಸ್‌ಐಆರ್ ಮೂಲಕ) ಅದೇ ಸೂತ್ರವನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿದರು.
“ಬಿಜೆಪಿಯ ಈ ಪಿತೂರಿಯನ್ನು ನಾವು ಮೊದಲಿನಿಂದಲೂ ವಿರೋಧಿಸುತ್ತಿದ್ದೇವೆ. ಪ್ರಜಾಪ್ರಭುತ್ವದ ಅಡಿಪಾಯ ಮತದಾನದ ಹಕ್ಕುಗಳು ಎಂದು ನಾನು ಈ ಹಂತದಿಂದ ಮತ್ತೊಮ್ಮೆ ಪುನರುಚ್ಚರಿಸುತ್ತೇನೆ. ಯಾವುದೇ ಸಂದರ್ಭದಲ್ಲೂ ನಾವು ಅದನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ” ಎಂದು ಅವರು ಹೇಳಿದರು.
‘ಥರ್ಡ್ ಕ್ಲಾಸ್ ವಂಚಕನಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ’: ಅಸ್ಸಾಂ ಸಿಎಂಗೆ ಪ್ರಿಯಾಂಕ್ ಖರ್ಗೆ ತಿರುಗೇಟು


