ತನ್ನನ್ನು ತೆಲಂಗಾಣ ಹೈಕೋರ್ಟ್ ನ್ಯಾಯಾಧೀಶನಾಗಿ ನೇಮಿಸುವಂತೆ ನಿರ್ದೇಶನ ನೀಡಲು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ (ನ.3) ನಿರಾಕರಿಸಿದ್ದು, “ಇದು ವ್ಯವಸ್ಥೆಯ ಅಣಕ” ಎಂದಿದೆ.
ಸಿಜೆಐ ಬಿ.ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರ ಪೀಠದ ಮುಂದೆ ಜಿ.ವಿ ಸರ್ವಣ್ ಕುಮಾರ್ ಎಂಬವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಗೆ ಬಂದಿತ್ತು.
ಅರ್ಜಿ ಪರಿಗಣಿಸಲು ನಿರಾಕರಿಸಿದ ಸಿಜೆಐ, “ಇಂತಹ ಅರ್ಜಿಯು ಕೊಲಿಜಿಯಂ ವ್ಯವಸ್ಥೆ ಮತ್ತು ಸಂವಿಧಾನವನ್ನೇ ಅಪಹಾಸ್ಯ ಮಾಡುವ ಪ್ರಯತ್ನವಾಗಿದೆ” ಎಂದು ಹೇಳಿದ್ದಾರೆ.
“ನಾನು ಒಂದು ಕೆಲಸ ಮಾಡುತ್ತೇನೆ, ಕೊಲಿಜಿಯಂ ಸಭೆಗೆ ಮೂವರು ಹಿರಿಯ ನ್ಯಾಯಾಧೀಶರ ಪೀಠವನ್ನು ರಚಿಸುತ್ತೇನೆ… ಇದು ವ್ಯವಸ್ಥೆಯ ಅಣಕ! ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿಗಾಗಿ ಅರ್ಜಿ ಹಾಕೋದನ್ನು ಎಲ್ಲಾದರು ಕೇಳಿದ್ದೀರ? ಇದು ವ್ಯವಸ್ಥೆಯ ಅಣಕ!” ಎಂದು ಅರ್ಜಿ ತಿರಸ್ಕರಿಸುವ ವೇಳೆ ಸಿಜೆಐ ಹೇಳಿದ್ದಾರೆ.
ಇಂತಹ ಅರ್ಜಿಯನ್ನು ಒಪ್ಪಿಕೊಳ್ಳಬಾರದಿತ್ತು ಎಂದು ಅರ್ಜಿದಾರರ ಪರ ವಕೀಲರಿಗೆ ಹೇಳಿದ ಪೀಠ, “ನಿಮ್ಮ ಪರವಾನಗಿಯನ್ನು ರದ್ದುಗೊಳಿಸಬೇಕು” ಎಂದಿದೆ.
ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ : ಆರೋಪಿಗಳ ಪತ್ತೆಗೆ 7 ತಂಡ ರಚನೆ


