₹6,000 ಕೋಟಿ ಮೌಲ್ಯದ ಮಹಾದೇವ್ ಬೆಟ್ಟಿಂಗ್ ಆ್ಯಪ್ ಹಗರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ರವಿ ಉಪ್ಪಲ್ ನಾಪತ್ತೆಯಾಗಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದ ನಂತರ ಉಪ್ಪಲ್ ಅವರನ್ನು ಬಂಧಿಸಲಾಯಿತು. ಆದರೆ, 45 ದಿನಗಳ ನಂತರ ಅವರನ್ನು ಬಿಡುಗಡೆ ಮಾಡಲಾಯಿತು. ಬಾಕಿ ಇರುವ ಹಸ್ತಾಂತರ ಪ್ರಕ್ರಿಯೆಗಳಿಂದಾಗಿ ಅವರ ಮೇಲೆ ಕಣ್ಗಾವಲು ಇರಿಸಲಾಗಿತ್ತು.
ಅಕ್ಟೋಬರ್ 2024 ರಲ್ಲಿ, ಸಹ-ಪ್ರವರ್ತಕ ಸೌರಭ್ ಚಂದ್ರಕರ್ ಅವರನ್ನು ಯುಎಇಯಲ್ಲಿ ಇಂಟರ್‌ಪೋಲ್ ರೆಡ್ ನೋಟಿಸ್ ಆಧಾರದ ಮೇಲೆ ಬಂಧಿಸಲಾಯಿತು. ಆದರೆ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಛತ್ತೀಸ್‌ಗಢದಲ್ಲಿ ಭೂಪೇಶ್ ಬಾಘೇಲ್ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಹಾದೇವ್ ಬೆಟ್ಟಿಂಗ್ ಆ್ಯಪ್ ಹಗರಣ ಬೆಳಕಿಗೆ ಬಂದಿತು. ಛತ್ತೀಸ್‌ಗಢದ ಹಲವಾರು ಉನ್ನತ ಶ್ರೇಣಿಯ ರಾಜಕಾರಣಿಗಳು, ಅಧಿಕಾರಿಗಳು ಅಕ್ರಮ ಜಾಲ ಮತ್ತು ಅದರ ಹಣಕಾಸಿನ ವ್ಯವಹಾರಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಆರೋಪಿಸಿದ ನಂತರ ಈ ಹಗರಣ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಿತು.
ಅವರ ಹಸ್ತಾಂತರವನ್ನು ತಡೆಹಿಡಿಯಲಾಗಿದೆ ಎಂದು ವರದಿಯಾಗಿದೆ. ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯನ್ನು ಇಡಿ ನಡೆಸುತ್ತಿದ್ದು, ಕೇಂದ್ರ ತನಿಖಾ ದಳ (ಸಿಬಿಐ) ಈ ಪ್ರಕರಣವನ್ನು ಛತ್ತೀಸ್‌ಗಢ ಪೊಲೀಸರಿಂದ ವಹಿಸಿಕೊಂಡಿದೆ. ಸಂಸ್ಥೆ ಸಲ್ಲಿಸಿದ ಎಫ್‌ಐಆರ್‌ನಲ್ಲಿ ಉಪ್ಪಲ್, ಚಂದ್ರಕರ್ ಮತ್ತು ಇತರರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಮಹಾದೇವ್ ಬೆಟ್ಟಿಂಗ್ ಆ್ಯಪ್ ಹಗರಣದ ಹಿನ್ನೆಲೆ
ಮಹಾದೇವ್ ಆ್ಯಪ್ ಅನ್ನು 2018 ರಲ್ಲಿ ಪ್ರಾರಂಭಿಸಲಾಯಿತು. ಅವರು ಪ್ರತಿದಿನ 200 ಕೋಟಿ ರೂ.ಗಳ ಲಾಭವನ್ನು ಗಳಿಸಿದ್ದಾರೆ ಎಂದು ವರದಿಯಾಗಿದೆ. ದೈನಂದಿನ ಬೆಟ್ಟಿಂಗ್ ಹೆಚ್ಚಾಗಿ 240 ಕೋಟಿ ರೂ.ಗಳನ್ನು ದಾಟುತ್ತದೆ.
ದುಬೈನಿಂದ ನಡೆಯುತ್ತಿದ್ದ ಕಾರ್ಯಾಚರಣೆಗಳಲ್ಲಿ ಸುಮಾರು 3,500 ಜನರು ಭಾಗಿಯಾಗಿದ್ದರು. ಆದರೆ ಛತ್ತೀಸ್‌ಗಢ, ಭಾರತದ ಇತರ ಭಾಗಗಳು, ಮಲೇಷ್ಯಾ ಮತ್ತು ಥೈಲ್ಯಾಂಡ್‌ನ ವಿವಿಧ ನಗರಗಳಿಂದ ಕಾಲ್ ಸೆಂಟರ್‌ಗಳನ್ನು ನಿರ್ವಹಿಸಲಾಗುತ್ತಿತ್ತು.
ಚಂದ್ರಕರ್ ಮತ್ತು ಉಪ್ಪಲ್ ಸೇರಿ ಪೊಲೀಸರು, ಅಧಿಕಾರಿಗಳು ಮತ್ತು ರಾಜಕಾರಣಿಗಳೊಂದಿಗೆ ಸಂಪರ್ಕವನ್ನು ಹೊಂದಿದ್ದರು. ಅಪ್ಲಿಕೇಶನ್ ತನಿಖಾ ಸಂಸ್ಥೆಗಳ ರಾಡಾರ್‌ಗಳಿಂದ ದೂರವಿರುವುದನ್ನು ಖಚಿತಪಡಿಸಿಕೊಳ್ಳಲು ನಿಯಮಿತವಾಗಿ ಲಂಚ ಪಾವತಿ ಮಾಡುತ್ತಿದ್ದರು ಎನ್ನಲಾಗಿದೆ.
ಕಾಂಗ್ರೆಸ್ ನಾಯಕ ಮತ್ತು ಆಗಿನ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ವಿರುದ್ಧ 508 ಕೋಟಿ ರೂ. ಪಡೆದ ಆರೋಪ ಹೊರಿಸಲಾಗಿದೆ. ಈ ಪ್ರಕರಣದಲ್ಲಿ ನಾನು ಭಾಗಿಯಾಗಿಲ್ಲ ಎಂದು ಬಾಘೇಲ್ ನಿರಾಕರಿಸಿದ್ದಾರೆ.
ವಿಶ್ವಕಪ್ ಸೆಮಿಫೈನಲ್ ಗೆಲುವಿನ ನಂತರ ಜೀಸಸ್‌ಗೆ ಧನ್ಯವಾದ; ಆನ್‌ಲೈನ್ ದ್ವೇಷಕ್ಕೆ ಗುರಿಯಾದ ಜೆಮಿಮಾ ರೊಡ್ರಿಗಸ್


