ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ಬಿಹಾರದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವು ದಾಖಲಿಸಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಇದನ್ನು ಕೇರಳದ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಹಾರದಲ್ಲಿ ನಕಲಿ ಮತದಾರರ ಮೂಲಕ ಕಾಂಗ್ರೆಸ್ ಮತ್ತು ಆರ್‌ಜೆಡಿ ಪಕ್ಷಗಳು ಚುನಾವಣೆ ಗೆಲ್ಲುತ್ತಿತ್ತು. ಎಸ್‌ಐಆರ್‌ನಲ್ಲಿ ನಕಲಿ ಮತದಾರರು ತೆಗೆದು ಹಾಕಿದ ಬಳಿಕ ಈಗ ಪರಿಣಾಮ ಗೊತ್ತಾಗುತ್ತಿದ್ದೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್, ಸಿಪಿಐ (ಎಂ) ಪಕ್ಷಗಳು ಎಸ್‌ಐಆರ್‌ಗೆ ವಿರೋಧ ವ್ಯಕ್ತಪಡಿಸುತ್ತಿವೆ” ಎಂದು ಹೇಳಿದ್ದಾರೆ.
‘ಮತ ಬ್ಯಾಂಕ್ ರಾಜಕೀಯ’ ಮತ್ತು ‘ಆಡಳಿತ ವಿರೋಧಿ ಅಲೆಯ ಸಾಂಪ್ರದಾಯಿಕ ಪ್ರಚಾರ’ದ ಸಮಯ ಮುಗಿದಿದೆ. ಜನರು ಅಭಿವೃದ್ಧಿ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಒದಗಿಸುವ ಸರ್ಕಾರಕ್ಕೆ ಮತ ಹಾಕುತ್ತಿದ್ದಾರೆ ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ಕೇರಳದ ಜನರು ಕೂಡ ಉತ್ತಮ ಆಡಳಿತವನ್ನು ನೀಡುವ ಸರ್ಕಾರವನ್ನು ಪಡೆಯಬೇಕು ಎಂದಿದ್ದಾರೆ.
One other clear message from the Bihar elections.
SIR is essential to clean up our electoral rolls and remove fake voters.
Clean Electoral rolls are cornerstone of our democratic process.
Some parties have survived and thrived through this type of illegal vote stuffing -… pic.twitter.com/TS9DrVzP56
— Rajeev Chandrasekhar 🇮🇳 (@RajeevRC_X) November 15, 2025
ಬಿಹಾರದ ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ಎಸ್‌ಐಆರ್‌ನಲ್ಲಿ ಮತದಾರರ ಪಟ್ಟಿಯಿಂದ ಸುಮಾರು 65 ಲಕ್ಷ ಹೆಸರುಗಳನ್ನು ಅಳಿಸಲಾಗಿದೆ. ಎಸ್‌ಐಆರ್ ನಂತರ ಪ್ರಕಟವಾದ ಅಂತಿಮ ಮತದಾರರ ಪಟ್ಟಿಯಲ್ಲಿ ಹಲವಾರು ವ್ಯತ್ಯಾಸಗಳನ್ನು ವಿರೋಧ ಪಕ್ಷಗಳು ಎತ್ತಿ ತೋರಿಸಿವೆ.
ಎಸ್‌ಐಆರ್ ಮೂಲಕ ಬಿಹಾರದ ಕಿಶನ್‌ಗಂಜ್, ಕಟಿಹಾರ್, ಅರಾರಿಯಾ ಮತ್ತು ಪೂರ್ಣಿಯಾಗಳನ್ನು ಒಳಗೊಂಡಿರುವ ಸೀಮಾಂಚಲ್‌ನಲ್ಲಿ ಅತಿ ಹೆಚ್ಚು ಶೇ. 7.7ರಷ್ಟು ಮತದಾರರು ಪಟ್ಟಿಯಿಂದ ಅಳಿಸಲ್ಪಟ್ಟಿದ್ದಾರೆ. ಮತ್ತೊಂದೆಡೆ, ಮಗಧ್ ವಿಭಾಗದ ಏಳು ಜಿಲ್ಲೆಗಳಲ್ಲಿ ಶೇ. 2.6 ರಷ್ಟು ಮತದಾರರು ಸೇರ್ಪಡೆಯಾಗಿದ್ದಾರೆ.
ಎಸ್‌ಐಆರ್ ಅನ್ನು ಪ್ರಶ್ನಿಸಿದ ಹಲವಾರು ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿವೆ.
ಬಿಹಾರದ ಎಸ್‌ಐಆರ್ ಬಳಿಕ ಚುನಾವಣಾ ಆಯೋಗ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ 9 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳ ಎಸ್‌ಐಆರ್ ಘೋಷಿಸಿದೆ. ಇದರ ವಿರುದ್ದ ತಮಿಳುನಾಡು, ಪಶ್ಚಿಮ ಬಂಗಾಳ ಈಗಾಗಲೇ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಬಿಹಾರ ಚುನಾವಣೆ ‘ಆರಂಭದಿಂದಲೂ ನ್ಯಾಯಯುತವಾಗಿರಲಿಲ್ಲ’ : ರಾಹುಲ್ ಗಾಂಧಿ


