Homeಕರ್ನಾಟಕದೇವನಹಳ್ಳಿ| 'ಷರತ್ತುಗಳಿಲ್ಲದೆ ಭೂಸ್ವಾಧೀನ ಕೈಬಿಡಿ..'; ಚನ್ನರಾಯಪಟ್ಟಣ ರೈತರ ಆಗ್ರಹ

ದೇವನಹಳ್ಳಿ| ‘ಷರತ್ತುಗಳಿಲ್ಲದೆ ಭೂಸ್ವಾಧೀನ ಕೈಬಿಡಿ..’; ಚನ್ನರಾಯಪಟ್ಟಣ ರೈತರ ಆಗ್ರಹ

- Advertisement -
- Advertisement -

ದೇವನಹಳ್ಳಿಯ 13 ಗ್ರಾಮಗಳ 1,777 ಎಕರೆ ಭೂಸ್ವಾಧೀನ ಪ್ರಕ್ರಿಯೆಗೆ ರೈತರು ಮತ್ತು ಸಂಘಟನೆಗಳ ತೀವ್ರ ಪ್ರತಿರೋಧದ ನಂತರ ಸರ್ಕಾರವು ಜುಲೈ, 15, 2025 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭೂಸ್ವಾಧೀನವನ್ನು ಸಂಪೂರ್ಣವಾಗಿ ಕೈಬಿಡಲಾಗುವುದು, ರೈತರ ಇಚ್ಛೆಯಂತೆ ಕೃಷಿ ಭೂಮಿಯನ್ನಾಗಿ ಮುಂದುವರೆಸಲಾಗುವುದು ಎಂದು ಘೋಷಿಸಿರುವುದರಿಂದ ಯಾವುದೇ ಷರತ್ತುಗಳಿಲ್ಲದೆ ಭೂ ಸ್ವಾಧೀನವನ್ನು ರದ್ದುಪಡಿಸಬೇಕೆಂದು ರೈತರು ಸರ್ಕಾರವನ್ನು ಒತ್ತಾಯಿಸಿದರು

ಚನ್ನರಾಯಪಟ್ಟಣದ ಧರಣಿ ಸ್ಥಳದಲ್ಲಿ ಇಂದು ನಡೆದ ಸಭೆಯಲ್ಲಿ ನೂರಾರು ರೈತರು ಮತ್ತು ಹೋರಾಟಗಾರರು ಭಾಗವಹಿಸಿದ್ದರು.

ಈ ಬಗ್ಗೆ ಕಳೆದ 1339 ದಿನಗಳಿಂದ ನಡೆಯುತ್ತಿರುವ ಧರಣಿ ಸ್ಥಳದಲ್ಲಿ ಸಭೆ ನಡೆಸಿದ ರೈತರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಶಿಫಾರಾಸ್ಸಿನ ಪತ್ರದ ಬಗ್ಗೆ ಚರ್ಚಿಸಿದ್ದು ಶಾಶ್ವತ ವಿಶೇಷ ಕೃಷಿ ವಲಯ ( permanent special agricultural zone ) ಎಂದು ಘೋಷಿಸುವ ಮತ್ತು ಪಹಣಿಯಲ್ಲಿ ದಾಖಲಿಸುವ, ನಿಯಮಗಳನ್ನು ರೂಪಿಸಲು ಸಮಿತಿಯನ್ನು ರಚಿಸಲು ಸಲ್ಲಿಸಿರುವ ಪ್ರಸ್ತಾವನೆಗಳನ್ನು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯು ತೀವ್ರವಾಗಿ ವಿರೋಧಿಸುತ್ತದೆ ಎಂದರು.

ಸರ್ಕಾರದ ನಿರ್ಧಾರವನ್ನು ಹೋರಾಟ ಸಮಿತಿ ಪ್ರಬಲವಾಗಿ ಖಂಡಿಸುತ್ತದೆ. ಆದ್ದರಿಂದ, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಘೋಷಿಸಿದ ರೀತಿಯಲ್ಲಿಯೇ ಕೃಷಿ ಭೂಮಿಯನ್ನು ಯಾವುದೇ ಷರತ್ತುಗಳಿಲ್ಲದೆ ರೈತರಿಗೆ ಉಳಿಸಬೇಕೆಂದು ಒತ್ತಾಯಿಸಿದರು.

ಈ‌ ಸಂಧರ್ಭದಲ್ಲಿ ಮಾತನಾಡಿದ ಹೋರಾಟಗಾರ್ತಿ ಪ್ರಭಾ ಬೆಳವಂಗಲ,”ಇದು ರೈತರ ಹಿತರಕ್ಷಣೆಯಲ್ಲ, ಬದಲಿಗೆ ಭೂಮಿ ನೀಡದ ರೈತರ ಮೇಲೆ ಸೇಡು ತೀರಿಸಿಕೊಳ್ಳುವ ತಂತ್ರವಾಗಿದೆ. ‘ಶಾಶ್ವತ ವಿಶೇಷ ಕೃಷಿ ವಲಯ’ದ ಹೆಸರಿನಲ್ಲಿ ರೈತರ ಕೃಷಿ ಭೂಮಿಯ ಮೌಲ್ಯವನ್ನು ಕುಗ್ಗಿಸಿ, ಅವರ ಮೇಲೆ ಒತ್ತಡ ಹೇರಿ ಭೂಮಿಯನ್ನು ಕಸಿಯುವ ಹುನ್ನಾರ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸಂಚಾಲಕ ಕಾರಳ್ಳಿ ಶ್ರೀನಿವಾಸ್ ಮಾತನಾಡಿ, “ಸರ್ಕಾರವು ಯಾವುದೇ ರೀತಿಯ ನಿರ್ಬಂಧಗಳನ್ನು ಹೇರದೆ, 13 ಗ್ರಾಮಗಳ 1,777 ಎಕರೆ ಭೂಮಿಯನ್ನು ಪ್ರಸ್ತುತ ಇರುವಂತೆ ಕೃಷಿ ವಲಯವನ್ನಾಗಿ ಮುಂದುವರಿಸಿ, ಕೂಡಲೇ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡುವ ಅಧಿಕೃತ ಆದೇಶವನ್ನು ಹೊರಡಿಸಬೇಕು” ಎಂದು ಒತ್ತಾಯಿಸಿದರು.

ಹೋರಾಟ ಸಮಿತಿಯ ಮುಖಂಡ ನಲ್ಲಪನಹಳ್ಳಿ ನಂಜಪ್ಪ ಮಾತನಾಡಿ, “ಶಾಶ್ವತ ವಿಶೇಷ ಕೃಷಿ ವಲಯ’ದ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದು ಅನಗತ್ಯವಾಗಿ ರೈತರಿಗೆ ಹಿಂಸೆ ಮತ್ತು ಕಿರುಕುಳ ನೀಡುವುದನ್ನು ಬಿಟ್ಟು ಕಳೆದ ಮೂರುವರೆ ವರ್ಷಗಳಿಂದ ಅತಂತ್ರವಾಗಿ ಬದುಕುತ್ತಿರುವ ನಮ್ಮಗಳಿಗೆ ಈ ಭೂಸ್ವಾಧೀನವನ್ನು ರದ್ದುಪಡಿಸಿ ನೆಮ್ಮದಿಯಿಂದ ಕೃಷಿ ಚಟುವಟಿಕೆ ನಡೆಸಲು ಅವಕಾಶ ಕಲ್ಪಿಸಬೇಕು” ಎಂದರು.

ರೈತ ಮಹಿಳೆ ವೆಂಕಟಮ್ಮ ಮಾತನಾಡಿ, ಒಂದುವೇಳೆ ಶಾಶ್ವತ ಕೃಷಿ ವಲಯ ಎಂದು ಘೋಷಿಸಿದ್ದೆ ಆದರೆ, ನಾವುಗಳು ತೀವ್ರ ತರವಾದ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ಅಶ್ಥತಪ್ಪ, ತಿಮ್ಮರಾಯಪ್ಪ, ಗೋಪಿನಾಥ್, ವೆಂಕಟರಮಣಪ್ಪ, ದೇವರಾಜು, ಲೋಕೇಶ್, ನಂಜೇಗೌಡ, ಮುನಿರಾಜು, ಮುನಿಷಾಮಪ್ಪ ಮುಕುಂದ, ಶ್ರೀನಿವಾಸ್, ಪ್ರಮೋದ್, ಗೋಪಾಲಗೌಡ, ಕೃಷ್ಣಪ್ಪ, ನಾರಾಯಣಮ್ಮ, ಲಕ್ಷ್ಮಮ್ಮ, ಮಂಜುನಾಥ್, ವೆಂಕಟೇಶ್ ಮುನಿವೆಂಕಟಮ್ಮ, ಪಿಳ್ಳಪ್ಪ, ಕೃಷ್ಣಪ್ಪ, ಸೇರಿದಂತೆ 13 ಹಳ್ಳಿಗಳ ರೈತ ಮುಖಂಡರು ಭಾಗವಹಿಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ರದ್ದಾದ ನೋಟುಗಳ ದುರುಪಯೋಗ; ಅಂಚೆ ಸಿಬ್ಬಂದಿಗೆ 2 ವರ್ಷ ಜೈಲು ಶಿಕ್ಷೆ

ನೋಟು ರದ್ದತಿಯ ಸಂದರ್ಭದಲ್ಲಿ 27.27 ಲಕ್ಷ ರೂ.ಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ವಿಶೇಷ ಸಿಬಿಐ ನ್ಯಾಯಾಲಯವು ಅಂಚೆ ಇಲಾಖೆಯ ಇಬ್ಬರು ಅಧಿಕಾರಿಗಳಿಗೆ ತಲಾ 65,000 ರೂ.ಗಳ ದಂಡದೊಂದಿಗೆ ಎರಡು ವರ್ಷಗಳ ಕಠಿಣ ಜೈಲು...

ಮಹಿಳೆ ಮತ ಚಲಾಯಿಸುವಾಗ ಮತಗಟ್ಟೆ ಪ್ರವೇಶಿಸಿದ ಶಾಸಕ : ತನಿಖೆಗೆ ಆದೇಶ

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಮಂಗಳವಾರ (ಡಿ.2) ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಂದರ್ಭದಲ್ಲಿ ಮಹಿಳೆಯೊಬ್ಬರು ಮತ ಚಲಾಯಿಸುತ್ತಿದ್ದಾಗ ಶಿವಸೇನಾ ಶಾಸಕ ಸಂತೋಷ್ ಬಂಗಾರ್ ಮತಗಟ್ಟೆಗೆ ಪ್ರವೇಶಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದ್ದು, ಈ ಕುರಿತು ಚುನಾವಣಾ...

ಅಸ್ಸಾಂ| ಕಾರು ಸಹಿತ ಮುಳುಗುತ್ತಿದ್ದ ಏಳು ಜೀವಗಳ ರಕ್ಷಣೆ; ಮಸೀದಿ ಧ್ವನಿವರ್ಧಕದ ಮೂಲಕ ಗ್ರಾಮಸ್ಥರನ್ನು ಎಚ್ಚರಿಸಿದ ಇಮಾಮ್

ನೀರಿನಲ್ಲಿ ಮುಳುಗುತ್ತಿರುವ ವಾಹನದಲ್ಲಿ ಸಿಲುಕಿದ್ದ ಏಳು ಜನರನ್ನು ರಕ್ಷಿಸಲು ಮುಂಜಾನೆ ಮಸೀದಿ ಮೈಕ್‌ ಬಳಸಿ ಇಡೀ ಗ್ರಾಮವನ್ನು ಎಚ್ಚರಿಸಿದ ಅಸ್ಸಾಂನ ಮುಸ್ಲಿಂ ಧರ್ಮಗುರು ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಅಸ್ಸಾಂನ ಶ್ರೀಭೂಮಿ ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ...

ಪ್ರತಿಪಕ್ಷಗಳ ಪ್ರತಿಭಟನೆಗೆ ಮಣಿದ ಕೇಂದ್ರ : ಡಿ.9ರಂದು ಸಂಸತ್ತಿನಲ್ಲಿ ಎಸ್‌ಐಆರ್ ಚರ್ಚೆ

ಸಂಸತ್ತಿನ ಉಭಯ ಸದನಗಳಲ್ಲಿ ಎರಡು ದಿನಗಳಿಂದ ಪ್ರತಿಪಕ್ಷಗಳು ನಡೆಸಿದ ತೀವ್ರ ಪ್ರತಿಭಟನೆಗೆ ಕೇಂದ್ರ ಸರ್ಕಾರ ಮಣಿದಿದೆ. ಡಿಸೆಂಬರ್ 9ರಂದು ಚುನಾವಣಾ ಸುಧಾರಣೆಗಳು ಎಂಬ ವಿಷಯದ ಅಡಿಯಲ್ಲಿ ಎಸ್‌ಐಆರ್ ಕುರಿತು ಚರ್ಚೆ ನಡೆಸಲು ಒಪ್ಪಿಕೊಂಡಿದೆ. ವರದಿಗಳ...

‘ಸಂಚಾರ್ ಸಾಥಿ ಆ್ಯಪ್’ ಕಡ್ಡಾಯವಲ್ಲ, ಅಳಿಸಬಹುದು: ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸ್ಪಷ್ಟನೆ  

‘ಸಂಚಾರ್ ಸಾಥಿ’ ಅಪ್ಲಿಕೇಶನ್ ಅನ್ನು ಸಕ್ರಿಯಗೊಳಿಸುವುದು ಕಡ್ಡಾಯವಲ್ಲ, ನಿಮಗೆ ಬೇಡವೆಂದಾಗ ಅದನ್ನು ಅಳಿಸಬಹುದು ಎಂದು ದೂರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ.  ನವೆಂಬರ್ 28 ರಂದು, ಟೆಲಿಕಾಂ ಇಲಾಖೆ ಭಾರತದಲ್ಲಿ...

ಉತ್ತರ ಪ್ರದೇಶ| ಊಟದ ಕೌಂಟರ್‌ನಲ್ಲಿ ‘ಬೀಫ್‌ ಕರಿ’ ಲೇಬಲ್‌’; ಮದುವೆ ಆರತಕ್ಷತೆ ಅಸ್ತವ್ಯಸ್ತ

ಉತ್ತರ ಪ್ರದೇಶದ ಅಲಿಘರ್‌ನ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದ ವಿವಾಹದ ಆರತಕ್ಷತೆಯಲ್ಲಿ ಇಬ್ಬರು ಅತಿಥಿಗಳು, ಆಹಾರ ಕೌಂಟರ್‌ನಲ್ಲಿ ಬರೆದಿದ್ದ 'ಬೀಫ್‌ ಕರಿ' ಎಂಬ ಲೇಬಲ್‌ಗೆ ಆಕ್ಷೇಪ ವ್ಯಕ್ತಪಡಿಸಿದ ನಂತರ ಸಮಾರಂಭ...

‘ಸಂಚಾರ್ ಸಾಥಿ’ ಆ್ಯಪ್ ಕಡ್ಡಾಯ | ಕೇಂದ್ರದ ಆದೇಶ ವಿರೋಧಿಸಲು ಮುಂದಾದ ಆ್ಯಪಲ್ : ವರದಿ

ಸ್ಮಾರ್ಟ್‌ಫೋನ್ ತಯಾರಕರು ಎಲ್ಲಾ ಹೊಸ ಮೊಬೈಲ್‌ ಫೋನ್‌ಗಳಲ್ಲಿ ಸರ್ಕಾರಿ ಸ್ವಾಮ್ಯದ 'ಸಂಚಾರ್ ಸಾಥಿ' ಆ್ಯಪ್ ಪ್ರಿ ಇನ್‌ಸ್ಟಾಲ್ (Pre-Install) ಮಾಡಬೇಕು ಮತ್ತು ಬಳಕೆದಾರರು ಅದನ್ನು ಡಿಲಿಟ್ ಮಾಡದಂತೆ ನೋಡಿಕೊಳ್ಳಬೇಕು ಎಂಬ ಕೇಂದ್ರ ಸರ್ಕಾರದ...

ಬಾಂಗ್ಲಾದೇಶಿಗರು ಎಂಬ ಆರೋಪ : ಬಂಗಾಳದ ನಾಲ್ವರು ಮುಸ್ಲಿಂ ವ್ಯಾಪಾರಿಗಳಿಗೆ ಒಡಿಶಾ ತೊರೆಯಲು 72 ಗಂಟೆಗಳ ಗಡುವು

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ನಾಲ್ವರು ಮುಸ್ಲಿಂ ವ್ಯಾಪಾರಿಗಳನ್ನು ಬಾಂಗ್ಲಾದೇಶಿಯರು ಮತ್ತು ರೋಹಿಂಗ್ಯಾ ವಲಸಿಗರು ಎಂದು ಆರೋಪಿಸಿ ಒಡಿಶಾದ ನಯಾಗಢವನ್ನು ತೊರೆಯಲು 72 ಗಂಟೆಗಳ ಗಡುವು ನೀಡಲಾಗಿದೆ ಎಂದು ದಿ ಟೆಲಿಗ್ರಾಫ್ ಮಂಗಳವಾರ...

‘ನಮ್ಮಲ್ಲಿ ಭಿನ್ನಾಭಿಪ್ರಾಯಗಳಿಲ್ಲ, ಒಗ್ಗಟ್ಟಿನಿಂದ ಇದ್ದೇವೆ: ನಾನು, ಡಿ.ಕೆ. ಶಿವಕುಮಾರ್ ಸಹೋದರರಿದ್ದಂತೆ’: ಸಿಎಂ ಸಿದ್ದರಾಮಯ್ಯ

‘ನಾನು ಹಾಗೂ ಉಪಮುಖ್ಯಮಂತ್ರಿಗಳು ಸಹೋದರರಿದ್ದಂತೆ, ಒಂದೇ ಪಕ್ಷದಲ್ಲಿದ್ದು, ಒಂದೇ ಸಿದ್ಧಾಂತ ನಂಬಿಕೊಂಡಿದ್ದೇವೆ, 2028ರ ಚುನಾವಣೆಯಲ್ಲಿಯೂ ಒಟ್ಟಿಗೆ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ಡಿಸೆಂಬರ್ 2, ಮಂಗಳವಾರ ಉಪಮುಖ್ಯಮಂತ್ರಿ...

ಪೋಕ್ಸೊ ಪ್ರಕರಣ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಚಾರಣೆಗೆ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ಪೋಕ್ಸೊ ಪ್ರಕರಣದ ಮೊದಲ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಬೆಂಗಳೂರಿನ ಎಫ್‌ಟಿಎಸ್‌ ವಿಶೇಷ ಸೆಷನ್ಸ್‌ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್‌ ಹಾಗೂ ವಿಚಾರಣಾ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್‌...