ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17) ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ‘ದಿ ವೈರ್’ ಆರೋಪಿಸಿದೆ.
“ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿರುವ ಅಲಿ ಅವರ ನಿವಾಸದಿಂದ ಪೊಲೀಸರು ಫೋನ್ ಅನ್ನು ವಶಪಡಿಸಿಕೊಂಡರು. ಪೊಲೀಸ್ ಕ್ರಮವು ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಸ್ಥಳೀಯ ಆಡಳಿತವು ನಮ್ಮ ವರದಿಗಾರನನ್ನು ಬೆದರಿಸಲು ಮಾಡಿದ ಪ್ರಯತ್ನವಾಗಿದೆ. ಇದು ರಾಜ್ಯದ ಪತ್ರಕರ್ತರ ಮೇಲೆ ವ್ಯವಸ್ಥಿತ ಕಿರುಕುಳದ ಸಂಕೇತವಾಗಿದೆ” ಎಂದು ದಿ ವೈರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕ್ರಮಕ್ಕೆ ಕಾರಣ ಮತ್ತು ಪ್ರಥಮ ಮಾಹಿತಿ ವರದಿ (ಎಫ್‌ಐಆರ್), ಪ್ರಕರಣ, ವಾರಂಟ್ ಅಥವಾ ನ್ಯಾಯಾಲಯದ ಆದೇಶದ ವಿವರಗಳನ್ನು ನೀಡದೆ ಪೊಲೀಸರು ಅಲಿ ಅವರ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಸುದ್ದಿ ಪೋರ್ಟಲ್ ಆರೋಪಿಸಿದೆ. “ಸುಪ್ರೀಂ ಕೋರ್ಟ್ ಕೇಂದ್ರ ಸಂಸ್ಥೆಗಳಿಗೆ ನೀಡಿದ ನಿರ್ದೇಶನಗಳಿಗೆ ಮತ್ತು ವಶಪಡಿಸಿಕೊಂಡ ಎಲೆಕ್ಟ್ರಾನಿಕ್ ಸಾಧನಗಳ ಸಮಗ್ರತೆಯನ್ನು ಕಾಪಾಡುವ ಗುರಿಯನ್ನು ಹೊಂದಿರುವ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಮಾನದಂಡಗಳಿಗೆ ವಿರುದ್ಧವಾಗಿ, ಅವರು ಜಹಾಂಗೀರ್ ಅಲಿಯಿಂದ ವಶಪಡಿಸಿಕೊಂಡ ಫೋನ್‌ನ ಮೌಲ್ಯ ಒದಗಿಸಲಿಲ್ಲ” ಎಂದು ಸಂಸ್ಥೆ ಹೇಳಿದೆ.
ಯಾವುದೇ ಟ್ಯಾಂಪರಿಂಗ್ ಅನ್ನು ಪತ್ತೆಹಚ್ಚಲು ಅನುವು ಮಾಡಿಕೊಡುವ ಡೇಟಾದಿಂದ ಉತ್ಪತ್ತಿಯಾಗುವ ವಿಶಿಷ್ಟ ಡಿಜಿಟಲ್ ಫಿಂಗರ್‌ಪ್ರಿಂಟ್ ಆಗಿರುವ ‘ಹ್ಯಾಶ್ ಮೌಲ್ಯ’ವನ್ನು ದಾಖಲಿಸುವುದು, ಪೋನ್ ಪೊಲೀಸರ ಬಂಧನದಲ್ಲಿರುವ ಅವಧಿಯಲ್ಲಿ ಅವರ ಸಾಧನಕ್ಕೆ ಯಾವುದೇ ಮಾಹಿತಿಯನ್ನು ಸೇರಿಸಲಾಗುವುದಿಲ್ಲ ಅಥವಾ ತೆಗೆದುಹಾಕಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಿರ್ಣಾಯಕವಾಗಿದೆ ಎಂದು ‘ದಿ ವೈರ್’ ಒತ್ತಿ ಹೇಳಿದೆ
ಕಿಶ್ತ್ವಾರ್‌ನಲ್ಲಿರುವ ರಾಟ್ಲೆ ಜಲವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಬಗ್ಗೆ ಪತ್ರಕರ್ತ ವರದಿ ಮಾಡುತ್ತಿದ್ದ ಸಮಯದಲ್ಲಿ ಅಲಿ ಅವರ ಫೋನ್ ವಶಪಡಿಸಿಕೊಳ್ಳಲಾಗಿದೆ. ಅಲಿ ಅವರ ಫೋನ್ ಅನ್ನು ತಕ್ಷಣವೇ ಹಿಂತಿರುಗಿಸಬೇಕು ಎಂದು ಪೋರ್ಟಲ್ ಒತ್ತಾಯಿಸಿತು.
ಡಿಸೆಂಬರ್ 18 ರ ಗುರುವಾರ, ಪತ್ರಕರ್ತ ಸಲಿ ಅವರನ್ನು ಪೊಲೀಸರು ಠಾಣೆಗೆ ಕರೆಸಿದ್ದು, ಅಲ್ಲಿ ಅಧಿಕಾರಿಗಳು ಅವರ ಫೋನ್ ಅನ್ನು ಹಿಂತಿರುಗಿಸಿದ್ದಾರೆ ಎಂದು ತಿಳಿದುಬಂದಿದೆ.


