ಯಶಸ್ವೀ ಸಂಗೀತಗಾರನಾಗಿ ಹಲವು ಕೊಡುಗೆ ನೀಡಿದ್ದರೂ ಕೆಲವರಿಗೆ ಹೊರಗಿನವನು ಎಂಬ ಭಾವನೆ ಹೋಗಿಲ್ಲ. ಕಳೆದ ಎಂಟು ವರ್ಷಗಳಲ್ಲಿ ಬಾಲಿವುಡ್‌ನ ಕದ ಮುಚ್ಚಿದೆ ಎಂಬ ಬಗ್ಗೆ ಎ.ಆರ್. ರೆಹಮಾನ್ ಹೇಳಿಕೆಯನ್ನು ಹಿರಿಯ ಗೀತೆ ರಚನೆಕಾರ ಜಾವೇದ್ ಅಖ್ದರ್ ತಿರಸ್ಕರಿಸಿದ್ದಾರೆ.
“ಕಳೆದ ಎಂಟು ವರ್ಷಗಳಲ್ಲಿ ತನಗೆ ಹಿಂದಿ ಚಿತ್ರಗಳಲ್ಲಿ ಸಿಗಬೇಕಾದ ಅವಕಾಶಗಳು ಕೈತಪ್ಪುತ್ತಿವೆ. ಕೋಮುವಾದ ಇದಕ್ಕೆ ಮುಖ್ಯ ಕಾರಣವಾಗಿರಬಹುದು” ಎಂದು ರೆಹಮಾನ್ ಹೇಳಿದ್ದರು.
ಹಿಂದಿ ಚಲನಚಿತ್ರೋದ್ಯಮದಲ್ಲಿ ಕೆಲಸಗಳು ಕಡಿಮೆಯಾಗಿರುವ ಕುರಿತು ಎ.ಆರ್. ರೆಹಮಾನ್ ಅವರ ಇತ್ತೀಚಿನ ಹೇಳಿಕೆಗಳ ಹಿಂದೆ ಯಾವುದೇ ಕೋಮುವಾದಿ ಅಂಶ ಇಲ್ಲ ಎಂದು ಹಿರಿಯ ಗೀತರಚನೆಕಾರ ಜಾವೇದ್ ಅಖ್ತರ್ ಹೇಳಿದ್ದಾರೆ. ಬದಲಿಗೆ, ರೆಹಮಾನ್ ಅವರ ಜಾಗತಿಕ ಬೇಡಿಕೆಯೇ ಬಾಲಿವುಡ್ ನಿರ್ಮಾಪಕರು ಅವರನ್ನು ಸಂಪರ್ಕಿಸದಿರಲು ಕಾರಣವಿರಬಹುದು ಎಂದು ಹೇಳಿದ್ದಾರೆ.
“ನಾನೆಂದೂ ಮುಂಬೈನಲ್ಲಿ ಅಂತಹ ಪಕ್ಷಪಾತ ಅನುಭವಿಸಲಿಲ್ಲ. ಬಾಲಿವುಡ್‌ನಲ್ಲಿ ರೆಹಮಾನ್ ಸಾರ್ವತ್ರಿಕ ಗೌರವವನ್ನು ಹೊಂದಿದ್ದಾರೆ. ವ್ಯಾಪಕವಾದ ತಯಾರಿ ಅಗತ್ಯವಿರುವ ಬೃಹತ್ ಅಂತರರಾಷ್ಟ್ರೀಯ ಪ್ರದರ್ಶನಗಳಿಂದಾಗಿ ಜನರು ಅವರ ಲಭ್ಯತೆಯಿಲ್ಲ ಎಂದು ಭಾವಿಸುತ್ತಾರೆ” ಎಂದು ಪ್ರತಿಪಾದಿಸಿದರು.
“ಸಣ್ಣ ನಿರ್ಮಾಪಕರು ಸಹ ದೊಡ್ಡ ವ್ಯಕ್ತಿ ರೆಹಮಾನ್ ಅವರನ್ನು ಸಂಪರ್ಕಿಸಲು ಹಿಂಜರಿಯುತ್ತಾರೆ. ಇದರಲ್ಲಿ ಯಾವುದೇ ಕೋಮು ಅಂಶವಿಲ್ಲ” ಎಂದರು.


