Homeಮುಖಪುಟ2018-19ರಲ್ಲಿ ಬಿಜೆಪಿ ಆದಾಯದಲ್ಲಿ 135ರಷ್ಟು ಏರಿಕೆ : ಚುನಾವಣಾ ಬಾಂಡ್‌ಗಳ ಮೂಲಕವೇ ಹೆಚ್ಚು..

2018-19ರಲ್ಲಿ ಬಿಜೆಪಿ ಆದಾಯದಲ್ಲಿ 135ರಷ್ಟು ಏರಿಕೆ : ಚುನಾವಣಾ ಬಾಂಡ್‌ಗಳ ಮೂಲಕವೇ ಹೆಚ್ಚು..

- Advertisement -
- Advertisement -

ದೇಶದ ಆರು ರಾಷ್ಟ್ರೀಯ ಪಕ್ಷಗಳು 2018-19ನೇ ಸಾಲಿನಲ್ಲಿ ಚುನಾವಣಾ ಖರ್ಚು ವೆಚ್ಚ ಮತ್ತು ಆದಾಯದ ಕುರಿತು ಘೋಷಿಸಿಕೊಂಡಿರುವುದನ್ನು ವಿಶ್ಲೇಷಣೆ ನಡೆಸಿರುವ ಸರ್ಕಾರೇತರ ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ(ADR) ಎರಡು ವರ್ಷದ ಅವಧಿಯಲ್ಲಿ ಬಿಜೆಪಿ ಆದಾಯದಲ್ಲಿ ಶೇಕಡ 134.59ರಷ್ಟು ಹೆಚ್ಚಳವಾಗಿರುವುದನ್ನು ಗುರುತಿಸಿದೆ. 2018-19ರಲ್ಲಿ ಬಿಜೆಪಿಗೆ 2410.08 ಕೋಟಿ ರೂಪಾಯಿ ಆದಾಯ ಬಂದಿದ್ದು ಅದು ಆರು ರಾಷ್ಟ್ರೀಯ ಪಕ್ಷಗಳಿಗಿಂತ 65.16ರಷ್ಟು ಹೆಚ್ಚಾಗಿದೆ.

2018-19ರಲ್ಲಿ 2410 ಕೋಟಿ ಆದಾಯ ಬಂದಿದೆ ಎಂದು ಬಿಜೆಪಿ ಘೋಷಿಸಿಕೊಂಡಿದೆ. ಇದರಲ್ಲಿ ಚುನಾವಣೆಗಾಗಿ ಒಟ್ಟು ಆದಾಯದಲ್ಲಿ ಶೇ. 41.714ಷ್ಟು ಅಂದರೆ 1005.33 ಕೋಟಿ ವೆಚ್ಚ ಮಾಡಿದೆ ಎಂದು ಎಡಿಆರ್ ವಿಶ್ಲೇಷಣೆ ಮಾಡಿದೆ ಎಂದು ನ್ಯಾಷನಲ್ ಹೆರಾಲ್ಡ್ ವೆಬ್ ಸೈಟ್ ವರದಿ ಮಾಡಿದೆ.

ಇದೇ ಅವಧಿಯಲ್ಲಿ 918.03 ಕೋಟಿ ಆದಾಯ ಬಂದಿದೆ ಎಂದು ಕಾಂಗ್ರೆಸ್ ಘೋಷಿಸಿಕೊಂಡಿದ್ದು ಈ ಆದಾಯದಲ್ಲಿ ಶೇ 51.19ರಷ್ಟು ಅಂದರೆ 469.92 ಕೋಟಿ ರೂಪಾಯಿ ಚುನಾವಣೆಗಾಗಿ ವೆಚ್ಚ ಮಾಡಿದೆ. ಭಾರತೀಯ ಜನತಾ ಪಕ್ಷವನ್ನು ಬಿಟ್ಟರೆ ಆದಾಯ ಸಂಗ್ರಹದಲ್ಲಿ ಕಾಂಗ್ರೆಸ್ ಎರಡನೇ ಸ್ಥಾನ ಪಡೆದಿದೆ. ಅದಕ್ಕೆ 2018-19ರ ಅವಧಿಯಲ್ಲಿ ಎಲ್ಲಾ ಆರು ರಾಜಕೀಯ ಪಕ್ಷಗಳ ಒಟ್ಟು ಆದಾಯದ ಶೇ24.82ರಷ್ಟು ಆದಾಯ ಬಂದಿದೆ ಎಂದು ಅಂಕಿಅಂಶಗಳು ದೃಡಪಡಿಸಿವೆ.

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಸಿಪಿಎಂ, ಬಿಎಸ್.ಪಿ, ಟಿಎಂಸಿ ಮತ್ತು ಸಿಪಿಐ ದೇಶಾದ್ಯಂತ ಸಂಗ್ರಹಿಸಿದ ಒಟ್ಟು ಆದಾಯ 3698.66 ಕೋಟಿ ರೂಪಾಯಿ ಎಂದು ಘೋಷಿಸಲಾಗಿದೆ.

2017-18 ಮತ್ತು 2018-19ರ ನಡುವೆ ಬಿಜೆಪಿ ಆದಾಯ 134.59ರಷ್ಟು ಹೆಚ್ಚಳವಾಗಿದೆ. ಅಂದರೆ 1382.74ಕೋಟಿ ರೂ ಏರಿದೆ. 2017-18ರ ಅವಧಿಯಲ್ಲಿ 1,027.34 ಕೋಟಿ ರೂಪಾಯಿ ಇದ್ದುದು 2018-19ರಲ್ಲಿ 2410.08 ಕೋಟಿಗೆ ಏರಿದೆ. 2018-19ನೇ ಸಾಲಿನಲ್ಲಿ ಸ್ವಯಂ ಪ್ರೇರಿತ ದೇಣಿಗೆ 2354.02 ಕೋಟಿ ಎಂದು ಬಿಜೆಪಿ ಘೋಷಿಸಿಕೊಂಡಿದೆ. ಈ ಅವಧಿಯಲ್ಲಿ ಅದರ ಒಟ್ಟು ಆದಾಯ 97.67ರಷ್ಟು ಆಗಿದೆ.

ಕಾಂಗ್ರೆಸ್ ಪಕ್ಷಕ್ಕೆ 551.55 ಕೋಟಿ ರೂಪಾಯಿ ಗ್ರಾಂಟ್/ ದಾನ/ ದೇಣಿಗೆಯಿಂದ ಬಂದಿದೆ ಎಂದು ಘೋಷಿಸಿಕೊಂಡಿದೆ. ಇದು 2018-19ರ ಅವಧಿಯಲ್ಲಿ ಪಕ್ಷಕ್ಕೆ ಒಟ್ಟು ಆದಾಯದ ಶೇ.60.08ರಷ್ಟು ಅತಿಹೆಚ್ಚು ಆದಾಯ ಬಂದಿದೆ ಎಂದು ವಿಶ್ಲೇಷಿಸಲಾಗಿದೆ.

ಬಿಜೆಪಿ ಸಾಮಾನ್ಯ ಪ್ರಚಾರಕ್ಕಾಗಿ 792.39 ಕೋಟಿ ವೆಚ್ಚ ಮಾಡಿದ್ದರೆ, ಆಡಳಿತಾತ್ಮಕ ವೆಚ್ಚವಾಗಿ 178.35 ಕೋಟಿ ವೆಚ್ಚ ಮಾಡಿದೆ ಎಂದು ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ ವಿಶ್ಲೇಷಿಸಿದೆ .2018-19ರಲ್ಲಿ ಎಲ್ಲಾ ಆರು ರಾಷ್ಟ್ರೀಯಮಟ್ಟದ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಗಳ ಮೂಲಕ ಅತಿ ಹೆಚ್ಚು ದೇಣಿಗೆ ಬಂದಿದೆ. ಶೇ.52ರಷ್ಟಕ್ಕೂ ಹೆಚ್ಚಿನ ಆದಾಯ ಚುನಾವಣಾ ಬಾಂಡ್ ಗಳ ಮೂಲಕ ದಾನವಾಗಿ ರಾಜಕೀಯ ಪಕ್ಷಗಳಿಗೆ 1931.43 ಕೋಟಿ ರೂ ಹಣ ಬಂದಿದೆ. ಆದರೆ ಹಣ ನೀಡಿದ ದಾನಿಗಳ ಹೆಸರನ್ನು ಸಾರ್ವಜನಿಕರ ಮಾಹಿತಿಗೆ ಪ್ರಕಟಿಸಿಲ್ಲ.

2018-19ರಲ್ಲಿ ಚುನಾವಣಾ ಬಾಂಡ್ ಗಳ ಮೌಲ್ಯ 2539.58 ಕೋಟಿ ರೂ ಆಗಿದ್ದು ಬಾಂಡ್ ಗಳ ಮೂಲಕ ಬಿಜೆಪಿ, ಕಾಂಗ್ರೆಸ್ ಸಿಪಿಎಂ, ಬಿಎಸ್.ಪಿ, ತೃಣಮೂಲ ಕಾಂಗ್ರೆಸ್, ಸಿಪಿಐ ಪಕ್ಷಗಳು ಶೇಕಡ 76ರಷ್ಟು ಹಣ ಸ್ವೀಕರಿಸಿವೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು 2018-19ರಲ್ಲಿ ಚುನಾವಣಾ ಬಾಂಡ್ ಗಳ ಮೂಲಕ ಹಣವನ್ನು ಪಡೆದಿದ್ದು 2422.02 ಕೋಟಿ ಆಗಿದೆ. ಈ ಅವಧಿಯಲ್ಲಿ ಆರು ರಾಜಕೀಯ ಪಕ್ಷಗಳ ಅದಾಯದ 2/3ರಷ್ಟು ಆದಾಯ ಬಿಜೆಪಿಗೆ ಬಂದಿದೆ ಎಂದು ವಿಶ್ಲೇಷಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ ಐಟಿ ಸೆಲ್‌ ಸಿಬ್ಬಂದಿಗೆ ಪೊಲೀಸರಿಂದ ಕಿರುಕುಳ: ಸುಪ್ರಿಯಾ ಶ್ರೀನಾಟೆ ಆರೋಪ

0
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಆದೇಶದ ಮೇರೆಗೆ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪೊಲೀಸರು "ಕಿರುಕುಳ" ಮತ್ತು "ಬೆದರಿಕೆ" ಹಾಕುತ್ತಿದ್ದಾರೆ  ಎಂದು...