ಮಂಗಳೂರು:ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆಯ ವಿರುದ್ಧ ಸಂವಿಧಾನ ಸಂರಕ್ಷಣಾ ಸಮಿತಿ ಕೊಳ್ನಾಡು ಸಾಲೆತ್ತೂರು ಫೆಬ್ರವರಿ 16 ಆದಿತ್ಯವಾರದಂದು ಬೃಹತ್ ಪ್ರತಿಭಟನಾ ಸಮಾವೇಶವನ್ನು ಸಾಲೆತ್ತೂರಿನಲ್ಲಿ ಹಮ್ಮಿಕೊಂಡಿದೆ.
ಪ್ರತಿಭಟನೆಯಲ್ಲಿ ಜ್ಞಾನಭಾರತಿ ಸ್ವಾಮೀಜಿ ಮೈಸೂರು, ಸಾಮಾಜಿಕ ಕಾರ್ಯಕರ್ತರಾದ ಮಹೇಂದ್ರ ಕುಮಾರ್ ಕೊಪ್ಪ, ಬಿ.ಆರ್.ಭಾಸ್ಕರ್ ಪ್ರಸಾದ್ ನೆಲಮಂಗಲರವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಅಲ್ಲದೇ ವೇದಿಕೆಯಲ್ಲಿ ಸಾಲೆತ್ತೂರು ನಿತ್ಯಾಧರ್ ಚರ್ಚಿನ ಧರ್ಮಗುರುಗಳಾದ ಹೆನ್ರಿ ಡಿಸೋಜಾ, ಎಸ್ಸೆಸ್ಸೆಫ್ ನಾಯಕ ಹಾಫಿಲ್ ಸೂಫ್ಯಾನ್ ಸಖಾಫಿ, ಜಂಇಯ್ಯತುಲ್ ಉಲಮಾದ ಸದಸ್ಯರಾದ ಬಿ.ಕೆ.ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಮಾಜಿ ಸಚಿವ ಬಿ.ರಮಾನಾಥ ರೈ, ಅಬ್ದುಲ್ ಮಜೀದ್ ಕೊಡ್ಲಿಪೇಟೆ, ಎಂ.ಎಸ್.ಮೊಹಮ್ಮದ್ ಮುಂತಾದವರು ಉಪಸ್ಥಿತರಿರುವರು.
ಸಾಲೆತ್ತೂರಿನಲ್ಲಿ ಈ ಹಿಂದೆ ಪೋಲೀಸರು ಅನುಮತಿ ನೀಡದೇ ಇದ್ದೂದರಿಂದ ಸಮಾವೇಶವನ್ನು ಎರೆಡೆರೆಡು ಭಾರಿ ಮುಂದೂಡಲಾಗಿತ್ತು. “ಸಾಲೆತ್ತೂರು ಕರ್ನಾಟಕ-ಕೇರಳ ಗಡಿಭಾಗವಾದ್ದರಿಂದ ಇದು ಸೂಕ್ಷ್ಮ ಪ್ರದೇಶ” ಎಂದು ಪೋಲಿಸರು ಸಮಜಾಯಿಷಿ ನೀಡಿದ್ದರು ,ಆದರೆ “ಪೋಲಿಸರು ಯಾವುದೋ ರಾಜಕೀಯ ಒತ್ತಡಗಳಿಗೆ ಮಣಿದು ಹಾಗೆ ಮಾಡಿದ್ದಾರೆ” ಎಂದು ಸ್ಥಳೀಯ ಮೂಲಗಳು ಆರೋಪಿಸಿವೆ.



ಈ ಸಮಾವೇಶ ಯಶಸ್ವಿಯಾಗಲಿ.