- Advertisement -
- Advertisement -
ದೆಹಲಿ ಹೈಕೋರ್ಟಿನ ಖ್ಯಾತ ನ್ಯಾಯಾಧೀಶರಾದ ಎಸ್.ಮುರಳೀಧರ್ ರವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟಿನ ನ್ಯಾಯಾಧೀಶರಾಗಿ ನಿನ್ನೆ ವರ್ಗಾವಣೆ ಮಾಡಲಾಗಿದೆ.
ಈ ಕುರಿತು ನಿನ್ನೆ ಅವರಿಗೆ ನೊಟಿಫಿಕೇಶನ್ ನೀಡಲಾಗಿದೆ. ಫೆಬ್ರವರಿ 12 ರಂದು ಅವರನ್ನು ವರ್ಗಾವಣೆ ಮಾಡುವಂತೆ ಕೊಲಿಜಿಯಂ ಶಿಫಾರಸ್ಸು ಮಾಡಿತ್ತು.

ಎಸ್.ಮುರಳಿಧರ್ ರವರು ಮಂಗಳವಾರ ತಡರಾತ್ರಿ ವಿಚಾರಣೆ ಆಲಿಸಿ, ಮುಸ್ಲಿಂ ಗಾಯಾಳುಗಳನ್ನು ಗಲಭೆಪೀಡಿತ ಪ್ರದೇಶದ ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರ ಮಾಡಲು ಪೊಲೀಸ್ ರಕ್ಷಣೆ ನೀಡುವಂತೆ ತಾಕೀತು ಮಾಡಿದ್ದರು.
ಬುಧವಾರ ದೆಹಲಿ ಗಲಭೆಗೆ ಸಂಬಂಧಿಸಿದಂತಹ ವಿಚಾರಣೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಬಿಜೆಪಿ ಮುಖಂಡರ ಮೇಲೆ FIR ಹಾಕಿಲ್ಲದಿರುವುದನ್ನು ಖಂಡಿಸಿ, ಕೂಡಲೇ FIR ದಾಖಲಿಸುವಂತೆ ಆದೇಶಿಸಿದ್ದರು.
ಎಸ್.ಮುರಳಿಧರ್ ರವರ ವರ್ಗಾವಣೆಗೆ ಹಲವಾರು ಜನ ಸಾಮಾಜಿಕ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಅವರ ದಿಟ್ಟ ನಿಲುವುಗಳಿಗೆ ಬೆದರಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.


