Homeಮುಖಪುಟರಾಜಧರ್ಮ ಉಳಿಸಿ ಎಂದು ರಾಷ್ಟ್ರಪತಿಗೆ "ಜ್ಙಾಪಕ ಪತ್ರ" ಸಲ್ಲಿಸಿದ ಕಾಂಗ್ರೆಸ್‌

ರಾಜಧರ್ಮ ಉಳಿಸಿ ಎಂದು ರಾಷ್ಟ್ರಪತಿಗೆ “ಜ್ಙಾಪಕ ಪತ್ರ” ಸಲ್ಲಿಸಿದ ಕಾಂಗ್ರೆಸ್‌

- Advertisement -
- Advertisement -

ದೆಹಲಿ ಹಿಂಸಾಚಾರದ ಬಗ್ಗೆ ರಾಷ್ಟ್ರಪತಿಯನ್ನು ಭೇಟಿಯಾದ ಸೊನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗವೂ ರಾಜಧರ್ಮವನ್ನು ಉಳಿಸಲು “ಜ್ಞಾಪಕ ಪತ್ರ” ಸಲ್ಲಿಸಿದೆ.

“ಗೃಹ ಸಚಿವ ಅಮಿತ್ ಶಾ ತನ್ನ ಕರ್ತವ್ಯವನ್ನು ಮರೆತಿದ್ದಕ್ಕೆ ಅವರನ್ನು ವಜಾಗೊಳಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರವು ಕನಿಷ್ಠ 34 ಜೀವಗಳನ್ನು ಬಲಿ ತೆಗೆದುಕೊಂಡ ಈ ಘರ್ಷಣೆಗೆ ಮೂಕ ಪ್ರೇಕ್ಷಕರಾಗಿದೆ” ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ನಿಯೋಗದೊಂದಿಗೆ ರಾಷ್ಟ್ರಪತಿಯನ್ನು ಭೇಟಿಯಾದ ನಂತರ ಹೇಳಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ “ರಾಜಧರ್ಮವನ್ನು ಉಳಿಸಲು ತಮ್ಮ ಅಧಿಕಾರವನ್ನು ಬಳಸಿಕೊಳ್ಳಬೇಕೆಂದು ನಾವು ಒತ್ತಾಯಿಸಿದ್ದೇವೆ” ಎಂದು ಹೇಳಿದರು.

“ರಾಷ್ಟ್ರಪತಿಯವರೆ ನಿಮಗೆ ಭಾರತದ ಸಂವಿಧಾನದ ಅಡಿಯಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಜವಾಬ್ದಾರಿಯನ್ನು ನೀಡಲಾಗಿದೆ. ಈ ಸರ್ಕಾರದ ಆತ್ಮಸಾಕ್ಷಿಯ ಕೀಪರ್ ಆಗಿ ಕಾರ್ಯನಿರ್ವಹಿಸಲು ಸಾಂವಿಧಾನಿಕ ಕರ್ತವ್ಯ ಮತ್ತು ರಾಜಧರ್ಮದ ಆಧಾರಸ್ತಂಭಗಳನ್ನು ಯಾವುದೇ ನ್ಯಾಯಯುತ ಸರ್ಕಾರವು ಪಾಲಿಸಬೇಕು” ಎಂದು ಕಾಂಗ್ರೆಸ್ ತನ್ನ ಜ್ಞಾಪಕ ಪತ್ರದಲ್ಲಿ ತಿಳಿಸಿದೆ.

ನಾಲ್ಕು ದಿನಗಳಿಂದ ಭುಗಿಲೆದ್ದ ಹಿಂಸಾಚಾರವು ಕೋಮುವಾದದ ತಿರುವು ಪಡೆದುಕೊಂಡಿದೆ. ಬೀದಿಗಳಲ್ಲಿ ಗಲಭೆ, ಲೂಟಿ, ಅಗ್ನಿಸ್ಪರ್ಶ ಮತ್ತು ಕಲ್ಲು ಎಸೆಯುವಿಕೆಯನ್ನು ನಿಯಂತ್ರಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಲೋಕಸಭಾ ಅಭ್ಯರ್ಥಿಗಳ ಪೈಕಿ ಶೇ. 25ರಷ್ಟು ಮಂದಿ ಇತರ ಪಕ್ಷಗಳಿಂದ ವಲಸೆ ಬಂದವರು

0
ಈ ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪೈಕಿ ಶೇ 25ರಷ್ಟು ಮಂದಿ ಬೇರೆ ಪಕ್ಷಗಳಿಂದ ವಲಸೆ ಬಂದವರು ಎಂದು ವರದಿಗಳು ಹೇಳಿವೆ. ಬಿಜೆಪಿ ಕಣಕ್ಕಿಳಿಸಿರುವ 435 ಅಭ್ಯರ್ಥಿಗಳ ಪೈಕಿ 106 ಮಂದಿ...