ದೆಹಲಿಯಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಎಣಿಕೆಯ ಪ್ರಕ್ರಿಯೆಯ ಅನುಷ್ಠಾನದ ವಿರುದ್ಧ ದೆಹಲಿ ವಿಧಾನಸಭೆಯಲ್ಲಿ ನಿರ್ಣಯ ಜಾರಿಗೆ ಬಂದಿದೆ.
ಏಪ್ರಿಲ್ 15ರಿಂದ ಎನ್‌ಪಿಆರ್ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಇದು ಎನ್‌ಆರ್‌ಸಿಗೆ ಪೂರ್ವಕ್ರಮ ಎಂದು ವಿರೋಧ ಪಕ್ಷಗಳು ಟೀಕಿಸಿವೆ. ಎನ್‌ಪಿಆರ್‌ನಲ್ಲಿ ತಂದೆ ತಾಯಿಯ ಜನ್ಮದಿನಾಂಕ ಮತ್ತು ಅವರ ಹುಟ್ಟಿದ ಸ್ಥಳಗಳನ್ನು ಸಹ ಕೇಳಲಾಗುತ್ತಿದೆ. ಇದು ಬಹಳಷ್ಟು ಜನರಲ್ಲಿ ಗೊಂದಲ ಮತ್ತು ಅಪನಂಬಿಕೆಯನ್ನು ಉಂಟುಮಾಡಿದೆ. ಹಾಗಾಗಿ ಇದಕ್ಕೆ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದೆ.
ಈ ಹಿಂದೆಯೇ ಸಿಎಎ ವಿರುದ್ಧ ದೆಹಲಿ ಆಪ್ ಸರ್ಕಾರ ನಿಲುವು ತೆಗೆದುಕೊಂಡಿತ್ತು. ಇಂದು ಎನ್‌ಪಿಆರ್ ಸಹ ಜಾರಿಗೊಳಿಸದಿರಲು ನಿರ್ಣಯ ಅಂಗೀಕರಿಸಿದೆ.
NPR और NRC के तहत जनता से अपनी नागरिकता साबित करने को कहा जाएगा। 90% लोगों के पास ये साबित करने के लिए कोई सरकारी जन्म प्रमाण पत्र नहीं है। क्या सबको डिटेंशन सेंटर भेजा जाएगा? ये डर सबको सता रहा है। केंद्र से मेरी अपील है की NPR और NRC को रोक दिया जाए। https://t.co/6ymx21Fmc7
— Arvind Kejriwal (@ArvindKejriwal) March 13, 2020
ಈ ಮೊದಲು ಕಾಂಗ್ರೆಸ್ ನೇತೃತ್ವದ ಮಧ್ಯಪ್ರದೇಶ ಸರ್ಕಾರ ಕೂಡ ಎನ್‌ಪಿಆರ್ ವಿರುದ್ಧ ನಿರ್ಣಯ ಅಂಗೀಕರಿಸಿತ್ತು.
ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿಯನ್ನು ಹಿಂಪಡೆಯಲು ನಾನು ಕೇಂದ್ರವನ್ನು ಒತ್ತಾಯಿಸುತ್ತೇನೆ ಎಂದು ದೆಹಲಿ ವಿಧಾನಸಭೆಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಗೃಹ ಸಚಿವರು ತಮ್ಮ ಭಾರತ ಸರ್ಕಾರ ನೀಡಿದ ಜನನ ದಾಖಲೆಗಳನ್ನು ತೋರಿಸಲು ಸಿದ್ದರಿದ್ದಾರೆಯೇ ಎಂದು ಕೇಜ್ರಿವಾಲ್ ಅಮಿತ್ ಶಾಗೆ ಸವಾಲು ಹಾಕಿದ್ದಾರೆ.
ನಾನು ನನ್ನ ಕುಟುಂಬ ಸೇರಿದಂತೆ ನಮ್ಮ ಇಡೀ ಕ್ಯಾಬಿನೆಟ್ ಸದಸ್ಯರು ಜನನ ಪ್ರಮಾಣ ಪತ್ರಗಳನ್ನು ಹೊಂದಿಲ್ಲ. ಹಾಗಾದರೆ ನಮ್ಮನ್ನು ಎನ್‌ಪಿಆರ್ ಎನ್‌ಆರ್‌ಸಿ ಅಡಿಯಲ್ಲಿ ಬಂಧನ ಕೇಂದ್ರಗಳಿಗೆ ಕಳುಹಿಸುತ್ತಾರೆಯೇ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ನಿನ್ನೆ ಅಮಿತ್ ಶಾ ರಾಜ್ಯಸಭೆಯಲ್ಲಿ ಎನ್‌ಪಿಆರ್ ಕುರಿತು ಮಾತನಾಡುತ್ತಾ ಪೋಷಕರ ಜನ್ಮದಿನಾಂಕ ಮತ್ತು ದಾಖಲೆಗಳನ್ನು ಕೊಡಬೇಕಿಲ್ಲ ಎಂದು ಹೇಳಿದ್ದರು. ಆದರೆ ಇದು ಎನ್‌ಪಿಆರ್ ಜಾರಿಗೊಳಿಸುವ ಹುನ್ನಾರ ಎಂದು ಬಹಳಷ್ಟು ಜನ ಟೀಕಿಸಿದ್ದರು.


