ಕೊರೊನಾ ಹಿನ್ನೆಲೆಯಲ್ಲಿ ಉದ್ಯೋಗಗಳು ಕುಸಿದಿದ್ದು ಬಡಜನರ ಜನಜೀವನ ಏರು ಪೇರಾಗಿರುವುದರಿಂದ ಅದನ್ನು ತಹಬದಿಗೆ ತರಲು ದೆಹಲಿ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಮಾದರಿ ಕ್ರಮಗಳನ್ನು ಕೈಗೊಂಡಿವೆ.
ದೆಹಲಿ ಸರ್ಕಾರವು 72 ಲಕ್ಷ ಜನರಿಗೆ ಉಚಿತ ರೇಷನ್ ಒದಗಿಸಲು ಮುಂದಾಗಿದೆ. ಅಲ್ಲದೇ ಪ್ರತಿ ಬಾರಿ ನೀಡುವುದಕ್ಕಿಂತ 50% ಹೆಚ್ಚು ನೀಡಲು ಮುಂದಾಗಿದೆ.
ಹಿರಿಯ ನಾಗರಿಕರು, ವಿಧವೆಯರು ಮತ್ತು ವಿಶೇಷ ಚೇತನರ ಮಾಸಾಶನವನ್ನು ಡಬಲ್ ಮಾಡಲಾಗಿದೆ.
ಮನೆ ಇಲ್ಲದ ಆಶ್ರಯರಹಿತರಿಗೆ ಆಹಾರ ಮತ್ತು ರಾತ್ರಿ ಉಳಿಯುವ ವ್ಯವಸ್ಥೆ ಮಾಡಲಾಗಿದೆ.
ಸ್ವಯಂ ಸಂಪರ್ಕ ತಡೆಯಲ್ಲಿರುವವರಿಗೆ ಮತ್ತು ಹೋಟೆಲ್‌ಗಳಲ್ಲಿ ಜಿಎಸ್‌ಟಿ ರದ್ದುಗೊಳಿಸಲಾಗಿದೆ.
ಉತ್ತರ ಪ್ರದೇಶ ಸರ್ಕಾರ ಕೈಗೊಂಡ ಕ್ರಮಗಳು
ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ 165 ಕೋಟಿ ಜನರಿಗೆ ಏಪ್ರಿಲ್ ತಿಂಗಳ ಉಚಿತ ರೇಷನ್ ಒದಗಿಸಲು ತೀರ್ಮಾನಿಸಿದೆ.
ಸರ್ಕಾರಿ ಯೋಜನೆಗಳಲ್ಲಿ ನೊಂದಾಯಿಸದ 15 ಲಕ್ಷ ದಿನಗೂಲಿ ಕಾರ್ಮಿಕರು ಮತ್ತು 20 ಲಕ್ಷ ಕಟ್ಟಡ ಕಾರ್ಮಿಕರಿಗೆ ತಲಾ 1000 ರೂ ಘೋಷಿಸಿದೆ. ಇದರಿಂದ ಅವರು ದಿನನಿತ್ಯದ ಬಳಕೆಯ ವಸ್ತುಗಳನ್ನು ಪಡೆಯಬಹುದಾಗಿದೆ.
ಮಾಸಾಶನ ಮತ್ತು ಪಿಂಚಣಿ ಪಡೆಯುವವರಿಗೆ 2 ತಿಂಗಳು ಮುಂಚಿತವಾಗಿ ಹಣ ನೀಡಲಾಗುತ್ತಿದೆ.


