- Advertisement -
- Advertisement -
- ಪಾಬ್ಲೊ ನೆರೂಡ
- ಕನ್ನಡಕ್ಕೆ – ಮಂಜುನಾಥ್ ಚಾರ್ವಾಕ
ಅವರೆಲ್ಲ ಸುಳ್ಳುಗಾರರು,
ನಾನು ಚಂದ್ರನನ್ನ ಕಳೆದುಕೊಂಡೆ ಎನ್ನುವವರು,
ನನ್ನ ಬದುಕು ಬರಗಾಡಾಗಲಿದೆ ಎಂದು ಭವಿಷ್ಯ ನುಡಿದವರು,
ತಮ್ಮ ತಣ್ಣನೆಯ ಸುಳ್ಳುನಾಲಗೆಯಿಂದ ಗುಲ್ಲೆಬ್ಬಿಸಿದವರು:
ಈ ಜಗತ್ತಿನಿಂದ ಒಂದು ಹೂವನ್ನು ಕಣ್ಮರೆಯಾಗಿಸಲು ಪ್ರಯತ್ನಿಸಿದವರು
“ಮತ್ಸ್ಯ ಕನ್ಯೆಯ ಜತೆಗಿನ ಕ್ಷಣಿಕ ಒಡನಾಟ ಮುಗಿದ ಕಥೆ,
ಇನ್ನೇನಿದ್ದರೂ ನಮ್ಮಂಥವರ ಜತೆಯೇ ಇವನು ಹೆಣಗಬೇಕಾಗಿರುವುದು”
ಮತ್ತು ವೃತ್ತಪತ್ರಿಕೆಗಳಲ್ಲಿ ಎಡೆಬಿಡದೆ ಮುಳುಗಿಹೋಗಿ,
ನನ್ನ ಗಿಟಾರಿನ ಅಂತ್ಯಸಂಸ್ಕಾರ ಬರೆದಿಟ್ಟವರು.
ಆಹ್ ನಾನು,
ನಮ್ಮಿಬ್ಬರ ಹೃದಯಗಳ ಸೀಳಿ
ನಮ್ಮ ಪ್ರೀತಿಯ ಭರ್ಜಿಯನ್ನು,
ಅವರ ಕಣ್ಣುಗಳಿಗೆ ರಾಚಿದೆ.
ನೀ ನಡೆದ ಹಾದಿಯಲ್ಲಿ ಉಳಿಸಿಹೋದ ಮಲ್ಲಿಗೆ ಹೂಗಳ ಹೆಕ್ಕಿ ತಂದೆ.
ನಿನ್ನ ಕಣ್ಣ ಕಾಂತಿಯಿಲ್ಲದೆ,
ರಾತ್ರಿಗಳ ಕಡುಗತ್ತಲಲ್ಲಿ ಕಳೆದುಹೋದೆ,
ಹಾಗೂ ರಾತ್ರಿ ನನ್ನನ್ನು ಸುತ್ತುವರೆದಾಗ ಪುನರ್ಜನ್ಮ ಪಡೆದು:
ನನ್ನ ಕತ್ತಲೆಗೆ ನಾನೇ ಮಾಲೀಕನಾದೆ.
(ಅನುವಾದಕರು ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್, ಫೋಟೊಗ್ರಫಿ ಅವರ ಹವ್ಯಾಸ)


