Homeಮುಖಪುಟಸಾವುಗಳು ಆಗುವುದು ಸಾಂಕ್ರಮಿಕ ವೈರಸಿನಿಂದ ಮಾತ್ರವಲ್ಲ...!!

ಸಾವುಗಳು ಆಗುವುದು ಸಾಂಕ್ರಮಿಕ ವೈರಸಿನಿಂದ ಮಾತ್ರವಲ್ಲ…!!

- Advertisement -
- Advertisement -

ಆಧುನಿಕತೆ ಕೊಡುಗೆ ನೀಡಿದ ಮಾನವ ನಿರ್ಮಿತವಾದ ಸಕಲ ಸನ್ನಾಹಗಳನ್ನೂ ಪರಾಭವಗೊಳಿಸಿ, ಸೂಕ್ಷ್ಮ ವೈರಸೊಂದು ಮಾಡುತ್ತಿರುವ ಆಕ್ರಮಣವು, ನ್ಯೂಯಾರ್ಕ್, ಪ್ಯಾರಿಸ್, ರೋಮ್, ನವದೆಹಲಿ, ಬೀಜಿಂಗ್, ಮಾಸ್ಕೋ, ರಿಯಾದ್, ಟೆಲ್‌ಅವೀವ್, ಕೈರೋದಂತಹ ಮಹಾನಗರಗಳಲ್ಲಿನ ‘ಬೆರಳತುದಿಯಲ್ಲಿ ಜಗತ್ತು ನಿಯಂತ್ರಿಸಲ್ಪಡುತ್ತಿದೆ’ ಎಂದು ಬೀಗುತ್ತಿದ್ದ ಆಡಳಿತಾರೂಢರನ್ನು ಅಸ್ವಸ್ಥರನ್ನಾಗಿಸಿದೆ. ನಿರೀಕ್ಷಣಾ ಕ್ಯಾಮರಾಗಳು ಮತ್ತು ರಹಸ್ಯ ಆಪ್‌ಗಳು ಜೊತೆಗೆ ಬಹುಸಂಖ್ಯಾತ ರಹಸ್ಯ ಪಡೆಗಳು ಇದ್ದರೆ, ಯಾವ ರಾಷ್ಟ್ರ ಬೇಕಾದರೂ ಸುರಕ್ಷಿತ ಹಾಗೂ ಶಾಂತವಾಗಿರುತ್ತದೆ ಎಂಬ ಧೋರಣೆಯನ್ನು ತಿದ್ದಬೇಕಾಯಿತು. ಈ ತಪ್ಪು ಕಲ್ಪನೆಯನ್ನು ಬಲವಂತವಾಗಿ ಹೇರಿದ ಕಾರಣದಿಂದಾಗಿದೆ ಹೆಚ್ಚಿನ ರಾಷ್ಟ್ರಗಳು ಜನಾರೋಗ್ಯ, ಶಿಕ್ಷಣ, ಉದ್ಯೋಗ ಮುಂತಾದುವುಗಳಿಗೆ ಖರ್ಚು ಮಾಡುವ ಹತ್ತು ಪಟ್ಟು ಹಣವನ್ನು ರಾಷ್ಟ್ರ ರಕ್ಷಣೆಗೆ ಮೀಸಲಿಡೋದು. ಆದರೆ, ಇದರಿಂದೇನೂ ಯಾವ ರಾಷ್ಟ್ರವೂ ಸುರಕ್ಷಿತವಾಗಿರಬೇಕೆಂದಿಲ್ಲ ಎಂಬುದನ್ನು ನೆನಪಿಸುವಂತಿದೆ ಈ ಸಣ್ಣ ವೈರಾಣು.

ಯುದ್ಧದ ದಿನಗಳಲ್ಲಿ ಜೀವಿಸುವ ಆಸೆಯಿಂದ ಅಟ್ಟಹಾಸಗೈದು ಪ್ರಾಣ ಕೈಯಲ್ಲಿ ಹಿಡಿದು ಓಡುತ್ತಿರುವಾಗ, ದೇಶ ರಾಷ್ಟ್ರಗಳ ಗಡಿಯಲ್ಲಿ ಪ್ರವೇಶ ನಿರಾಕರಿಸಲ್ಪಟ್ಟ ಸಿರಿಯಾ ಹಾಗೂ ಇರಾಕ್‌ನ ಪುಟ್ಟ ಕಂದಮ್ಮಗಳು, ರಕ್ಷಣಾ ಬೋಟ್‌ನಲ್ಲಿ ದಡ ತಲುಪಲಾಗದೆ ಅತ್ತು ಗೋಗರೆಯುತ್ತಿದ್ದ ಮ್ಯಾನ್ಮಾರಿನ ರೋಹೀಂಗ್ಯಾ ಜನತೆ ಇದನ್ನು ಕಾಣುವಾಗ ಕಣ್ಣಗಲಿಸಿ ನೋಡುತ್ತಿರಬಹುದು. ಹಸಿದು ಬಳಲಿದ ಮುಖದೊಂದಿಗೆ ಗಡಿದಾಟಿ ತಲುಪಿದ ತಮ್ಮನ್ನು ತಳ್ಳಿ ದೂರ ಮಾಡುತ್ತಿದ್ದಾಗ, ಅದನ್ನು ಕಂಡು ನೋವು ಅರಗಿಸಿಕೊಳ್ಳಲಾಗದೆ, ಎದೆಯೊಡೆದು ಪ್ರಾಣ ಕಳಕೊಂಡವರಿದ್ದಾರೆ, ಕಡಲಗರ್ಭದ ಆಳದಲ್ಲಿ ಮುಳುಗಿ ಸಾವು ಕಂಡವರಿದ್ದಾರೆ, ಸಮುದ್ರ ತೀರದೆಡೆಗೆ ಎಸೆಯಲ್ಪಟ್ಟ ಅದೆಷ್ಟೋ ‘ಐಲನ್ ಕುರ್ದಿ’ಗಳಿದ್ದಾರೆ ಅವರಲ್ಲಿ.

ಪ್ರಪಂಚದಲ್ಲಿ ಅತಿ ಹೆಚ್ಚು ವಲಸಿಗರನ್ನು ಹೊಂದಿರುವ ರಾಷ್ಟ್ರಗಳ ಸಂಖ್ಯೆಗಳು ಅಚ್ಚರಿಗೊಳಿಸುವಂತದ್ದು. ಅತಿ ಹೆಚ್ಚು ವಲಸಿಗರನ್ನು ಬರಮಾಡಿಕೊಂಡ ದೇಶಗಳ ಪಟ್ಟಿಯಲ್ಲಿ ಟರ್ಕಿ, ಪಾಕಿಸ್ತಾನ, ಉಗಾಂಡ, ಸುಡಾನ್, ಜರ್ಮನಿ ಹೀಗಿದೆ. ವಲಸಿಗರಿಂದ ಉಂಟಾಗುವ ಸಾಮಾಜಿಕ, ಆರ್ಥಿಕ ಪ್ರತ್ಯಾಘಾತಗಳ ಕುರಿತು ಆಕ್ರೋಶಗಳು ಮತ್ತು ಅವರನ್ನು ಹೊರಗಟ್ಟಬೇಕೆನ್ನುವ ಕೂಗು ಅತ್ಯಂತ ಮನುಷ್ಯತ್ವ ವಿರುದ್ಧವಾಗಿ ಮೊಳಗುತ್ತಿದ್ದುದು ಶ್ರೀಮಂತ ಐರೋಪ್ಯ ರಾಷ್ಟ್ರಗಳಿಂದಲೂ, ಅಮೇರಿಕದಿಂದಲೂ ಆಗಿತ್ತು. ನಿರಾಶ್ರಿತರೊಂದಿಗೆ ತೋರುವ ಅದೇ ಸಾಮೀಪ್ಯವಾಗಿದೆ, ವಲಸಿಗರಾದ ಪೌರತ್ವ ಲಭಿಸಿದವರೊಂದಿಗೂ ಕೆಲವು ದೇಶಗಳು ತೋರುತ್ತಿರುವುದು. ವಲಸಿಗರ ಸಂಖ್ಯೆ 272 ದಶಲಕ್ಷಕ್ಕೇರಿದೆ ಎಂದಾಗಿತ್ತು 2019 ರಲ್ಲಿ ಯು.ಎನ್ ಡಿಪಾರ್ಟ್ಮೆಂಟ್ ಆಫ್ ಇಕನಾಮಿಕ್ಸ್ ಆಂಡ್ ಸೋಶಿಯಲ್ ಅಫೆರ‍್ಸ್ ಹೇಳಿರುವುದು. ಇದರಲ್ಲಿ 2010-19 ರ ಕಾಲಘಟ್ಟದಲ್ಲಿ 51 ದಶಲಕ್ಷ ಏರಿಕೆಯಾಗಿದೆ. ಒಂದು ಕಾಲದಲ್ಲಿ ಉದ್ಯೋಗ ಸಾಮರ್ಥ್ಯದ ಅಭಾವವನ್ನು ಎದುರಿಸಿದ ಹಲವು ಯುರೋಪ್ಯನ್ ಶ್ರೀಮಂತ ರಾಷ್ಟ್ರಗಳಿಗೂ ಅನುಗ್ರಹವೇ ಆಗಿತ್ತು ಈ ವಲಸೆ.

ಆದರೆ, ಇಂದು ಸ್ಥಿತಿ ಬದಲಾಗಿದೆ. ಸಂಕುಚಿತ ಮನಸ್ಥಿತಿಯ ರಾಷ್ಟ್ರೀಯವಾದಿಗಳು ವಲಸೆ ವಿರುದ್ಧ ಧ್ವನಿಯೆತ್ತಿ ಅಧಿಕಾರವನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಮೇರಿಕದ ಅಧ್ಯಕ್ಷ ಟ್ರಂಪ್‌ರ ವಿಜಯವೂ ಕೂಡಾ ವಲಸೆ ವಿರುದ್ಧ ಪ್ರಚಾರ ಮಾಡಿದ್ದರಿಂದಲೇ ಆಗಿತ್ತು. ಪೌರತ್ವ ಸಿಕ್ಕಿದ ನಂತರವೂ ಕೂಡಾ, ನಿರ್ಲಕ್ಷ್ಯ, ಅಕ್ರಮ, ಅಪಹಾಸ್ಯಕ್ಕೀಡಾಗುವುದೆಲ್ಲವೂ ನಡೆಯುತ್ತಲೇ ಇದೆ. ವಿಶೇಷವಾಗಿ, ಚರ್ಮದ ಬಣ್ಣ ಬದಲಾದಂತೆಯೇ ಅದು ನಡೆಯುತ್ತದೆ. ಆ ಅನುಭವವೇ ಆಗಿತ್ತು ಬೆಲ್ಜಿಯಂ ಕ್ರೀಡಾಪಟು ಲೂಕಾಕುವನ್ನು ‘ವಿಜೇತನಾದರೆ ರಾಷ್ಟ್ರಿಯ ತಾರೆಯಾಗಿ ಸಂಭ್ರಮಿಸುತ್ತಾರೆ, ಪರಾಭವಗೊಂಡರೆ ತಾನೋರ್ವ ವಲಸಿಗನೆಂಬ ಪಟ್ಟ ಕಟ್ಟಿ ಆಕ್ಷೇಪಿಸುತ್ತಾರೆ’ ಎಂಬ ರೀತಿಯನ್ನು 2018 ರ ವಿಶ್ವಕಪ್ ಫುಟ್ಬಾಲ್ ಪಂದ್ಯದ ನಡುವೆ ಹೇಳುವಂತೆ ಮಾಡಿರುವುದು.

ವೈರಸ್‌ಗಿಂತ ಮಾರಕ ರೂಪದಲ್ಲಿ ಮಾನವಕುಲವನ್ನು ಆಕ್ರಮಿಸುವವರಾಗಿದ್ದಾರೆ ಸಂಕುಚಿತ ರಾಷ್ಟ್ರಿಯತೆ ಹಾಗೂ ವಂಶೀಯತೆಯ ವಿಷಬೀಜಗಳನ್ನು ಬಿತ್ತುವ ಅಮೇರಿಕ ಮತ್ತು ಯುರೋಪಿನ ಬಲಪಂಥೀಯ ಆಡಳಿತ ಪಕ್ಷಗಳು. ಬಂಗಾಳದಿಂದ ವಲಸೆ ಬಂದ ‘ಅಕ್ರಮ ವಲಸಿಗರು’ ಎಂಬ ಮಹಾಸುಳ್ಳು ಪ್ರಚಾರ ಮಾಡುವ ಮೂಲಕ ಅಸ್ಸಾಂನಲ್ಲಿ ದಶಕಗಳಿಂದ ವಾಸ ಮಾಡುತ್ತಿದ್ದವರನ್ನು ಹೊರಗಟ್ಟಲು ಭಾರತ ಶ್ರಮಿಸುತ್ತಿರೋದು ನಮಗೆ ಗೊತ್ತಿರುವ ವಿಚಾರ. ದೇಶವ್ಯಾಪಿಯಾಗಿ ಈ ರೀತಿಯ ಅಕ್ರಮ ವಲಸಿಗರಿದ್ದಾರೆ ಎಂಬ ಸುಳ್ಳನ್ನು ಆಧಾರವಾಗಿ ಇಟ್ಟುಕೊಂಡು ಅವರನ್ನು ದೇಶದಿಂದ ಹೊರದಬ್ಬುವ ಉದ್ದೇಶದಿಂದಲೇ ಸಂಘಪರಿವಾರದ ಫ್ಯಾಸಿಸ್ಟರು ‘ರಾಷ್ಟ್ರೀಯ ಪೌರತ್ವ ನೋಂದಣಿ’ ಜಾರಿಗೊಳಿಸಲು ಮುಂದೆ ಬಂದಿರೋದು. ಭಾರತದಲ್ಲಿ ಕೆಲವು ದಿನಗಳ ಹಿಂದೆ ಪೌರತ್ವ ನಿಷೇಧ ಕಾನೂನಿನ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಮಾತ್ರವಾಗಿ ಕೊಲ್ಲಲ್ಪಟ್ಟದ್ದು ನೂರಕ್ಕೂ ಹೆಚ್ಚು ಜನರು.

ಫೆಲೆಸ್ತೀನ್‌ನಲ್ಲಿ ಆ ಮಣ್ಣಿನ ನಿಜವಾದ ಹಕ್ಕುದಾರರನ್ನು ಗೋಡೆ ಹಾಗೂ ತಂತಿ ಬೇಲಿಯ ನಡುವೆ ಸಿಲುಕಿಸಿ ಗುಂಪು ಹತ್ಯೆ ನಡೆಸುತ್ತಿದೆ ಇಸ್ರೇಲ್. ಹೊರ ಜಗತ್ತಿನೊಂದಿಗೆ ಸಂಬಂಧಗಳನ್ನು ಕಳೆದುಕೊಂಡಿರುವ ಗಾಝಾ, ಈ ಶತಮಾನ ಕಂಡ ಭೀತಿ ಜನಕ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ನರಮೇಧದ ಪ್ರತೀಕವಾಗಿದೆ. ಫೆಲೆಸ್ತೀನ್ ಅನ್ನು ಅನ್ಯಾಯವಾಗಿ ವಶಪಡಿಸಿದ ನಂತರ ಸಯನಿಸ್ಟ್ಗಳು ಕೊಂದು ಹಾಕಿದ ಅರಬಿಗಳ ಸಂಖ್ಯೆ 11 ದಶಲಕ್ಷಗಳಿಗಿಂತ ಹೆಚ್ಚು. ನಿರಾಶ್ರಿತರಾಗಿ ಪ್ರಪಂಚದ ವಿವಿಧೆಡೆಗಳಲ್ಲಿ ವಾಸಿಸುವವರು ಆರು ದಶಲಕ್ಷಗಳಿಗಿಂತ ಹೆಚ್ಚು. ಇದರಲ್ಲಿ ಒಂದುವರೆ ಲಕ್ಷ ಜನರು ದಶಕಗಳ ನಂತರ ಈಗಲೂ ನಿರಾಶ್ರಿತರ ಕ್ಯಾಂಪ್‌ಗಳಲ್ಲಿದ್ದಾರೆ. ರಾಖೈನ್ ಪ್ರಾಂತ್ಯಗಳಿಂದ 2015 ರ ನಂತರ ಮಾತ್ರ 9 ಲಕ್ಷ ಜನರನ್ನಾಗಿದೆ ಮ್ಯಾನ್ಮಾರಿನ ಆಡಳಿತ ಹೊರ ಹಾಕಿರೋದು. ಸಿಕ್ಯಂಗ್ ಪ್ರಾಂತ್ಯದ ಉಯಿಗುರ್ ವಂಶಜರ ಮೇಲೆ ಚೀನಾ ನಡೆಸುತ್ತಿರುವ ಅತಿ ಕ್ರೂರವಾದ ವಂಶ ಹತ್ಯೆ ಮತ್ತು ಸಾಂಸ್ಕೃತಿಕ ಉನ್ಮೂಲನಾ ವಿಧಾನಗಳು ಅತ್ಯಂತ ನೀಚವೂ, ಮೃಗೀಯತೆಯಿಂದ ಕೂಡಿದ್ದಾಗಿದೆ. ಪ್ರತಿ ವರ್ಷವೂ ಅಮೇರಿಕ ಪಶ್ಚಿಮ ಏಷ್ಯಾದಲ್ಲೂ, ಅಫ್ಗಾನಿಸ್ತಾನದಲ್ಲೂ ಮಾತ್ರ ನಡೆಸುವ ಬಾಂಬ್ ದಾಳಿಯಿಂದಾಗಿ, ವರ್ಷದಲ್ಲಿ ಕೊಲ್ಲಲ್ಪಡುತ್ತಿರುವ ನಾಗರೀಕರು ಸಾವಿರಾರು.

ಯುನಿಸೆಫ್ ನ ಅಂಕಿಅಂಶಗಳ ಪ್ರಕಾರ ಪೌಷ್ಟಿಕಾಹಾರ ಕೊರತೆಯಿಂದಾಗಿ ಪ್ರತಿ ದಿನವೂ ಸಾವಿಗೆ ತುತ್ತಾಗುತ್ತಿರುವವರು 22 ಸಾವಿರ ಮಕ್ಕಳಾಗಿದ್ದಾರೆ. ಶುದ್ಧ ನೀರು ಮತ್ತು ಸಮರ್ಥ ರೀತಿಯ ಶುಚಿತ್ವ ಸೌಕರ್ಯಗಳಿಲ್ಲದ ಕಾರಣ ಅತಿಸಾರದಂತಹ ರೋಗ ಬಾಧಿತರಾಗಿ 8,42000 ಜನರು ಪ್ರತಿವರ್ಷ ಅಸುನೀಗುತ್ತಿದ್ದಾರೆ. ಅಂದರೆ, ಪ್ರತಿ ದಿನಕ್ಕೆ 2300 ಜನರು. ಹಸಿವು ಕಾರಣ ಸಾಯುತ್ತಿರುವವರ ಸಂಖ್ಯೆ ಒಂದುವರೆ ಬಿಲಿಯನ್ ಎಂದು ಅಂದಾಜಿಸಲಾಗಿದೆ.

ಕೊವಿಡ್‌ 19 ರ ವಿರುದ್ಧ ಇಂದು ಗೋಳಿಡುತ್ತಿರುವ ಆಡಳಿತ ವರ್ಗದಲ್ಲಿರುವ ಹಲವರು, ಅಸಂತುಲಿತ ಆರ್ಥಿಕ ಕ್ರಮ ಹಾಗೂ ಶೋಷಣೆಯನ್ನು ಬಲವಂತವಾಗಿ ಹೇರಿ ಈ ಜನರ ಹಕ್ಕುಗಳನ್ನು ಕಸಿದುಕೊಂಡವರೇ ಆಗಿದ್ದಾರೆ. ಸಾಮೂಹಿಕ ಹತ್ಯೆಗೆ ಬೇಕಾಗುವ ಆಯುಧಗಳನ್ನು ತಯಾರಿಸಿ, ರಾಸಾಯನಿಕ ಹಾಗೂ ಜೈವಿಕ ಅಸ್ತ್ರಗಳನ್ನು ಅಭಿವೃದ್ಧಿಪಡಿಸಲು ತತ್ವ ದೀಕ್ಷೆಯಿಲ್ಲದ ಕೋಟಿಗಟ್ಟಲೆ ಹಣವನ್ನು ಖರ್ಚುಮಾಡುವುದೂ ಕೂಡಾ ಇದೇ ರಾಷ್ಟ್ರಗಳೇ ಆಗಿವೆ.

ಏಕಪಕ್ಷೀಯವಾದ ಪ್ರತಿರೋಧದ ಕಾರಣದಿಂದಾಗಿ ಕುಸಿದು ಬಿದ್ದ ರಾಷ್ಟ್ರಗಳಲ್ಲಿ ಕಂದಮ್ಮಗಳು ಹಸಿವಿನಿಂದ ಸಾವಿನ ದವಡೆಗೆ ನೂಕಲ್ಪಡುತ್ತಿರುವಾಗ, ಪ್ರತಿರೋಧಗಳನ್ನು ಜಯಿಸಿದೆವು ಎಂದವರು ಅಹಂಕರಿಸುವುದುಂಟು. ಕೊವಿಡ್-19 ವ್ಯಾಪಕವಾಗಿ ಹರಡುತ್ತಿರುವ ಈ ಕಾಲದಲ್ಲೂ, ಪ್ರತಿರೋಧದಿಂದಾಗಿ ಕುಸಿದು ಬಿದ್ದ ಇರಾನ್ ಜನತೆಯನ್ನು ರಕ್ಷಿಸುವುದಕ್ಕಾಗಿಯೋ, ಗಾಝಾದ ಜನತೆಗೆ ಆಶ್ವಾಸನೆಯನ್ನು ನೀಡಲೆಂದೋ ಯಾರೂ ಮುಂದೆ ಬಂದಿಲ್ಲ. ಚೀನಾದ ನಂತರ ಮರುಕ್ಷಣ ಅತಿಭಯಾನಕ ರೀತಿಯಲ್ಲಿ ಕೊವಿಡ್-19 ಇರಾನಿಗೆ ವ್ಯಾಪಿಸಿದಾಗ ಹೊಸ ಪ್ರತಿರೋಧ ವ್ಯವಸ್ಥೆಗಳನ್ನು ಬಲವಂತವಾಗಿ ಹೇರಿ, ಯಾತನೆ ಅನುಭವಿಸುತ್ತಿರುವ ಜನರನ್ನು ಮತ್ತೊಮ್ಮೆ ದೌರ್ಜನ್ಯವೆಸಗಲೆಂದೇ ಅಮೇರಿಕ ಮುಂದೆ ಬಂದಿದ್ದು. ನಿರಂತರ ನರಹತ್ಯೆಗೆ ನೇತೃತ್ವವನ್ನು ನೀಡುವ ವಂಶೀಯವಾದಿ ಆಡಳಿತಕಾರರೆಲ್ಲರೂ, ಮನುಷ್ಯ ಜೀವಗಳನ್ನು ನೆನೆಯುತ್ತಾ ಇದೀಗ ತುರ್ತಾಗಿ ಎದ್ದು ನಿಂತಿರೋದು ಕೊವಿಡ್-19 ಮರಣವು ಭೂಮಿಯಲ್ಲಿ ಅವಗಣಿಸಲ್ಪಟ್ಟವರನ್ನು ಮಾತ್ರವಲ್ಲ, ಸಾಮಾಜಿಕ, ಆರ್ಥಿಕ ಭೇದವಿಲ್ಲದೆ ಸಕಲರನ್ನೂ ನುಂಗಿ ಹಾಕುತ್ತಿರುವುದರಿಂದಲೇ ಆಗಿದೆ. ಆಗ ಮಾತ್ರ ಉಂಟಾಗುವ ಈ ಅನಿಯಂತ್ರಿತ ಎದೆಗುದಿ ಇದೆಯಲ್ಲಾ, ಅದಾಗಿದೆ ಮರಣಕ್ಕಿಂತಲೂ ಭೀಕರವಾದುದು.

ಅಂಕಿ-ಅಂಶಗಳಿಗೆ ಆಧಾರ: www.who.in, www.dw.com, www.un.org,www.dosomething.org

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...