ಆರೋಗ್ಯ ಕಾರ್ಯಕರ್ತರಿಗೆ 25 ಸಾವಿರ ವೈಯಕ್ತಿಕ ರಕ್ಷಣಾ ಸಾಧನಗಳನ್ನು (PPE) ಒದಗಿಸಿದ್ದಕ್ಕಾಗಿ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ನಟ ಶಾರುಖ್ ಖಾನ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೊನಾ ವಿರುದ್ದ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ 25 ಸಾವಿರ ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಕಿಟ್‌ಗಳನ್ನು ಶಾರುಖ್ ಖಾನ್ ಸೋಮವಾರ ಒದಗಿಸಿದ್ದರು.
ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ” 25 ಸಾವಿರ ಪಿಪಿಇ ಕಿಟ್‍ಗಳನ್ನು ಉದಾರವಾಗಿ ನೀಡಿದ ಶಾರುಖ್ ಖಾನ್ ಅವರಿಗೆ ಧನ್ಯವಾದಗಳು. ಕೊರೊನಾ ವಿರುದ್ಧದ ನಮ್ಮ ಹೋರಾಟವನ್ನು ಬೆಂಬಲಿಸುವಲ್ಲಿ ಹಾಗೂ ಅದರ ಮುಂಚೂಣಿಯಲ್ಲಿರುವ ವೈದ್ಯಕೀಯ ತಂಡವನ್ನು ರಕ್ಷಿಸುವಲ್ಲಿ ಇದು ಬಹಳ ಅತ್ಯಗತ್ಯವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
Many thanks Mr. Shah Rukh Khan for your kind contribution of 25,000 PPE kits. This will go a long way in supporting our fight against COVID19 & protecting our frontline medical care team @iamsrk @MeerFoundation @CMOMaharashtra
— Rajesh Tope (@rajeshtope11) April 13, 2020
ಇತ್ತೀಚೆಗೆ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಶಾರುಖ್ ಖಾನ್ ಮತ್ತು ಗೌರಿ ಖಾನ್ ತಮ್ಮ ನಾಲ್ಕು ಅಂತಸ್ತಿನ ವೈಯಕ್ತಿಕ ಕಚೇರಿಯನ್ನು ನೀಡಿದ್ದರು.
ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶಕ್ಕೆ ಸಹಾಯ ಮಾಡಲು ಶಾರುಖ್ ಖಾನ್ ಈ ಹಿಂದೆ ವಿವಿಧ ಕಾರ್ಯಕ್ರಮಗಳನ್ನು ಘೋಷಿಸಿರುವುದನ್ನು ಈ ಸಮಯದಲ್ಲಿ ಸ್ಮರಿಸಬಹುದು.


