#ArrestAntiIndiaArnab (ಭಾರತ ವಿರೋಧಿ ಅರ್ನಬ್ ಗೋಸ್ವಾಮಿ ಬಂಧಿಸಿ) ಹ್ಯಾಷ್‌ಟ್ಯಾಗ್ ಇಂದು ಟ್ವಿಟ್ಟರ್‌ನಲ್ಲಿ ಟಾಪ್ ಟ್ರೆಂಡಿಂಗ್ ಆಗಿದೆ. ಮಧ್ಯಾಹ್ನದಿಂದ ಸಂಜೆಯವರೆಗೂ ನಂಬರ್ 1 ಸ್ಥಾನದಲ್ಲಿ ಟ್ರೆಂಡಿಂಗ್ ಆಗಿದ್ದು, ಈ ಹ್ಯಾಷ್‌ಟ್ಯಾಗ್‌ನಲ್ಲಿ ಸುಮಾರು ಮೂರು ಲಕ್ಷ ಟ್ವೀಟ್‌ಗಳು ದಾಖಲಾಗಿವೆ.
ಅಲ್ಲದೇ ಚತ್ತೀಸ್‌ಘಡ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹೇಳಿಕೆಗಳನ್ನು ತಿರುಚಿದ ಮತ್ತು ಅವಮಾನ ಮಾಡಿದ ಆರೋಪದ ಮೇಲೆ ರಿಪಬ್ಲಿಕ್ ಟಿವಿ ಮುಖ್ಯಸ್ಥರಾದ ಅರ್ನಬ್ ಗೋಸ್ವಾಮಿ ವಿರುದ್ಧ ದೂರುಗಳನ್ನು ದಾಖಲಿಸಿದ್ದಾರೆ. ಕೆಲವೆಡೆ ಪ್ರತಿಭಟನೆಗಳು ಸಹ ನಡೆದಿವೆ.

ಇತ್ತೀಚೆಗೆ ರಾಹುಲ್ ಗಾಂಧಿಯವರು ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಒಂದೇ ಪರಿಹಾರವಲ್ಲ. ಹೆಚ್ಚು ಪರೀಕ್ಷೆಗಳು ಮತ್ತು ಮುಂಜಾಗ್ರತೆ ಅಗತ್ಯ. ಆರ್ಥಿಕತೆಯನ್ನು ಪುನಶ್ಚೇತನಗೊಳಿಸಬೇಕಿದೆ. ಈ ಸಮಯದಲ್ಲಿ ನಾವು ಪ್ರಧಾನಿ ನರೇಂದ್ರ ಮೋದಿಯವರ ಜೊತೆ ನಿಲ್ಲಬೇಕೆಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆಯನ್ನು ತಿರುಚಿದ ಅರ್ನಬ್ ಗೋಸ್ವಾಮಿ “ಭಾರತದಲ್ಲಿ ರಾಹುಲ್ ಗಾಂಧಿಯವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ಅವರು ತಮ್ಮ ದೇಶಕ್ಕೆ ಬೇಕಾದರೆ ಹೋಗಲಿ” ಎಂದು ಹೇಳಿದ್ದರು. ಆ ಪ್ರೈಮ್ ಟೈಮ್ ಶೋನಲ್ಲಿ ಪದೇ ಪದೇ ಸೋನಿಯಾ ಗಾಂಧಿಯವರ ಹೆಸರನ್ನು ಉಲ್ಲೇಖೀಸಿದೆ ಅವರ ದೇಶ ಇಟಲಿಗೆ ಹೋಗಲಿ ಎಂದು ಅರ್ನಬ್ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ದೂರಿದ್ದಾರೆ.
ಪಾಲ್ಘರ್ ಲಿಂಚಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅದನ್ನು ಕೋಮುವಾದೀಕರಣಗೊಳಿಸಲು ಅರ್ನಬ್ ಗೋಸ್ವಾಮಿ ಯತ್ನಿಸಿದ್ದಾರೆ ಎಂಬ ಆರೋಪ ಅವರ ಮೇಲಿದೆ. ಹಿಂದೂಗಳ ಮೇಲೆ ಹಲ್ಲೆ, ಸಾಧುಗಳ ಮೇಲೆ ಹಲ್ಲೆ ಎಂದು ಅರ್ನಬ್ ಗೋಸ್ವಾಮಿ ಸುದ್ದಿ ನಿರೂಪಿಸಿದ್ದಾರೆ. ಆದರೆ ಪಾಲ್ಘರ್‌ನಲ್ಲಿ ಹಲ್ಲೆ ನಡೆಸಿದ ಆರೋಪಿಗಳು ಮತ್ತು ಹಲ್ಲೊಗೊಳಗಾದ ಸಂತ್ರಸ್ತರು ಇಬ್ಬರೂ ಸಹ ಬುಡಕಟ್ಟು ಸಮುದಾಯಕ್ಕೆ ಸೇರಿದ್ದಾರೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.
ಇಂದು ಟ್ವಿಟ್ಟರ್‌ನಲ್ಲಿ ಬಹಳಷ್ಟು ಜನರು ಅರ್ನಬ್ ಗೋಸ್ವಾಮಿಯವರನ್ನು ದ್ವೇಷ ಉತ್ಪಾದಕ, ಕೋಮುವಾದಿ, ಬಿಜೆಪಿ ಏಜೆಂಟ್ ಎಂದು ಕರೆದು ಉಗ್ರ ಟೀಕೆ ಮಾಡಿದ್ದಾರೆ. ಅರ್ನಬ್ ಗೋಸ್ವಾಮಿ ಪತ್ರಕರ್ತನಾಗಲಿಕ್ಕೆ ಸೂಕ್ತನಲ್ಲ, ಆತನ ಸ್ಥಾನ ಜೈಲು ಎಂದು ಟ್ವೀಟ್ ಮಾಡಿದ್ದಾರೆ.
Arnab on the scale of journalism. pic.twitter.com/MjZmDuliDe
— Aravinda Tegginamath (@arvindtm) April 21, 2020
ಮತ್ತುಷ್ಟು ಜನರು ನಿಜವಾದ ಪತ್ರಕರ್ತರೆಂದರೆ ಅದು ಎನ್‌ಡಿಟಿವಿಯ ರವೀಶ್ ಕುಮಾರ್‌ರವರು. ಅರ್ನಬ್ ಏನಿದ್ದರೂ ರಬ್ಬೀಶ್ ಎಂದು ಟೀಕಿಸಿದ್ದಾರೆ. ಕೆಲ ಟ್ವೀಟ್‌ಗಳು ಈ ಕೆಳಗಿನಂತಿವೆ.
Attack on mrs Sonia Gandhi by Arnab Goswami is highly condemnable. He has gone insane and crossed all limits, he should be ashamed of himself . I must ask the Editors guild – isn’t this all time low for journalism ? Mr Rajeev Chandrasekhar must sack him immediately.
— Ashok Gehlot (@ashokgehlot51) April 22, 2020
ಅರ್ನಬ್ ಗೋಸ್ವಾಮಿ ಅವರಿಂದ ಸೋನಿಯಾ ಗಾಂಧಿಯವರ ಮೇಲೆ ನಡೆದ ದಾಳಿ ಅತ್ಯಂತ ಖಂಡನೀಯ. ಅವನು ಹುಚ್ಚನಾಗಿದ್ದಾನೆ ಮತ್ತು ಎಲ್ಲಾ ಮಿತಿಗಳನ್ನು ದಾಟಿದ್ದಾನೆ, ಅವನು ತನ್ನ ಬಗ್ಗೆ ನಾಚಿಕೆಪಡಬೇಕು. ನಾನು ಸಂಪಾದಕರ ಸಂಘವನ್ನು ಕೇಳುತ್ತೇನೆ, ಇದು ಪತ್ರಿಕೋದ್ಯಮಕ್ಕೆ ಸಾರ್ವಕಾಲಿಕ ಅವಮಾನವಲ್ಲವೇ? ರಾಜೀವ್ ಚಂದ್ರಶೇಖರ್ ಅವರನ್ನು ತಕ್ಷಣ ವಜಾ ಮಾಡಬೇಕು ಎಂದು ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.
Journalism of filth!
Deeply disgraceful that PM & BJP eulogize this brand of TV anchors.
1/2 pic.twitter.com/sSDuJQrRC7— Randeep Singh Surjewala (@rssurjewala) April 22, 2020
Arnab's place is not in a TV Studio
It's in a ASYLUM
It's in JAIL
Arrest this man for being the single biggest source of paid communal journalism. Enough of him sowing hatred between Indians on live TV
RT and demand #ArrestAntiIndiaArnab pic.twitter.com/JAU724st9K
— Srivatsa (@srivatsayb) April 22, 2020
#ArrestAntiIndiaArnab
Journalist bjp spokesperson pic.twitter.com/bVlgpfi18H— D҉A҉R҉K҉ ﮩﮩ٨ــﮩﮩSₕₐdₒw (@DarKS705) April 22, 2020
Arnab is more dangerous then Corona virus.
#ArrestAntiIndiaArnab pic.twitter.com/z5IGCDJ0py
— Rashid Puttur (@RashidPuttur) April 22, 2020
ಇದೇ ಸಮಯದಲ್ಲಿ ಐ ಸಪೋರ್ಟ್ ಅರ್ನಬ್ ಗೋಸ್ವಾಮಿ ಎಂದು ಸುಮಾರು 2 ಲಕ್ಷ ಟ್ವೀಟ್‌ಗಳು ಸಹ ದಾಖಲಾಗಿವೆ. ಯಾವಾಗ ಅವರ ವಿರುದ್ಧ ಟೀಕೆಗಳು ಜೋರಾಯಿತೊ ನಂತರ ಅವರ ಅಭಿಮಾನಿಗಳು ಅವರ ಪರ ಟ್ವಿಟ್ಟರ್ ಟ್ರೆಂಡ್‌ಗೆ ಇಳಿದಿದ್ದಾರೆ.
ಇದನ್ನೂ ಓದಿ: ಏಪ್ರಿಲ್ 23 ರಿಂದ ಕರ್ನಾಟಕದಲ್ಲಿ ಲಾಕ್‌ಡೌನ್ ಭಾಗಶಃ ಸಡಿಲಿಕೆ



ಅರ್ನಬ್ ಗೋಸ್ವಾಮಿ ಪತ್ರಕರ್ತನ ವೃತ್ತಿಗೆ ಲಾಯಕ್ಕಾದವನಲ್ಲ. ಅವನು ಬಿ.ಜೆ.ಪಿ.ಯ ವಕ್ತಾರನಾಗಲಿ.
I support ಅರ್ನಾಬ್ ಗೋಸ್ವಾಮಿ
Arnub is really not worthy journalist many times I did observed him misquestioning purposefully for no meaning. Really a BJP agent.