ಹಿರಿಯ ನಟ ರಿಷಿ ಕಪೂರ್ ಏಪ್ರಿಲ್ 30ರ ಬೆಳಿಗ್ಗೆ ನಿಧನರಾದರು. ಸ್ವಲ್ಪ ಸಮಯದಲ್ಲಿಯೇ ಮಾಜಿ ನಟಿ ಮತ್ತು ಕಾಂಗ್ರೆಸ್ ಮುಖಂಡೆ ನಗ್ಮಾ ಅವರು ರಿಷಿ ಕಪೂರ್ ಅವರ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡು, “ನಿನ್ನೆ ರಾತ್ರಿಯ ಕ್ಲಿಪ್, ಮುಂಬೈನ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ವೈದ್ಯರೊಂದಿಗೆ.” ಎಂಬ ಟೈಟಲ್ ನೀಡಿದ್ದರು.
Clip of last night, with doctors at the Reliance Foundation Hospital, Mumbai. You are a Legend Rishiji you will always be in our hearts and mind pic.twitter.com/g1Tj01JbgW
— Nagma (@nagma_morarji) April 30, 2020
ಕೂಡಲೇ ಆ ವಿಡಿಯೋ ಕ್ಲಿಪ್ ಎಲ್ಲೆಡೆ ವೈರಲ್ ಆಯಿತು. ಅಲ್ಲದೇ ಹಲವಾರು ಮಾಧ್ಯಮಗಳ ವರದಿಗಳ ಭಾಗವಾಯಿತು. ಕಪೂರ್ ಅವರು ತೀರಿಕೊಳ್ಳುವ ಹಿಂದಿನ ರಾತ್ರಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ, ಆಗಲೂ ಅವರು ಎಷ್ಟು ಆರೋಗ್ಯಕರವಾಗಿ ಸಂತೋಷದಿಂದ ಇದ್ದಾರೆ ಎಮದು ಇಂಡಿಯಾ ಟುಡೆ ಮತ್ತು ನ್ಯೂಸ್ ನೇಷನ್ ಇದನ್ನು ಪ್ರಸಾರ ಮಾಡಿತು.

ಎಬಿಪಿ ನ್ಯೂಸ್, ಫ್ರೀ ಪ್ರೆಸ್ ಜರ್ನಲ್ ಮತ್ತು ದಿ ಟ್ರಿಬ್ಯೂನ್ ಆರಂಭದಲ್ಲಿ ವೀಡಿಯೊ ಕಪೂರ್ ಅವರ “ಕೊನೆಯ ವಿಡಿಯೋ” ಎಂದು ವರದಿ ಮಾಡಿದವು. ಆದರೆ ನಂತರ ವರದಿಗಳನ್ನು ಬದಲಾಯಿಸಿದವು. ದಿ ಟ್ರಿಬ್ಯೂನ್ ತನ್ನ ಟ್ವೀಟ್ ಅನ್ನು ಅಳಿಸಿಹಾಕಿತು ಮತ್ತು ‘ಕೊನೆಯ’ ಎಂಬ ಪದವನ್ನು ತೆಗೆದು ಪೋಸ್ಟ್ ಮಾಡಿತು. ಇತರರು ತಮ್ಮ ವರದಿಗಳನ್ನು ಬದಲಾಯಿಸಿದರು.

ಫ್ಯಾಕ್ಟ್ ಚೆಕ್:
ವೀಡಿಯೊದಲ್ಲಿ ರಿಷಿ ಕಪೂರ್ ಪಕ್ಕ ನಿಂತು ಹಾಡು ಹಾಡಿರುವ ಆ ವ್ಯಕ್ತಿ ಡಿಕೆ ಕುಮಾರ್ ಸಾನು ಎನ್ನಲಾಗಿದೆ. ಆತನ ಕಪೂರ್ ಅವರ 1992ರಲ್ಲಿ ಬಿಡುಗಡೆಯಾದ ಚಲನಚಿತ್ರ ‘ದಿವಾನ’ ದಿಂದ ‘ತೇರೆ ದಾರ್ಡ್ ಸೆ ದಿಲ್ ಆಬಾದ್ ರಾಹಾ’ ಹಾಡು ಹಾಡಿದ್ದಾರೆ. ಈ ವಿಡಿಯೋವನ್ನು ಕಳೆದ ಫೆಬ್ರವರಿ ತಿಂಗಳಿನಲ್ಲಿ ಚಿತ್ರೀಕರಿಸಲಾಗಿದೆ. ಫೆಬ್ರವರಿ 29, 2020ರಂದು ‘ಡಿಕೆ ಕುಮಾರ್ ಸಾನು’ ಅವರ ಯೂಟ್ಯೂಬ್‌ನಲ್ಲಿ ಇದನ್ನು ಅಪ್‌ಲೋಡ್ ಮಾಡಲಗಿದೆ. ಅದರ ಸ್ಕ್ರೀನ್‌ಗ್ರಾಬ್ ಕೆಳಗೆ ಇದೆ.

ಆದರೆ ಅದನ್ನು ಕಪೂರ್ ರವರು ನಿಧನರಾದ ಹಿಂದಿನ ರಾತ್ರಿ ಎಂದು ಪ್ರಸಾರ ಮಾಡಿದ್ದರಿಂದ ಬಹಳಷ್ಟು ಜನರು ಅದನ್ನು ನಿಜವೆಂದು ತಿಳಿದು ಸಾಕಷ್ಟು ಸಂಖ್ಯೆಯಲ್ಲಿ ಷೇರ್ ಮಾಡಿದ್ದಾರೆ.
ಆಶ್ಚರ್‍ಯವೆಂದರೆ ಇಂಡಿಯಾ ಟುಡೆ ಚಾನೆಲ್ ಸಹ ಇದನ್ನು ಕಪೂರ್ ನಿಧನದ ಹಿಂದಿನ ರಾತ್ರಿಯ ಲಾಸ್ಟ್ ವಿಡಿಯೋ ಎಂದು ವರದಿ ಪ್ರಸಾರ ಮಾಡಿದೆ. ಯೂಟ್ಯೂಬ್‌ನಲ್ಲಿ ಹಾಕಿದೆ. ಆದರೆ ಸತ್ಯ ತಿಳಿದ ನಂತರ ಅದನ್ನು ಡಿಲಿಟ್ ಮಾಡಿದ್ದಲ್ಲದೇ ಅವರೇ ಫ್ಯಾಕ್ಟ್ ಚೆಕ್ ನಡೆಸಿ ಹಳೆಯ ವಿಡಿಯೋ ಎಂದಿದೆ. ಆ ಚಾನೆಲ್‌ನ ನಿರ್ದೇಶಕರಾದ ರಾಹುಲ್ ಕುನ್ವಾಲ್ ಫ್ಯಾಕ್ಟ್ ಚೆಕ್ ವರದಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Fact check: ಕೊರೊನಾ ಹರಡಲು ಪೆಟ್ರೋಲ್ ಪಂಪ್‌ನಲ್ಲಿ ನೋಟು ಎಸೆದ ಮುಸ್ಲಿಂ ವ್ಯಕ್ತಿ: ಈ ಸುದ್ದಿಯ ಅಸಲಿಯತ್ತೇನು ಗೊತ್ತೆ?


