ನೀವು ಮನೆಯಲ್ಲಿಯೇ ಕೂತು ಆರ್ಡರ್ ಮಾಡಿದರೆ ಸಾಕು ನಿಮ್ಮ ಮನೆಬಾಗಿಲಿಗೆ ಉಚಿತವಾಗಿ ಮಾಸ್ಕ್ ಬರಲಿದೆ. ಇದು ನರೇಂದ್ರ ಮೋದಿಯವರ ಹೊಚ್ಚಹೊಸ ಪ್ಲಾನ್ ಎಂಬ ಸಂದೇಶಗಳು ವೈರಲ್ ಆಗಿವೆ.
ವಾಟ್ಸಾಪ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ‘ಪಿಎಂ ಮಾಸ್ಕ್ ಯೋಜನೆ’ ಎಂಬುಂದು ಇಲ್ಲ. ವೈರಲ್ ಆಗಿರುವ ಮಾಹಿತಿಯೂ ನಕಲಿ ಎಂದು ಪಿಐಬಿ (ಪ್ರೆಸ್ ಇನ್ಫರ್ಮೇಷನ್ ಬ್ಯೂರೋ) ಫ್ಯಾಕ್ಟ್ ಚೆಕ್ ಹೇಳಿದೆ.
‘ಪಿಎಂ ಮಾಸ್ಕ್ ಯೋಜನೆ’ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸಂದೇಶಗಳು ನಕಲಿ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಖಚಿತಪಡಿಸಿದೆ. ಸರಕಾರಿ ಫ್ಯಾಕ್ಟ್ ಚೆಕಿಂಗ್ ಹ್ಯಾಂಡಲ್ ಅಂತಹ ಉಚಿತವಾಗಿ ಮಾಸ್ಕ್ ಗಳನ್ನು ಆರ್ಡರ್ ಮಾಡಬಹುದಾದ ಯಾವುದೇ ಯೋಜನೆ ಇಲ್ಲ. ಹಾಗೂ ಅದಕ್ಕೆ ಸಂಬಂಧಿತ ಯಾವುದೆ ಲಿಂಕ್ ಇಲ್ಲ ಎಂದು ಅದು ಹೇಳಿದೆ. ಟ್ವಿಟ್ಟರ್‌ನಲ್ಲಿ ಪಿಐಬಿ ಫ್ಯಾಕ್ಟ್ ಚೆಕ್ ಪೋಸ್ಟ್ ಮಾಡಿದ ಚಿತ್ರದಲ್ಲಿ, ಮಾಸ್ಕನ್ನು ಆರ್ಡರ್ ಮಾಡಬಹುದಾದ ಲಿಂಕ್ www.narendramodiawasyojna ನೊಂದಿಗೆ ಈ ಸಂದೇಶಗಳು ಪ್ರಾರಂಭವಾಗುತ್ತದೆ.
Claim : Amidst #CoronaOutbreak, a social media message claims free masks are being distributed by Government under 'PM Mask Yojana'. A link is provided for placement of orders#PIBFactCheck: There is no such scheme. This is a fraudulent link. Do not spread such #FakeNews pic.twitter.com/C17WQeRJGC
— PIB Fact Check (@PIBFactCheck) May 1, 2020
ಈ ತಪ್ಪು ಮಾಹಿತಿಯು ವಾಟ್ಸಾಪ್ ಮತ್ತು ಇತರ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್ ಗಳಲ್ಲಿ ಹರಡಲಾಗುತ್ತಿತ್ತು. “ಅಂತಹ ಯಾವುದೇ ಯೋಜನೆಯನ್ನು ಭಾರತ ಸರ್ಕಾರ ಪ್ರಾರಂಭಿಸಿಲ್ಲ. ನಿಮ್ಮ ವೈಯಕ್ತಿಕ ಮಾಹಿತಿ / ಶುಲ್ಕವನ್ನು ಸಂಗ್ರಹಿಸುವ ಇಂತಹ ನಕಲಿ ಮತ್ತು ಮೋಸದ ಸೈಟ್‌ಗಳ ಬಗ್ಗೆ ಎಚ್ಚರದಿಂದಿರಿ ”ಎಂದು ಪಿಬಿಐ ಟ್ವೀಟ್ ಮಾಡಿದೆ.
ತಪ್ಪು ಮಾಹಿತಿ ಮತ್ತು ಮೋಸದ ಲಿಂಕ್‌ಗಳನ್ನು ಹರಡುವುದು ಹೊಸತಲ್ಲ ಅಲ್ಲದೆ ಅನೇಕರು ಇದಕ್ಕೆ ಬಲಿಯಾಗಿದ್ದಾರೆ. ಆದ್ದರಿಂದ ಮಾಹಿತಿಯನ್ನು ಪರಿಶೀಲಿಸಿದ ನಂತರ ವಿಶೇಷವಾಗಿ ಸಾಂಕ್ರಾಮಿಕ ಸಮಯದಲ್ಲಿ ಇಂತಹವುಗಳನ್ನು ಖಚಿತಪಡಿಸಿಕೊಂಡ ನಂತರವೇ ಅದನ್ನು ರವಾನಿಸಲು ನಾವು ಬಳಕೆದಾರರಿಗೆ ಶಿಫಾರಸು ಮಾಡುತ್ತೇವೆ. ತೀರಾ ಇತ್ತೀಚೆಗೆ, ಎಲ್ಲಾ ಪಡಿತರ ಚೀಟಿ ಹೊಂದಿರುವವರಿಗೆ 50,000 ರೂ.ಗಳ ಆನ್‌ಲೈನ್ ವರ್ಗಾವಣೆಯನ್ನು ಒದಗಿಸುವ ರಾಷ್ಟ್ರೀಯ ಶಿಕ್ಷಿತ್ ಬೆರೋಜ್ಗಾರ್ ಯೋಜನೆ ಇಲ್ಲ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ. ಅಂತಹ ಸೈಟ್‌ಗಳು ನಿಮ್ಮ ಬ್ಯಾಂಕಿಂಗ್ ಡೇಟಾವನ್ನು ಹಿಡಿದಿಟ್ಟುಕೊಂಡು ನಿಮ್ಮನ್ನು ಮೋಸಗೊಳಿಸಬಹುದು ಎಂದು ಟ್ವಿಟರ್ ಪೋಸ್ಟ್‌ಗಳಲ್ಲಿ ಪಿಐಬಿ ಹೇಳಿದೆ.
Claim: Govt has started a scheme named Rashtriya Sikshit Berojgar Yojana to provide relief package of Rs 50000 to all ration card holders#PIBFactCheck: No such scheme has been launched by Govt of India. Beware of such fake and fraudulent sites collecting your personal info/fees pic.twitter.com/RTawkuzmDK
— PIB Fact Check (@PIBFactCheck) May 2, 2020
ಕಳೆದ ತಿಂಗಳು, ವಾಟ್ಸಪ್ ನಲ್ಲಿನ ನಮ್ಮ ಸಂದೇಶಗಳನ್ನು ಸರಕಾರ ಗಮನಿಸುತ್ತಿದೆ ಎಂದು ಸೂಚಿಸಲು ಮೂರನೇ ಟಿಕ್ ಅನ್ನು ತೋರಿಸಲಾಗುತ್ತಿದೆ ಎಂಬ ಸಂದೇಶ ಹರಿದಾಡಿತ್ತು. ಇದರ ಬಗ್ಗೆ ಕೂಡಾ ಪಿಐಬಿ ಫ್ಯಾಕ್ಟ್ ಚೆಕ್ ನಡೆಸಿ ವಾಟ್ಸಾಪ್ ಸಂದೇಶಗಳನ್ನು ಸರ್ಕಾರ ಬೇಹುಗಾರಿಕೆ ಮಾಡುತ್ತಿಲ್ಲ ಎಂದು ಪಿಐಬಿ ಹೇಳಿದೆ.



Please check the headline. It’s not PBI. It’s PIB.
These kind of mistakes will bring down the credibility of your articles and concern over the issues.
Please take note. Thanks.
Sorry and Thanks. Will correct it.