ನಮ್ಮ ದೇಶ ಮಾತ್ರವಲ್ಲದೇ ಇಡೀ ವಿಶ್ವವೇ ಕೊರೊನಾ ಸಾಂಕ್ರಾಮಿಕದಿಂದ ತತ್ತರಿಸಿ ಅದರ ವಿರುದ್ಧ ಹೋರಾಡಲು ಹೆಣಗಾಡುತ್ತಿದ್ದರೆ ಕೆಲ ಮತಾಂಧರಿಗೆ ಈಗಲೂ ಪಾಕಿಸ್ತಾನದ್ದೆ ಚಿಂತೆಯಾಗಿದೆ. ದಿನಕ್ಕೊಮ್ಮೆಯಾದರೂ ಪಾಕಿಸ್ತಾನ, ದೇಶಪ್ರೇಮ ಪದಗಳನ್ನು ಬಳಸದಿದ್ದರೆ ಅವರಿಗೆ ತಿಂದದ್ದು ಜೀರ್ಣವಾಗುವುದಿಲ್ಲ ಎನಿಸುತ್ತದೆ. ಆದ್ದರಿಂದ ಯಾರಿಗಾದರೂ ಜಿಂದಾಬಾದ್ ಎನ್ನುವ ಘೋಷಣೆ ಕೂಗಿದಾಕ್ಷಣ ಈ ಮತಾಂಧರಿಗೆ ಪಾಕಿಸ್ತಾನಕ್ಕೆ ಜಿಂದಾಬಾದ್ ಅಂದ ಹಾಗೆ ಕೇಳಿಸುತ್ತದೆ. ಅಷ್ಟರಮಟ್ಟಿಗೆ ಅವರ ಕಿವಿಗಳು ಹಾಳಾಗಿಹೋಗಿವೆ.
ಮುಂಬೈನಲ್ಲಿ ಆಗಿದ್ದು ಇದೇ ಆಗಿದೆ. ಲಾಕ್‌ಡೌನ್ ಕಾರಣಕ್ಕೆ ಸಿಕ್ಕಿಕೊಂಡು ಅನ್ನ ಆಹಾರವಿಲ್ಲದೇ ನರಳುತ್ತಿದ್ದ ವಲಸೆ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಹೋಗಬಹುದೆಂದು ಕೊನೆಗೂ 50 ದಿನದ ನಂತರ ತೀರ್ಮಾನಿಸಲಾಗಿತು. ಅಂತೆಯೇ ಮುಂಬೈನ ಛತ್ರಪತ್ರಿ ಶಿವಾಜಿ ರೈಲು ನಿಲ್ದಾಣಗಳಿಂದ ಶ್ರಮಿಕ್ ರೈಲುಗಳು ಹೊರಟಿದ್ದವು. ಮೇ 14 ರಂದು ಉತ್ತರಪ್ರದೇಶಕ್ಕೆ ಹೊರಟಿದ್ದ ಶ್ರಮಿಕ್ ರೈಲಿಗೆ ಹಸಿರು ನಿಶಾನೆ ತೋರಿಸಿ ಉದ್ಘಾಟಿಸಲು ಮಹಾರಾಷ್ಟ್ರ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿರುವ ಅಬು ಅಜ್ಮಿ ಆಗಮಿಸಿದ್ದರು. ಅವರ ಜೊತೆಗೆ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಸಾಜಿದ್ ಸಿದ್ದಿಕಿ ಮತ್ತು ಮುಂಬೈ ಪೊಲೀಸರು ಸ್ಥಳದಲ್ಲಿದ್ದರು. ಆಗ ಸಮಾಜವಾದಿ ಪಕ್ಷದ ಕಾರ್ಯಕರ್ತರು ಸಾಜಿದ್ ಬಾಯ್ ಜಿಂದಾಬಾದ್, ಮುಂಬೈ ಪೊಲೀಸ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿದ್ದಾರೆ.
ಇದನ್ನೇ ಕಾಯುತ್ತಿದ್ದ ಕೆಲ ಮತಾಂಧರು ಸಚಿವರ ಎದುರೆ ಪಾಕಿಸ್ತಾನ್ ಜಿಂದಾಬಾದ್ ಕೂಗುತ್ತಿದ್ದರೂ, ಅವರು ತಡೆಯುತ್ತಿಲ್ಲ ಎಂಬ ಶೀರ್ಷಿಕೆಯಲ್ಲಿ ಆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗಿದೆ.


ಆದರೆ ಸಮಾಜವಾದಿ ಪಕ್ಷದ ಕಾರ್ಯಕರ್ತರು ಒರಿಜಿನಲ್ ವಿಡಿಯೋಗಳನ್ನು ಟಿಕ್‌ಟಾಕ್ ಸೇರಿದಂತೆ ಇತರ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದರಿಂದ ಸಾಜಿದ್ ಬಾಯ್ ಜಿಂದಾಬಾದ್ ಎಂದು ಕೂಗಿರುವುದು ಅದರಲ್ಲಿ ಸ್ಪಷ್ಟವಾಗಿದೆ. ಅದನ್ನೇ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದಾರೆ ಎಂದು ಸುದ್ದಿ ಹರಡಿದ್ದಾರೆ ಅಷ್ಟೇ. ಒರಿಜಿನಲ್ ವಿಡಿಯೋ ಕೆಳಗಿದೆ ನೊಡಿ.
ಅಲ್ಲದೇ ಸಾಜಿದ್ ಸಿದ್ದಿಕಿ ಮತ್ತು ಅಬು ಅಜ್ಮಿಯವರು ಈ ಕುರಿತು ಪ್ರತಿಕ್ರಿಯಿಸಿದ್ದು ಇದೆಲ್ಲಾ ದೊಡ್ಡ ಸುಳ್ಳು. ಇಂತಹ ಆಧಾರ ರಹಿತ ಸುಳ್ಳುಗಳನ್ನು ಹರಡಬೇಡಿ ಎಂದಿದ್ದಾರೆ. ಒಂದು ವೇಳೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದರೆ ಅಂತವರನ್ನು ಜೊತೆಗೇ ಇದ್ದ ಮುಂಬೈ ಪೊಲೀಸರು ಬಂಧಿಸುತ್ತಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
मेरे देश में मेरे सामने अगर कोई पाकिस्तान ज़िंदाबाद के नारे लगाएगा तो पुलिस से पहले उसे मैं सबक सिखाऊंगा
2014 से कुछ लोग हर चीज को हिन्दू मुसलमान का रंग देते है
मैं @MumbaiPolice से आग्रह करता हूं कि मेरे बारे में पाकिस्तान ज़िंदाबाद की अफवाह फैलाने वालों को तुरंत अरेस्ट करें। pic.twitter.com/KbiOPPCr24
— Abu Asim Azmi (@abuasimazmi) May 17, 2020
ಒಟ್ಟಿನಲ್ಲಿ ಯಾವುದೇ ಘೋಷಣೆ ಕಂಡೂ ಸದಾ ಪಾಕಿಸ್ತಾನವನ್ನು ನೆನಸುವವರಿಗೆ ಪಾಕಿಸ್ತಾನ ಜಿಂದಾಬಾದ್ ಎಂದೇ ಕೇಳಿಸುವುದು ವಿಪರ್ಯಾಸವಾಗಿದೆ.
ಇದನ್ನೂ ಓದಿ ; ಫ್ಯಾಕ್ಟ್‌ಚೆಕ್- ನಾವು ನಂಬಿಯೇಬಿಟ್ಟಿದ್ದ ಈ ವಾರದ 5 ಫೇಕ್‌ನ್ಯೂಸ್‌ಗಳು ಮತ್ತು ಅದರಿಂದಿರುವ ಸತ್ಯಗಳು


