ಲಾಹೋರ್ ನಿಂದ ಕರಾಚಿಗೆ ಹೊರಟಿದ್ದ 99 ಪ್ರಯಾಣಿಕರು ಹಾಗೂ 8 ಸಿಬ್ಬಂದಿಗಳಿದ್ದ ಪಾಕಿಸ್ತಾನ್ ಇಂಟರ್ ನ್ಯಾಶನಲ್ ಏರ್ ಲೈನ್ಸ್ ವಿಮಾನ ಇಂದು ಭೂಸ್ಪರ್ಶಕ್ಕೆ ನಿಮಿಷಗಳಿರುವಾಗ ಪತನಗೊಂಡಿದೆ.
ಪಾಕಿಸ್ತಾನ್ ಇಂಟರ್ ನ್ಯಾಶನಲ್ ಏರ್ ಲೈನ್ಸ್ ಇದರ ‘ಏರ್ ಬಸ್ ಎ320’ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಿಬ್ಬಂದಿ ಸೇರಿದಂತೆ ಒಟ್ಟು 107 ಜನರು ಕೂಡಾ ಮೃತಪಟ್ಟಿದ್ದಾರೆಂದು ವರದಿಯಾಗಿದ್ದರೂ, ವಿಮಾನದಲ್ಲಿದ್ದ ಪಾಕಿಸ್ತಾನದ ಬ್ಯಾಂಕ್ ಆಫ್ ಪಂಜಾಬ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾಫರ್ ಮಸೂದ್ ಮಾತ್ರ ಪವಾಡಸದೃಸವಾಗಿ ಸಣ್ಣಪುಟ್ಟ ಗಾಯಗಳೊಂದಿಗೆ ಜೀವಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಲಾಹೋರ್ನಿಂದ ಕರಾಚಿಗೆ ತೆರಳುತ್ತಿದ್ದ ಏರ್ ಬಸ್ ಎ320 ವಿಮಾನದಲ್ಲಿ ಪ್ರಯಾಣಿಸಿದ್ದ 98 ಜನ ಪ್ರಯಾಣಿಕರ ಪೈಕಿ ಮಸೂದ್ ಸಹ ಒಬ್ಬರಾಗಿದ್ದಾರೆ. ವಿಮಾನ ಅಪಘಾತಕ್ಕೀಡಾದಾಗ ವಿಮಾನದಲ್ಲಿದ್ದ ಯಾರೂ ಸಹ ಬದುಕುಳಿದಿರುವ ಸಾಧ್ಯಯಿಲ್ಲ ಎಂದು ಪಾಕಿಸ್ತಾನದ ಸೇನೆ ಹೇಳಿತ್ತು. ಆದರೆ, ಇದೀಗ ಮಸೂದ್ ಬದುಕುಳಿದಿದ್ದರಿಂದ ಇನ್ನೂ ಹಲವರು ಬದುಕಿ ಉಳಿದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ರಕ್ಷಣಾ ಕಾರ್ಯವನ್ನೂ ಚುರುಕುಗೊಳಿಸಲಾಗುತ್ತಿದೆ ಎನ್ನಲಾಗಿದೆ.
ಅಪಘಾತವಾದ ಸ್ಥಳದಲ್ಲಿ ಇನ್ನೂ ಜೀವಂತವಾಗಿದ್ದ ಮಸೂದ್ ಅವರನ್ನು ಕೂಡಲೇ ಹತ್ತಿರದ ದಾರುಲ್ ಸೆಹತ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದು, ಸೊಂಟ ಮತ್ತು ಕೆಲವೆಡೆ ಮೂಳೆಗಳು ಮುರಿತವಾಗಿದೆ. ಆದರೆ, ದೇಹದಲ್ಲಿ ಯಾವುದೇ ಸುಟ್ಟ ಗುರುತುಗಳಿಲ್ಲ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ವಿಮಾನ ಅಪಘಾತವಾದ ಸಂದರ್ಭದಲ್ಲಿ ಅದರ ಬಾಲ ಮೊದಲು ನೆಲಕ್ಕಪ್ಪಳಿಸಿದ್ದರಿಂದ ಮುಂಭಾಗದಲ್ಲಿ ಕುಳಿತಿದ್ದವರು ಬದುಕುಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
Pakistan plane crash : A passenger of another flight coming to Karachi filmed #planecrash #piaplanecrash pic.twitter.com/2j6XyEQzvw
— World Updates (@Rntk____) May 22, 2020
ಕೃಪೆ: ಎಸಿಇನ್ಯೂಸ್
ಓದಿ: ಕರಾಚಿ: 99 ಪ್ರಯಾಣಿಕರು ಹಾಗೂ 8 ಸಿಬ್ಬಂದಿಗಳಿದ್ದ ವಿಮಾನ ಪತನ


