ಒಡಿಶಾದಲ್ಲಿ ದೈಹಿಕ ಪರಿಶೀಲನೆ ಇಲ್ಲದೇ ಪಿಂಚಣಿ ನೀಡಲು ನಿರಾಕರಿಸಿದ ಬ್ಯಾಂಕ್‌ವರೆಗೆ 100 ವರ್ಷದ ತಾಯಿಯನ್ನು ಉರಿ ಬಿಸಿಲಿನಲ್ಲಿ ಮಂಚದಲ್ಲೇ ಎಳೆದೊಯ್ದ ಅಮಾನವೀಯ ಘಟನೆ ಜರುಗಿದೆ.
ಇದು ಕೊರೊನಾ ವೈರಸ್ ಸಾಂಕ್ರಾಮಿಕದ ನಂತರ ಒಡಿಶಾದ ಬಡತನದ, ಹತಾಶೆಯ ಮತ್ತು ಅಸೂಕ್ಷ್ಮ ವ್ಯವಸ್ಥೆಯ ಮತ್ತೊಂದು ಯಾತನಾಮಯ ಚಿತ್ರಣವನ್ನು ತೆರೆದಿಟ್ಟಿದ್ದು, ಘಟನೆಗೆ ನೂರಾರು ಜನ ಮರುಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆ ಬ್ಯಾಂಕ್ ವಿರುದ್ಧವೂ ಆಕ್ರೋಶ ಭುಗಿಲೆದ್ದಿದೆ.
ಘಟನೆಯು ಭುವನೇಶ್ವರದಿಂದ 433 ಕಿ.ಮೀ ದೂರದಲ್ಲಿರುವ ನುವಾಪಾ ಜಿಲ್ಲೆಯಲ್ಲಿ ವರದಿಯಾಗಿದ್ದು, ವಯಸ್ಸಾದ ಮಹಿಳೆಯೊಬ್ಬಳು ತನ್ನ 100 ವರ್ಷದ ತಾಯಿಯನ್ನು ತನ್ನ ಪಿಂಚಣಿ ಹಣವನ್ನು ಹಿಂಪಡೆಯಲು ಮಂಚದ ಮೇಲೆ ಮಲಗಿಸಿ ಎಳೆದೊಯ್ಯುವ ವಿಡಿಯೋ ವೈರಲ್ ಆಗಿದೆ.
Odisha: In a video that surfaced recently, a woman was seen dragging her centenarian mother on a cot, to a bank in Nuapada district to withdraw her pension money allegedly after the bank asked for physical verification. pic.twitter.com/XPs55ElINA
— ANI (@ANI) June 15, 2020
ಘಟನೆ ಕುರಿತು “ಇದನ್ನು ಪರಿಶೀಲಿಸುವಂತೆ ರಾಜ್ಯದ ನವೀನ್ ಪಟ್ನಾಯಕ್ ಸರ್ಕಾರವನ್ನು ಕೇಳಿಕೊಂಡಿದ್ದೇನೆ” ಎಂದು ಬಿಜೆಪಿಯ ನುವಾಪಾ ಶಾಸಕ ರಾಜು ಧೋಲಾಕಿಯಾ ಹೇಳಿದ್ದಾರೆ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದನ್ನು ಬಿಟ್ಟು ಶಾಸಕರಾಗಿ ಪಲಾಯನ ಮಾಡುತ್ತಿದ್ದಾರೆ ಎಂದು ಹಲವಾರು ಜನ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ಮಹಿಳೆಯೊಬ್ಬರನ್ನು ಮಂಚದ ಮೇಲೆ ಮಲಗಿಸಿ ಎಳೆದೊಯ್ಯುವ ದೃಶ್ಯವನ್ನು ನೋಡಿದ್ದೇನೆ. ಅವರ ಪಿಂಚಣಿ ಹಣವನ್ನು ಹಿಂಪಡೆಯಲು ಬ್ಯಾಂಕಿಗೆ ಕರೆದೊಯ್ಯಲಾಯಿತು. ಈ ಬಗ್ಗೆ ಗಮನಹರಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾನು ಸರ್ಕಾರವನ್ನು ಕೋರುತ್ತೇನೆ” ನುವಾಪಾ ಶಾಸಕ ಧೋಲಾಕಿಯಾ ಭಾನುವಾರ ಹೇಳಿದ್ದರು.
ಇದನ್ನೂ ಓದಿ: ಸಾವಿಗೆ ಮುನ್ನ ತಾಯಿ ನೆನೆದು, ಕ್ಷಣಿಕ ಜೀವನ ಎಂದಿದ್ದ ಸುಶಾಂತ್ ಸಿಂಗ್ ರಜಪೂತ್


