ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹದ ಫೋಟೋಗಳನ್ನು ಡಿಲೀಟ್ ಮಾಡಬೇಕು ಎಂದಿರುವ ಮಹಾರಾಷ್ಟ್ರ ಪೊಲೀಸ್, ಅಂತಹ ಪೋಸ್ಟ್‌ಗಳು ಕಾನೂನು ವಿರೋಧಿಯಾಗಿದ್ದು, ಅದು ಕೆಟ್ಟ ಅಭಿರುಚಿ ಹಾಗೂ ಗಾಬರಿ ಹುಟ್ಟಿಸುವ ಫೋಟೋಗಳು ಎಂದು ಟ್ವೀಟ್ ಮಾಡಿದೆ.
ಈ ಬಗ್ಗೆ ತಮ್ಮ ಸರಣಿ ಟ್ವೀಟ್‌ಗಳಲ್ಲಿ ಮಹಾರಾಷ್ಟ್ರ ಪೊಲೀಸರು ಈ ಚಿತ್ರಗಳನ್ನು ಹಂಚಿಕೊಳ್ಳುವುದರಿಂದ ದೂರವಿರಿ ಹಾಗೂ ಅಸ್ತಿತ್ವದಲ್ಲಿರುವ ಪೋಸ್ಟ್‌ಗಳನ್ನು ಅಳಿಸಿಹಾಕಬೇಕೆಂದು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಒತ್ತಾಯಿಸಿದೆ.
“ಮಹಾರಾಷ್ಟ್ರ ಸೈಬರ್ ಪೊಲೀಸ್, ಸಾಮಾಜಿಕ ಜಾಲತಾಣಗಳಲ್ಲಿ ನಟನ ಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದಾರೆ ಎಂದು ಗಮನಿಸಿದೆ, ಅದು ಗಾಬರಿಗೊಳಿಸುವ ಮತ್ತು ಕೆಟ್ಟ ಅಭಿರುಚಿಯಲ್ಲಿದೆ” ಎಂದು ಅದು ಟ್ವೀಟ್ ಮಾಡಿದೆ.
A disturbing trend has been observed on Social Media platforms by Maharashtra Cyber that pictures of deceased actor Shri. Sushant Singh Rajput are being circulated, which are disturbing and in bad taste. (1/n)
— Maharashtra Cyber (@MahaCyber1) June 14, 2020
Maharashtra Cyber exhorts and directs all netizens to refrain from circulating the aforesaid pictures. The pictures already circulated should be deleted henceforth. (3/n)
— Maharashtra Cyber (@MahaCyber1) June 14, 2020
“ಅಂತಹ ಚಿತ್ರಗಳ ಪ್ರಸಾರವು ಕಾನೂನು ಮಾರ್ಗಸೂಚಿಗಳು ಹಾಗೂ ನ್ಯಾಯಾಲಯದ ನಿರ್ದೇಶನಗಳಿಗೆ ವಿರುದ್ಧವಾಗಿದೆ. ಇದು ಕಾನೂನು ಕ್ರಮಕ್ಕೆ ಆಹ್ವಾನ ನೀಡಿದಂತೆ” ಎಂದು ಮತ್ತೊಂದು ಟ್ವೀಟ್ ಮಾಡಿದೆ.
“ಮಹಾರಾಷ್ಟ್ರ ಸೈಬರ್ ಪೊಲೀಸ್ ಮೇಲಿನ ಚಿತ್ರಗಳನ್ನು ಪ್ರಸಾರ ಮಾಡುವುದನ್ನು ತಡೆಯುವಂತೆ ಎಲ್ಲಾ ಸಾಮಾಜಿಕ ಜಾಲತಾಣ ಬಳಕೆದಾರರಿಗೂ ಸೂಚಿಸುತ್ತದೆ ಮತ್ತು ನಿರ್ದೇಶಿಸುತ್ತದೆ. ಈಗಾಗಲೇ ಪ್ರಸಾರವಾದ ಚಿತ್ರಗಳನ್ನು ಡಿಲಿಟ್ ಮಾಡಬೇಕು” ಎಂದು ರಾಜ್ಯ ಪೊಲೀಸರು ಬರೆದಿದ್ದಾರೆ.
ವಿಮರ್ಶಕರ ಮೆಚ್ಚುಗೆ ಪಡೆದ ಚಲನಚಿತ್ರ “ಕೈ ಪೊ ಚೆ” ಮೂಲಕ 2013 ರಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ 34 ವರ್ಷದ ನಟ ಸುಶಾಂತ್ ಸಿಂಗ್ ರಜಪೂತ್ ಭಾನುವಾರ ತಮ್ಮ ಬಾಂದ್ರಾ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿರುವ ಶಂಕಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಇದುವರೆಗೆ ಯಾವುದೇ ಡೆತ್ ನೋಟ್ ಕಂಡುಬಂದಿಲ್ಲ.


